Author: admin

ನವದೆಹಲಿ: 2018 ರಲ್ಲಿ ಐಎಎಸ್ ಅಥರ್ ಖಾನ್ ಅವರನ್ನು ವಿವಾಹವಾಗಿದ್ದ ಟೀನಾ ,2021ರಲ್ಲಿ ಅಂದ್ರೆ ಕಳೆದ ವರ್ಷವಷ್ಟೇ ವಿಚ್ಛೇದನ ನೀಡಿದ್ದರು. 2015ರ ಐಎಎಸ್ ಟಾಪರ್ ಟೀನಾ ದಾಬಿ ಇದೀಗ ಮತ್ತೊಮ್ಮೆ 2ನೇ ವಿವಾಹಕ್ಕೆ ಮುಂದಾಗಿರುವ ಅವರು ಪ್ರದೀಪ್ ಗವಾಂಡೆ ಅವರನ್ನು ವರಿಸಲಿದ್ದಾರೆ. 2016 ರ ರಾಜಸ್ಥಾನ ಕೇಡರ್ ಅಧಿಕಾರಿ ಟೀನಾ 2013 ರ ಬ್ಯಾಚ್ ಐಎಎಸ್ ಪ್ರದೀಪ್ ಗವಾಂಡೆ ಅವರನ್ನು ಇದೇ ಏಪ್ರಿಲ್ 22 ರಂದು ಮದುವೆಯಾಗಲಿದ್ದಾರೆ. ಜೈಪುರದ ಹೊಟೆಲೊಂದ್ರಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಟೀನಾ ದಾಬಿ ಅವರು ತನ್ನ ಭಾವಿ ಪತಿ ಪ್ರದೀಪ್ ಗವಾಂಡೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ  ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Read More

ನೆದರ್ಲೆಂಡ್‌ : ಮಾನವನ ರಕ್ತದಲ್ಲಿ ಇದೇ ಮೊದಲ ಬಾರಿಗೆ ಮೈಕ್ರೊಪ್ಲಾಸ್ಟಿಕ್ ಕಂಡು ಬಂದಿವೆ. ಮೈಕ್ರೊಪ್ಲಾಸ್ಟಿಕ್ ಅಂದ್ರೆ ಪ್ಲಾಸ್ಟಿಕ್ ನ ಸಣ್ಣ ಕಣಗಳು. ಈ ಪ್ಲಾಸ್ಟಿಕ್ ನ ಸಣ್ಣ ಕಣಗಳು ಇನ್ಮುಂದೆ ಮಾನವನ ಇತರ ಅಂಗಗಳಿಗೆ ಸಂಚಾರಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಮೈಕ್ರೋಪ್ಲಾಸ್ಟಿಕ್‌ಗಳು – 0.2 ಇಂಚು (5 ಮಿಮೀ) ಗಿಂತ ಕಡಿಮೆ ವ್ಯಾಸದ ಪ್ಲಾಸ್ಟಿಕ್‌ನ ಸಣ್ಣ ಸಣ್ಣ ತುಣುಕುಗಳು ಮಾನವ ರಕ್ತದಲ್ಲಿ ಕಂಡುಬಂದಿವೆ. ನೆದರ್ಲೆಂಡ್ ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ 10 ರಲ್ಲಿ 8 ಜನರ ದೇಹದಲ್ಲಿ ಮೈಕ್ರೋ ಪ್ಲಾಸ್ಟಿಕ್ ಇರುವುದು ಪತ್ತೆಯಾಗಿದೆ. ಇಲ್ಲಿ ನ‌ ವಿಜ್ಞಾನಿಗಳ ತಂಡವು ಆರೋಗ್ಯವಂತ ಸ್ವಯಂಸೇವಕರಿಂದ ರಕ್ತದ ಮಾದರಿಗಳನ್ನು ಪರೀಕ್ಷಿಸಿದೆ. ಪರೀಕ್ಷೆಗೊಳಪಡಿಸಿದ ಸ್ಯಾಂಪಲ್‌ಗ‌ಳ ಪೈಕಿ ಶೇ.80ರಷ್ಟು ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ ಇರುವುದು ದೃಢಪಟ್ಟಿದೆ. ಮೈಕ್ರೋ ಪ್ಲಾಸ್ಟಿಕ್ ಪತ್ತೆಯಾದವರ ರಕ್ತದ ರಕ್ತದ ಮಾದರಿಗಳು ಪಿಈಟಿ ಪ್ಲಾಸ್ಟಿಕ್‌ನ ಇರುವುದು ಪತ್ತೆಯಾಗಿದೆ. ಇದು ಸಾಮಾನ್ಯವಾಗಿ ಊಟದ ಪ್ಲೇಟ್, ಕುಡಿಯುವ ನೀರಿನ ಬಾಟಲ್, ಬಟ್ಟೆಗಳನ್ನು ಪ್ಯಾಕ್ ಮಾಡುವ ಕವರ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.

Read More

ಮಂಗಳೂರು : ಬೋಳಾರದಲ್ಲಿರುವ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ  ಹಿನ್ನೆಲೆಯಲ್ಲಿ ಮಾ.24, ಗುರುವಾರದಂದು ರಥೋತ್ಸವ ಕಾರ್ಯಕ್ರಮವು ವಿಜ್ರಂಭನೆಯಿಂದ ಜರಗಿತು. ಅಂದು (ಗುರುವಾರ)ಪ್ರಾತ:ಕಾಲ ಪೂಜೆ,ಗಣಪತಿ ಹೋಮ,ನವಕಲಶಾಭಿಷೇಕ ಮಧ್ಯಾಹ್ನ ಗಂಟೆ 12ಕ್ಕೆ ಪೂಜೆಯಾಗಿ ರಥಾರೋಹನ,ಸಂಜೆ ಗಂಟೆ 6.30ಕ್ಕೆ ರಥೋತ್ಸವ,ಬಲಿ,ಬಟ್ಟಲು ಕಾಣಿಕೆ,ಮಹಾಪೂಜೆ,ಶ್ರೀ ಭೂತಬಲಿ,ಕವಾಟ ಬಂಧನ,ಶಯನ ಕಾರ್ಯಕ್ರಮಗಳು ಜರಗಿದವು. ಶ್ರೀ ಕ್ಷೇತ್ರ ಮಂಗಳಾದೇವಿ ದೇವಸ್ಥಾನದಲ್ಲಿ ತಾ.20-03-2022ನೇ ರವಿವಾರದಿಂದ ತಾ.25-03-2022 ಶುಕ್ರವಾರತನಕ ವರ್ಷಾವಧಿ ಜಾತ್ರೋತ್ಸವದ ಕಾರ್ಯಕ್ರಮದಲ್ಲಿ ಊರ-ಪರಊರ ಭಕ್ತಾಧಿಗಳು ಪಾಲ್ಗೊಂಡಿದ್ದರು.

Read More

ಮಂಗಳೂರು : ನಗರದ ಭೂಮಿಕಾ ಟೆಕ್ಸ್ ಟೈಲ್ಸ್ ಮಾಲಕಿ ಸುಮಾ ಸತೀಶ್ ಮಾರ್ಚ್ 15, ಮಂಗಳವಾರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಣ್ಣಗುಡ್ಡೆಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಅವರು, ಅನಾರೋಗ್ಯದಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಇದೆ. ಸುಮಾ ಸತೀಶ್ ಅವರು ಸತೀಶ್ ಪಿ. ಕೆ ಅವರ ಪತ್ನಿ ಮತ್ತು ಉದ್ಯಮಿ ಪಿ. ಕೆ ದೂಜಾ ಪೂಜಾರಿ ಅವರ ಸೊಸೆಯಾಗಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಉಡುಪಿ: ಹಿಜಾಬ್ ವಿವಾದದ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿನ  ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಜಿಲ್ಲೆಯಲ್ಲಿ  ಮಾರ್ಚ್ 21ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ 5 ಅಥವಾ 5ಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಶಾಲಾ-ಕಾಲೇಜು ಆವರಣದಲ್ಲಿ ಪೂರ್ನಾನುಮತಿ ಇಲ್ಲದೇ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗೇನೆ  ಮುಖ್ಯಸ್ಥರ ಪೂರ್ನಾನುಮತಿ ಇಲ್ಲದೇ ಅಪರಿಚಿತ ವ್ಯಕ್ತಿಗಳು ಶಿಕ್ಷಣ ಸಂಸ್ಥೆಯನ್ನು ಪ್ರವೇಶ ಮಾಡುವುದನ್ನು ಕೂಡ ನಿರ್ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಆದೇಶ ಹೊರಡಿಸಿದ್ದಾರೆ.

Read More

ನವದೆಹಲಿ : ರಷ್ಯಾ ಆಕ್ರಮಿತ ಉಕ್ರೇನ್ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ನಡೆಸಲಾಗುತ್ತಿರುವ ಕಾರ್ಯಾಚರಣೆಗೆ ಕೈಜೋಡಿಸುವಂತೆ ಭಾರತೀಯ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ‘ಆಪರೇಷನ್ ಗಂಗಾ’ ಕಾರ್ಯಾಚರಣೆಯ ಮೂಲಕ ಯುದ್ದಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಮತ್ತು ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರವು ಪ್ರಾರಂಭಿಸಿದೆ. ‘ಆಪರೇಷನ್ ಗಂಗಾ’ ಮಿಷನ್‌ನ ಭಾಗವಾಗಿ ಏರ್ ಇಂಡಿಯಾ ವಿಶೇಷ ವಿಮಾನಗಳನ್ನು ನಿರ್ವಹಿಸುತ್ತಿದೆ.. ಯುದ್ದಪೀಡಿತ ಉಕ್ರೇನ್‌ನಲ್ಲಿರುವ ಭಾರತೀಯರನ್ನು ನೆರೆ ದೇಶಗಳಾದ ಪೋಲೆಂಡ್, ರುಮೇನಿಯಾ, ಸ್ಲೊವಾಕಿಯಾ, ಹಂಗೆರಿ ಮೂಲಕ ಸ್ವದೇಶಕ್ಕೆ ಕರೆತರಲಾಗುತ್ತಿದೆ. ಉಕ್ರೇನ್‌ನಲ್ಲಿ ಸಿಲುಕಿರುವವರನ್ನು ಕರೆತರುವುದಕ್ಕಾಗಿ ಭಾರತದ ದೇಶೀಯ ವಿಮಾನಯಾನ ಸಂಸ್ಥೆಗಳು ರುಮೇನಿಯಾ, ಹಂಗೆರಿಗೆ ವಿಮಾನಗಳನ್ನು ಕಳುಹಿಸುತ್ತಿವೆ. ಇಲ್ಲಿಯವರೆಗೆ ಏಳು ವಿಮಾನಗಳ ಮೂಲಕ ಭಾರತೀಯರನ್ನು ಕರೆದುಕೊಂಡು ಬರಲಾಗಿದೆ. ಉಕ್ರೇನ್‌ನಲ್ಲಿರುವ ಭಾರತೀಯರನ್ನುಕರೆತರಲು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ರುಮೇನಿಯಾದ ಬುಕಾರೆಸ್ಟ್ ಹಾಗೂ ಹಂಗೆರಿಯ ಬುಡಾಪೆಸ್ಟ್‌ಗಳಿಂದ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿವೆ ಅಲ್ಲದೆ  ಇಂಡಿಗೊ, ಸ್ಪೈಸ್‌ಜೆಟ್,  ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗಳು ರುಮೇನಿಯಾ, ಹಂಗೆರಿಗಳಿಗೆ ವಿಶೇಷ ವಿಮಾನಗಳನ್ನು ಕಳುಹಿಸಲಿವೆ. ಭಾರತೀಯ…

Read More

ಬೆಂಗಳೂರು: ನ್ಯಾಯಾಂಗ ನಿಂಧನೆ ಆರೋಪದಡಿ ನಟ ಚೇತನ್​ರನ್ನ ಮಂಗಳವಾರ ಪೊಲೀಸರು ಬಂಧಿಸಿದ್ದರು. ನಂತರ ನಟನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ನಟ ಚೇತನ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಮತ್ತೊಂದು ಕಡೆ ಚೇತನ್‌ ವಕೀಲ ಕೆ.ಬಾಲನ್ ಮೂಲಕ  ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಇಂದು, ಬುಧವಾರ ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Read More

ಬೆಂಗಳೂರು : ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದಂತ  ಕಾಂಗ್ರೆಸ್ ಪಕ್ಷದಿಂದ ನಡೆಸಿದ್ದ ಮೇಕೆದಾಟು ಪಾದಯಾತ್ರೆ 2ನೇ ಹಂತದಲ್ಲಿ ಫೆಬ್ರವರಿ 27ರಿಂದ ಪುನರಾರಂಭಗೊಳ್ಳಲಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಘೋಷಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿ 27ರಿಂದ ಮತ್ತೆ ಮೇಕೆದಾಟು ಪಾದಯಾತ್ರೆ ಆರಂಭಿಸುತ್ತಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು. ಇನ್ನು ರಾಜ್ಯ ಹಾಗೂ ರಾಷ್ಟ್ರದ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದು, ಬೆಂಗಳೂರು ಜನರ ಕುಡಿಯುವ ನೀರಿಗೆ, ರೈತರ ಹಿತಕ್ಕೆ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ. ನಾವು ರಾಜ್ಯ ಹಾಗೂ ರಾಷ್ಟ್ರದ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದು, ಬೆಂಗಳೂರು ಜನರ ಕುಡಿಯುವ ನೀರಿಗೆ, ರೈತರ ಹಿತಕ್ಕೆ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ.ಬಿಜೆಪಿಯವರಿಗೆ ರಾಜ್ಯದ ನೀರಾವರಿ ವಿಚಾರವಾಗಿ ಆಸಕ್ತಿ ಇಲ್ಲ. ಅವರಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದರೂ ಅವರು ಯಾವಾಗ ಬೇಕಾದರೂ ಕೆಲಸ ಆರಂಭಿಸಬಹುದು., ಕೇವಲ ಹೇಳಿದರೆ ಸಾಲದು. ಅಧಿಸೂಚನೆ ಹೊರಡಿಸಿ, ಜಾಗ ವಶಪಡಿಸಿಕೊಳ್ಳಬೇಕು, ಕೆಲಸ ಆರಂಭಿಸಬೇಕು ಎಂದು…

Read More

ಮಂಗಳೂರು : ಅಪರೂಪದ ಹಾರುವ ಮೀನುಗಳೆರಡು (ಫ್ಲೈಯಿಂಗ್ ಫಿಶ್ )ಮಂಗಳೂರಿನ ಮೀನುಗಾರರ ಬಲೆಗೆ ಬಿದ್ದಿದೆ, ಈ ಹಾರುವ ಮೀನು ಹೆಚ್ಚಾಗಿ ಆಳಸಮುದ್ರದಲ್ಲಿ ಕಾಣಸಿಗುತ್ತವೆ. ಇವುಗಳಿಗೆ ಹಕ್ಕಿಯಂತೆಯೇ ರೆಕ್ಕೆಗಳಿರುತ್ತವೆ. ಮೂರು ದಿನ ಹಿಂದೆ ದಕ್ಕೆಗೆ ಬಂದಿರುವ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನುಗಳು ಸಿಕ್ಕಿದ್ದು, ಈ ಮೀನು 15ರಿಂದ 45 ಸೆಂ.ಮೀ.ವರೆಗೆ ಉದ್ದವಾಗಿದೆ. ಇತರ ಮೀನುಗಳಿಗೆ ಹೋಲಿಸಿದರೆ ಹಾರುವ ಮೀನುಗಳು ಹೆಚ್ಚು ರುಚಿಕರವಾಗಿರುತ್ತವೆ. ಆದರೆ ಅದನ್ನು ಹಿಡಿಯುವ ಕ್ರಮ ಈ ಭಾಗದಲ್ಲಿ ಕಡಿಮೆ ಎಂದು ಮೀನುಗಾರ ಲೋಕೇಶ್‌ ಬೆಂಗ್ರೆ ಮಾಹಿತಿ ನೀಡಿದ್ದಾರೆ.

Read More

ಮಹಾರಾಷ್ಟ್ರ: ಹಕ್ಕಿ ಜ್ವರದ ಭಯದ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳಲ್ಲಿ ಮಹಾರಾಷ್ಟ್ರದ ಥಾಣೆಯ ಸುಮಾರು 25,000 ಕೋಳಿಗಳನ್ನು ಕೊಲ್ಲಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಥಾಣೆ ಜಿಲ್ಲೆಯ ಶಹಾಪುರ ತಾಲ್ಲೂಕಿನ ವೆಹ್ಲೋಲಿ ಗ್ರಾಮದ ಜಮೀನಿನಲ್ಲಿ ಸುಮಾರು 100 ಕೋಳಿಗಳು ಹಠಾತ್ತನೆ ಸಾವನ್ನಪ್ಪಿದ ಕೆಲವು ದಿನಗಳ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥಾಣೆ ಜಿಲ್ಲಾ ಪರಿಷತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಭೌಸಾಹೇಬ್ ದಂಗ್ಡೆ, ಪರೀಕ್ಷೆಗಳ ಫಲಿತಾಂಶಗಳು ಎಚ್5ಎನ್1 ಹಕ್ಕಿಜ್ವರದಿಂದಾಗಿ ಕೋಳಿಗಳು ಸತ್ತಿರುವುದನ್ನು ದೃಢಪಡಿಸಿದೆ ಎಂದು ಹೇಳಿದ್ದಾರೆ.  

Read More