Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಮಂಗಳೂರು : ಕೆಎಂಸಿಯಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

    September 11, 2026

    ಮಂಗಳೂರು: ಕ್ಯಾಂಪ್ಕೊ ದಾಖಲೆಯ ಸಾಧನೆ ; ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ

    September 10, 2026

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

    September 10, 2026

    Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರು : ಕೆಎಂಸಿಯಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

    September 11, 2026

    ಮಂಗಳೂರು: ಕ್ಯಾಂಪ್ಕೊ ದಾಖಲೆಯ ಸಾಧನೆ ; ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ

    September 10, 2026

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

    September 10, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ಮಂಗಳೂರು : ಶ್ರೀ ಮಾತಾ ಅಮೃತಾನಂದಮಯಿ ದೇವಿ ಬ್ರಹ್ಮಸ್ಥಾನ ಮಹೋತ್ಸವಕ್ಕೆ ಭವ್ಯ ಚಾಲನೆ
    Local News

    ಮಂಗಳೂರು : ಶ್ರೀ ಮಾತಾ ಅಮೃತಾನಂದಮಯಿ ದೇವಿ ಬ್ರಹ್ಮಸ್ಥಾನ ಮಹೋತ್ಸವಕ್ಕೆ ಭವ್ಯ ಚಾಲನೆ

    adminBy adminMay 28, 2026
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು,ಮೇ.28 : ಮಾನವಕುಲವು ಪ್ರಕೃತಿಯೆಡೆಗೆ ಹೆಚ್ಚಿನ ವಿನಯ, ಕರುಣೆ ಮತ್ತು ಪೂಜ್ಯಭಾವನೆಯಿಂದ ಬದುಕಬೇಕು ಎಂದು ಮಂಗಳೂರಿನ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ನಡೆದಿರುವ ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ಹೇಳಿದರು.

    ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಅಮ್ಮ, ಮನುಷ್ಯನು ಸಹಮಾನವರೊಂದಿಗೆ ಸಹಕಾರದಿಂದ, ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ಮತ್ತು ಈಶ್ವರನ ಜೊತೆಗೆ ಸಂಪರ್ಕವಿರಿಸಿಕೊಂಡು ಬದುಕುವುದನ್ನು ಕಲಿಯಬೇಕು.ಜನರು, ಸಮುದಾಯಗಳು ಮತ್ತು ರಾಷ್ಟ್ರಗಳ ನಡುವಿನ ಸಂಘರ್ಷಗಳಲ್ಲಿ ಸಂಧಾನ ಹಾಗೂ ರಾಜಿ ಸೂತ್ರಗಳು ಕೆಲಸ ಮಾಡಬಹುದು, ಆದರೆ ಪ್ರಕೃತಿಯೊಂದಿಗೆ ಇವುಗಳು ನಡೆಯುವುದಿಲ್ಲ. “ಪ್ರಕೃತಿಯನ್ನು ಸಮೀಪಿಸಲು ಇರುವ ಏಕೈಕ ಪರಿಣಾಮಕಾರಿ ಮಾರ್ಗವೆಂದರೆ, ಅಹಂಕಾರವನ್ನು ತೊರೆದು, ತಲೆಬಾಗಿ, ವಿನಯ, ಸ್ನೇಹ ಮತ್ತು ಪೂಜ್ಯಭಾವನೆಯಿಂದ ತುಂಬಿದ ಹೃದಯದೊಂದಿಗೆ ಆಕೆಯನ್ನು ಆರಾಧಿಸುವುದಾಗಿದೆ” ಎಂದರು.

    ಮಾನವರು ಈ ಭೂಮಿ, ಅದರ ನೈಸರ್ಗಿಕ ಸಂಪನ್ಮೂಲಗಳು ಮತ್ತು ಸಮೃದ್ಧಿಯನ್ನು ಸಹಜೀವಿಗಳು ಹಾಗೂ ಇತರ ಪ್ರಾಣಿ-ಪಕ್ಷಿಗಳೊಂದಿಗೆ ಸಾಮೂಹಿಕವಾಗಿ ಹಂಚಿಕೊಂಡು ಬದುಕಬೇಕು ಎಂಬ ಜಾಗೃತಿಯೇ ನಿಜವಾದ ಸಹಬಾಳ್ವೆಗೆ ಅಡಿಪಾಯವಾಗಿದೆ ಎಂದು ಅಮ್ಮ ಅಭಿಪ್ರಾಯಪಟ್ಟರು.

    ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಅಮ್ಮನವರ ಕಾರ್ಯಗಳು ಕೇವಲ ಆಧ್ಯಾತ್ಮಿಕತೆಗೆ ಸೀಮಿತವಾಗಿರದೆ, ಸಾಮಾಜಿಕ ಜೀವನದ ಹಲವು ಕ್ಷೇತ್ರಗಳನ್ನು ಸ್ಪರ್ಶಿಸಿವೆ ಎಂದು ಶ್ಲಾಘಿಸಿದರು.

    ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಆಧ್ಯಾತ್ಮಿಕ ಶಕ್ತಿಗೆ ಶಾಶ್ವತ ಮೌಲ್ಯವಿದ್ದು, ಸಾರ್ವಜನಿಕ ಜೀವನದಲ್ಲಿ ಇರುವವರು ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಇದು ಸಹಾಯ ಮಾಡುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ಸ್ವಾಮಿ ಜಿತಕಾಮಾನಂದ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಉಡುಪಿಯ ಶಾಸಕರಾದ ಯಶಪಾಲ್ ಸುವರ್ಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, , ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್, ಕಿಶೋರ್ ಆಳ್ವ, ಪ್ರಕಾಶ್ ಪೈ ಪೆರಾಜೆ,ವೇದಪ್ರಕಾಶ್ ಶ್ರೀಯಾನ್, ಗೌರವಾಧ್ಯಕ್ಷರುಗಳಾದ ಡಾ ಜೀವರಾಜ್ ಸೊರಕೆ, ಸಿ ಎ ವಾಮನ್ ಕಾಮತ್, ಶ್ರುತಿ ಹೆಗ್ಡೆ,ಡಾ ವಸಂತ ಕುಮಾರ್ಪ್ಶ ಪೆರ್ಲ, ಸ್ವಾಗತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

    ಈ ಮಹೋತ್ಸವದ ಅಂಗವಾಗಿ ಮಠದ ವತಿಯಿಂದ ಹಲವಾರು ಕಲ್ಯಾಣ ಯೋಜನೆಗಳಿಗೆ ಚಾಲನೆ ಮತ್ತು ನೆರವು ನೀಡಲಾಯಿತು. ಇದರಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಕ್ಕಳಿಗೆ ನೆರವು, ಅಮೃತಶ್ರೀ (AmritaSREE) ಸ್ವಸಹಾಯ ಗುಂಪಿನ 1,200 ಸದಸ್ಯರಿಗೆ ಆರ್ಥಿಕ ಸಾಲ-ಸಹಾಯ, ಕರಾವಳಿ ಜನರ ಜೀವನೋಪಾಯಕ್ಕಾಗಿ ಕಡಲ ಕಳೆ (Seaweed) ಕೃಷಿ ಯೋಜನೆ ಮತ್ತು ಆಯುಧ್ (AYUDH) ಮಂಗಳೂರು ನೇತೃತ್ವದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನಗಳು ಸೇರಿವೆ. ಉತ್ಸವದ ಭಾಗವಾಗಿ ವಿಶೇಷ ಪೂಜೆಗಳು, ದರ್ಶನ, ಸ್ವಯಂಸೇವಕರಿಂದ ಸೇವಾ ಚಟುವಟಿಕೆಗಳು, ಉಚಿತ ವೈದ್ಯಕೀಯ ಶಿಬಿರ, ಅನ್ನದಾನ ಹಾಗೂ ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ ಆಗಮಿಸಿದ್ದ ಭಕ್ತಾದಿಗಳಿಗೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.

    ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಡಾ ವೈ ಸನತ್ ಹೆಗ್ಡೆ ಸಭೆನ್ನುದ್ದೇಶಿಸಿ ಮಾತಾಡಿದರು. ಸೇವಾ‍ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ಸ್ವಾಗತಿಸಿದರು. ಡಾ ಅಶೋಕ್ ಶೆಣೈ ಮತ್ತು ಡಾ ನಂದಿತಾ ಶೆಣೈ ನಿರೂಪಣೆ ಮಾಡಿದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News September 11, 2026

    ಮಂಗಳೂರು : ಕೆಎಂಸಿಯಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

    Local News September 10, 2026

    ಮಂಗಳೂರು: ಕ್ಯಾಂಪ್ಕೊ ದಾಖಲೆಯ ಸಾಧನೆ ; ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ

    Local News September 10, 2026

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

    Local News September 9, 2026

    ಮಂಗಳೂರು : ಶ್ರೀ ರಾಮ ಕೃಷ್ಣ ಮಠದಲ್ಲಿ ಕಲಾಸಾಧನ ವತಿಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಭ್ರಮ ‘ ರಾಗ ಸುಧಾ’

    Local News September 8, 2026

    ಸೆ.14 -16 : ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

    Local News September 7, 2026

    ಮಂಗಳೂರು : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ

    Comments are closed.

    Demo
    Don't Miss
    Local News September 11, 2026

    ಮಂಗಳೂರು : ಕೆಎಂಸಿಯಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

    ಮಂಗಳೂರು, ಸೆ.11 : ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಉತ್ಸವವನ್ನುಲೈಟ್‌ಹೌಸ್ ಹಿಲ್ ರೋಡ್ ಕ್ಯಾಂಪಸ್‌ನಲ್ಲಿ…

    ಮಂಗಳೂರು: ಕ್ಯಾಂಪ್ಕೊ ದಾಖಲೆಯ ಸಾಧನೆ ; ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ

    September 10, 2026

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

    September 10, 2026

    ಮಂಗಳೂರು : ಶ್ರೀ ರಾಮ ಕೃಷ್ಣ ಮಠದಲ್ಲಿ ಕಲಾಸಾಧನ ವತಿಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಭ್ರಮ ‘ ರಾಗ ಸುಧಾ’

    September 9, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.