Author: admin

ಮಂಗಳೂರು, ಮಾ.24 ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಎ. 18 ರಿಂದ ಎ. 21 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ, ಭಜನೋತ್ಸವ ಮತ್ತು ಜಾರಂದಾಯ ನೇಮ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಸ್ಥಾನದ ವಠಾರದಲ್ಲಿ ಜರಗಿತು. ಚಿತ್ರಾಪುರ ಮಠದ ಶ್ರೀ ವಿದೇಂದ್ರ ತೀರ್ಥ ಶ್ರೀಪಾದರು ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿ, ದೇವಸ್ಥಾನದಲ್ಲಿ ಎ. 18 ರಿಂದ ಎ. 21 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಉತ್ತಮವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಶಾಸಕ ಡಾ| ವೈ ಭರತ್ ಶೆಟ್ಟಿ  ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಬಳಿಕ ಮಾತನಾಡಿ, ದೇವಸ್ಥಾನಗಳು ಹಿಂದೂ ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವ ಕೇಂದ್ರವಾಗಿ ಬೆಳೆಯಬೇಕು ಎಂದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ ಅವರು ಮಾತನಾಡಿ, ಕ್ಷೇತ್ರದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಅವರು ಪ್ರಾಸ್ತಾವಿಕವಾಗಿ…

Read More

ಮಂಗಳೂರು ಮಾ.23 : ಇನ್ಫೋಸಿಸ್ ಸಂಸ್ಥೆಯ ಸಿ.ಎಸ್.ಆರ್ ನಿಧಿಯಿಂದ ಪ್ರೇರಣಾ ಟ್ರಸ್ಟ್ ಸಹಕಾರದೊಂದಿಗೆ ಬಲ್ಮಠದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಕಂಪ್ಯೂಟರ್ ಲ್ಯಾಬನ್ನು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟನೆಗೊಳಿಸಿದರು. ನಂತರ ಶಾಸಕರಾದ ವೇದವ್ಯಾಸ ಕಾಮತ್ ರವರು ಮಾತನಾಡಿ ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯಾಸಂಗಕ್ಕೆ ಅನುಕೂಲವಾಗಲು ಕಂಪ್ಯೂಟರ್ ಲ್ಯಾಬ್ ಗಳ ಅಗತ್ಯವಿರುವ ಬಗ್ಗೆ ಈ ಹಿಂದೆಯೇ ಪ್ರಾಂಶುಪಾಲರುಗಳು ಶಾಸಕ ವೇದವ್ಯಾಸ ಕಾಮತ್ ರಲ್ಲಿ ಮನವಿ ಸಲ್ಲಿಸಿದ್ದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಶಾಸಕರು ಈ ಬಗ್ಗೆ ವಿಶೇಷ ಗಮನಹರಿಸಿ ಆದ್ಯತೆಯ ಮೇರೆಗೆ ಅನುಕೂಲ ಮಾಡಿಕೊಡುವಂತೆ ಇನ್ಫೋಸಿಸ್ ಸಂಸ್ಥೆಯನ್ನು ಕೋರಿದ್ದರು. ಅದರಂತೆ ಇದೀಗ ಪದವಿ ಪೂರ್ವ ಕಾಲೇಜಿಗೆ 25 ಕಂಪ್ಯೂಟರ್ ಗಳು, ಪದವಿ ಕಾಲೇಜಿಗೆ 30 ಕಂಪ್ಯೂಟರ್ ಗಳ ಸಹಿತ ಸುಸಜ್ಜಿತ ಲ್ಯಾಬ್ ನಿರ್ಮಾಣಗೊಂಡಿದ್ದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಈ ಸಂದರ್ಭದಲ್ಲಿ ಪ್ರೇರಣಾ ಟ್ರಸ್ಟ್ ನ ರವಿರಾಜ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ವನಿತಾ ದೇವಾಡಿಗ, ಪದವಿ ಕಾಲೇಜಿನ…

Read More

ಮಂಗಳೂರು ಮಾ.22 : ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಭಯ ಜಿಲ್ಲೆಗಳಲ್ಲಿ ಬಂದ್ ಯಾವುದೇ ಪರಿಣಾಮವನ್ನು ಬೀರದೇ ಎಂದಿನಂತೆ ಜನಜೀವನ ಮುಂದುವರೆಯಿತು. ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು, ಆಟೋರಿಕ್ಷಾಗಳು ಎಂದಿನಂತೆ ಸಂಚರಿಸಿದವು. ಅಂಗಡಿಗಳು, ಮಾರುಕಟ್ಟೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಿದವು. ಯಾವುದೇ ಅಂಗಡಿಗಳು, ಸಂಸ್ಥೆಗಳು ಮುಚ್ಚಿರುವ ಬಗ್ಗೆ ವರದಿಯಾಗಿಲ್ಲ.

Read More

ಬೆಂಗಳೂರು, ಮಾ.21 : ಟಿವಿ9 ಕನ್ನಡವು ಬೆಂಗಳೂರು ನಗರದ ಜನತೆಗೆ ಲೈಫ್ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋವನ್ನು ಆಯೋಜಿಸುತ್ತಿದೆ. ಈ ಎಕ್ಸ್ಪೋದಲ್ಲಿ ನೀವು ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ಗಳು, ಫ್ಯಾಷನ್, ಪೀಠೋಪಕರಣಗಳು ಮತ್ತು ಆಟೋಮೊಬೈಲ್ಗಳಲ್ಲಿನ ಇತ್ತೀಚಿನ ಟ್ರೆಂಡ್ ಗಳನ್ನು ಮಾರಾಟಕ್ಕಿಡಲಾಗಿದೆ. ಎಕ್ಸ್ಪೋದಲ್ಲಿ ಅಂತರರಾಷ್ಟ್ರೀಯ ಪೀಠೋಪಕರಣಗಳು ಮತ್ತು ಸ್ಥಳೀಯ ಕುಶಲಕರ್ಮಿಗಳ ಹೊಸ ವಿನ್ಯಾಸಗಳು.ಗೃಹಾಲಂಕಾರ, ಉಪಕರಣಗಳು ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು. ನಿಮ್ಮ ಮನಸ್ಸನ್ನು ಅರಳಿಸುವ ಕರಕುಶಲ ಉತ್ಪನ್ನಗಳು.ಆಟೋಮೊಬೈಲ್ ಕ್ಷೇತ್ರದಲ್ಲಿನ ನವೀನ ತಂತ್ರಜ್ಞಾನಗಳು ಲಭ್ಯವಿದೆ. ಈ ಎಕ್ಸ್ಪೋ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮಾರ್ಚ್ 21 ರಿಂದ 23 ರವರೆಗೆ ನಡೆಯಲಿದೆ. ಸಮಯ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಭೇಟಿ ನೀಡಬಹುದು. ಎಕ್ಸ್ಪೋಗೆ ಪ್ರವೇಶ ಉಚಿತವಾಗಿದ್ದು, ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬಂದು ಶಾಪಿಂಗ್ ಮಾಡಿ ಬೇಕಾಗುವ ವಸ್ತುಗಳನ್ನು ಖರೀದಿಸಬಹುದು.

Read More

ಮಂಗಳೂರು, ಮಾ.21 : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಪತ್ರಿಕಾ ಭವನದಲ್ಲಿ ಗೌರವ ಅತಿಥಿ ಸನ್ಮಾನ ಸ್ವೀಕರಿಸಿ ಮಾತಾನಾಡಿದ ಗುಜರಾತ್ನ ಸ್ಮತಿ ವನದ ರೂವಾರಿ ಡಾ.ಆರ್.ಕೆ. ನಾಯರ್ ಅವರು, ನಾನು ಹುಟ್ಟಿದ್ದು ಕಾಸರಗೋಡಿನಲ್ಲಿ. ತಾನು ಚಿಕ್ಕವನಿದ್ದಾಗ ನಮ್ಮ ಕುಟುಂಬ ಸುಳ್ಯದ ಅರಂಬೂರಿಗೆ ಸ್ಥಳಾಂತರಗೊಂಡಿತು. ಸ್ಥಳೀಯ ಈಶ್ವರ ಭಟ್ಟರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಾ ಬೆಳೆದೆವು. ವಾಸ್ತವ್ಯಕ್ಕೆ ಸ್ವಂತ ಮನೆ ಇರಲಿಲ್ಲ. ಮುಂದೆ ಜಾಲ್ಲೂರಿನಲ್ಲಿ ಮನೆ ಮಾಡಿದೆವು ಎಂದರು. ಬಳಿಕ ಮಾತಾನಾಡಿದ ಅವರು, ದ್ವಿತೀಯ ಪಿಯುಸಿ ತನಕ ಶಿಕ್ಷಣ. ಪಿಯುಸಿ ಪರೀಕ್ಷೆ ಯ ಗಣಿತ ವಿಷಯದಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಮನೆಯಲ್ಲಿ ತಾಯಿಯತ್ತಿರ ಹಠ ಹಿಡಿದು 500 ರೂ.ಪಡೆದು ಸ್ನೇಹಿತ ಕಿಶೋರ್ ಜೊತೆ ಮುಂಬೈಗೆ ಬಸ್ ಹತ್ತಿದೆ. ಮುಂಬೈನಲ್ಲಿ ಅಣ್ಣನ ನೆರವಿನಲ್ಲಿ ಮೆಡಿಕಲ್ ಸ್ಟೋರ್ ಗೆ ಸೇರಿದೆ. ಸ್ನೇಹಿತ ಕಿಶೋರ್ ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕೆ ಸೇರಿದರು. ಮುಂದೆ ಹೋಟೆಲ್, ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿದೆ.ಮುಂದೆ ಸೌಪರ್ಣಿಕಾ ಎಕ್ಸ್ಪೊರ್ಟ್ಸ್ ಎಂಬ ಕಂಪೆನಿ  ಪ್ರಾರಂಬಿಸಿ,10 ವರ್ಷಗಳಲ್ಲಿ ದೊಡ್ಡ…

Read More

ಮಂಗಳೂರು,ಮಾ.20 : ದ.ಕ. ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ 2024-25ನೇ ಸಾಲಿನ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟವು ಬುಧವಾರ ನಗರದ ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು. ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಕ್ರೀಡಾಪಟುವನ್ನಾಗಿ ಮಾಡುವುದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಬಹಳಷ್ಟಿದೆ ಎಂದರು. ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಟಾನಿ ಅಲ್ವಾರೀಸ್ ಧ್ವಜಾರೋಹಣಗೈದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಕ್ರೀಡಾ ಜ್ಯೋತಿ ಯನ್ನು ಹಸ್ತಾಂತರಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಭುವನೇಶ್ ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಮಾಮುಚ್ಚನ್ ಎಂ., ಪಪೂ ದೈಹಿಕ ಶಿಕ್ಷಣ ವಿಭಾಗದ ಜಿಲ್ಲಾಧ್ಯಕ್ಷ ಪ್ರೇಮ ನಾಥ ಶೆಟ್ಟಿ, ತಾಲೂಕು…

Read More

ಮಂಗಳೂರು ಮಾ.18 : ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗ್ರೆ ವಾರ್ಡಿನ ಶ್ರೀ ದುರ್ಗಾ ಗಣೇಶ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬಳಿಯ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ್ ಕಾಮತ್ ರವರು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಇಲ್ಲಿ ಅಗತ್ಯವಾಗಿ ನಡೆಯಬೇಕಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಸ್ಥಳೀಯ ಪ್ರಮುಖರು ಗಮನಕ್ಕೆ ತಂದ ನಂತರ, ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳುವ ಭರವಸೆ ಇದೆ ಎಂದರು. ಈ ಸಂದರ್ಭದಲ್ಲಿ ರಮೇಶ್ ಹೆಗ್ಡೆ, ಪ್ರವೀಣ್ ನಿಡ್ಡೇಲ್, ಗಂಗಾಧರ ಸಾಲ್ಯಾನ್, ಲೋಕೇಶ್ ಸುವರ್ಣ, ಮೀರಾ ಕರ್ಕೇರ, ಚೇತನ್ ಬೆಂಗ್ರೆ, ನರಸಿಂಹ ಶ್ರೀಯಾನ್, ಭಾಸ್ಕರ್ ಚಂದ್ರ ಶೆಟ್ಟಿ, ಯೋಗೀಶ್ ಕಾಂಚನ್, ಮೋಹನ್ ಸಾಲ್ಯಾನ್, ಹೇಮಚಂದ್ರ ಸಾಲ್ಯಾನ್, ಕೇಶವ ಗುರಿಕಾರ, ಹರಿಶ್ಚಂದ್ರ ಪುತ್ರನ್, ಸುರೇಂದ್ರ ಪಾಂಗಳ್, ಸುಂದರ ಸಾಲ್ಯಾನ್, ಪುಂಡಲಿಕ ಮೆಂಡನ್, ಮನೋಜ್ ಬೆಂಗ್ರೆ, ಸುಕೇಶ್ ಪುತ್ರನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read More

ಕಾಪು, ಮಾ.18 :ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅರುಣ್ ಚಕ್ರವರ್ತಿ ಐಪಿಎಸ್ ಅವರು ತಮ್ಮ ಪುತ್ರಿಯೊಂದಿಗೆ ಮಾರ್ಚ್ 17 ರಂದು ದೇವಸ್ಥಾನಕ್ಕೆ ಭೇಟಿ ನೀಡಿದರು. ಭೇಟಿಯ ಸಮಯದಲ್ಲಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮುಖ್ಯ ಸಂಯೋಜಕರು ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಉದಯ ಸುಂದರ್ ಶೆಟ್ಟಿ ಅವರು ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಮುಖ್ಯಸ್ಥ ಯೋಗೇಶ್ ವಿ ಶೆಟ್ಟಿ ಬಾಲಾಜಿ, ರವೀಂದ್ರ ಮಲ್ಲರ್, ಚರಿತ್ ದೇವಾಡಿಗ, ಪೊಲೀಸ್ ಅಧಿಕಾರಿಗಳು ಮತ್ತು ಇತರ ಗಣ್ಯರು ಸೇರಿದಂತೆ ನಿರ್ವಹಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Read More

ಕಾಸರಗೋಡು, ಮಾ.17 : ಬೈಕ್ ಮತ್ತು ಲಾರಿ ನಡುವೆ ಉಂಟಾದ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಶಿರಿಯ ಪೆಟ್ರೋಲ್ ಬಂಕ್ ಮುಂಭಾಗ ದಲ್ಲಿ ನಡೆದಿದೆ. ಮೃತರನ್ನು ಕುಂಬಳೆ ಕಣ್ಣೂರಿನ ತ್ಯಾಂಪಣ್ಣ ಪೂಜಾರಿ ರವರ ಪುತ್ರ ರವಿಚಂದ್ರ (35) ಎಂದು ಗುರುತಿಸಲಾಗಿದೆ. ಬೈಕ್ ಕುಂಬಳೆ ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸವಾರ ರವಿಚಂದ್ರ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು,ಮಾ.16 :ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗ್ರೆ ವಾರ್ಡಿನ ಶಿವಾಜಿ ಪಾರ್ಕ್ ಬಳಿ ಆಟೋ ರಿಕ್ಷಾ ನಿಲ್ದಾಣ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಂಡು ಎಲ್ಲರ ಉಪಯೋಗಕ್ಕೆ ಸಿಗುವಂತಾಗಲಿ ಎಂದು ಹಾರೈಸಿದರು. ಗಂಗಾಧರ ಸಾಲ್ಯಾನ್, ರಮೇಶ್ ಹೆಗ್ಡೆ, ಪ್ರವೀಣ್ ನಿಡ್ಡೇಲ್, ಲೋಕೇಶ್ ಸುವರ್ಣ, ಚೇತನ್ ಬೆಂಗ್ರೆ, ನರಸಿಂಹ ಶ್ರೀಯಾನ್, ಭಾಸ್ಕರ್ ಚಂದ್ರ ಶೆಟ್ಟಿ, ಯೋಗೀಶ್ ಕಾಂಚನ್, ಮೋಹನ್ ಸಾಲ್ಯಾನ್, ಹೇಮಚಂದ್ರ ಸಾಲ್ಯಾನ್, ಮೀರಾ ಕರ್ಕೇರ, ಕೇಶವ ಗುರಿಕಾರ, ಹರಿಶ್ಚಂದ್ರ ಪುತ್ರನ್, ಸುರೇಂದ್ರ ಪಾಂಗಳ್, ಸುಂದರ ಸಾಲ್ಯಾನ್, ಪುಂಡಲಿಕ ಮೆಂಡನ್, ಮನೋಜ್ ಬೆಂಗ್ರೆ, ಸುಕೇಶ್ ಪುತ್ರನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

Read More