Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಸೆಪ್ಟೆಂಬರ್ 18 ರಂದು “ಟಾಸ್” ತುಳು ಚಿತ್ರ ತೆರೆಗೆ

    September 13, 2026

    ಅಡಿಕೆ ಹಾಳೆ ತಟ್ಟೆಗಳಲ್ಲಿ ಅರೆಕೋಲಿನ್ ಪ್ರಮಾಣ ಅತ್ಯಂತ ಕಡಿಮೆ – ಅಗ್ರಿ ಲೀಫ್ ಸಹ ಸಂಸ್ಥಾಪಕ ಅವಿನಾಶ್ ರಾವ್

    September 12, 2026

    ಮಂಗಳೂರು : ಕೆಎಂಸಿಯಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

    September 11, 2026

    Subscribe to Updates

    Get the latest creative news from FooBar about art, design and business.

    What's Hot

    ಸೆಪ್ಟೆಂಬರ್ 18 ರಂದು “ಟಾಸ್” ತುಳು ಚಿತ್ರ ತೆರೆಗೆ

    September 13, 2026

    ಅಡಿಕೆ ಹಾಳೆ ತಟ್ಟೆಗಳಲ್ಲಿ ಅರೆಕೋಲಿನ್ ಪ್ರಮಾಣ ಅತ್ಯಂತ ಕಡಿಮೆ – ಅಗ್ರಿ ಲೀಫ್ ಸಹ ಸಂಸ್ಥಾಪಕ ಅವಿನಾಶ್ ರಾವ್

    September 12, 2026

    ಮಂಗಳೂರು : ಕೆಎಂಸಿಯಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

    September 11, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ಜ.11 : ಮಂಗಳೂರಿನಲ್ಲಿ ಜಗದ್ಗುರು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿಯ ಮಂಗಳೋತ್ಸವ
    Local News

    ಜ.11 : ಮಂಗಳೂರಿನಲ್ಲಿ ಜಗದ್ಗುರು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿಯ ಮಂಗಳೋತ್ಸವ

    adminBy adminJanuary 9, 2026
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು, ಜ.09 : ಜಗದ್ಗುರು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿಯ ಮಂಗಳೋತ್ಸವ ಜ. 11ಕ್ಕೆ ಮಂಗಳೂರಲ್ಲಿ ನಡೆಯಲಿದೆ ಎಂದು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಿಎ.ಜಗನ್ನಾಥ್ ಕಾಮತ್ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಮಂಗಳೋತ್ಸವದ ಪೂರ್ವಭಾವಿಯಾಗಿ ಜನವರಿ 5ಕ್ಕೆ ಕರ್ನಾಟಕ, ಕೇರಳದಿಂದ ಹೊರೆಕಾಣಿಕಾ ಸೇವಾ ಸಮರ್ಪಣೆ ನಡೆದಿದೆ. ದೇಶದ ವಿವಿಧೆಡೆಗಳಿಂದ ವ್ಯಾಸಧ್ವಜ ಸಂಕೀರ್ತನಾ ಪಾದಯಾತ್ರೆ ಮಂಗಳೂರಿಗೆ ಆಗಮಿಸುತ್ತಿದೆ ಎಂದರು.

    ಜನವರಿ 11 ರಂದು ಭಾನುವಾರ ಜನ್ಮಶತಾಬ್ದಿಯ ಮಂಗಳೋತ್ಸವ ನಡೆಯಲಿದ್ದು, ಮಧ್ಯಾಹ್ನ 3.30 ಕ್ಕೆ ಶ್ರೀ ಕಾಶೀಮಠ ಸಂಸ್ಥಾನದ ಕೊಂಚಾಡಿಯಲ್ಲಿರುವ ಶಾಖಾಮಠಕ್ಕೆ ಊರ, ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,ಅಲ್ಲಿಂದ ಭಜನಾ ಸಂಕೀರ್ತನಾ ವ್ಯಾಸಧ್ವಜ ಮತ್ತು ಸ್ವಾಮೀಜಿಯವರ ಪಾದುಕಾ ದಿಗ್ವಿಜಯ ಪಾದಯಾತ್ರೆ ಆರಂಭವಾಗಲಿದೆ. ಪಾದಯಾತ್ರೆಯು ಕೊಂಚಾಡಿಯಿಂದ ಮೇರಿಹಿಲ್, ಯೆಯ್ಯಾಡಿ, ಕೆಪಿಟಿ,ಬಿಜೈ, ಕೆಎಸ್ ಆರ್ ಟಿಸಿ, ಲಾಲ್ ಭಾಗ್, ಎಂ.ಜಿ.ರಸ್ತೆ, ಪಿ.ವಿ.ಎಸ್ ಜಂಕ್ಷನ್ ನಿಂದ ಬಲಕ್ಕೆ ತಿರುಗಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದ ಮೂಲಕ ಕೆನರಾ ಹೈಸ್ಕೂಲ್ ನಲ್ಲಿ ಸೇರಲಿದೆ. ಅಲ್ಲಿ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ದಾರಿಯುದ್ದಕ್ಕೂ ಯೆಯ್ಯಾಡಿ, ಬಿಜೈ, ಲಾಲ್ ಭಾಗ್ ನ ನಿರ್ದಿಷ್ಟ ಜಾಗಗಳಲ್ಲಿ ಪಾನೀಯದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

    ಈ ಪಾದಯಾತ್ರೆಯಲ್ಲಿ ವಿವಿಧ ಊರ ಭಜನಾ ಮಂಡಳಿಗಳು ದೇವರ, ಸ್ವಾಮೀಜಿಯವರ ಭಜನೆಯನ್ನು ಹಾಡುತ್ತಾ, ಪಾದಯಾತ್ರೆಯಲ್ಲಿ ಸಾಗಲಿವೆ. ಚೆಂಡೆ, ಬ್ಯಾಂಡ್ ಸೆಟ್, ದೇವರ, ಮಹಾಪುರುಷರ ವೇಷಭೂಷಣಗಳನ್ನು ಧರಿಸಿದ ಮಕ್ಕಳ ಟ್ಯಾಬ್ಲೋಗಳು, ವೇದಘೋಷ, ವಾದ್ಯಗಳೊಂದಿಗೆ ಸ್ವಾಮೀಜಿಯವರ ಭಾವಚಿತ್ರ ಇರುವ ಟ್ಯಾಬ್ಲೋ, ಸ್ವಾಮೀಜಿಯವರ ಪಾದುಕೆ ಇರುವ ಟ್ಯಾಬ್ಲೋ ಸಹಿತ ವಿವಿಧ ಕಲಾಪ್ರಕಾರಗಳು ಪಾದಯಾತ್ರೆಯಲ್ಲಿ ಸಾಗಲಿವೆ.ಪಾದಯಾತ್ರೆಯು ಸಾಗುತ್ತಾ ಡೊಂಗರಕೇರಿ, ನ್ಯೂಚಿತ್ರಾ, ಶ್ರೀನಿವಾಸ ಥಿಯೇಟರ್, ಸ್ವದೇಶಿ ಸ್ಟೋರ್ ತಲುಪಲಿದೆ. ಈ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿ ಇರಲಿದೆ. ಸ್ವದೇಶಿ ಸ್ಟೋರ್ ಬಳಿಯಿಂದ ಸ್ವರ್ಣ ಲಾಲಕಿಯಲ್ಲಿ ದೇವರೊಂದಿಗೆ ಪಾದಯಾತ್ರೆ ಶ್ರೀ ವೆಂಕಟರಮಣ ದೇವಸ್ಥಾನ ತಲುಪಲಿದೆ. ನಂತರ ಅಲ್ಲಿ ಮಂಗಳೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

    ಜನವರಿ 11 ರಂದು ರಾತ್ರಿ 8.30 ರಿಂದ ಮಂಗಳೋತ್ಸವದ ಸಭಾ ಕಾರ್ಯಕ್ರಮದಲ್ಲಿ ಕಾಶೀಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಹಿರಿಯ ಯತಿವರೇಣ್ಯರೂ, ಮಹಾತಪಸ್ವಿಗಳಾದ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುಣಗಾನದೊಂದಿಗೆ ಆರ್ಶೀವಚನ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಡಿ.ವೇದವ್ಯಾಸ ಕಾಮತ್, ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಪ್ರಮುಖರಾದ ಕೋಟೇಶ್ವರ ದಿನೇಶ್ ಕಾಮತ್, ರಘುವೀರ್ ಭಂಡಾರಕಾರ್, ವಾಸುದೇವ್ ಕಾಮತ್, ಟಿ. ಗಣಪತಿ ಪೈ, ಪ್ರಶಾಂತ್ ಪೈ ಮತ್ತಿತರರು ಉಪಸ್ಥಿತರಿದ್ದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News September 13, 2026

    ಸೆಪ್ಟೆಂಬರ್ 18 ರಂದು “ಟಾಸ್” ತುಳು ಚಿತ್ರ ತೆರೆಗೆ

    Local News September 12, 2026

    ಅಡಿಕೆ ಹಾಳೆ ತಟ್ಟೆಗಳಲ್ಲಿ ಅರೆಕೋಲಿನ್ ಪ್ರಮಾಣ ಅತ್ಯಂತ ಕಡಿಮೆ – ಅಗ್ರಿ ಲೀಫ್ ಸಹ ಸಂಸ್ಥಾಪಕ ಅವಿನಾಶ್ ರಾವ್

    Local News September 11, 2026

    ಮಂಗಳೂರು : ಕೆಎಂಸಿಯಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

    Local News September 10, 2026

    ಮಂಗಳೂರು: ಕ್ಯಾಂಪ್ಕೊ ದಾಖಲೆಯ ಸಾಧನೆ ; ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ

    Local News September 10, 2026

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

    Local News September 9, 2026

    ಮಂಗಳೂರು : ಶ್ರೀ ರಾಮ ಕೃಷ್ಣ ಮಠದಲ್ಲಿ ಕಲಾಸಾಧನ ವತಿಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಭ್ರಮ ‘ ರಾಗ ಸುಧಾ’

    Comments are closed.

    Demo
    Don't Miss
    Local News September 13, 2026

    ಸೆಪ್ಟೆಂಬರ್ 18 ರಂದು “ಟಾಸ್” ತುಳು ಚಿತ್ರ ತೆರೆಗೆ

    ಮಂಗಳೂರು, ಸೆ.13 : ಅವಿಕಾ ಪ್ರೊಡಕ್ಷನ್ ಮತ್ತು ಬಿಆರ್ ಬಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗಿರುವ ಅರ್ಜುನ್ ಕಾಪಿಕಾಡ್ (ದೇವ್) ನಿರ್ದೇಶನ,…

    ಅಡಿಕೆ ಹಾಳೆ ತಟ್ಟೆಗಳಲ್ಲಿ ಅರೆಕೋಲಿನ್ ಪ್ರಮಾಣ ಅತ್ಯಂತ ಕಡಿಮೆ – ಅಗ್ರಿ ಲೀಫ್ ಸಹ ಸಂಸ್ಥಾಪಕ ಅವಿನಾಶ್ ರಾವ್

    September 12, 2026

    ಮಂಗಳೂರು : ಕೆಎಂಸಿಯಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

    September 11, 2026

    ಮಂಗಳೂರು: ಕ್ಯಾಂಪ್ಕೊ ದಾಖಲೆಯ ಸಾಧನೆ ; ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ

    September 10, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.