Author: admin

ಮಂಗಳೂರು, ಏ.30 : ಬಂಟರ ಯಾನೆ ನಾಡವರ ಮಾತೃ ಸಂಘದ 2026 -29ರ ಸಾಲಿಗೆ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಅವರು ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಂಘದ ಮಹತ್ವಾಕಾಂಕ್ಷೆ ಯೋಜನೆಯಾದ ಶತಮಾನೋತ್ಸವ ಕಟ್ಟಡ ಸಂಕೀರ್ಣ, ವಿಶ್ವವ್ಯಾಪಿ ಸಮಾಜ ಬಾಂಧವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವುದು ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ ಎಂದು ಕೆ ಅಜಿತ್ ಕುಮಾರ್ ರೈ ಅವರು ತಿಳಿಸಿದ್ದಾರೆ. ಮುಖ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ವಕೀಲರಾದ ಉಮೇಶ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಅವರು ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಉಪ ಚುನಾವಣಾಧಿಕಾರಿ, ವಕೀಲರಾದ ನವೀನ್ ಶೆಟ್ಟಿ ಹಾಗೂ ಚುನಾವಣಾಧಿಕಾರಿ ಸದಾಶಿವ ಶೆಟ್ಟಿಯವರು ಉಪಸ್ಥಿತರಿದ್ದರು.

Read More

ಮಂಗಳೂರು, ಏ. 29  : “ವಾದಿರಾಜ ವಾಲಗ ಮಂಡಳಿ” ಕನ್ನಡ ಸಿನೆಮಾ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರಸ್ತುತ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸಂಕಲನ, ಹಿನ್ನೆಲೆ ಸಂಗೀತ ಹಾಗೂ ಡಬ್ಬಿಂಗ್ ಕೆಲಸಗಳು ಸಾಗುತ್ತಿವೆ ಎಂದು ಚಿತ್ರದ ನಿರ್ಮಾಪಕರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು,ಎಮ್.ಎನ್.ಆರ್. ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಕಥೆ, ಚಿತ್ರಕತೆ ಹಾಗೂ ಸಂಭಾಷಣೆಯ ಜೊತೆಗೆ ನಿರ್ದೇಶನದ ಹೊಣೆಗಾರಿಕೆಯನ್ನು ಶಶಿರಾಜ್ ಕಾವೂರು ಅವರು ನಿರ್ವಹಿಸಿದ್ದಾರೆ. ಸುಮಾರು 50 ದಿನಗಳ ಕಾಲ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು. ಚಿತ್ರವು ಹಾಸ್ಯ, ಭಾವನೆ ಹಾಗೂ ಸಾಮಾಜಿಕ ಅಂಶಗಳ ನ್ನೊಳಗೊಂಡಿದೆ. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಹೇಳಿದರು. ನವೀನ್ ಡಿ. ಪಡೀಲ್, ಪ್ರಕಾಶ್ ತೂಮಿನಾಡು, ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ ,ಶೋಭರಾಜ್ ಪಾವೂರು, ಚೇತನ್ ರೈ.ಮಾಣಿ, ಪುಷ್ಪರಾಜ್ ಬೊಳ್ಳಾರ್, ಗೋಪಿನಾಥ್ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.…

Read More

ಗೋವಾ, ಏ. 28 : ಎಂಸಿಸಿ ಬ್ಯಾಂಕ್ ವತಿಯಿಂದ ಏಪ್ರಿಲ್ 25 ಮತ್ತು 26ರಂದು ಗೋವಾದ ಕೋರ್ಟ್ ಯಾರ್ಡ್ ಬೈ ಮೆರಿಟ್ಟ್ ನಲ್ಲಿ ಅಂತರರಾಜ್ಯ ಬ್ಯಾಂಕಿಂಗ್ ಸಂವಾದವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕರು, ಪೆಕ್ರಡಿಟ್ ಅಧಿಕಾರಿಗಳು, ಮುಂದಿನ ವ್ಯವಸ್ಥಾಪಕರು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಗಳನ್ನು ಚರ್ಚಿಸುವುದು ಹಾಗೂ ಅಂತರರಾಜ್ಯ ಸಹಕಾರವನ್ನು ಉತ್ತೇಜಿಸುವುದು ಈ ಸಂವಾದದ ಮುಖ್ಯ ಉದ್ದೇಶವಾಗಿತ್ತು. ಈ ಸಂವಾದದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ಅವರು ಅಧ್ಯಕ್ಷತೆ ವಹಿಸಿದ್ದರು. ಅನಿಲ್ ಲೋಬೋ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಬ್ಯಾಂಕಿನ ನಿರಂತರ ಬೆಳವಣಿಗೆಗೆ ಬಲವಾದ ನಾಯಕತ್ವ, ನಿಷ್ಠಾವಂತ ಸಿಬ್ಬಂದಿ ಮತ್ತು ಗ್ರಾಹಕರ ವಿಶ್ವಾಸವೇ ಕಾರಣವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೇಗವಾಗಿ ನಡೆಯುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ನವೀನತೆ, ಡಿಜಿಟಲ್ ಪರಿವರ್ತನೆ ಮತ್ತು ಉತ್ತಮ ಗ್ರಾಹಕ ಸೇವೆಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು. ವಂದನೀಯ ಫಾದರ್…

Read More

ಬೆಂಗಳೂರು, ಏ. 27 : ನಗರದ ನಂದಿನಿ ಲೇಔಟ್‌ನಲ್ಲಿ ರಾಜಕುಮಾರ್ ಸ್ಮಾರಕದ ಸಮೀಪದಲ್ಲಿರುವ ಬ್ಲೂ ಲೀಫ್ ಎಲ್‌ಇಡಿ ಗೋಡೌನ್‌ನಲ್ಲಿ ಮಧ್ಯರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಬ್ಯಾನರ್‌ಗಳು ಮತ್ತು ಎಲ್‌ಇಡಿ ಸ್ಕ್ರೀನ್‌ಗಳನ್ನು ಸಂಗ್ರಹಿಸಿ ವಿತರಿಸುತ್ತಿದ್ದ ಈ ಗೋಡೌನ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬೆಂಕಿಯ ತೀವ್ರತೆ ಪಕ್ಕದಲ್ಲಿದ್ದ ನಾಲ್ಕು ಅಂತಸ್ತಿನ ಲೇಡಿಸ್ ಪಿಜಿ ಕಟ್ಟಡ ಹಾಗೂ ಸುತ್ತಮುತ್ತಲಿನ ಮನೆಗಳಿಗೂ ವ್ಯಾಪಿಸಿದೆ. ಈ ಘಟನೆಯಿಂದ ಕಟ್ಟಡಗಳಿಗೆ ಹಾನಿ ಸಂಭವಿಸಿದೆ. ಪಿಜಿಯಲ್ಲಿ ವಾಸವಿದ್ದ ಸುಮಾರು 50 ಮಹಿಳೆಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

Read More

ಮಂಗಳೂರು, ಏ. 26 : : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 39ನೇ ಫಳ್ನೀರ್ ವಾರ್ಡಿನ ಗೋರಿಗುಡ್ಡ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಯು ರೂ. 88 ಲಕ್ಷ ವೆಚ್ಚದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು. ನಂತರ ಮಾತನಾಡಿದ ಶಾಸಕರು, ವೆಲೆನ್ಸಿಯಾ ವೃತ್ತದಿಂದ ಗೋರಿಗುಡ್ಡಕ್ಕೆ ಹೋಗುವ ಈ ಭಾಗವು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಈ ಕಾಮಗಾರಿಗಾಗಿ ಸ್ಥಳೀಯರು ಹಲವು ಬಾರಿ ಬೇಡಿಕೆಯಿಟ್ಟಿದ್ದರು. ಅದರಂತೆ ಅನುದಾನವನ್ನು ಹೊಂದಿಸಿಕೊಂಡು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಅಜಿತ್ ಡಿಸಿಲ್ವ, ರಮೇಶ್ ಹೆಗ್ಡೆ, ಭರತ್ ಕುಮಾರ್, ರಾಮ್ ಪ್ರಸಾದ್, ಪ್ರವೀಣ್ ನಿಡ್ಡೇಲ್, ನವೀನ್ ಶೆಣೈ, ಗಣೇಶ್, ರೋಹಿದಾಸ್, ರತನ್,ಸಂದೀಪ್,ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

Read More

ಮಂಗಳೂರು, ಏ. 25 :  ಮ.ನ.ಪಾ. ವ್ಯಾಪ್ತಿಯ 59ನೇ ಜೆಪ್ಪು ವಾರ್ಡಿನ ಮಜಿಲ ನಾಗಬನ ರಸ್ತೆ ಅಭಿವೃದ್ಧಿ ಕಾಮಗಾರಿಯು ರೂ. 1.59 ಕೋಟಿ ವೆಚ್ಚದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು ಈ ಸಂದರ್ಭದಲ್ಲಿ ನಿಕಟಪೂರ್ವ ಮನಪಾ ಸದಸ್ಯರಾದ ಭರತ್ ಕುಮಾರ್, ಸಂದೀಪ್ ಗರೋಡಿ, ಅಜಿತ್ ಡಿಸಿಲ್ವ, ನವೀನ್ ಶೆಣೈ, ಪ್ರವೀಣ್ ನಿಡ್ಡೇಲ್, ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

Read More

ಮಂಗಳೂರು, ಏ. 24 : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ 11 ನೇ ವರ್ಷದ ಪಟ್ಲ ಸಂಭ್ರಮ 2026 ಕಾರ್ಯಕ್ರಮ ಮೇ 30 ಶನಿವಾರ ಅಡ್ಯಾರ್ ಬಳಿಯ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಯಕ್ಷಧ್ರುವ ಪಟ್ಲ ಸಂಭ್ರಮ 2026 ಕಾರ್ಯಕ್ರಮವನ್ನು ಪಾವಂಜೆ ನಾಗವೃಜ ಕ್ಷೇತ್ರದ ಧರ್ಮಧರ್ಶಿಗಳಾದ ಡಾ ಯಾಜಿ ನಿರಂಜನ ಭಟ್ ಉದ್ಘಾಟಿಸಲಿದ್ದಾರೆ. ಅಂದು ಬೆಳಿಗ್ಗೆ 8.30 ರಿಂದ 9 ರ ತನಕ ಚೌಕಿ ಪೂಜೆ ಮತ್ತು ಅಬ್ಬರ ತಾಳ, 9 ರಿಂದ 11 ರ ವರೆಗೆ ಭರತ ನಾಟ್ಯ ಪ್ರದರ್ಶನ, 11 ರಿಂದ 1.30 ರ ವರೆಗೆ ಸಭಾ ಕಾರ್ಯಕ್ರಮ, ಮಧ್ಯಾಹ್ನ 1.30 ರಿಂದ 2 ರ ವರೆಗೆ ನಾಗವೃಜ ಕ್ಷೇತ್ರ ಪಾವಂಜೆಯ ಶ್ರೀ ವಾಣಿ ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ಮಧ್ಯಾಹ್ನ…

Read More

ಮಂಗಳೂರು, ಏ. 24 : ಪ್ರಾರ್ಥನಾ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ| ಆರ್. ಧನರಾಜ್ ನಿರ್ಮಾಣದೊಂದಿಗೆ ನಿರ್ದೇಶಿಸುತ್ತಿರುವ ‘ ಕೊರಗ್ಲಾ ತನಿಯಾ’ ಮತ್ತು ‘ಕನ’ ತುಳು ಚಿತ್ರಗಳ ಮುಹೂರ್ತ  ಕಾರ್ಯಕ್ರಮ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆಯಿತು. ಕೊರಗ್ಲಾ ತನಿಯ ಚಿತ್ರಕ್ಕೆ ಶಾಸಕರಾದ ಸಿ ಬಿ ಸುರೇಶ್ ಅವರು ಕ್ಯಾಮರಾ ಚಾಲನೆಗೈದರು. ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆಡಳಿತ ನಿರ್ದೇಶಕ ಎ ಜೆ ಶೆಟ್ಟಿ ಅವರು ಕ್ಯಾಪ್ ಮಾಡಿದರು. ಕನ ಸಿನಿಮಾಕ್ಕೆ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಕ್ಯಾಮರಾ ಚಾಲನೆ ನೀಡಿದರು. ಸುಮನ್ ತಲ್ವಾರ್ ಅವರು ಆರಂಭಫಲಕ ತೋರಿಸಿದರು. ಬಳಿಕ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಟ ಸುಮನ್ ತಲ್ವಾರ್ ಅವರು ಮಾತನಾಡಿ, ಕಾಂತಾರ ಸಿನಿಮಾ ಬಂದ ಮೇಲೆ ಅನೇಕರು ಇಂತಹ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆ. ನಿರ್ಮಾಪಕರಾದ ಧನರಾಜ್ ಅವರು ಕೊರಗ್ಲಾ ತನಿಯಾ’, ‘ಕನ’ ಚಿತ್ರ ದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ನಾನೂ ಕೂಡ ಇದರಲ್ಲಿ…

Read More

ಮಂಗಳೂರು, ಏ. 23 : ಜಯಂತಿ ಪ್ರೊಡಕ್ಷನ್ ಲಾಂಛನದಲ್ಲಿ ಡಿ.ಎಸ್ ಎಂಟರ್ಟೈನ್ಮೆಂಟ್ಸ್ ಅಪ್ಸರಾ ಎಂಟರ್ಟೈನ್ಮೆಂಟ್ಸ್ ಸಹಭಾಗಿತ್ವದಲ್ಲಿ ತೇಜೇಶ್ ಪೂಜಾರಿ, ದೀಪಕ್ ಸಿಂಗ್, ಅಪ್ಸರಾ ಎಂಟರ್ಟೈನ್ಮೆಂಟ್ಸ್ ನಿರ್ಮಾಣದ ತೇಜೇಶ್ ಪೂಜಾರಿ ನಿರ್ದೇಶನ ತುಳು ಚಲನಚಿತ್ರ ದೇವ್ ದಾಸ್ ನ ಲೀಲಾ ಏ. 24 ರಂದು ಕರಾವಳಿಯಾದ್ಯಂತ ತೆರೆಗೆ ಬರಲಿದೆ ಎಂದು ನಿರ್ದೇಶಕ ತೇಜೇಶ್ ಪೂಜಾರಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚಿತ್ರದ ಟೀಸರ್ , ಹಾಡುಗಳು, ಟ್ರೇಲರ್ ಬಿಡುಗಡೆಗೊಂಡಿದೆ. ಚಿತ್ರದಲ್ಲಿ ನಾಯಕನಾಗಿ ಎಲ್ಟನ್ ಜೆಫ್ ಹಾಗೂ ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ, ವಿಭಿನ್ನವಾದ ಕಥೆಯನ್ನು ಹೊಂದಿದೆ ಎಂದರು. ಚಿತ್ರದ ಚಿತ್ರೀಕರಣವು ಮಂಗಳೂರು, ಮುಡಿಪು, ಬಜ್ಜೆ, ಬೆಂಗಳೂರು ಮುಂತಾದ ಕಡೆ ನಡೆಸಲಾಗಿದೆ, ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು ಬಾಲಿವುಡ್ ನ ಗಾಯಕ ಶಾನ್ ಹಾಡನ್ನು ಹಾಡಿದ್ದಾರೆ, ದಿವ್ಯ ಕುಮಾರ್, ಶೆಹಜಾದ್ ಅಲಿ, ಅನಿರುದ್ಧ ಶಾಸ್ತ್ರಿ, ಪ್ರಕಾಶ್ ಮಹಾದೇವನ್ ಗಾಯನವು ಈ ಚಿತ್ರದಲ್ಲಿದೆ ಎಂದು ತಿಳಿಸಿದರು. ಛಾಯಾಗ್ರಾಹಕರಾಗಿ ಸಂತೋಷ್…

Read More

ಮಂಗಳೂರು,ಏ.22 : ಪ್ರಾರ್ಥನಾ ಕ್ರಿಯೇಷನ್ಸ್ ಮಂಗಳೂರು ಲಾಂಛನದಲ್ಲಿ ಆರ್.ಧನರಾಜ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬಹುಭಾಷಾ ಚಿತ್ರ “ಕೊರಗ್ಲಾ ತನಿಯಾ” ಮತ್ತು “ಕನ” ತುಳು ಚಲನಚಿತ್ರದ ಮುಹೂರ್ತ ಸಮಾರಂಭವು ಏಪ್ರಿಲ್ 23 ಗುರುವಾರ ಬೆಳಿಗ್ಗೆ 9 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಆರ್.ಧನರಾಜ್ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. “ಕೊರಗ್ಲಾ ತನಿಯಾ” ಸಿನಿಮಾಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರಂಭ ಫಲಕ ತೋರಿಸಲಿದ್ದಾರೆ. ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕ್ಯಾಮರಾ ಚಾಲನೆಗೈಯಲಿದ್ದಾರೆ.ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. “ಕನ” ತುಳು ಸಿನಿಮಾಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಆರಂಭ ಫಲಕ ತೋರಿಸಲಿದ್ದಾರೆ. ವಿಧಾನ ಸಭಾಧ್ಯಕ್ಷರಾದ ಯು.ಟಿ ಖಾದರ್ ಮತ್ತು ಬಹುಭಾಷಾ…

Read More