ಮುಂಬೈ: ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಕತ್ರಿನಾ ಕೈಫ್ , ವಿಕ್ಕಿ ಕೌಶಲ್ ಗೆ ಸೆಲಿಬ್ರಿಟಿ ಫ್ರೆಂಡ್ಸ್ ಗಳಿಂದ ದುಬಾರಿ ಗಿಫ್ಟ್ ಸಿಗುತ್ತಿದೆ.
ಕತ್ರಿನಾ ಮತ್ತು ವಿಕ್ಕಿ ಕೌಶಲ್ ಡಿ.9 ರಂದು ರಾಜಸ್ಥಾನದಲ್ಲಿ ವಿವಾಹವಾಗಿದ್ದರು. ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ವಿವಾಹದಲ್ಲಿ ಭಾಗಿಯಾಗಿದ್ದರು.
ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಈ ನವ ಜೋಡಿಗೆ ಬರೋಬ್ಬರಿ 3 ಕೋಟಿ ಬೆಲೆಬಾಳುವ ರೇಂಜ್ ರೋವರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ರಣಬೀರ್ ಕಫೂರ್ ಸುಮಾರು 2.7 ಕೋಟಿ ಬೆಲೆಬಾಳುವ ಡೈಮಂಡ್ ನೆಕ್ಲೆಸ್ ಗಿಫ್ಟ್ ನೀಡಿದ್ದಾರೆ ಎಂದು ಬಾಲಿವುಡ್ ಲೈಫ್ ಹೇಳಿದೆ.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 6.4 ಲಕ್ಷ ರೂ. ಮೌಲ್ಯದ ಡೈಮಂಡ್ ಕಿವಿಯೊಲೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಹೃತಿಕ್ ರೋಷನ್ 3 ಲಕ್ಷ ಮೌಲ್ಯದ ಬಿಎಂಡಬ್ಲ್ಯೂ ಜಿ 310 ಆರ್ ಬೈಕ್ ನ್ನು ಗಿಫ್ಟ್ ಆಗಿ ನೀಡಿದ್ದಾರೆ ಎಂದು ವರದಿಯಾಗಿದೆ.