ಮಂಗಳೂರು,ಮೇ.19 : ಮೇರಿಹಿಲ್ ನ ಪಾಲೆಮಾರ್ ಕನ್ವೆನ್ಶನ್ ಸೆಂಟರ್ನಲ್ಲಿ ಐಸಿಎಐನ ಮಂಗಳೂರು ಶಾಖೆಯಿಂದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಬಲವರ್ಧನೆ ಅಧಿಗಮ-ಜ್ಞಾನದ ಸಮಾವೇಶ ಮೇ 15, ಶುಕ್ರವಾರ ನಡೆಯಿತು.
ನಿಟ್ಟೆ ವಿಶ್ವವಿದ್ಯಾಲಯ ಸಹ ಕುಲಪತಿ ಹಾಗೂ ಹಿರಿಯ ಎಲುಬುತಜ್ಞ ಡಾ| ಶಾಂತಾರಾಮ್ ಶೆಟ್ಟಿ ಅವರು ಸಮಾವೇಶವನ್ನು ಉದ್ಘಾಟಿಸಿ, ಮಾತಾಡಿದ ಅವರು,ಲೆಕ್ಕಪರಿಶೋಧಕರು, ಇಂಜಿನಿಯರುಗಳು, ವೈದ್ಯರು ಹಾಗೂ ಕೌಶಲಯುತ ವೃತ್ತಿಪರರು ನಮ್ಮ ದೇಶವನ್ನು ಸದೃಢವಾಗಿ ಮುನ್ನಡೆಸುವ ಕೆಲಸ ಮಾಡಬೇಕಾಗಿದೆ.ಭಾರತ ಈಗ ಮತ್ತೆ ಶಕ್ತಿಯುತವಾಗುತ್ತಿದೆ, ದೊಡ್ಡ ಕ್ರಾಂತಿಯನ್ನೇ ಎಲ್ಲಾ ಕ್ಷೇತ್ರಗಳಲ್ಲೂ ಎದುರಿಸುತ್ತಿದೆ, ಪ್ರಸ್ತುತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಶೀಘ್ರ ಇದು ಬ್ರಿಟನ್ ಹಿಂದಿಕ್ಕಿ 3ನೇ ಸ್ಥಾನಕ್ಕೆ ಹೋಗಲಿದೆ, ಈ ಬೆಳವಣಿಗೆಯಲ್ಲಿ ಲೆಕ್ಕಪರಿಶೋಧಕರ ದೊಡ್ಡ ಕೊಡುಗೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಸಿಎಐನ ಕೇಂದ್ರ ಮಂಡಳಿಯ ಸದಸ್ಯ ಸಿಎ ದಯಾನಿವಾಸ ಶರ್ಮಾ, ಸಿಎ ಪಂಕಜ್ ಶಾ, ಐಸಿಎಐನ ದಕ್ಷಿಣ ಭಾರತ ಪ್ರಾದೇಶಿ ಸಮಿತಿ ( ಎಸ್ ಐಆರ್ ಸಿ) ಕಾರ್ಯದರ್ಶಿ ಸಿಎ ಪ್ರಮೋದ್ ಹೆಗ್ಡೆ ಉಪಸ್ಥಿತರಿದ್ದರು. ಐಸಿಎಐ ಮಂಗಳೂರು ಅಧ್ಯಕ್ಷ ಸಿಎ ಡ್ಯಾನಿಯಲ್ ಮಾರ್ಷ್ ಪಿರೇರಾ ಸ್ವಾಗತಿಸಿ ಪ್ರಸ್ತಾವಿಸಿದರು.
ಆ ಬಳಿಕ ನಡೆದ ಗೋಷ್ಠಿಗಳಲ್ಲಿ ಸಂಸದ ಕ್ಯಾ/ಬ್ರಿಜೇಶ್ ಚೌಟ, ಸಿಎ ಕಾರ್ತಿಕೇಯ ಶೆಣೈ, ಮಿಥುನ್ ಡಿ’ಸೋಜ, ಸಿಎ ಉದಯ ಕುಲಕರ್ಣಿ ಪಾಲ್ಗೊಂಡರು. ಕಾರ್ಯದರ್ಶಿ ಸಿಎ ಬಾಲಸುಬ್ರಹ್ಮಣ್ಯ ಎನ್ ವಂದಿಸಿದರು.











