ಮಂಗಳೂರು, ಡಿ. 13: ಈಜುಕೊಳದಲ್ಲಿ ಮುಳುಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಬರ್ಕೆ ಠಾಣಾ ವ್ಯಾಪ್ತಿಯ ಮಂಗಳ ಈಜು ಕೊಳದಲ್ಲಿ ನಡೆದಿದೆ.ಮೃತಪಟ್ಟ ವ್ಯಕ್ತಿಯನ್ನು ಬಿಹಾರ ಮೂಲದ ಅಭಿಷೇಕ್(35) ಎಂದು ಗುರುತಿಸಲಾಗಿದೆ.
ಅಭಿಷೇಕ್ ಅವರು ಸಂಜೆ 4.30ರ ವೇಳೆಗೆ ಟಿಕೆಟ್ ಪಡೆದುಕೊಂಡು ನೀರಿಗೆ ಇಳಿದಿದ್ದಾರೆ. ಸುಮಾರು 15 ನಿಮಿಷದ ಬಳಿಕ ನೀರಿನಲ್ಲಿ ಮುಳುಗಿದ್ದಾರೆ. . ಈ ವೇಳೆ ಈಜುಕೊಳದಲ್ಲಿ 30 ರಿಂದ 40 ಜನರು ಈಜುತ್ತಿದ್ದರು ಎನ್ನಲಾಗಿದೆ. ಹುಡುಗನೋರ್ವ ಗಮನಿಸಿ ಲೈಫ್ ಗಾರ್ಡ್ಗ ಗಳಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
15 ಫೀಟ್ ಆಳದಲ್ಲಿ ರಾಜೇಂದ್ರ ಹಾಗು ಪುಂಡಲಿಕ್ ನೀರಿಗೆ ಜಿಗಿದು ಅಭಿಷೇಕನನ್ನು ಮೇಲೆ ತಂದು ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ . ಬಳಿಕ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.