ಕಾರ್ಗಿಲ್, ಮೇ.10 : ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ನಲ್ಲಿ ಶುಕ್ರವಾರ 4.3 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪವಾಗುತ್ತಿದ್ದಂತೆ ತಕ್ಷಣವೇ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನಲ್ಲಿ ಮೇ 1 ರಂದು 3.4 ರ ತೀವ್ರತೆಯ ಭೂಕಂಪ, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನಲ್ಲಿ ಏಪ್ರಿಲ್ 18 ರಂದು 4.0 ತೀವ್ರತೆಯ ಭೂಕಂಪ ಹಾಗೂ ಏಪ್ರಿಲ್ 19ರಂದು ಕಾರ್ಗಿಲ್ ಮತ್ತು ಲಡಾಖ್ನಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ.