ಕುಂದಾಪುರ, ಜ. 04 : ಚಿರತೆ ದಾಳಿ ನಡೆಸಿ 2 ಹಸುಗಳನ್ನು ಕೊಂದು ಹಾಕಿರುವ ಘಟನೆ ತೆಕ್ಕಟ್ಟೆ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊರನಾಡಿಯಲ್ಲಿ ನಡೆದಿದೆ.
ಲಚ್ಚಿ ಕುಲಾಲ್ ಹಾಗೂ ಗುಲಾಬಿ ಕುಲಾಲ್ ಎಂಬುವವರು ತಮ್ಮ ಹಸುಗಳನ್ನು ಮೇಯಲು ಬಿಟ್ಟಿದ್ದರು. ಈ ಹಸುಗಳ ಮೇಲೆ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಮೊಳಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ, ಮಾಜಿ ಅಧ್ಯಕ್ಷ ಉದಯ ಕುಲಾಲ್, ಪಶು ವೈದ್ಯ ಡಾ| ಜಯಣ್ಣ, ಅರಣ್ಯ ಇಲಾಖೆಯ ಸಂತೋಷ್ ಭೇಟಿ ನೀಡಿದ್ದಾರೆ.
1 Comment
Pingback: bossa nova cafe