ಮಂಗಳೂರು, ಆ.25 : ಮಂಗಳೂರು ಪ್ರೊಡಕ್ಕಿವಿಟಿ ಕೌನ್ಸಿಲ್ ವತಿಯಿಂದ ರೋಟರಿ ಕ್ಲಬ್ ಮಂಗಳೂರು ಸಹಯೋಗದಲ್ಲಿ ಮಂಗಳೂರಿನ ರೆಡ್ ಕ್ರಾಸ್ ಪ್ರೇರಣಾ ಹಾಲ್ ನಲ್ಲಿ ಆ.20,ಶುಕ್ರವಾರ ಎಂಪಿಸಿ ರೋಟರಿ ಕೋಸ್ಟೈಲ್ ಎಂಎಸ್ ಎಂಇ ಮತ್ತು ಸ್ಟಾರ್ಟಪ್ ಕಾನ್ ಕ್ಲೇವ್ – 2026 ಸಮಾವೇಶ ನಡೆಯಿತು.
ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉದ್ಯೋಗ ಹುಡುಕುವುದಕ್ಕಿಂತ ಉದ್ಯೋಗ ಸೃಷ್ಟಿಸುವವರಾಗಬೇಕು. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 1 ರಷ್ಟು ಜನರಿಗೆ ಮಾತ್ರ ಸರಕಾರದಿಂದ ಉದ್ಯೋಗ ಒದಗಿಸಲು ಸಾಧ್ಯ. ಉಳಿದ ಶೇಕಡಾ 99 ರಷ್ಟು ಮಂದಿಗೆ ಖಾಸಗಿ ಅಥವಾ ಸ್ವಂತ ಉದ್ಯೋಗವೇ ಪ್ರಮುಖ ಅವಕಾಶವಾಗಿದೆ ಎಂದರು.
ಎಂಪಿಸಿ ಕಾನ್ ಕೇವ್ ನಿರ್ದೇಶಕ ಹಾಗು ಮಹಾಪೋಷಕ ಸಿಎ ಎಸ್.ಎಸ್ ನಾಯಕ್ ಅವರು ಮಾತನಾಡಿ, ಕರಾವಳಿ ಕರ್ನಾಟಕದ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಹೊಸ ಉತ್ತೇಜನ ನೀಡುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ.ಈ ಕಾರ್ಯಕ್ರಮ ನಮ್ಮ ಎಂಪಿಸಿ ರೋಟರಿ ಕಾನ್ ಕ್ಲೇವ್ ನ ಎರಡನೇ ಆವೃತ್ತಿ ಎಂದು ತಿಳಿಸಲು ನನಗೆ ಹೆಮ್ಮೆ ಎನಿಸುತ್ತಿದೆ ಎಂದರು.
ಎಂ ಆರ್ ಪಿ ಎಲ್ ನ ಜಿಜಿಎಂ ಶರತ್ ಬುಡಲೆ ಎಸ್, ಜಪಾನ್ ಚೇಂಬರ್ ಆಫ್ ಕಾಮರ್ಸ್ ಕಮಿಟಿ ಸದಸ್ಯ ಪ್ರೊ. ಹರಿಕೃಷ್ಣ ಭಟ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ಣಾಟಕ ಬ್ಯಾಂಕಿನ ಸಿಒಒ ರಾಜಾ ಬಿ ಎಸ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಸೋಸಿಯೇಶನ್ ಆಫ್ ಕನ್ಸಲಿಂಗ್ ಸಿವಿಲ್ ಎಂಜಿನಿಯರ್ಸ್ ಅಧ್ಯಕ್ಷ ರಾಜೇಂದ್ರ ಕಾವಿ, ಮಂಗಳೂರು ರೋಟರಿ ಕ್ಲಬ್ ಆಫ್ ಸೆಂಟ್ರಲ್ ಅಧ್ಯಕ್ಷ ರವೀಂದ್ರ ಬಿ. ಎನ್ ಮತ್ತಿತ್ತರರು ಉಪಸ್ಥಿತರಿದ್ದರು.











