ಕಾಸರಗೋಡು, ಜು. 11 : ಕೆಎಸ್‌ಇಬಿ ಲೈನ್‌ಮ್ಯಾನ್ ಯೊಬ್ಬರು ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ ಘಟನೆ ನೀಲೇಶ್ವರ ಮಡಿಕೈನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಪುಲ್ಲೂರು ಮಧುರಂಬಾಡಿ ನಿವಾಸಿ ಭರತನ್ (52) ಎಂದು ಗುರುತಿಸಲಾಗಿದೆ.
ಮಡಿಕೈ ಕಣಿಚ್ಚಿರಾ ಸೇತುವೆಯ ಬಳಿಯ ತಿರುವಿನಲ್ಲಿ ಈ ಘಟನೆ ನಡೆದಿದೆ.ಕಣಿಚ್ಚಿರಾ ಪ್ರದೇಶದಲ್ಲಿ ವಿದ್ಯುತ್ ತಂತಿಯಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸಲು ಭರತನ್ ಅವರು ವಿದ್ಯುತ್ ಕಂಬ ಹತ್ತಿದ್ದಾಗ ಅನಿರೀಕ್ಷಿತವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅವರು ಸೊಂಟಕ್ಕೆ ಸುರಕ್ಷತಾ ಬೆಲ್ಟ್ ಧರಿಸಿದ್ದರಿಂದ, ಶಾಕ್ ತಗುಲಿದ ಬಳಿಕ ಅವರ ಮೃತದೇಹ ಕಂಬದಲ್ಲೇ ಸಿಲುಕಿಕೊಂಡಿತ್ತು. ನಂತರ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮೃತದೇಹವನ್ನು ಕೆಳಗಿಳಿಸಿದ್ದಾರೆ.











