Author: admin

ಬಿಹಾರ, ಮಾ.18: ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ಕಾರೊಂದು ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ7 ಮಂದಿ ಮೃತಪಟ್ಟ ಘಟನೆ ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ  ಭಾನುವಾರ ನಡೆದಿದೆ. ಬಿಹಾರದ ಖಗಾರಿಯಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಬರುತ್ತಿದ್ದ ವೇಳೆ ಕಾರು ಟ್ರ್ಯಾಕ್ಟರ್ ಗೆ   ಡಿಕ್ಕಿ ಹೊಡೆದಿದೆ . ಅಪಘಾತದಲ್ಲಿ ಕಾರಿನಲ್ಲಿದ್ದ 7ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಬೆಳ್ತಂಗಡಿ,ಮಾ. 17: ಆಟೋ ರಿಕ್ಷಾ ಡಿಕ್ಕಿಯಾಗಿ 3 ವರ್ಷದ ಮಗು ಮೃತಪಟ್ಟ ಘಟನೆ ಸೋಣಂದೂರು ಪಣಕಜೆಯಲ್ಲಿ ನಡೆದಿದೆ. ಮೃತಪಟ್ಟ ಮಗುವನ್ನು ಪಣಕಜೆ ಮುಂಡಾಡಿ ನಿವಾಸಿ ಚಂದ್ರಶೇಖರ್ ಮತ್ತು ಉಷಾ ದಂಪತಿಯ ಪುತ್ರ ಕೌಶಿಕ್ ಎಂದು ಗುರುತಿಸಲಾಗಿದೆ. ಮುಂಡಾಡಿಯಲ್ಲಿ ಚಂದ್ರಶೇಖರ್ ಅವರ ಮನೆಯಲ್ಲಿದ್ದ ಮಗು ಓಡಿ ರಸ್ತೆಗೆ ಬಂದ ವೇಳೆ  ಆಟೋರಿಕ್ಷಾ ಮಗುವಿಗೆ ತಾಗಿ ಗಂಭೀರ ಗಾಯಗೊಂಡಿದ್ದು, ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎನ್ನಲಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು, ಮಾ.16: ರಾಜ್ಯ ಸರಕಾರವು ತುಳು, ಕೊಂಕಣಿ, ಬ್ಯಾರಿ  ಅಕಾಡೆಮಿಗಳಿಗೆ ಅಧ್ಯಕ್ಷ ರು ಮತ್ತು ಸದಸ್ಯರನ್ನು ನೇಮಕಗೊಳಿಸಿ ಶನಿವಾರ ಆದೇಶ ಹೊರಡಿಸಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ತಾರನಾಥ್ ಗಟ್ಟಿ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಅಲ್ವಾರಿಸ್  ಹಾಗೂ  ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಉಮರ್ ಯು.ಎಚ್. ಅವರನ್ನು ನೇಮಿಸಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಬೆಂಗಳೂರಿಗೆ ಫಾದರ್ ಪ್ರಕಾಶ್ ಮಾಡ್ತಾ ಎಸ್ ಜೆ. ದಕ್ಷಿಣ ಕನ್ನಡಕ್ಕೆ ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೋ, ಡಾ ವಿಜಯಲಕ್ಷ್ಮಿ ನಾಯಕ್, ಸಪ್ನಾ ಮೇ ಕ್ರಾಸ್ತಾ ಮತ್ತು ಸಮರ್ಥ ಭಟ್ ಸದಸ್ಯರಾಗಿದ್ದಾರೆ. ಕಾರ್ಕಳಕ್ಕೆ ದಯಾನಂದ ಮುಡ್ಯೇಕರ್, ಚಿಕ್ಕಮಗಳೂರಿಗೆ ಪ್ರಮೋದ್ ಪಿಂಟೋ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಯಲ್ಲಾಪುರಕ್ಕೆ ಸುನೀಲ್ ಸಿದ್ದಿ, ಉತ್ತರ ಕನ್ನಡಕ್ಕೆ ಜೇಮ್ಸ್ ಲೋಪೆಜ್ ಸದಸ್ಯರಾಗಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಪೃಥ್ವಿರಾಜ್, ಕುಂಬ್ರ ದುರ್ಗಾಪ್ರಸಾದ್ ರೈ, ಅಕ್ಷಯ್ ಆರ್ ಶೆಟ್ಟಿ, ಮೋಹನ್ ದಾಸ್ ಕೊಟ್ಟಾರಿ,…

Read More

ಸುಳ್ಯ, ಮಾ. 15 : ರಬ್ಬರ್ ಸ್ಮೋಕ್ ಹೌಸ್ ವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ರಬ್ಬರ್ ಸೀಟ್ ಬೆಂಕಿಗೆ ಆಹುತಿಯಾಗಿ ಅಪಾರ ನಷ್ಟ ಸಂಭವಿಸಿರುವ ಘಟನೆ ಸುಳ್ಯ ಅರಂತೋಡು ಗ್ರಾಮದ ಪಿಂಡಿಮನೆ ಎಂಬಲ್ಲಿ ಬುಧವಾರ ನಡೆದಿದೆ. ರೇಣುಕಾಪ್ರಸಾದ್ ಎಂಬವರ ರಬ್ಬರ್ ಸ್ಮೋಕ್ ಹೌಸ್ ವೊಂದಕ್ಕೆ ಮಧ್ಯರಾತ್ರಿ ಬೆಂಕಿ ತಗುಲಿದೆ. ಮನೆಯವರೆಲ್ಲಾ ಸೇರಿ ಬ್ಯಾರೆಲ್ ನಲ್ಲಿದ್ದ ನೀರನ್ನು ಬಕೆಟ್ ಮೂಲಕ ಸ್ಮೋಕ್ ಹೌಸ್ ಮೇಲೆ ಹಾಯಿಸಿದ್ದಾರೆ. ಇದರಿಂದ ಕೊಟ್ಟಿಗೆಗೆ ಬೆಂಕಿ ಹತ್ತಿಕೊಳ್ಳುವುದು ತಪ್ಪಿದೆ ಎನ್ನಲಾಗಿದೆ. ಹೌಸ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಸುಮಾರು 180 ಕೆಜಿಯಷ್ಟು ರಬ್ಬರ್ ಶೀಟ್ ಗಳು ಬೆಂಕಿಗೆ ಆಹುತಿಯಾಗಿರುವುದಾಗಿ ಅಂದಾಜಿಸಲಾಗಿದೆ.

Read More

ಮಂಗಳೂರು, ಮಾ. 14: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಪಡೆದಿದ್ದಾರೆ.ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸ್ವಯಂನಿವೃತ್ತಿ ಪಡೆದುಕೊಂಡಿದ್ದ ಕ್ಯಾ. ಬ್ರಿಜೇಶ್ ಚೌಟ ಈಗ ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಬಿಜೆಪಿ ಹೈಕಮಾಂಡ್ ದ. ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ನೀಡಿದ್ದು ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಕೊಕ್ ನೀಡಿದೆ.

Read More

ಚಂಡೀಗಢ,ಮಾ. 12 : ಹರಿಯಾಣದಲ್ಲಿ ದಿಡೀರ್ ರಾಜಕೀ ಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಬಂಡಾರು ದತ್ತಾತ್ರೇ ಯ ಅವರಿಗೆ ಎಂ.ಎಲ್.ಖಟ್ಟರ್ ರಾಜೀ ನಾಮೆ ಪತ್ರ ಸಲ್ಲಿಸಿದ್ದಾರೆ. ಎಂ.ಎಲ್.ಖಟ್ಟರ್ ಜೊತೆ ಸಚಿವ ಸಂಪುಟದ ಎಲ್ಲ ಸದಸ್ಯರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. 10 ಜೆಜೆಪಿ , 7 ಮಂದಿ ಪಕ್ಷೇತರ ಶಾಸಕರಿದ್ದಾರೆ. ಪ್ರತಿ ಪಕ್ಷ ಕಾಂಗ್ರೆಸ್ನ 30 ಶಾಸಕರಿದ್ದಾರೆ. ಸದ್ಯ, ಶಾಸಕರ ಸಭೆ ಕರೆದಿರುವ ಬಿಜೆಪಿ, ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂಬ ಮಾಹಿತಿಯಿದೆ.

Read More

ಬೆಳ್ತಂಗಡಿ, ಮಾ. 11: ಹಿರಿಯ ಸಾಹಿತಿ, ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಹಿಂದಿ ಉಪನ್ಯಾಸಕ, ಪತ್ರಕರ್ತ ಪ್ರೊ.ನಾ ವುಜಿರೆ (87) ಸೋಮವಾರ ಅನಾರೋಗ್ಯದಿಂದ ನಿಧನ ಹೊಂದಿದರು. ನಾ.ವುಜಿರೆ ಎಂದೇ ಜನಪ್ರಿಯರಾಗಿದ್ದ ಅವರು, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಅವರ ಪತ್ನಿ ಸರಸ್ವತಿ ಎನ್. ರಾಜ್ ಮತ್ತು ಒಬ್ಬ ಮಗ ಪಾರ್ಶ್ವನಾಥ್ ಸೇರಿ ಅಪಾರ ಕುಟುಂಬ ವರ್ಗವನ್ನು ಅಗಲಿದ್ದಾರೆ.

Read More

ಮೈಸೂರು, ಮಾ. 09 : ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ನ ಮಾಜಿ ಶಾಸಕ ವಾಸು(72) ನಿಧನರಾಗಿದ್ದಾರೆ. ಅವರು ಮೈಸೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದರು. ಇಂದುಮಾ.09 ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಯತ್ರಿಪುರಂ ವಾರ್ಡ್ ನಗರ ಪಾಲಿಕೆ ಸದಸ್ಯರಾಗಿದ್ದ ನಂತರ ಮೇಯರ್ ಆಗಿ ಆಯ್ಕೆಗೊಂಡಿದ್ದರು. ಇದರಿಂದ ವಾಸು ಅವರು ಮೇಯರ್ ವಾಸು ಎಂದೇ ಪ್ರಖ್ಯಾತರಾಗಿದ್ದರು.

Read More

ಸುಳ್ಯ, ಮಾ. 08 : ಕಟ್ಟಡದಿಂದ ಕಾಲುಜಾರಿ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿದ ಘಟನೆ ಅಡ್ಕಾರಿನಿಂದ ನಡೆದಿದೆ. ಅಡೂರು ಪಳ್ಳಂಗೊಡು ನಿವಾಸಿ ಜಬ್ಬಾರ್ ಎಂಬವರು ಮೃತಪಟ್ಟ ವ್ಯಕ್ತಿ . ಅಡ್ಕಾರ್ ಜಿ ಅಬ್ದುಲ್ಲಾ ಎಂಬವರ ಮನೆಯಲ್ಲಿ ಪೈಟಿಂಗ್ ಕೆಲಸಕ್ಕಾಗಿ ನೀರು ಹಾಕಿ ತೊಳೆಯುತ್ತಿರುವ ಸಂದರ್ಭದಲ್ಲಿ  ಜಬ್ಬಾರ್ ಅವರು  ಕಾಲುಜಾರಿ ಕಟ್ಟಡದಿಂದ ಕೆಳಗೆ ಬಿದ್ದಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ  ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Read More

ಚಿತ್ರದುರ್ಗ, ಮಾ.0 7: ಚಾಕೊಲೇಟ್ ಎಂದು ಭಾವಿಸಿ ಮಾತ್ರೆ ಸೇವಿಸಿ 4 ವರ್ಷದ ಮಗು ಮೃತಪಟ್ಟ ಘಟನೆ ಚಿತ್ರದುರ್ಗದ ಕಡಬನಕಟ್ಟೆ ಗ್ರಾಮದಲ್ಲಿ ನಡೆದಿದೆ.ಹೃತ್ವಿಕ್ (4) ಮೃತಪಟ್ಟ ಮಗು, ಇತ್ತೀಚೆಗೆ ಮೃತ ಮಗುವಿನ ತಾಯಿ ಪವಿತ್ರಾ ಎಂಬುವವರಿಗೆ ಶಸ್ತ್ರಚಿಕಿತ್ಸೆಯೊಂದು ನಡೆದಿತ್ತು. ಈ ಹಿನ್ನಲೆ ವೈದ್ಯರು ನೀಡಿದ್ದ ಮಾತ್ರೆಗಳನ್ನು ಮನೆಯಲ್ಲಿಟ್ಟಿದ್ದರು. ಮಗು ಆಟವಾಡುತ್ತಿತ್ತು. ಅಕಸ್ಮಾತ್ ಆಗಿ ಚಾಕೊಲೇಟ್ ಎಂದು ಭಾವಿಸಿ ಮಾತ್ರೆಗಳನ್ನು ಸೇವಿಸಿ ಮಗು ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ತುರುವನೂರು ಪೊಲೀಸ್  ಠಾಣೆ ಯಲ್ಲಿ  ಪ್ರಕರಣ ದಾಖಲಾಗಿದೆ.

Read More