Subscribe to Updates
Get the latest creative news from FooBar about art, design and business.
Author: admin
ಬಂಟ್ವಾಳ, ,ನ. 19 :ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಯುವ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಾವಳಕಟ್ಟೆಯಲ್ಲಿ ಬುಧವಾರ ನಡೆದಿದೆ. ಸಹ ಸವಾರ ಗಂಭೀರವಾಗಿ ಗಾಯಗೊಂ ಡಿರುತ್ತಾರೆ. ಮೃತಳನ್ನು ಕಡಬದ ಸುನಿಲ್ ಎಂಬವರ ಪುತ್ರಿ ಅನನ್ಯ (21) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಹಿಂಬದಿ ಸವಾರ ಗುರುವಾಯನಕೆರೆ ನಿವಾಸಿ ಪೃಥ್ವಿ ಆಗಿರುತ್ತಾನೆ. ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಪೂಂಜಾಲಕಟ್ಟೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು, ನ.18 : ರಚನಾ ಕಥೊಲಿಕ್ ವಾಣಿಜ್ಯ ಮಹಾಮಂಡಳಿಯ ಮಹಾಸಭೆಯು ನಗರದ ನ.16ರಂದು ಬೆಂದೂರ್ ಹಾಲ್‌ನಲ್ಲಿ ನಡೆಯಿತು. ಮಹಾಸಭೆಯಲ್ಲಿ ಕಥೊಲಿಕ್ ಮುಖಂಡ ಮತ್ತು ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅವರನ್ನು ಮುಂದಿನ ಎರಡು ವರ್ಷದ ಅವಧಿಗೆ ಏಕಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಪ್ರಾದೇಶಿಕ ವಾಣಿಜ್ಯ ವಲಯದಲ್ಲಿ ವ್ಯಕ್ತಿಯಾಗಿರುವ ಕ್ಯಾಸ್ತೆಲಿನೊ ಅವರು ಹೊಸ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ.ಸಭೆಯಲ್ಲಿ ಇತರ ಹುದ್ದೆಗಾರರನ್ನೂ ಆಯ್ಕೆ ಮಾಡಲಾಯಿತು. ಲೆಸ್ಲಿ ರೇಗೊ ಉಪಾಧ್ಯಕ್ಷರಾಗಿ, ಎಲ್ರೊನ್ ರೊಡ್ರಿಗಸ್ ಕಾರ್ಯದರ್ಶಿಯಾಗಿ, ಜೇಮ್ಸ್ ಜೆ. ಮಾಡ್ತಾ ಸಂಯುಕ್ತ ಕಾರ್ಯದರ್ಶಿಯಾಗಿ ಮತ್ತು ನವೀನ್ ಲೋಬೊ ಖಜಾಂಚಿಯಾಗಿ ಆಯ್ಕೆಯಾದರು. ಇದರಂತೆಯೇ, ಆಡಳಿತ ಮಂಡಳಿಗೆ ಮಾರ್ಸೆಲ್ ಮೊಂತೇರೊ, ರೊನಾಲ್ಡ್ ಗೊಮ್ಸ್, ಸ್ಟ್ಯಾನಿ ಅಲ್ವಾರಿಸ್, ವಿಲಿಯಂ ಡಿಸೋಜಾ, ನೆಲ್ಸನ್ ಮೊಂತೇರೊ ಮತ್ತು ಸುನಿಲ್ ವಾಜ್ ಇವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಕಥೊಲಿಕ್ ಉದ್ಯಮಿಗಳು, ವೃತ್ತಿಪರರು ಮತ್ತು ವ್ಯವಹಾರ ಮುಖಂಡರು ಪರಸ್ಪರ ಸಂಪರ್ಕಿಸಿಕೊಳ್ಳಲು, ಸಹಕರಿಸಲು ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಲು ರಚನಾ ಒಂದು ಮಹತ್ವದ ವೇದಿಕೆಯಾಗಿ ಗುರುತಿಸಲ್ಪಟ್ಟಿದೆ. ಸಂಸ್ಥೆ…
ಬೆಂಗಳೂರು,ನ.18 : ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪುತ್ತೂರು ಸಹಾಯಕ ಆಯುಕ್ತರು ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಸದ್ಯ ಈ ವಿವಾದಾತ್ಮಕ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಇದರ ಜೊತೆಗೆ 15 ದಿನದಲ್ಲಿ ಪ್ರಕರಣವನ್ನು ಹೊಸದಾಗಿ ವಿಚಾರಣೆಗೆ ಒಳಪಡಿಸಿ, ಸೂಕ್ತ ಆದೇಶ ಹೊರಡಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ಹೊರಡಿಸಿದೆ. ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಸೆಪ್ಟೆಂಬರ್ 18ರಂದು ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿತು.
ಮಂಗಳೂರು,ನ.17 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು. ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಸೌಹಾರ್ದ ಸಹಕಾರ ಸಂಘಗಳು ಹಾಗೂ ಎಲ್ಲಾ ವಿಧದ ಸಹಕಾರ ಸಂಘಗಳು ಮತ್ತು ಸಹಕಾರ ಇಲಾಖೆಯ ಸಹಯೋಗದೊಂದಿಗೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹವು ಭಾನುವಾರ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಇತರ ಅಥಿತಿಗಳೊಂದಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಬಳಿಕ ಮಾತಾಡಿದ ಅವರು ,ಸಹಕಾರರಂಗ ದೇಶದ ಗ್ರಾಮೀಣ ಜನರ…
ಬೆಂಗಳೂರು,ನ.16 : ಡಾ. ಲೀಲಾ ಮೋಹನ್ ಪಿ.ವಿ.ಆರ್. ತಾವೇ ನಿರ್ಮಿಸಿರುವ ಜೊತೆ ನಾಯಕನಾಗಿ ಅಭಿನಯಿಸಿರುವ “ನಾಯಿ ಇದೆ ಎಚ್ಚರಿಕೆ” ಚಿತ್ರವನ್ನು ಇದೇ ನವಂಬರ್ 28ರಂದು ರಾಜ್ಯದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಡಾ. ಲೀಲಾ ಮೋಹನ್ ಪಿ.ವಿ.ಆರ್. ಮೂಲತಃ ಬೆಂಗಳೂರಿನವರಾಗಿದ್ದು , ಇವರು ವೈದ್ಯರು, ಲೇಖಕರು, ಮ್ಯಾರಥಾನ್ ರನ್ನರ್ , ನಟರು ಆಗಿರುತ್ತಾರೆ. ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಪದವಿಗಳನ್ನು ಪೂರ್ಣಗೊಳಿಸಿದ ನಂತರ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯನ್ನು ಸಲ್ಲಿಸಿರುತ್ತಾರೆ. ಸರ್ಜಾಪುರ ಬಳಿ ಇರುವ ರೇನ್‌ಬೋ ಆಸ್ಪತ್ರೆ , ಮದರ್‌ಹುಡ್ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಪರಾಮರ್ಶಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಹೆಚ್ ಎಸ್ ಆರ್ ಲೇಔಟ್‌ನಲ್ಲಿ ಪಡಿತೇಮ್ ಹೆಲ್ತ್ ಕೇರ್ ಎಂಬ ಡೇ ಕೇರ್ ವೈದ್ಯಕೀಯ ಕೇಂದ್ರದ ಸಂಸ್ಥಾಪಕರುತ್ತಾರೆ. ಡಾ. ಲೀಲಾ ಮೋಹನ್ ಅವರು ಧೂಮಪಾನ ಮತ್ತು ನಿಕೋಟಿನ್ ವ್ಯಸನದಿಂದ ಹೊರಬರುವುದು ಹೇಗೆ ಎಂಬುದನ್ನು ಪುಸ್ತಕ ಮೂಲಕ ತಂದಿದ್ದು, ಕ್ರೀಡೆ ಮತ್ತು ಮ್ಯಾರಥಾನ್ ಓಟದಲ್ಲಿ ಮ್ಯಾರಥಾನ್ ರನ್ನರ್ ಆಗಿರುವ…
ನಾಳೆ ನವೆಂಬರ್ 16ರಂದು ಮಂಗಳೂರಿನಲ್ಲಿ 72 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ – ಡಾ.ಎಂ.ಎನ್ ರಾಜೇಂದ್ರ ಕುಮಾರ್
ಮಂಗಳೂರು, ನ. 15 : ಅಖಿಲ ಭಾರತದ 72ನೇ ಸಪ್ತಾಹವು ಭಾನುವಾರ ಮಂಗಳೂರಿನಲ್ಲಿ ನಡೆಯಲಿದೆ ಎಂದು ಎಸ್ ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ. ಅವರು ಶನಿವಾರ ಸಂಜೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಕಳೆದ 30 ವರ್ಷಗಳಿಂದ ನಡಿತಾ ಇರುವ ಸಹಕಾರ ಸಪ್ತಾಹ ಜನರಿಗೆ ತಲುಪುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ (ರಿ.) ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಸೌಹಾರ್ಧ ಸಹಕಾರ ಸಂಘಗಳು…
ಮಂಗಳೂರು, ನ. 15 : ತಯಾರಿಸಲ್ಪಟ್ಟ ನಂದಿನಿ ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ಉತ್ಪನ್ನಗಳು ನ. 16ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜರಗಲಿರುವ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆ ಸಂದರ್ಭ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಕೊಡವೂರು ಅವರು ಕುಲಶೇಖರದ ನಂದಿನಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಮಾಹಿತಿ ನೀಡಿದ ಅವರು, ನಂದಿನಿ ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಹಾಲು ಒಕ್ಕೂಟವು ನ.17ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ನಂದಿನಿ ಪಾರ್ಲರ್, ಪ್ರಾಂಚೈಸಿ ಮತ್ತು ಡೀಲರ್ ಕೇಂದ್ರಗಳಲ್ಲಿ ಮೊದಲು ಬಂದ ಗ್ರಾಹಕರಿಗೆ ದಾಸ್ತಾನು ಮುಗಿಯುವವರೆಗೆ ಉಚಿತವಾಗಿ ನಂದಿನಿ ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ನೀಡಲಾಗುತ್ತದೆ. ಅವಿಭಜಿತ ಜಿಲ್ಲೆಯ ನಂದಿನಿ ಗ್ರಾಹಕರು ನೂತನ ಉತ್ಪನ್ನಗಳನ್ನು ಖರೀದಿಸಿ ಹಾಲು ಉತ್ಪಾಕರನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪೋತ್ಸಾಹಿಸಬೇಕು ಎಂದು…
ಮಂಗಳೂರು, ,ನ. 14 : ನಗರದ ನಂತೂರು ಬಳಿ ಹುಂಡೈ ವೆರ್ನ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ. ದಾರಿ ಮಧ್ಯೆ ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರಿಗೆ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಬಳಿಕ ಪಾಲಿಕೆ ನೀರು ಸರಬರಾಜು ಟ್ಯಾಂಕರ್ ಸ್ಥಳಕ್ಕೆ ಆಗಮಿಸಿದ್ದು. ಟ್ಯಾಂಕರ್ ಸಿಬ್ಬಂದಿ ನೀರು ಹಾಯಿಸುವ ಮೂಲಕ ಕಾರಿನಲ್ಲಿ ಉಂಟಾದ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಘಟನೆ ನಡೆದ ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದಾರೆ.
ಬೆಂಗಳೂರು,ನ.13 : ಶರೀಫ್ ಮೊಹಮ್ಮದ್ ಅವರು ಕ್ಯೂಬ್ಸ್ ಎಂಟರ್ಟೈನ್ ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಭವ್ಯ ಆಕ್ಷನ್ ಥ್ರಿಲ್ಲರ್ ‘ಕಾಟ್ಟಾಲನ್’ ಮಲಯಾಳಂ ಚಿತ್ರ ವಿದೇಶಿ ವಿತರಣಾ ಒಪ್ಪಂದವನ್ನು ಪಡೆದುಕೊಂಡಿದೆ. ಫಾರ್ಸ್ಫಿ ಲ್ಮ್ಸ್ ಸಹಯೋಗದೊಂದಿಗೆ ಈ ಚಿತ್ರವು ಅಂತರಾಷ್ಟ್ರೀಯ ಬಿಡುಗಡೆಗೆ ಸಜ್ಜಾಗುತ್ತಿದೆ. ಪ್ರಮುಖ ಪಾತ್ರದಲ್ಲಿ ಆಂಟೋನಿ ವರ್ಗೀಸ್ ಪೆಪೆ ನಟಿಸಿರುವ ‘ಕಾಟ್ಟಾಲನ್’ ಚಿತ್ರವು ‘ಮಾರ್ಕೋ’ ನಂತರ, ಶರೀಫ್ ಮೊಹಮ್ಮದ್ ನಿರ್ಮಿಸಿರುವ ಕ್ಯೂಬ್ಸ್ ಎಂಟರ್ಟೈನ್ಮೆಂಟ್ಸ್ನ ಮತ್ತೊಂದು ದೊಡ್ಡ ಬಜೆಟ್ ಚಿತ್ರವಾಗಿದೆ ಎಂದು ಚಿತ್ರತಂಡ ಹೇಳಿದೆ. ಥೈಲ್ಯಾಂಡ್‌ನಲ್ಲಿ ನಡೆದ ಚಿತ್ರೀಕರಣದ ವೇಳೆ, ಆನೆ ಒಳಗೊಂಡಿದ್ದ ಅತಿ ತೀವ್ರವಾದ ಆಕ್ಷನ್ ದೃಶ್ಯವೊಂದರಲ್ಲಿ ನಾಯಕ ನಟ ಆಂಟೋನಿ ವರ್ಗೀಸ್ ಅವರು ಗಾಯಗೊಂಡಿದ್ದರು.’ಕಾಟ್ಟಾಲನ್’ ಚಿತ್ರದ ಆಕ್ಷನ್ ಸೀಕ್ವೆನ್ಸ್‌ಗಳಿಗೆ ಸ್ಟಂಟ್ ಮಾಸ್ಟರ್ ಕೆಚಾ ಖಾಂಫಕ್ಡೀ ಮತ್ತು ಅವರ ತಂಡವು ಮೇಲ್ವಿಚಾರಣೆ ನಡೆಸಿದ್ದಾರೆ. ಒಂಗ್-ಬಕ್ ಚಿತ್ರಗಳ ಮೂಲಕ ಖ್ಯಾತಿ ಪಡೆದ ಆನೆ “ಪಾಂಗ್” ಕೂಡ ‘ಕಾಟ್ಟಾಲನ್’ನಲ್ಲಿ ಕಾಣಿಸಿಕೊಳ್ಳಲಿದೆ.ಕಾಂತಾರ ಮತ್ತು ಮಹಾರಾಜ ಚಿತ್ರದಸಂಗೀತ ನಿರ್ದೇಶಕರು ಅಜನೀಶ್ ಲೋಕನಾಥ್ ಇವರ ಸಂಗೀತವಿದೆ. ಪುಷ್ಪಾ ಮತ್ತು ಜೈಲರ್…
ಮಂಗಳೂರು, ನ.12 : ಮಂಗಳೂರು ಮಹಾನಗರ ಪಾಲಿಕೆಯ 29 ನೇ ಕಂಬ್ಳ ವಾರ್ಡ್ ನ ಪಿ.ವಿ.ಎಸ್ ವೃತ್ತದಿಂದ ಲಕ್ಷ್ಮೀ ನಗರ ವಸತಿ ಸಂಕೀರ್ಣ ಸಂಪರ್ಕ ರಸ್ತೆಯು ರೂ 5.ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಂಡಿದ್ದು ಶಾಸಕ ವೇದವ್ಯಾಸ ಕಾಮತ್ ರವರು ರಸ್ತೆಯನ್ನು ಉದ್ಘಾಟನೆಗೊಳಿಸಿದರು. ನಂತರ ಮಾತನಾಡಿದ ಶಾಸಕರು, ಸ್ಥಳೀಯ ನಿಕಟ ಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಲೀಲಾವತಿ ಪ್ರಕಾಶ್ ರವರು ವಿಶೇಷ ಮುತುವರ್ಜಿ ವಹಿಸಿದ್ದರ ಪರಿಣಾಮ ಈ ರಸ್ತೆಯು ಕಾಂಕ್ರೀಟೀಕರಣಗೊಂಡಿದ್ದು ವಿಶೇಷವಾಗಿ ಲಕ್ಷ್ಮೀನಗರ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಅನುಕೂಲವಾಗಿರುವುದು ಸಂತಸದ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಪುಷ್ಪರಾಜ್ ಬಿ.ಎನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ಕಾರ್ಯದರ್ಶಿ ಸತೀಶ್ ಇರಾ ರವರನ್ನು ಶಾಸಕರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಜಿಲ್ಲಾ ವಕ್ತಾರರಾದ ರಾಜಗೋಪಾಲ್ ರೈ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರಕಾಶ್ ಕೊಡಿಯಾಲ್ ಬೈಲ್, ಮಂಡಲದ ಕಾರ್ಯಾಲಯ…












