Subscribe to Updates
Get the latest creative news from FooBar about art, design and business.
Author: admin
ಸುರತ್ಕಲ್ , ಏ. 16: ದ.ಕ.ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರು ಸುರತ್ಕಲ್, ಮುಕ್ಕಾ, ಕೃಷ್ಣಾಪುರ, ಚಿತ್ರಾಪುರ, ಕಾಟಿಪಳ್ಳ, ಚೊಕ್ಕಬೆಟ್ಟು, ಪಣಂಬೂರು, ಕೂಳೂರು, ಕಾವೂರು, ಕುಂಜತ್ತಬೈಲ್ ಮೊದಲಾದ ಪ್ರದೇಶಗಳಲ್ಲಿ ಸೋಮವಾರ ರೋಡ್ ಶೋ ಮೂಲಕ ಮತಯಾಚಿಸಿದರು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪರವಾಗಿ ನಡೆದ ರೋಡ್ ಶೋನಲ್ಲಿ ಅಭ್ಯರ್ಥಿ ತೆರೆದ ವಾಹನದಲ್ಲಿ ಸಾಗಿದರು. ಕೆಲ ಪ್ರದೇಶಗಳಲ್ಲಿ ತೆರೆದ ವಾಹನದಿಂದ ಇಳಿದು, ನೇರವಾಗಿ ಮತದಾರರ ಬಳಿಗೆ ತೆರಳಿ ಮತಯಾಚಿಸಿದರು. ಕೆಪಿಸಿಸಿ ಪ್ರ. ಕಾರ್ಯದರ್ಶಿ ಇನಾಯತ್ ಅಲಿ, ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರವಿರಾಜ್ ಸುವರ್ಣ, ಕಾಟಿಪಳ್ಳ ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಚಿತ್ರಾಪುರ ಪಣಂಬೂರು ಶ್ರೀ ಮಹಾವಿಷ್ಣು ಭಜನಾ ಮಂದಿರದಲ್ಲಿ ಪಣಂಬೂರು ಮೊಗವೀರ ಮಹಾಸಭಾ ಅಧ್ಯಕ್ಷ ಮಾಧವ ಸುವರ್ಣ ಪಿ.,ಪ್ರತಿಭಾ ಕುಳಾಯಿ, ಪುರುಷೋತ್ತಮ ದೇವಾಡಿಗ, ಪಿ.ಜಿ. ಕುಂದರ್, ಯಾದವ ಶೆಟ್ಟಿ, ದೇವೇಂದ್ರ, ಕೇಶವ…
ಮಂಗಳೂರು, ಎ.15: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳ ಪರ ಮತಯಾಚನೆಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಭಾನುವಾರ ರೋಡ್ ಶೋ ನಡೆಸಿದರು. ದ. ಕ. ಹಾಗೂ ಉಡುಪಿ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎ.26ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ರೋಡ್ ಶೋ ಮೂಲಕ ಮತಯಾಚನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನುಬಿಜೆಪಿಯ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಸ್ವಾಗತಿಸಿದರು. ಪ್ರಧಾನಿ ಮೋದಿಯವರು ಕೈಯ್ಯಲ್ಲಿ ಕಮಲದ ಚಿಹ್ನೆಯನ್ನು ಹಿಡಿದು ರಸ್ತೆಯುದ್ದಕ್ಕೂ ಸೇರಿದ್ದ ಜನರತ್ತ ಕೈಬೀಸುತ್ತಾ ಸಾಗಿದರು. ದ.ಕ. ಜಿಲ್ಲೆಯ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ನರೇಂದ್ರ ಮೋದಿ ಅವರ ಜತೆಯಲ್ಲಿದ್ದರು.
ಬೆಂಗಳೂರು, ಏ. 14: ಕನ್ನಡ ಚಿತ್ರದ ನಿರ್ಮಾಪಕ ಸೌಂದರ್ಯ ಜಗದೀಶ್ ಏ.14 ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವಿಚಾರದ ಹಿನ್ನಲೆ ನಿರ್ಮಾಪಕ ಸೂಸೈಡ್ ಮಾಡಿಕೊಂಡಿದ್ದಾರೆ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಯ ಸುದ್ದಿ ಕೇಳಿ ಚಿತ್ರರಂಗದ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ. ಉದ್ಯಮಿಯಾಗಿದ್ದ ಜಗದೀಶ್ ಅವರು ಅಪ್ಪು & ಪಪ್ಪು, ಸ್ನೇಹಿತರು, ರಾಮ್ ಲೀಲಾ, ಮಸ್ತ್ ಮಜಾ ಮಾಡಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ಕುಂದಾಪುರ, ಏ. 12 : ಖಾಸಗಿ ರೆಸಾರ್ಟ್ ನ ಈಜುಕೊಳದಲ್ಲಿ ಆಟವಾಡಲು ಹೋಗಿದ್ದ 10 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಎ.11ರಂದು ಶಂಕರನಾರಾಯಣ ದಲ್ಲಿ ನಡೆದಿದೆ. ಮೃತರನ್ನು ಮುಹಮ್ಮದ್ ಅರೀಝ್ (10) ಎಂದು ಗುರುತಿಸಲಾಗಿದೆ. ಗುರುವಾರ ಮನೆ ಮಂದಿಯೊಂದಿಗೆ ಹೆಂಗವಳ್ಳಿ ಯ ಖಾಸಗಿ ರೆಸಾರ್ಟ್ನ ಈಜುಕೊಳದಲ್ಲಿ ನೀರಿಗೆ ಬಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮಂಗಳೂರು, ಏ. 11: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ 14-03-2024 ರಿಂದ 14-04-2024ತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಬುಧವಾರ ದೇವರಿಗೆ ಮಧ್ಯಾಹ್ನ ಮಹಾಪೂಜೆ, ಕಡೇ ಚೆಂಡು ಉತ್ಸವ ಹಾಗೂ ಆಳು ಪಲ್ಲಕ್ಕಿ ಉತ್ಸವ ನೇರವೇರಿತು. ‘ಚೆಂಡು ಆಟ’ ಕಾರ್ಯಕ್ರಮದಲ್ಲಿ ದೂರದ ಹಾಗೂ ಸಮೀಪದ ಪ್ರದೇಶಗಳ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಐದು ದಿನಗಳ ಆಚರಣೆಯುದ್ದಕ್ಕೂ ಕುಮಾರ ತೇರು, ಹೂ ತೇರು, ಸೂರ್ಯ ಮಂಡಲ, ಚಂದ್ರ ಮಂಡಲ, ಪಲ್ಲಕ್ಕಿ ಉತ್ಸವದಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೇವಳದ ತಂತ್ರಿಗಳಾದ ಸುಬ್ರಮಣ್ಯ ತಂತ್ರಿ, ಹಾಗೂ ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಕೆ ರಾಮ್ ಭಟ್, ಪರಮೇಶ್ವರ ಭಟ್, ಆಡಳಿತ ಮೊಕ್ತೇಸಾರ ಡಾ, ಮಂಜಯ್ಯ ಶೆಟ್ಟಿ ಅಮ್ಮಂಜೆಗುತ್ತು, ಮೊಕ್ತೇಸರರಾದ ತಾರಾನಾಥ ಅಳ್ವ, ಚೇರಾ ಸೂರ್ಯ ನಾರಾಯಣ ರಾವ್ , ಅಮ್ಮಂಜೆ ಗುತ್ತಿನವರು, ಉಳಿಪಾಡಿ ಗುತ್ತಿನವರು, ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಮಹೋತ್ಸವದಲ್ಲಿ ಪಾಲ್ಗೊಂಡಿದರು.
ಕೊಣಾಜೆ, ಏ 09 : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆ ಉರುಮಣೆ ಸಮೀಪ ರವಿವಾರ ನಡೆದಿದೆ. ಮೃತರನ್ನು ಸಫ್ವಾನ್ (24) ಎಂದು ಗುರುತಿಸಲಾಗಿದೆ. ಸಫ್ವಾನ್ ನ ಮನೆಯವರೆಲ್ಲಾ ಇಫ್ತಾರ್ ಕೂಟಕ್ಕೆ ತೆರಳಿದ್ದರು. ಈ ವೇಳೆ ಸಫ್ವಾನ್ ಮನೆಯ ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎನ್ನಲಾಗಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ, ಏ. 08 : ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎಂ ವೀರಪ್ಪ ಮೊಯ್ಲಿ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಹೈಕಮಾಂಡ್ ಕೊನೆ ಕ್ಷಣದಲ್ಲಿ ರಕ್ಷಾ ರಾಮಯ್ಯ ಅವರಿಗೆ ನೀಡಿದೆ. ಇದರಿಂದ ನೀರಸೆಗೊಂಡ ವೀರಪ್ಪ ಮೊಯ್ಲಿ ಇದೀಗ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅಲ್ಲದೇ ವೀರಪ್ಪ ಮೊಯ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬೆಂಬಲ ಘೋಷಣೆ ಸೂಚಿಸಿದ್ದಾರೆ.
ನವದೆಹಲಿ, ಏ. 07 : ವಿಪ್ರೋ ಕಂಪೆನಿಯ ಸಿಇಒ, ಎಂ.ಡಿ. ಥಿಯೆರ್ರಿ ಡೆಲಾಪೋರ್ಟೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಶ್ರೀನಿವಾಸ್ ಪಲ್ಲಿಯಾ ಅವರು ಆಯ್ಕೆ ಮಾಡಲಾಗಿದೆ. ಶ್ರೀನಿವಾಸ್ ಪಲ್ಲಿಯಾ ಅವರು ವಿಪ್ರೋ ಕಂಪನಿಯ ಅಮೇರಿಕಾಸ್ 1 ಪ್ರದೇಶದ ಸಿಇಒ ಆಗಿರುವ ಅವರು ಇಂದಿನಿಂದ ನೂತನ ಸಿಇಒ, ಎಂ.ಡಿ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡೆಲಾಪೋರ್ಟೆ ಅವರು 2020ರ ಜುಲೈಯಲ್ಲಿ ವಿಪ್ರೋದ ಸಿಇಒ ಮತ್ತು ಎಂಡಿ ಆಗಿ ನೇಮಕಗೊಂಡಿದ್ದರು. ಡೆಲಾಪೋರ್ಟೆ ಅವರು ಕಳೆದ ಡಿಸೆಂಬರ್ ತಿಂಗಳಿನಲ್ಲಿ ವಾರ್ಷಿಕ 82 ಕೋಟಿ ರೂ. ಗಿಂತ ಅಧಿಕ ವೇತನ ಪ್ಯಾಕೇಜ್ ಹೊಂದಿದ್ದರು. ಈ ಮೂಲಕ ಡೆಲಾಪೋರ್ಟೆ ಅವರು ಭಾರತೀಯ ಐಟಿ ವಲಯದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಸಿಇಒ ಆಗಿದ್ದರು ಎಂದು ಹೇಳಲಾಗಿದೆ.
ಮಂಗಳೂರು, ಏ. 05 : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ 113 ಶಾಖೆಗಳ ಮೂಲಕ ಉತ್ಕೃಷ್ಟ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದ್ದು, ಆರ್ಥಿಕ ವರ್ಷದಲ್ಲಿ ಬ್ಯಾಂಕ್ 79.09 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ನಗರದ ಎಸ್ಸಿಡಿಸಿಸಿ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಹೇಳಿದರು. ಬ್ಯಾಂಕ್ ಅಭಿವೃದ್ಧಿಯ ಮುಂಚೂಣಿಯ ಲ್ಲಿದ್ದು, ತನ್ನ 110 ವರ್ಷಗಳ ಸಾರ್ಥಕ ಸೇವೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ತನ್ನ 113 ಶಾಖೆಗಳ ಮೂಲಕ ಉತ್ಕೃಷ್ಟ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿರುವ ಎಸ್ ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ಅಮೋಘ ಸಾಧನೆಗೈದಿದೆ ಎಂದರು. ಎಸ್ಸಿಡಿಸಿಸಿ ಬ್ಯಾಂಕ್ ತನ್ನ 113 ಶಾಖೆಗಳ ಮುಖಾಂತರ ಒಟ್ಟು 7221.37ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ಸಾಧನೆಗೈದಿದೆ. ಸ್ಪರ್ಧಾತ್ಮಕ ವ್ಯವಹಾರದಲ್ಲಿ ಬ್ಯಾಂಕ್ 6485.12 ಕೋಟಿ ಮುಂಗಡವನ್ನು ನೀಡಿ,…
ತೈಪೆ, ಏ 04 : ತೈವಾನ್ ನಲ್ಲಿ ಏ. 03, ರಂದು ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.5 ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ. ಭೂಕಂಪದಿಂದಾಗಿ ದಕ್ಷಿಣ ಜಪಾನ್ ಹಾಗೂ ಫಿಲಿಪೈನ್ಸ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆಗಳನ್ನು ಸಹ ನೀಡಲಾಗಿದೆ. ತೈವಾನ್ ನ ಹುವಾಲಿಯನ್ ನಗರದಿಂದ ದಕ್ಷಿಣಕ್ಕೆ 18 ಕಿ.ಮೀ, 34.8 ಕಿ.ಮೀ ಆಳದಲ್ಲಿ ಈ ಭೂಕಂಪದ ಕೇಂದ್ರಬಿಂದುಯಿದೆ ಎಂದು ತಿಳಿದುಬಂದಿದೆ. ಭೂಕಂಪದಿಂದಾಗಿ ನಗರದ ಹಲವೆಡೆ ಜನರು ಪರದಾಡುವ ಸ್ಥಿತಿ ಉಂಟಾಗಿದೆ. ಜೊತೆಗೆ ನಗರದಲ್ಲಿನ ಕೆಲವು ಕಟ್ಟಡಗಳು ಕುಸಿದಿವೆ ಎನ್ನಲಾಗಿದೆ.












