Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ 2,000 ಕ್ಕೂ ಹೆಚ್ಚು ಜನರಿಗೆ ಸ್ಪಾಟ್ ಉದ್ಯೋಗ : ವಿವೇಕ್ ಆಳ್ವ

    August 23, 2026

    ತುಳು ವಿಕಿಪೀಡಿಯಗೆ ದಶಮಾನೋತ್ಸವ ಸಂಭ್ರಮ ; ಸೆ.12-13ರಂದು ವಿಶೇಷ ಕಾರ್ಯಕ್ರಮ

    August 22, 2026

    ಆ.24- 28 : ಕದ್ರಿ ಶ್ರೀ ಯೋಗೇಶ್ವರ ಮಠದಲ್ಲಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ

    August 21, 2026

    Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ 2,000 ಕ್ಕೂ ಹೆಚ್ಚು ಜನರಿಗೆ ಸ್ಪಾಟ್ ಉದ್ಯೋಗ : ವಿವೇಕ್ ಆಳ್ವ

    August 23, 2026

    ತುಳು ವಿಕಿಪೀಡಿಯಗೆ ದಶಮಾನೋತ್ಸವ ಸಂಭ್ರಮ ; ಸೆ.12-13ರಂದು ವಿಶೇಷ ಕಾರ್ಯಕ್ರಮ

    August 22, 2026

    ಆ.24- 28 : ಕದ್ರಿ ಶ್ರೀ ಯೋಗೇಶ್ವರ ಮಠದಲ್ಲಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ

    August 21, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ತುಳು ವಿಕಿಪೀಡಿಯಗೆ ದಶಮಾನೋತ್ಸವ ಸಂಭ್ರಮ ; ಸೆ.12-13ರಂದು ವಿಶೇಷ ಕಾರ್ಯಕ್ರಮ
    Local News

    ತುಳು ವಿಕಿಪೀಡಿಯಗೆ ದಶಮಾನೋತ್ಸವ ಸಂಭ್ರಮ ; ಸೆ.12-13ರಂದು ವಿಶೇಷ ಕಾರ್ಯಕ್ರಮ

    adminBy adminAugust 22, 2026
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು, ಆ.21  : ತುಳು ಭಾಷೆ, ಸಾಹಿತ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಡಿಜಿಟಲ್ ಜಗತ್ತಿನಲ್ಲಿ ದಾಖಲಿಸುವ ಪ್ರಯತ್ನವಾದ ತುಳು ವಿಕಿ ಪೀಡಿಯಾ ತನ್ನ ಲೈವ್ ಆವೃತ್ತಿಯ 10 ವರ್ಷಗಳನ್ನು ಪೂರೈಸಿದೆ. ಈ ದಶಮಾನೋತ್ಸವದ ಸ್ಮರಣೆ ಹಾಗೂ ಮುಂದಿನ ಹಂತದ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಸೆ.12 ಮತ್ತು 13ರದು ಮಂಗಳೂರಿನಲ್ಲಿ ಕರಾವಳಿ ವಿಕಿ ಮೀಡಿಯನ್ಸ್ ಯೂಸರ್ ಗ್ರೂಪ್‌ನಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರಾವಳಿ ವಿಕಿ ಮೀಡಿಯನ್ಸ್ ಯೂಸರ್ಸ್ ಗ್ರೂಪ್ನ ಅಧ್ಯಕ್ಷ ಡಾ. ವಿಶ್ವನಾಥ ಬದಿಕಾನ ಅವರು ಶನಿವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.12ರಂದು ಬೆಳಗ್ಗೆ 10 ಗಂಟೆಗೆ ಕರಂಗಲ್ಪಾಡಿಯ ಎಜೆ ಗ್ರಾಂಡ್ ಹೊಟೇಲ್‌ನಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವ ಗಣಕತಜ್ಞ ಡಾ. ಕೆ.ಪಿ.ರಾವ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ತುಳು ವಿಕಿಪೀಡಿಯಾದ 10 ವರ್ಷಗಳ ಪಯಣವನ್ನು ಅವಲೋಕಿಸುವುದು, ಆರಂಭಿಕ ಕೊಡುಗೆದಾರರು ಮತ್ತು ಸ್ವಯಂ ಸೇವಕರ ಸೇವೆ ಗುರುತಿಸುವುದು, ತುಳು ಭಾಷೆಯ ಡಿಜಿಟಲ್ ಭವಿಷ್ಯದ ಕುರಿತು ಚರ್ಚೆ ಹಾಗೂ ಮುಂದಿನ ಯೋಜನೆಗಳನ್ನು ರೂಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಅವರು ಹೇಳಿದರು.

    ಆರಂಭಿಕ ದಿನಗಳಲ್ಲಿ ತುಳು ವಿಕಿಪೀಡಿಯಾದಲ್ಲಿ ಭೂತಾರಾಧನೆ, ಜನಪದ ಕಲೆ, ಆಚರಣೆಗಳು, ಸಾಂಪ್ರದಾಯಿಕ ಕ್ರೀಡೆಗಳು ಮತ್ತು ತುಳುನಾಡಿನ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಇಂದು ವ್ಯಕ್ತಿಗಳು, ಗ್ರಾಮಗಳು, ತಾಲೂಕು, ಸಂಸ್ಥೆ, ಭೌಗೋಳಿಕ ಮಾಹಿತಿ, ಆಹಾರ ಸಂಸ್ಕೃತಿ, ಕಲಾವಿದರು, ಚಲನಚಿತ್ರಗಳು, ಪ್ರಕೃತಿ, ಔಷಧೀಯ ಸಸ್ಯಗಳು ಸೇರಿದಂತೆ ಹಲವು ಕ್ಷೇತ್ರಗಳ ಮಾಹಿತಿಯನ್ನು ದಾಖಲಿಸಲಾಗುತ್ತಿದೆ. ಸ್ಥಳೀಯವಾಗಿ ಲಭ್ಯವಿರುವ ಜ್ಞಾನವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವ ಮೂಲಕ ಮುಂದಿನ ಪೀಳಿಗೆಗೆ ಮಾಹತಿಯನ್ನು ಉಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.

    ಕರಾವಳಿ ವಿಕಿ ಮೀಡಿಯನ್ಸ್ ಯೂಸರ್ ಗ್ರೂಪ್ ಸ್ಥಾಪನೆ ಬಳಿಕ ಕಾಲೇಜುಗಳು, ವಿವಿಧ ಸಂಸ್ಥೆಗಳಲ್ಲಿ ಸಂಪಾದನಾ ಕಾರ್ಯಗಾರಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿಕಿಪೀಡಿಯಾ ಪರಿಚಯ, ಉಲ್ಲೇಖಗಳ ಬಳಕೆ, ಲೇಕನ ರಚನೆ, ಮಾಹಿತಿ ಸಂಗ್ರಹ, ಛಾಯಾಚಿತ್ರ ದಾಖಲಾತಿ ಮೊದಲಾದ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
    ಪತ್ರಿಕಾಗೋಷ್ಠಿಯಲ್ಲಿ ದಶಮಾನೋತ್ಸವ ಕಾರ್ಯಕ್ರಮ ಸಂಘಟಕ ಆಶಯ್ ವಿ.ಬಿ., ಭರತ್ ಅಲಸಂಡೆಮಜಲು ಉಪಸ್ಥಿತರಿದ್ದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News August 23, 2026

    ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ 2,000 ಕ್ಕೂ ಹೆಚ್ಚು ಜನರಿಗೆ ಸ್ಪಾಟ್ ಉದ್ಯೋಗ : ವಿವೇಕ್ ಆಳ್ವ

    Local News August 21, 2026

    ಆ.24- 28 : ಕದ್ರಿ ಶ್ರೀ ಯೋಗೇಶ್ವರ ಮಠದಲ್ಲಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ

    Local News August 20, 2026

    ಆ.21: ಮಂಗಳೂರಿನಲ್ಲಿ ಮೆಗಾ ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್ ಸಮಾವೇಶ

    Local News August 19, 2026

    ಆ.23 : ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

    Local News August 17, 2026

    ಉಡುಪಿ : ಮೀನುಗಾರಿಕೆ ವೇಳೆ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

    Local News August 16, 2026

    ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ “ಆಟಿದ ಐಸಿರ” ಕಾರ್ಯಕ್ರಮ

    Comments are closed.

    Demo
    Don't Miss
    Local News August 23, 2026

    ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ 2,000 ಕ್ಕೂ ಹೆಚ್ಚು ಜನರಿಗೆ ಸ್ಪಾಟ್ ಉದ್ಯೋಗ : ವಿವೇಕ್ ಆಳ್ವ

    ಮಂಗಳೂರು, ಆ. 23: ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವತಿಯಿಂದ ಆಯೋಜಿಸಲಾದ 16ನೇ ಆವೃತ್ತಿಯ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ’ ಯಲ್ಲಿ…

    ತುಳು ವಿಕಿಪೀಡಿಯಗೆ ದಶಮಾನೋತ್ಸವ ಸಂಭ್ರಮ ; ಸೆ.12-13ರಂದು ವಿಶೇಷ ಕಾರ್ಯಕ್ರಮ

    August 22, 2026

    ಆ.24- 28 : ಕದ್ರಿ ಶ್ರೀ ಯೋಗೇಶ್ವರ ಮಠದಲ್ಲಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ

    August 21, 2026

    ಆ.21: ಮಂಗಳೂರಿನಲ್ಲಿ ಮೆಗಾ ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್ ಸಮಾವೇಶ

    August 20, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.