ಮಂಗಳೂರು, ಅ.10 : ಅಲ್ ನಜೀಂ ಉಸ್ ಸಕೀಬ್ ಪರ್ಫಮ್ ಟ್ರೇಡರ್ಸ್ ಸಂಸ್ಥೆಯ ಅಬ್ದುಲ್ ಹಮೀದ್ ಅವರ ಮಾಲಕತ್ವದ ಹೊಸ ಫರ್ಫಮ್ ಬ್ರಾಂಡ್ ‘ತುಝರ್ ಪರ್ಫಮ್ ನಗರದ ಬೆಂದೂರ್‌ವೆಲ್ನ ಅಗ್ನೆಸ್ ಕಾಲೇಜು ಪಕ್ಕದ ಸೇಂಟ್ ಸೆಬಾಸ್ಟಿಯನ್ ಮಿನಿ ಹಾಲ್‌ನಲ್ಲಿ ಗುರುವಾರ ಬಿಡುಗಡೆಗೊಗೊಂಡಿತು.
‘ತುಝರ್” ಪರ್ಫಮ್ ಉತ್ಪನ್ನವನ್ನು ಯೆನೆಪೊಯ ಡೀಮ್ ಟು ಬಿ ಯೂನಿವರ್ಸಿಟಿಯ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞ ಅವರು ಬಿಡುಗಡೆಗೊಳಿಸಿದರು. ಬಳಿಕ ನೂತನ ಉದ್ಯಮಕ್ಕೆ ಶುಭಕೋರಿದರು.
ಸ್ವಾಗತ ಭಾಷಣ ಮಾಡಿದ ತುಝರ್ ಸಂಸ್ಥೆಯ ಎಂಡಿ ಅಬ್ದುಲ್ ಹಮೀದ್ ಮಾತನಾಡಿ, ಮನೆಯ ಒಂದು ಸಣ್ಣ ಕೋಣೆಯನ್ನೇ ಲ್ಯಾಬ್ ಮಾಡಿಕೊಂಡು ಸುಗಂಧ ದ್ರವ್ಯ ತಯಾರಿ ಕುರಿತು ರೀಸರ್ಚ್ ಮಾಡಲು ಆರಂಭಿಸಿದೆ. ಅಲ್ಲಿಂದ 6 ತಿಂಗಳ ಕಾಲ ನಿರಂತರ ಪರಿಶ್ರಮದಿಂದ ಇಂದು ತುಝರ್ ಅನ್ನುವ ಬ್ರಾಂಡ್ ಅನ್ನು ಲೋಕಾರ್ಪಣೆಗೊಳಿಸುತ್ತಿದ್ದೇನೆ. ಡಾ.ಯೆನೆಪೋಯ ಅಬ್ದುಲ್ ಕುಂಞ ಅವರು ನನ್ನನ್ನು ಪ್ರೀತಿಯಿಂದ ಬೆಳೆಸಿದ್ದಾರೆ. ಅವರ ಸಹಾಯವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಕಠಿಣ ಪರಿಶ್ರಮದಿಂದ ನಾನು ಯಶಸನ್ನು ಸಾ ಧಿಸಿದ್ದೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ,ಅಬ್ದುಲ್ ಹಮೀದ್ ಅವರು ನೂತನ ಸುಗಂಧ ದ್ರವ್ಯ ಉದ್ಯಮವನ್ನು ಪ್ರಾರಂಭಿಸಿದ್ದಾರೆ ಅವರಿಗೆ ಶುಭವಾಗಲಿ ಎಂದರು.
ಶಾಂತಿ ಪಕಾಶನದ ವ್ಯವಸ್ಥಾಪಕ ಮೊಹಮ್ಮದ್ ಕುಂಞ ಮಾತನಾಡಿ, ಉದ್ಯಮದಲ್ಲಿ ಅಪ್ಲೇಟ್ ಆಗುವುದು ಮುಖ್ಯ. ಇಸ್ಲಾಂನಲ್ಲಿ ಉದ್ಯಮ ಹಾಗೂ ವ್ಯಾಪಾರಕ್ಕೆ ವಿಶೇಷ ಆದ್ಯತೆ ಇದ್ದು, ಹಮೀದ್ ಅವರಿಗೆ ದೇವನು ಆಶೀರ್ವದಿಸಲಿ ಎಂದರು.
ಎಸ್ಎಂಆರ್ ಗ್ರೂಪ್ ಅಧ್ಯಕ್ಷ ಎಸ್. ಎಂ. ರಶೀದ್ ಹಾಜಿ, ಪ್ಲಾಸ್ಟಿಕ್ ಲ್ಯಾಂಡ್ ಗ್ರೂಪ್ ಅಧ್ಯಕ್ಷ ಅಸ್ಕರ್ ಅಲಿ, ಉದ್ಯಮಿ ಹಸನಬ್ಬ ಚಾರ್ಮಾಡಿ ಮತ್ತಿತರರು ನೂತನ ಉದ್ಯಮಕ್ಕೆ ಶುಭಕೋರಿದರು.
ಮೊಯ್ದಿನ್ ಅವರ ದುಆ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಯೆನೆಪೊಯ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞ, ವೈದ್ಯಕೀಯ ತಜ್ಞ ಪ್ರೊ. ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ ಮತ್ತಿತರರನ್ನು ಸನ್ಮಾನಿಸಲಾಯಿತು.
ಸುಮಾರು 25 ವರ್ಷಗಳಿಂದ ಎಂಡಿ ಹಮೀದ್ ಜೊತೆ ಕೆಲಸ ಮಾಡುತ್ತಿರುವ ಮೊಹಮ್ಮದ್ ಮೊಯ್ದಿನ್ ಅವರಿಗೆ ಉಮ್ರ ಪ್ರವಾಸ ಟಿಕೆಟ್ ಹಾಗೂ ಕಳೆದ 13 ವರ್ಷಗಳಿಂದ ಕೆಲಸ ಮಾಡುತ್ತಿರುವ ಶೇಖರ್ ಅವರಿಗೆ ಕಾಶಿ-ರಾಮೇಶ್ವರಂ ಪುವಾಸದ ಟಿಕೆಟ್ ನೀಡಿ ಗೌರವಿಸಲಾಯಿತು. ವಿದ್ಯಾಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲಾಯಿತು.
ಅತಿಥಿಗಳಿಗೆ ಸಸಿಗಳನ್ನು ನೀಡಿ ಸ್ವಾಗತಿಸಲಾಯಿತು.ಸಂಸ್ಥೆಯ ಸಾಯೀಲ್ ರೈ ನಿರೂಪಿಸಿದರು. ಮೊಹಮ್ಮದ್ ಶರೀಫ್ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಮಂಗಳಾದೇವಿ ದೇವಾಲಯದ ಅನುವಂಶಿಕ ಮೊಕ್ತೇಸರರು ಹರೀಶ್ ಐಥಾಳ್, ಅಸ್ಕರ್ ಅಲಿ, ಷರೀಫ್ ಕಾಸರಗೋಡು, ಹಮೀದ್ ಅವರ ಪತ್ನಿ ಸಫಿಯಾ ಹಮೀದ್, ಪುತ್ರ ನಬೀಲ್ ಹಮೀದ್, ಶಫಿಯ ಅಹ್ಮದ್, ನವಿಲ್ ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.