ಮಂಗಳೂರು, ಸೆ. 4: ಓಂ ಸಾಯಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾದ ನಿಗೂಢ ಗುರುತು ಕನ್ನಡ ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವು ಸೆ.7ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರು ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಆರಾಧಿಸಲ್ಫಡುವ ದೇವರುಗಳಿಗೆ ವಿಶೇಷ ಪ್ರಾರ್ಥನೆ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ನಿಗೂಢ ಗುರುತು ಚಿತ್ರದ ವಿಶಾಲ ಕರ್ನಾಟಕದ ಹಂಚಿಕೆದಾರರಾದ ತುಕಾರಾಮ ಬಾಯಾರು ಅವರು ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮೊಕ್ತಸರ ಸುಂದರ ಆಚಾರ್ಯ ಬೆಳುವಾಯಿ ಅವರು ದೀಪ ಪುಜ್ವಲನೆ ಮಾಡಲಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ.
ಕಲರ್ ಕಿರುತೆರೆ ನಿರ್ದೇಶಕ ವಿಜಯಕೃಷ್ಣ ಕೆ.ಆರ್. ಉಡುಪಿ, ರಂಗಕಲಾವಿದೆ ಚಲನಚಿತ್ರ ನಟಿ ರೂಪಶ್ರೀ ವರ್ಕಾಡಿ, ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿ ನಿರ್ದೇಶಕ ಯಶವಂತ್, ದ.ಕ. ಚಿನ್ನ, ಬೆಳ್ಳಿ, ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್.ಹರೀಶ್ ಆಚಾರ್ಯ, ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಶುಭಾಶಂಸನೆ ಮಾಡಲಿದ್ದಾರೆ. ದ.ಕ.ಜಿಲ್ಲಾ ಬೆಜೆಪಿ ಕಾರ್ಯಕಾರಿಣಿ ಸದಸ್ಯ ರೂಪೇಶ್ ಆಚಾರ್ಯ, ಉಪ್ಪಿನಂಗಡಿ ರಾಘವೇಂದ್ರ ಜ್ಯುವೆಲ್ಲರ್ ಮಾಲಕ ಪ್ರಕಾಶ್ ಆಚಾರ್ಯ ಸಿದ್ಯಾಳ, ಕೊಯಿಲ ಗ್ರಾ.ಪಂ.ಪಿಡಿಒ ಸಂದೇಶ್ ಕೆ.ಎನ್., ನಿಗೂಢಗುರುತು ಚಿತ್ರ ನಿರ್ಮಾಪಕಿ ಪ್ರಿಯಾ ಚಿದಾನಂದ್ ಪೆರ್ಲ, ಸಹನಿರ್ಮಾಪಕ ಚಿದಾನಂದ್ ಪೆರ್ಲ, ನಿರ್ದೇಶಕ ಉದಯಾನಂದ ಬರ್ಕೆ ಉಪಸ್ಥಿತರಿರಲಿದ್ದಾರೆ.
ಗಣ್ಯರ ಸಮ್ಮುಖದಲ್ಲಿ ಲಕ್ಕಿ ಕೂಪನ್ ಡ್ರಾ ನಡೆಯಲಿದೆ. ಮಂಗಳೂರು ಶ್ರೇಯಾ ಮೆಲೋಡಿಯಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.