Author: admin

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯ, ತುಳು ಕೂಟ ಕುಡ್ಲ ಇದರ ಹಿರಿಯ ಸದಸ್ಯ, ಬಂಟರ ಮಾತೃಸಂಘದ ಮಾಜಿ ಕಾರ್ಯದರ್ಶಿ, ಮಂಗಳೂರು ಪದವಿನಂಗಡಿ ನಿವಾಸಿ ಲಯನ್ಸ್ ನಿಟ್ಟೆ (66) ಅವರು ಜೂನ್,1 ಇಂದು ಬೆಳಿಗ್ಗೆ ಮಂಗಳೂರು ಪದವಿನಂಗಡಿ ಅಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಶಶಿಧರ ಶೆಟ್ಟಿ ಅವರು  ಅಖಿಲ ಭಾರತ ತುಳು ಒಕ್ಕೂಟದ ಗೌರವ ಪ್ರಧಾನ ಕಾರ್ಯದರ್ಶಿ, ಪದವಿನಂಗಡಿ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರು, ಶಾರದಾ ಕ್ಯಾಟರರ್ಸ್ ಸಂಸ್ಥೆಗಳ ಮಾಲಕರು ಆಗಿದ್ದರು. ಮೃತರು ಪತ್ನಿ, ಇಬ್ಬರು ಸುಪುತ್ರಿಯರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಜೂನ್ 4ರಂದು ಜರಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Read More

ಕಠ್ಮಂಡು : ನಾಲ್ವರು ಭಾರತೀಯರು ಸೇರಿದಂತೆ ಒಟ್ಟು 22 ಜನರಿದ್ದ ವಿಮಾನವು ನೇಪಾಳದ ಪರ್ವತದ ಮೇಲೆ ಅಪ್ಪಳಿಸಿ ನಡೆದ ಅಪಘಾತದಲ್ಲಿ14 ಜನ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ವಿಮಾನದಿಂದ ಹದಿನಾಲ್ಕು ಶವಗಳನ್ನು ಹೊರತೆಗೆಯಲಾಗಿದ್ದು ಶೋಧ ಕಾರ್ಯಚರಣೆ ಮುಂದುವರಿದಿದೆ ಎಂದು ವಕ್ತಾರ ದಿಯೋ ಚಂದ್ರ ಲಾಲ್ ಕರ್ನ್ ತಿಳಿಸಿದ್ದಾರೆ. 22 ಮಂದಿ ಪ್ರಯಾಣಿಕರನ್ನು ಹೊತ್ತೊಯ್ದಿದ್ದ ವಿಮಾನ ಸೋಮವಾರ ಪತ್ತೆಯಾಗಿದೆ ಎಂದು ನೇಪಾಳ ಸೇನೆ ತಿಳಿಸಿದೆ. ವಾಯುವ್ಯ ನೇಪಾಳದ ಮಸ್ಟಾಂಗ್ ಜಿಲ್ಲೆಯ ತಾಸಾಂಗ್ ನ ಸಾನೊ ಸ್ವಾರೆ ಭೀರ್ ಎಂಬಲ್ಲಿ 14,500 ಅಡಿ ಎತ್ತರದಲ್ಲಿ ವಿಮಾನ ಕಣ್ಮರೆಯಾದ ಸುಮಾರು 20 ಗಂಟೆಗಳ ನಂತರ ಅಪಘಾತದ ಸ್ಥಳ ಪತ್ತೆಯಾಗಿದೆ. ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು ರವಿವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಪ್ರವಾಸಿ ನಗರವಾದ ಪೋಖರಾದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲಿ ಸಂಪರ್ಕವನ್ನು ಕಳೆದುಕೊಂಡಿತ್ತು. ಅನಂತರ ವಾಯುವ್ಯ ನೇಪಾಳದ ಮಸ್ಟಾಂಗ್ ಜಿಲ್ಲೆಯ ತಾಸಾಂಗ್ ನ ಸಾನೊ ಸ್ವಾರೆ ಭೀರ್ ಎಂಬಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ

Read More

ಸೆನೆಗಲ್‌: ಪಶ್ಚಿಮ  ಸೆನೆಗಲ್‌ನ ಟಿವೌವಾನ್‍ ನಗರದ ಪ್ರಾದೇಶಿಕ ಆಸ್ಪತ್ರೆಯೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 11 ನವಜಾತ ಶಿಶುಗಳು ಸಾವನ್ನಪ್ಪಿವೆ  ಎಂದು ಅಧ್ಯಕ್ಷ  ಮ್ಯಾಕಿ ಸಾಲ್ ತಿಳಿಸಿದ್ದಾರೆ. ಟಿವೌವಾನ್‍ ನಗರದಲ್ಲಿರುವ ಮೇಮ್ ಅಬ್ದೌ ಅಜೀಜ್ ಸೈ ದಬಖ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಈ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 11 ನವಜಾತ ಶಿಶುಗಳು ಮೃತಪಟ್ಟಿವೆ. ಘಟನೆಯಲ್ಲಿ 3 ಶಿಶುಗಳನ್ನು ರಕ್ಷಿಸಲಾಗಿದೆ ಎಂದು ನಗರದ ಮೇಯರ್ ಡೆಂಬಾ ಡಿಯೋಪ್ ಹೇಳಿದ್ದಾರೆ

Read More

ಕೊಪ್ಪಳ : ಇಂದಲ್ಲ ನಾಳೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಗೆ ಬರಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕೊಪ್ಪಳದ ಕುಕನೂರಿನಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಣಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸರ್ಕಾರ ಏನು ಹೇಳಿದೆ ಅದನ್ನೇ ಮಾಡಿದೆ. ದೇಶದ ಎಲ್ಲಾ ನಾಗರಿಕರಿಗೂ ಒಂದೇ ರೀತಿಯ ಕಾನೂನು ಇರಬೇಕು ಎಂಬುದು ಬಿಜೆಪಿಯ ನಿಲುವಾಗಿದೆ ಅದ್ದರಿಂದ ಇಂದಲ್ಲ ನಾಳೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಗೆ ಬಂದೇ ಬರುತ್ತೆ ಎಂದು ಹೇಳಿದ್ದಾರೆ

Read More

ಮಂಗಳೂರು: ಕರಾವಳಿ ಸಂಗೀತ ಕಲಾವಿದರ ಒಕ್ಕೂಟದಿಂದ ಸ್ವರ ಕುಡ್ಲ ಸಿಸನ್ 4 ಸಂಗೀತ ಸ್ಪರ್ಧೆಯ ಗ್ರ್ಯಾಂಡ್ ಪಿನಾಲೆ ಹಾಗೂ 14ನೇ ವಾರ್ಷಿಕೋತ್ಸವದ ಸಮಾರಂಭವು ಮೇ21,ಶನಿವಾರ ನಗರದ ಪುರಭವನದಲ್ಲಿ ಜರಗಿತು. ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ಇತರ ಗಣ್ಯರೊಂದಿಗೆ ಸೇರಿ ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಚಾಲನೆಯನ್ನು ನೀಡಿದರು,ನಂತರ ಮಾತಾಡಿ ಪ್ರಾರಂಭದ ದಿನಗಳಲ್ಲಿ 5 ಜನರಿಂದ ಆರಂಭವಾದ ಈ ಸಂಘವು ಬೆಳೆದು ಇಂದು 300-400ಕ್ಕೆರಿದೆ ಇದು ಸಂಘದ ಉತ್ತಮ ಬೆಳವಣಿಗೆಯಾಗಿದೆ.ಸಂಗೀತದಲ್ಲಿ ಸಾಧನೆ ಮಾಡಿದ ಬಹಳಷ್ಟು ಹಿರಿಯರಿಗೆ ಗೌರವಿಸುವ ಉತ್ತಮ ಕೆಲಸಕಾರ್ಯಗಳು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದಿಂದ ನಡೆಯುತ್ತಿದ್ದು,ಇಂತಹ ಕಾರ್ಯಗಳು ಸಂಘದ ಬೆಳವಣಿಗೆಗೆ ಪ್ರಮುಖ ಪಾತ್ರವಾಗಿದೆ. ಈ ಕಲಾವಿದರ ಒಕ್ಕೂಟದಿಂದ ಇನ್ನಷ್ಡು ಸಾಮಾಜಿಕ ಹಾಗೂ ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಗೀತದಲ್ಲಿ ಸಾಧನೆ ಮಾಡಿದ ಕಲಾವಿದರಾದ ಯಶವಂತ ದೇವಾಡಿಗ,ಹುಸೈನ್ ಕಾಟಿಪಳ್ಳ,ಪ್ರೇಮ್ ಕುಮಾರ್ ಲೋಬೋ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎಲ್.ಶೇಟ್ ಡೈಮಂಡ್ ಹೌಸ್ ಮಾಲಕರು ಎಂ.ರವೀಂದ್ರ ಶೇಟ್,ಮತ್ಸ್ಯೋದ್ಯಮಿ ಮೋಹನ್…

Read More

ಮಂಗಳೂರು: ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನೆಮಾ ಕರಾವಳಿಯಾದ್ಯಂತ ಮೇ20 ಶುಕ್ರವಾರದಂದು ತೆರೆಕಂಡಿದೆ. ಮಂಗಳೂರಿನ ಬಿಗ್ ಸಿನೆಮಾ,ಪಿವಿಆರ್,ರೂಪವಾಣಿ ಸುರತ್ಕಲ್ನ ನಟರಾಜ್ ,ಸಿನೆಗ್ಯಾಲಕ್ಸಿ, ಉಡುಪಿಯ ಕಲ್ಪನಾ,ಭಾರತ್ ಸಿನೆಮಾಸ್ ಮಣಿಪಾಲದ ಐನಾಕ್ಸ್ ಮೂಡುಬಿದಿರೆಯ ಅಮರಾಶ್ರೀ,ಕಾರ್ಕಳದ ಪ್ಲಾನೆಟ್,ರಾಧಿಕಾ ಬೆಳ್ತಂಗಡಿಯ ಭಾರತ್,ಪುತ್ತೂರಿನ ಅರುಣಾ,ಸುಳ್ಯದ ಸಂತೋಷ್ ಕೊಪ್ಪದ ಜೆಎಂಜೆ,ಕಾಸರಗೋಡಿನ ಕೃಷ್ಣಾಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮಂಗಳೂರಿನ ಭಾರತ್ ಮಾಲ್ನಬಿಗ್ ಸಿನೆಮಾಸ್ ನಲ್ಲಿ ಸಿನೆಮಾ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶಾಸಕರಾದ ವೇದವ್ಯಾಸ ಕಾಮತ್,ಯು.ಟಿ,ಖಾದರ್,ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್,ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.  ಕಾರ್ಯಕ್ರಮದಲ್ಲಿ ವಿಜಯ  ಕುಮಾರ್ ಕೊಡಿಯಲ್‌ ಬೈಲ್‌,ಸತೀಶ್ ಕುಂಪಲ,ನವೀನ್ ಡಿ.ಪಡೀಲ್,ಭೋಜರಾಜ್ ವಾಮಂಜೂರು,ದೇವದಾಸ್ ಕಾಪಿಕಾಡ್,ಅರಂವಿದ್ ಬೋಳಾರ್,ಡಾ| ಅಣ್ಣಯ್ಯ ಕುಲಾಲ್,ಶೈಲಾಶ್ರೀ ಮೂಲ್ಕಿ,ಜಗನ್ನಾಥ ಶೆಟ್ಟಿ ಬಾಳ,ಪದ್ಮರಾಜ್ ಕುದ್ರೋಳಿ,ಯತೀಶ್ ಬೈಕಂಪಾಡಿ,ಬಾಲಕೃಷ್ಣ ಶೆಟ್ಟಿ,ಮಮತಾ ಗಟ್ಟಿ,ಪ್ರಕಾಶ್ ಪಾಂಡೇಶ್ವರ,ಅಜು೯ನ್ ಕಾಪಿಕಾಡ್,  ಶಮಿ೯ಳಾ ಕಾಪಿಕಾಡ್,ತಮ್ಮ ಲಕ್ಷಣ,ನಟ ವಿನೀತ್ ಉಪಸ್ಥಿತರುದ್ದರು.

Read More

ಜೆಡ್ಡಾ: ಕೊರೊನಾ ಕೇಸ್ ಗಳು ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾವು ಭಾರತ ಸೇರಿದಂತೆ 20 ದೇಶಗಳಿಗೆ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವುದನ್ನು ನಿಷೇಧಿಸಿದೆ. ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಒಟ್ಟು 3.68 ಲಕ್ಷ ಕೊರೊನಾ ಕೇಸ್ ಗಳು ಪತ್ತೆಯಾಗಿದ್ದು,ಈ ಪೈಕಿ ಒಟ್ಟು6,383 ಜನರು ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಡೇಟಾ ಹೇಳಿದೆ. ಬುಧವಾರ ಪ್ರಾರಂಭವಾಗುವ ತಾತ್ಕಾಲಿಕ ಅಮಾನತು ನಿಯಮವು ಸೌದಿ ನಾಗರಿಕರಿಗೆ, ರಾಜತಾಂತ್ರಿಕ ರಿಗೆ, ವೈದ್ಯಕೀಯ ಸೇವೆಯಲ್ಲಿರುವವರು ಮತ್ತು ಅವರ ಕುಟುಂಬಗಳಿಗೆ ಅನ್ವಯಿಸುವುದಿಲ್ಲ ಎಂದು ಎಎಫ್ಪಿ ವರದಿ ಮಾಡಿದೆ.

Read More

ಮಂಗಳೂರು: ಮನರಂಜನಾ ಕ್ಷೇತ್ರದಲ್ಲಿ ಖ್ಯಾತರಾಗಿದ್ದ ನಟ ಸುನೀಲ್ ಬಜಾಲ್(45) ಅವರು ಮೇ 22 ,ರವಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.  ಸುನಿಲ್ ಬಜಾಲ್ ಅವರು ಕೊಂಕಣಿ ನಾಟಕ ಮತ್ತು ಕೊಂಕಣಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.ಕೊಂಕಣಿ ಧಾರಾವಾಹಿ ‘ಗಾಡ್ ಫಾದರ್’ ಮತ್ತು ಕೊಂಕಣಿ ಚಲನಚಿತ್ರ ‘ಕೊಂಬ್ಯಾಟ್’ ನಲ್ಲಿಯೂ ನಟಿಸಿದ್ದಾರೆ.ಮಂಗಳೂರಿನ ಕೊಂಕಣಿ ನಾಟಕ ಸಭಾದ ಸಕ್ರಿಯ ಸದಸ್ಯರೂ ಆಗಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.  

Read More

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಮತ್ತು ಏರುತ್ತಿರುವ ಹಣದುಬ್ಫರದ ನಡುವೆ, ಕೇಂದ್ರ ಸರ್ಕಾರವು ಇಂಧನ ಅಬಕಾರಿ ಸುಂಕದಲ್ಲಿ ಭಾರಿ ಇಳಿಕೆ ಮಾಡಿದೆ. ಪೆಟ್ರೋಲ್ ಬೆಲೆ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 9.5 ರೂಪಾಯಿ, ಡೀಸೆಲ್ ದರ 7 ರೂಪಾಯಿ ಇಳಿಕೆಯಾಗಿದೆ.   ಈ ಕುರಿತು ಕೇಂದ್ರ ವಿತ್ತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದು ,ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀ.  9.5  ರೂಪಾಯಿ ಮತ್ತು ಡೀಸೆಲ್‌ ಮೇಲಿನ ಸುಂಕ ಲೀ. 7 ರೂಪಾಯಿ ಇಳಿಕೆ ಮಾಡಲಾಗಿದೆ  ಎಂದು ಹೇಳಿದ್ದಾರೆ.

Read More

ಮಂಗಳೂರು: 2010ರ ಬಜ್ಪೆ ವಿಮಾನ ದುರಂತದಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದು, ಈ ದುರಂತದಲ್ಲಿ ಮಡಿದ ಪ್ರಯಾಣಿಕರು ಹಾಗೂ ಸಿಬ್ಬಂದಿಗಳ ಸ್ಮರಣಾರ್ಥ ಕೂಳೂರಿನ ತಣ್ಣೀರು ಬಾವಿಯ ಬಳಿಯಿರುವ ಪಾರ್ಕ್ ನಲ್ಲಿ ನಿರ್ಮಿಸಲಾಗಿರುವ ಸ್ಮಾರಕಕ್ಕೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಇಂದು ಮೇ.22ರ ಭಾನುವಾರ ಸಂಸದರಾದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು ಸ್ಮಾರಕಕ್ಕೆ ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.,ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್, ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ, ಮಂಗಳೂರು ತಹಶೀಲ್ದಾರ್ ಪುರಂದರ್ ಹಾಗೂ ಇತರೆ ಗಣ್ಯರು ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

Read More