ಕೆಎನ್‌ಎನ್‌ಡಿಜಿಟಲ್‌ಡೆಸಕ್: ಕೆಜಿಎಫ್2.. ಯಾವಾಗ ಈ ಸಿನಿಮಾದ ದರ್ಶನವಾಗುತ್ತೋ… ಆ ದಿವ್ಯ ಘಳಿಗೆಗೆ ಸಮಯ ಬೇಗ ಒದಗಿ ಬರಬಾರದಾ ಎಂದು ಸಿನಿ ಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 14ರಂದು ಕೆಜಿಎಫ್ 2 ರಿಲೀಸ್ ಆಗುತ್ತೆ ಅಂತ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಆದ್ರೆ ಅಷ್ಟು ದಿನಗಳನ್ನ ಕಾಯೋದಕ್ಕೂ ಫ್ಯಾನ್ಸ್ ಗೆ ಆಗ್ತಾ ಇಲ್ಲ. ಜಪ ಮಾಡಿಕೊಂಡು ಕೆಜಿಎಫ್ ಕೆಜಿಎಫ್ ಎಂದು ಜಪ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಖುಷಿಯ ಸುದ್ದಿ ಏನಪ್ಪ ಅಂದ್ರೆ ಲಾಲ್ ಸಿಂಗ್ ಚಡ್ಡಾ ನಮ್ಮ ಕೆಜಿಎಫ್ ಗೆ ಸಪೋರ್ಟ್ ಮಾಡ್ತೀನಿ ಎಂದಿದ್ದಾರೆ.
ಎಸ್.. ಕೆಜಿಎಫ್ 1 ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಅಷ್ಟೇ ಕಾತುರ ಕೆಜಿಎಫ್2 ನೋಡಲು ಎಲ್ಲರಲ್ಲೂ ಕಾಣ್ತಿದೆ. ಆದ್ರೆ ಈ ಮಧ್ಯೆ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಸಿನಿಮಾಗೆ ಸಪೋರ್ಟ್ ಮಾಡ್ತೀನಿ ಅಂತ ಹೇಳಿರೋ ಮಾತು ಎಲ್ಲರನ್ನ ಮತ್ತಷ್ಟು ಖುಷಿಗೊಳಿಸಿದೆ. ನನ್ನಿಂದ ಸಿನಿಮಾಗೆ ಏನು ಸಪೋರ್ಟ್ ಬೇಕಿದ್ದರು ಕೇಳಿ ಮಾಡ್ತೇನೆ ಅಂತ ಹೇಳಿದ್ದೀನಿ ಅಂತ ಅಮೀರ್ ಖಾನ್ ಹೇಳಿದ್ದಾರೆ.
ಇದಕ್ಕೂ ಮುನ್ನ ಅಮೀರ್ ಖಾನ್ , ರಾಕಿ ಬಾಯ್ ಬಳಿ ಕ್ಷಮೆ ಕೇಳಿದ್ದ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಆದ್ರೆ ಯಾಕೆ ಕ್ಷಮೆ ಕೇಳಿದ್ದಾರೆ ಎಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್, ಯಶ್, ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಗೊತ್ತು ಅಂತಷ್ಟೇ ಹೇಳಿದ್ರು. ಆದ್ರೂ ಅಭಿಮಾನಿಗಳಲ್ಲಿ ಅದೊಂದು ಪ್ರಶ್ನೆ ಈಗಲೂ ಕೊರೆಯುತ್ತಲೆ ಇದೆ. ಈಗಾಗ್ಲೇ ಕೆಜಿಎಫ್ 2 ಸಿನಿಮಾ ತನ್ನ ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡಿದೆ. ಈ ಹಿನ್ನೆಲೆ ಸಾಕಷ್ಟು ಸಿನಿಮಾಗಳು ರಿಲೀಸ್ ಡೇಟ್ ಮುಂದೂಡಿದ್ದವು. ಆದ್ರೆ ಈ ಮಧ್ಯೆ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಅದೇ ಡೇಟ್ ನಲ್ಲಿ ತೆರೆಗೆ ಬರಲು ಸಜ್ಜಾಗಿತ್ತು. ಇದೀಗ ಆ ನಿರ್ಧಾರದಿಂದಲೂ ಹಿಂದೆ ಸರಿದಿದೆ.
5 Comments
jazz music definition
asian trap beat
relaxing jazz coffee shop
Pingback: EURO 2024 STADIUMS
Pingback: thai massage liestal