Subscribe to Updates
Get the latest creative news from FooBar about art, design and business.
Author: admin
ತುಮಕೂರು: ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವ ಹಕ್ಕು ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕಳೆದ 2 ದಿನಗಳಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದ 15 ರಿಂದ 20 ವಿದ್ಯಾರ್ಥಿಗಳ ವಿರುದ್ಧ ತುಮಕೂರಿನ ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲರು ತುಮಕೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ, ಪ್ರಾಂಶುಪಾಲರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಹಿಜಾಬ್ ಪ್ರತಿಭಟನೆ ಸಂಬಂಧ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ವಿದ್ಯಾರ್ಥಿನಿಯರ ಮೇಲೆ ಎಫ್ಐಆರ್ ದಾಖಲಾಗಿದೆ. ಹಿಜಾಬ್ ಸಂಬಂಧ ರಾಜ್ಯದೆಲ್ಲೆಡೆ ಪ್ರತಿಭಟನೆ ಮುಂದುವರೆದಿದೆ. ಅನೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಇಲ್ಲದಿದ್ದರೆ ತರಗತಿಗೆ ಹಾಜರಾಗುವುದಿಲ್ಲಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಹಿಜಾಬ್ ಜತೆಗೆ ಪ್ರವೇಶಕ್ಕೆ ಶಾಲಾ-ಕಾಲೇಜುಗಳು ನಿರಾಕರಿಸುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಇನ್ನು ವಿದ್ಯಾರ್ಥಿಗಳ ಪ್ರತಿಭಟನೆಗೆ ಅನೇಕ ಮುಸ್ಲಿಂ ಸಂಘಟನೆಗಳು ಬೆಂಬಲ ನೀಡಿವೆ. ರಾಮನಗರ, ಬಾಗಲಕೋಟೆ, ರಾಯಚೂರು, ವಿಜಯಪುರ, ಕೊಪ್ಪಳ, ಉತ್ತರ ಕನ್ನಡ, ಮೈಸೂರು, ಮಂಡ್ಯ, ಉಡುಪಿ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮುಂಬೈ: ಬಾಲಿವುಡ್‌ನ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಬಪ್ಪಿ ಲಹರಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.ಅನಾರೋಗ್ಯದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಪ್ಪಿ ಅವರು ಫೆ.16 ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 1952ರ ನವೆಂಬರ್ 27ರಂದು ಕೋಲ್ಕತ್ತಾದಲ್ಲಿ ಬಪ್ಪಿ ಲಹರಿ ಅವರು ಜನಿಸಿದ್ದರು. ತಮ್ಮ ವಿಭಿನ್ನ ಸಂಗೀತ ಶೈಲಿ ಹಾಗೂ ಅತಿ ಹೆಚ್ಚು ಚಿನ್ನಾಭರಣ ಧರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ಅವರು ವೃತ್ತಿ ಜೀವನದಲ್ಲಿ ಅನೇಕ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಹಲವು ರಿಯಾಲಿಟಿ ಶೋಗಳ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಉಪ್ಪಿನಂಗಡಿ : ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದು, ಅವರಿಗೆ ತರಗತಿ ಕೊಠಡಿಯೊಳಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲರು, ಸರಕಾರದ ಮತ್ತು ನ್ಯಾಯಾಲಯದ ಆದೇಶವನ್ನು ಮನವರಿಕೆ ಮಾಡಿಕೊಟ್ಟರು. ಕಾಲೇಜು ಕೊಠಡಿಯೊಳಗೆ ಸಮವಸ್ತ್ರ ಮಾತ್ರ ಬಳಸಲು ಅವಕಾಶವೆಂದು ಸ್ವಷ್ಟಪಡಿಸಿದರು.ನಿಯಮ ಪಾಲಿಸಲು ಒಪ್ಪದ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜು ಅವರಣದಲ್ಲೇ ಕುಳಿತರು. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ಅವಕಾಶ ನೀಡದಿರುವುದನ್ನು ವಿರೋಧಿಸಿ ಅವರ ಬೆಂಬಲವಾಗಿ ಕೆಲವು ಮಂದಿ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿದ ಘಟನೆ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ಹಿಜಾಬ್ ಬೆಂಬಲಿಸಿ ವಿದ್ಯಾರ್ಥಿಗಳ ಗುಂಪು ತರಗತಿ ಬಹಿಷ್ಕರಿಸಿದ ಬೆನ್ನಲ್ಲೇ ಇನ್ನಷ್ಟು ಗೊಂದಲ ಸೃಷ್ಟಿಯಾಗುವುದನ್ನು ತಡೆಯಲು ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿಗೆ ಎರಡು ದಿನಗಳ ಕಾಲ ರಜೆ ಸಾರಲಾಗಿದೆ.
ಕೆನಡಾ : ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರಿಗೆ ಕೋವಿಡ್ ದೃಢಪಟ್ಟಿರುವ ವಿಷಯನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಾನು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ನನಗೆ ಸೋಂಕು ದೃಢಪಟ್ಟಿದೆ, ಸದ್ಯ ನಾನು ಆರೋಗ್ಯವಾಗಿದ್ದೇನೆ ಎಂದಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರುಡೊ 2 ಡೋಸ್ ಲಸಿಕೆ ಹಾಗೂ ಬೂಸ್ಟರ್ ಡೋಸ್ ಸಹ ಪಡೆದಿದ್ದಾರಂತೆ. ಆದರೂ ಸೋಂಕು ದೃಢಪಟ್ಟಿದೆ. ಅವರ ಮೂವರು ಮಕ್ಕಳಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಬಾಯಾರಿಕೆಗೆ ಎಳನೀರು ಉತ್ತಮ ದ್ರವವಾಗಿದೆ ಹಾಗೂ ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಹಲವು ಬಗೆಯಲ್ಲಿ ಆರೋಗ್ಯವನ್ನು ವೃದ್ದಿಸುತ್ತದೆ. ವಿಶೇಷವಾಗಿ, ದಿನದ ಪ್ರಥಮ ಆಹಾರವಾಗಿ ಬೆಳಗ್ಗಿನ ಸಮಯದಲ್ಲಿ ಸೇವಿಸಿದರೆ ಇನ್ನೂ ಹೆಚ್ಚಿನ ಪ್ರಯೋಜನವಿದೆ. ಎಲ್ಲಾ ಪ್ರಯೋಜಗಳನ್ನು ಕ್ರೋಡೀಕರಿಸಿದರೆ, ಇದರಷ್ಟು ಆರೋಗ್ಯಕರವಾದ ಪಾನೀಯ ಇನ್ನೊಂದಿಲ್ಲ ಎಂದು ಖಚಿತವಾಗಿ ಹೇಳಬಹುದು ಪ್ರಕೃತಿ ದತ್ತವಾಗಿರುವ ಎಳೆನೀರು ಕೇವಲ ಬಾಯಾರಿಕೆ ಮಾತ್ರವಲ್ಲ. ನಮ್ಮ ದೇಹದಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಎಳೆನೀರು ಕುಡಿಯುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಮನುಷ್ಯನಿಗೆ ತೀವ್ರ ಸುಸ್ತು ಆಯಾಸವಾದಾಗ ಎಳೆನೀರು ನಮ್ಮದೇಹವನ್ನು ಪುನಶ್ಚೇತನ ಮಾಡುತ್ತದೆ. ಇದಲ್ಲದೇ ಮೂತ್ರ ಪಿಂಡವನ್ನು ಸ್ವಚ್ಛಗೊಳಿಸಲು ಕೂಡ ಎಳೆನೀರು ಸಹಾಯಕವಾಗಿದೆ. ಜೊತೆಗೆ ಮೂತ್ರಪಿಂಡದಲ್ಲಿ ಕಲ್ಲು ಆಗುವ ಸಮಸ್ಯೆಗಳಿದ್ದರೆ, 7 ದಿನಗಳ ಕಾಲ ಎಳೆನೀರನ್ನು ನಿಯಮಿತವಾಗಿ ಸೇವಿಸಿದರೆ, ಕಲ್ಲನ್ನು ಆಕಸ್ಮಿಕವಾಗಿ ತೆಗೆದು ಹಾಕುತ್ತದೆ,
ಚೆನ್ನೈ: ನವೆಂಬರ್ 18, 2004ರಲ್ಲಿ ಧನುಷ್ ಹಾಗೂ ಐಶ್ವರ್ಯಾ ವಿವಾಹವಾಗಿದ್ದರು.18 ವರ್ಷಗಳ ಬಳಿಕ ಇಬ್ಬರೂ ಬೇರೆಯಾಗಲು ನಿರ್ಧರಿಸಿರುವುದು ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ. ನಟ ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಟ್ವಿಟ್ಟರ್ ನಲ್ಲಿ ಬೇರೆಯಾಗುತ್ತಿರುವ ವಿಷಯವನ್ನು ಘೋಷಣೆ ಮಾಡಿದ್ದಾರೆ. ಇಬ್ಬರೂ ಬೇರೆಯಾಗುತ್ತಿರುವುದಾಗಿ ಧನುಷ್ ಹಾಗೂ ಐಶ್ವರ್ಯಾ ಜೊತೆಯಾಗಿ ಟ್ವೀಟ್ ಮಾಡಿ ಘೋಷಣೆ ಮಾಡಿದ್ದಾರೆ. ಧನುಷ್ ಸೋಶಿಯಲ್ ಮೀಡಿಯಾ ಮೂಲಕ ವಿಚ್ಛೇದನದ ಬಗ್ಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. “18 ವರ್ಷ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಹಾಗೂ ಹಿತೈಷಿಯಾಗಿ ಜೊತೆಗಿದ್ದೆವು. ಬೆಳವಣಿಗೆ, ಪರಸ್ಪರ ಅರಿತುಕೊಳ್ಳುವಿಕೆ, ಹೊಂದಾಣಿಕೆ ಹಾಗೂ ಒಪ್ಪಿಕೊಳ್ಳುವ ಜರ್ನಿ ಮಧುರವಾಗಿತ್ತು. ಇವತ್ತು ನಾವು ನಮ್ಮ ಬೇರೆ ದಾರಿಗಳನ್ನು ಹುಡುಕಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದೇವೆ. ಐಶ್ವರ್ಯ ಹಾಗೂ ನಾನು ಇಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದು, ಒಬ್ಬರನೊಬ್ಬರು ಸ್ವತಂತ್ರ ವ್ಯಕ್ತಿಯಾಗಿ ಅರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ನಮ್ಮ ನಿರ್ಧಾರಗಳಿಗೆ ಗೌರವ ನೀಡಿ ಮತ್ತು ಇದನ್ನು ನಿಭಾಯಿಸಲು ಬಿಡಿ ” ಎಂದು ಧನುಷ್ ತಿಳಿಸಿದ್ದಾರೆ.
ಬೆಂಗಳೂರು: ಯಶ್ ಅಭಿನಯದ ‘ಕಿರಾತಕ’ ಚಿತ್ರವನ್ನು ನಿರ್ದೇಶಿಸಿದ್ದ ಪ್ರದೀಪ್ ರಾಜ್(46) ಜ.20ರಂದು ನಿಧನರಾಗಿದ್ದಾರೆ. ಡಯಾಬಿಟಿಸ್ ನಿಂದ ಹಲವು ವರ್ಷಗಳಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಅವರು ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಈ ಕುರಿತು ಪ್ರದೀಪ್ ರಾಜ್ ಸಹೋದರ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಯಶ್ ಅಭಿನಯದ ಕಿರಾತಕ , ಸತೀಶ್ ಅಭಿನಯದ ಅಂಜದ ಗಂಡು, ಮಿಸ್ಟರ್ 420, ಬೆಂಗಳೂರು 23 ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು. ಪ್ರದೀಪ್ ರಾಜ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದಾರೆ
ಮೂಡುಬಿದಿರೆ : ಇಲ್ಲಿನ ಗಂಟಾಲ್ಕಟ್ಟೆಯ ಸಮೀಪ ಜ.20 ರ ಮುಂಜಾನೆ.ಗಂಟಾಲ್ಕಟ್ಟೆಯ ಸಮೀಪ ಓಮ್ನಿ ಕಾರು ಬೈಕ್ ಢಿಕ್ಕಿಯಾಗಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಹಿರಿಯ ಯಕ್ಷಗಾನ ಕಲಾವಿದ ವಾಮನ ಕುಮಾರ್ ವೇಣೂರು (47) ಮೃತಪಟ್ಟಿದ್ದಾರೆ ಧರ್ಮಸ್ಥಳ ಮೇಳದ , ಕದ್ರಿ ಮೇಳ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಹಿರಿಯಡ್ಕ ಮೇಳದಲ್ಲಿ ಕಲಾವಿದರಾಗಿದ್ದರು. ಕುಂದಾಪುರದ ಕೊಂಕಿ ಎಂಬಲ್ಲಿ ರಾತ್ರಿ ಯಕ್ಷಗಾನವನ್ನು ಮುಗಿಸಿ ಮನೆಗೆ ಹಿಂತಿರುಗುವಾಗ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. 26 ವರ್ಷಗಳ ತಿರುಗಾಟ ನಡೆಸಿದ ಅನುಭವಿ ಕಲಾವಿದರಾಗಿದ್ದ ಹಿರಿಯ ಯಕ್ಷಗಾನ ಕಲಾವಿದ ವಾಮನ ಕುಮಾರ್ ಅವರು ಹಾಸ್ಯ, ಸ್ತ್ರೀ, ಪುರುಷ, ಪುಂಡು ಹೀಗೆ ಹಲವು ಪಾತ್ರಗಳನ್ನು ಮಾಡಿ ಅಭಿಮಾನಿಗಳ ಮನಗೆದ್ದಿದ್ದರು. ವಾಮನ್ ಕುಮಾರ್ ಅವರ ಸಾವಿಗೆ ಯಕ್ಷಗಾನ ಕಲಾವಿದರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಚೆನ್ನೈ: ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್ ಹೊಂದಿರುವ ನಟಿ ನಯನತಾರಾ ಸಿನಿಮಾಗಳಲ್ಲಿ ಬಂಡವಾಳ ಹೂಡುತ್ತಲೇ ಬೇರೆ ವ್ಯವಹಾರಗಳಲ್ಲೂ ಹಣ ತೊಡಗಿಸುತ್ತಿದ್ದಾರೆ. ಈಗಾಗಲೇ ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ಇತ್ತೀಚಿನ ವರದಿಗಳ ಪ್ರಕಾರ ಅವರು ಯುಎಇಯಲ್ಲಿ ತಮ್ಮ ಹೊಸ ಉದ್ಯಮಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ನಯನತಾರಾ ಮತ್ತು ವಿಘ್ನೇಶ್ ಅವರು ತೈಲ ಕಂಪನಿಯಲ್ಲಿ ಜಂಟಿಯಾಗಿ 100 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಕಳೆದ ತಿಂಗಳು ನಯನತಾರ ತನ್ನ ಭಾವಿ ಪತಿ ವಿಘ್ನೇಶ್ ಜೊತೆ ದುಬೈಗೆ ಪ್ರವಾಸಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಆದರೆ, ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ನಟಿಯಾಗಿರುವುದರ ಜೊತೆಗೆ, ಅವರು ತಮ್ಮ ಭಾವಿ ಪತಿರ ವಿಘ್ನೇಶ್ ಶಿವನ್ ಅವರೊಂದಿಗೆ ರೌಡಿ ಪಿಕ್ಚರ್ಸ್ (ಪ್ರೊಡಕ್ಷನ್ ಹೌಸ್) ಅನ್ನು ಪ್ರಾರಂಭಿಸಿದರು. ಇತ್ತಿಚೇಗೆ ನಯನತಾರಾ ಚೆನ್ನೈನ ಐಷಾರಾಮಿ ಪ್ರದೇಶದಲ್ಲಿ 4BKH ಫ್ಲಾಟ್ ಅನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಉಡುಪಿ: ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಜ.15, ಶನಿವಾರ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಅನಿವಾರ್ಯ ಸಂದರ್ಭಗಳಲ್ಲಿ, ನೀವು ನನಗೆ ಕರೆ ಮಾಡಬಹುದಾಗಿದೆ. ಕಳೆದ ಎರಡು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಕೊಳ್ಳಲು ಮನವಿ ಮಾಡುತ್ತೇನೆ’ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.












