Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ ಮುಹೂರ್ತ ಮತ್ತು ಲಾಂಛನ ಬಿಡುಗಡೆ

    April 13, 2026

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ- ಸವಾರ ಸಾವು

    April 12, 2026

    “90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

    April 11, 2026

    Subscribe to Updates

    Get the latest creative news from FooBar about art, design and business.

    What's Hot

    ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ ಮುಹೂರ್ತ ಮತ್ತು ಲಾಂಛನ ಬಿಡುಗಡೆ

    April 13, 2026

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ- ಸವಾರ ಸಾವು

    April 12, 2026

    “90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

    April 11, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Film News»ನಿರ್ದೇಶಕ ಶಶಾಂಕ್ ನಾಯಕನಾಗಿ ನಟಿಸಿರುವ “ಬ್ರ್ಯಾಟ್” ಚಿತ್ರದ ‘ಗಂಗಿ ಗಂಗಿ’ಹಾಡು ರಿಲೀಸ್
    Film News

    ನಿರ್ದೇಶಕ ಶಶಾಂಕ್ ನಾಯಕನಾಗಿ ನಟಿಸಿರುವ “ಬ್ರ್ಯಾಟ್” ಚಿತ್ರದ ‘ಗಂಗಿ ಗಂಗಿ’ಹಾಡು ರಿಲೀಸ್

    adminBy adminSeptember 15, 2025
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಬೆಂಗಳೂರು, ಸೆ. 15 : ನಿರ್ದೇಶಕ ಶಶಾಂಕ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ “ಬ್ರ್ಯಾಟ್”(BRAT) ಚಿತ್ರದ “ಗಂಗಿ ಗಂಗಿ” ಎಂಬ ಮಾಸ್ ಹಾಡು  ಅದ್ದೂರಿಯಾಗಿ  ಇತ್ತೀಚಿಗೆ  ಬೆಂಗಳೂರು ನಗರದ ಮಂತ್ರಿ ಮಾಲ್ ನ ಒಳ ಆವರಣದಲ್ಲಿ ಬಿಡುಗಡೆಯಾಯಿತು.

    ಈಗಾಗಲೇ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಗೊಂಡಿದೆ. ಈ “ಬ್ರ್ಯಾಟ್” ಚಿತ್ರವನ್ನು ಮಂಜುನಾಥ್ ಕಂದಕೂರ್ ನಿರ್ಮಿಸುತ್ತಿದ್ದು , ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲು ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬಿಡುಗಡೆಯಾಗಿರುವ ಈ ಹಾಡು ಉತ್ತರ ಕರ್ನಾಟಕದ ಪ್ರತಿಭೆ ಬಾಳು ಬೆಳಗುಂದಿ ತಾವೇ ರಚಿಸಿ ಹಾಡಿದ್ದಾರೆ. ಇವರೊಂದಿಗೆ ಗಾಯಕಿ ಇಂದು ನಾಗರಾಜ್ ಕೂಡ ಸಾಥ್ ನೀಡಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಂಪೋಸಿಂಗ್ ನಲ್ಲಿ ಬಂದಿರುವ ಈ ಹಾಡಿಗೆ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮುಂಬೈ ಬೆಡಗಿ ಅನೈರಾ ಸ್ಟೆಪ್ ಹಾಕಿದ್ದಾರೆ. ಈ ಹಾಡು ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಗೊಂಡ ನಂತರ ಚಿತ್ರತಂಡ ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡರು.

    ಈ ಚಿತ್ರದ ನಿರ್ದೇಶಕ ಶಶಾಂಕ್ ಮಾತನಾಡುತ್ತಾ ಈ ಚಿತ್ರದ ಶೀರ್ಷಿಕೆ, “ಬ್ರ್ಯಾಟ್” ಎಂದರೆ ತರ್ಲೆ ಹುಡುಗ , ಒಂದು ರೀತಿ ದಾರಿ ತಪ್ಪಿದ ಮಗ ಎಂದು ಹೇಳಬಹುದು. ಇದೊಂದು ಅಪ್ಪ-ಮಗನ ಕಥೆಯಾಗಿದ್ದು , ಭರ್ಜರಿ ಆಕ್ಷನ್ , ಥ್ರಿಲ್ಲರ್ ಜೊತೆಗೆ ಮನೋರಂಜನೆಯ ಅಂಶವು ತುಂಬಿಕೊಂಡಿದೆ. ಇಡೀ ಚಿತ್ರದ ಆರಂಭದಿಂದ ಕೊನೆಯವರೆಗೂ ಸಂಪೂರ್ಣ ಎಂಟರ್ಟೈನ್ಮೆಂಟ್ ಸಿಗಲಿದೆ.ಈಗಾಗಲೇ ಸಿದ್ ಶ್ರೀರಾಮ್ ಹಾಡಿರುವ “ನಾನೇ ನೀನಂತೆ” ಎಂಬ ಹಾಡು. ಬಿಡುಗಡೆಯಾಗಿದೆ. ಈಗ ಬಿಡುಗಡೆಯಾಗಿರುವ “ಗಂಗಿ ಗಂಗಿ” ಎಂಬ ಮಾಸ್ ಹಾಡನ್ನು ಗ್ರಾಮೀಣ ಪ್ರತಿಭೆ , ಜನಪದ ಗಾಯಕ ಬಾಳು ಬೆಳಗುಂದಿ ಹಾಗೂ ನಾಯಕಿ ಇಂದು ನಾಗರಾಜ್ ಅದ್ಭುತವಾಗಿ ಹಾಡಿದ್ದಾರೆ. ನಮ್ಮ ಚಿತ್ರದಲ್ಲಿ ಬಹಳಷ್ಟು ಹೈಲೈಟ್ ಗಳಿದ್ದು , ಅದರಲ್ಲಿ ಅರ್ಜುನ್ ಜನ್ಯ ಅವರ ಸಂಗೀತ ಕೂಡ ಅಷ್ಟೇ ಸೊಗಸಾಗಿ ಪ್ರತಿ ಹಾಡು ಮೂಡಿಬಂದಿದೆ. ಈಗಾಗಲೇ ನನ್ನ ಹಾಗೂ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ ನಲ್ಲಿ ಬಂದಿದ್ದ “ಕೌಸಲ್ಯ ಸುಪ್ರಜಾ ರಾಮ” ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.ಈಗ ಮತ್ತೊಮ್ಮೆ ನಿಮ್ಮ ಮುಂದೆ “ಬ್ರ್ಯಾಟ್” ಚಿತ್ರವನ್ನು ನವೆಂಬರ್ 14 ರಂದು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ, ಆನಂದ್ ಆಡಿಯೋ ಮೂಲಕ “ಬ್ರ್ಯಾಟ್” ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ನೀವೆಲ್ಲರೂ ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದರು.

    ನಟ ಡಾರ್ಲಿಂಗ್ ಕೃಷ್ಣ ಮಾತನಾಡುತ್ತಾ ಈ ಚಿತ್ರದ ಕಥೆ ಬಹಳ ವಿಭಿನ್ನವಾಗಿದೆ. ಅದರಲ್ಲೂ ವಿಶೇಷವಾಗಿ ನನ್ನ ಲುಕ್ ಡಿಫ್ರೆಂಟ್ ಆಗಿದೆ. ನಾನು ಡ್ಯಾನ್ಸ್ ಮಾಡಿ ಸುಮಾರು ಮೂರು ನಾಲ್ಕು ವರ್ಷಗಳೇ ಕಳೆದಿತ್ತು , ಈ ಹಾಡಿಗೆ ಸ್ಟೆಪ್ಸ್ ಹಾಕಲು ಕಾರಣ ನಮ್ಮ ನಿರ್ದೇಶಕ ಶಶಾಂಕ್. ಈ ಹಾಡು ಇಷ್ಟು ಚೆನ್ನಾಗಿ ಬಂದಿದೆ ಎಂದರೆ ಅದರ ಎಲ್ಲಾ ಕ್ರೆಡಿಟ್ ನಮ್ಮ ನೃತ್ಯ ನಿರ್ದೇಶಕ ಹಾಗೂ ಡೈರೆಕ್ಟರ್ ಗೆ ಸಲ್ಲಬೇಕು. ಹಾಗೆಯೇ ಈ “ಗಂಗಿ ಗಂಗಿ” ಹಾಡು ಇಷ್ಟು ಜೋಶ್ ನಲ್ಲಿ ಬರಲು ಬಾಳು ಬೆಳಗುಂದಿ ಅವರ ಸಾಹಿತ್ಯ, ಗಾಯನ ಹಾಗೂ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಪ್ರಮುಖ ಕಾರಣ ಕಾರಣವಾಗಿದೆ. ಹಾಗೆಯೇ ಈ ಚಿತ್ರದ ನಿರ್ಮಾಪಕ ಮಂಜುನಾಥ್ ಕಂದಕೂರ್ ಅವರಿಗಿರುವ ಸಿನಿಮಾ ಮೇಲಿನ ಪ್ರೀತಿಯೇ ಈ ಚಿತ್ರವು ಇಷ್ಟು ಸೊಗಸಾಗಿ ಬಂದಿದೆ. ಅದೇ ರೀತಿ ಇಂದು ಬಿಡುಗಡೆಯಾಗಿರುವ ಈ ಮಾಸ್ ಹಾಡು ಅದ್ದೂರಿಯಾಗಿ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರ ಬರಲಿದೆ ನೀವೆಲ್ಲರೂ ನೋಡಿ ಎಂದರು.

    ಈ ಚಿತ್ರದ ನಟಿ ಮನಿಶಾ ಕಂದಕೂರ್ ಮಾತನಾಡುತ್ತಾ ನಾನು ಕೂಡ ಕನ್ನಡದವಳು , ಇದು ನನ್ನ ಮೊದಲನೆಯ ಚಿತ್ರ. ಈ ಚಿತ್ರದಲ್ಲಿ ನನ್ನದು ಮಧ್ಯಮ ವರ್ಗದ ಹುಡುಗಿ ಪಾತ್ರ. ಸಿನಿಮಾ ಬಹಳ ಸೊಗಸಾಗಿ ಮೂಡಿ ಬಂದಿದೆ. ಪ್ರತಿಯೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದ್ದು , ಈಗ ಬಿಡುಗಡೆಯಾಗಿರುವ “ಗಂಗಿ ಗಂಗಿ” ಹಾಡು ಬಹಳ ಚೆನ್ನಾಗಿದೆ ಎಂದು ಹೇಳಿದರು.

    ಈ ಚಿತ್ರದ ನಿರ್ಮಾಪಕ ಮಂಜುನಾಥ್ ಕಂದಕೂರ್ ಮಾತನಾಡುತ್ತಾ ನಮ್ಮ “ಫಸ್ಟ್ ರ್ಯಾಂಕ್ ರಾಜು” ಚಿತ್ರದ ನಂತರ ನಾನು ನಿರ್ಮಾಣ ಮಾಡುತ್ತಿರುವ ಎರಡನೇ ಚಿತ್ರ “ಬ್ರ್ಯಾಟ್”. ನನಗೆ ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯಿತು , ಹಾಗಾಗಿ ಈ ಸಿನಿಮಾ ಮಾಡಲು ನಿರ್ಧರಿಸಿದೆ. ಅಂದುಕೊಂಡಂತೆ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಹಾಗೆಯೇ ನಟ ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಚಿತ್ರವು ಮತ್ತೊಂದು ಸೂಪರ್ ಹಿಟ್ ಆಗಲಿದೆ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಸೊಗಸಾಗಿದೆ , ಎಲ್ಲರೂ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ಎಂದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Film News April 11, 2026

    “90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

    Film News April 9, 2026

    ಎಪ್ರಿಲ್ 10 ರಂದು “90 ಎಮ್ ಎಲ್” ತುಳು ಚಿತ್ರ ತೆರೆಗೆ

    Film News February 22, 2026

    ಫೆ.27: ಬಿರ್ದ್ ದ ಕಂಬುಲ“ವೀರಕಂಬಳ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

    Film News February 2, 2026

    ಫೆ.06 : ರಾಜ್ಯಾದ್ಯಂತ “ಕರಿಕಾಡ” ಸಿನಿಮಾ ಬಿಡುಗಡೆ

    Film News December 15, 2025

    ಮಂಗಳೂರು : ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ರೈ ನಿಧನ

    Film News December 3, 2025

    ಡಿ.25 : ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ರಾಜ್ ಬಿ ಶೆಟ್ಟಿ ಒಟ್ಟಾಗಿ ನಟಿಸಿರುವ 45 ಕನ್ನಡ ಚಿತ್ರ ಬಿಡುಗಡೆ

    Comments are closed.

    Demo
    Don't Miss
    Local News April 13, 2026

    ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ ಮುಹೂರ್ತ ಮತ್ತು ಲಾಂಛನ ಬಿಡುಗಡೆ

    ಮಂಗಳೂರು,ಏ. 13 : ತನ್ನ ಅಸ್ತಿತ್ವದ ನಲ್ವತ್ತನೇ ವರ್ಷಾಚರಣೆ ಸಂಭ್ರಮದಲ್ಲಿರುವ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇದೇ…

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ- ಸವಾರ ಸಾವು

    April 12, 2026

    “90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

    April 11, 2026

    ಮಂಗಳೂರಿನ ಪುರಭವನದಲ್ಲಿ ಏಪ್ರಿಲ್ 12 ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ

    April 10, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.