Author: admin

ಬೆಂಗಳೂರು, ಜ. 31: ಬೆಂಗಳೂರಿನ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ‘ಕಾನ್ಸಿಡೆಂಟ್ ಗ್ರೂಪ್’ನ ಸಂಸ್ಥಾಪಕ ಮತ್ತು ಮಾಲೀಕರಾದ ಸಿ.ಜೆ. ರಾಯ್ ಅವರು ಶುಕ್ರವಾರ (ಜ.30) ತಮ್ಮ ಕಚೇರಿಯಲ್ಲಿ ಐಟಿ ಶೋಧ ನಡೆಯುತ್ತಿದ್ದಾಗಲೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸಿ.ಜೆ.ರಾಯ್ ತನ್ನ ಗನ್‌ನಿಂದ ಗುಂಡು ಹಾರಿಸಿಕೊಂಡು ಜೀವ ಕಳೆದುಕೊಂಡಿದ್ದಾರೆ. ಅವರನ್ನು ತಕ್ಷಣ ಎಚ್‌ಎಸ್‌ಆರ್ ಲೇಔಟ್ನ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿಜೆ ರಾಯ್ ಸಾವನ್ನಪ್ಪಿದರು ಎಂದು ವರದಿಯಾಗಿದೆ. ರಿಯಲ್ ಎಸ್ಟೇಟ್ ಲೇಔಟ್, ಹೋಟೇಲ್, ರೆಸಾರ್ಟ್, ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಿ.ಜೆ.ರಾಯ್ ಬಂಡವಾಳ ಹೂಡಿದ್ದರು. ಯಶಸ್ವಿ ಉದ್ಯಮಿಯಾಗಿದ್ದ ಅವರು ಕಾನ್ಸಿಡೆಂಟ್ ಗ್ರೂಪ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Read More

ಕೊಲಂಬಿಯಾ, ಜ. 30 : ಈಶಾನ್ಯ ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ಬುಧವಾರ ಸಣ್ಣ ವಿಮಾನಯೊಂದು ಪತನಗೊಂಡಿದೆ. ಈ ಘಟನೆಯಲ್ಲಿ ವಿಮಾನದಲ್ಲಿದ್ದ ಸಂಸದ ಸೇರಿದಂತೆ ಎಲ್ಲಾ 15 ಜನರು ಅಪಘಾತದಲ್ಲಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ. ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಈ ವಿಮಾನವು ಬೆಳಗ್ಗೆ 11.42 ಕ್ಕೆ ಕುಕುಟಾ ವಿಮಾನ ನಿಲ್ದಾಣದಿಂದ ಪರ್ವತಗಳಿಂದ ಆವೃತವಾದ ಓಕಾನಾ ನಗರಕ್ಕೆ ಹೊರಟಿದೆ.ಮಧ್ಯಾಹ್ನದ ಸುಮಾರಿಗೆ ಹತ್ತಿರದ ಓಕಾನಾದಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ. ದುರಂತದಲ್ಲಿ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಕೊಲಂಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಮಾಹಿತಿ ನೀಡಿದೆ. ವಿಮಾನವನ್ನು ಹುಡುಕಲು ಮತ್ತು ಶವಗಳನ್ನು ಹೊರತೆಗೆಯಲು ಸರ್ಕಾರ ವಾಯುಪಡೆಯನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.

Read More

ಮಂಗಳೂರು, ಜ. 29 : ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರತಿಷ್ಠಿತ ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಹಾಗೂ ಅನುವಾದ ಪ್ರಶಸ್ತಿ ಪದಾನ ಸಮಾರಂಭವನ್ನು ಜನವರಿ 31 ಹಾಗೂ ಫೆಬ್ರವರಿ 1 ರಂದು ನಗರದ ಟಿವಿ ರಮಣ ಪೈ ಸಭಾಂಗಣ, ಕೊಡಿಯಾಲ್-ಬೈಲ್ ನಲ್ಲಿ ಆಯೋಜಿಸಲಾಗಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ ಎ ನಂದಗೋಪಾಲ ಶೆಣೈ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಕೊಂಕಣಿ ನಾಟಕ ಮಹೋತ್ಸವದ ಅಂಗವಾಗಿ ನಾಲ್ಕು ಪ್ರಸಿದ್ದ ಕೊಂಕಣಿ ನಾಟಕಗಳ ಪ್ರದರ್ಶನ ನಡೆಯಲಿದೆ. ಮೊದಲ ದಿನ ಸಂಜೆ 5.00 ರಿಂದ 6.00 ಗಂಟೆಯ ತನಕ ಮಂಗಳೂರು ಸಾಧನಾ ಬಳಗ ಪ್ರಕಾಶ್ ಶೆಣೈ ನೇತೃತ್ವದ ಮಕ್ಕಳ ಕಲಾತಂಡದವರು “ಭಕ್ತ ಪುರಂದರ” ಯೆಂಬ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ.ಅಂದು ಸಂಜೆ 7.00 ರಿಂದ 8.00 ಗಂಟೆ ತನಕ ಮಂಗಳೂರಿನ ರಂಗ ಅಧ್ಯಯನ ಕೇಂದ್ರ ತಂಡದವರು ಅಭಿನಯಿಸುವ ಜನಪ್ರಿಯ “ಚಿಕೆ ರಾಬ್”…

Read More

ಮೂಡುಬಿದಿರೆ, ಜ. 28 : ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ನೂತನ ಕಚೇರಿಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ನ  ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಸೋಮವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಲ್ಲಬೆಟ್ಟು ಸಹಕಾರಿ ಸಂಘದಿಂದ ವಿಭಜನೆಗೊಂಡು ಪ್ರತ್ಯೇಕ ಅಸ್ತಿತ್ವಕ್ಕೆ ಬಂದಿರುವ ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸ್ಥಳೀಯ ಜನತೆಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆ ನೀಡಲು ಸಾಧ್ಯವಾಗಲಿದೆ. ಈ ಭಾಗದ ರೈತರಿಗೆ ಕೃಷಿ ಸಾಲ ಸೌಲಭ್ಯ ಲಭಿಸಬೇಕು. ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ಈ ಸಂಘ ಸದೃಢವಾಗಿ ಬೆಳೆಯಲಿ ಎಂದರು. ಈ ಸಂದರ್ಭದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಶಿರ್ತಾಡಿ ಸಹಕಾರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ವಹಿಸಿದ್ದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್ ಪಡಿತರ ವಿಭಾಗವನ್ನು ಉದ್ಘಾಟಿಸಿದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾದ…

Read More

ಬೆಂಗಳೂರು,ಜ. 27  : ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ (SJU) ಸಂವಹನ ಮತ್ತು ಮಾಧ್ಯಮ ಅಧ್ಯಯನ ಶಾಲೆಯ (SCMS) ಆಶ್ರಯದಲ್ಲಿ ಹತ್ತನೇ ಆವೃತ್ತಿಯ ‘ಮೀಡಿಯಾಕಾನ್’ ಅಂತರಾಷ್ಟ್ರೀಯ ಸಮ್ಮೇಳನ ಹಾಗೂ ಸಂಘದ ಉತ್ಸವಗಳಿಗೆ ಜ. 23ರ ಶುಕ್ರವಾರದಂದು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ಚಲನಚಿತ್ರ ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಅವರು, ಅಧಿಕಾರ ಮತ್ತು ಪ್ರಬಲ ನಿರೂಪಣೆಗಳ (dominant narratives) ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಕಿವಿಮಾತು ಹೇಳಿದರು. ಜನಪ್ರಿಯತೆ (populism) ಮತ್ತು ಸರ್ವಾಧಿಕಾರತ್ವದಂತಹ ಶಕ್ತಿಗಳು ಇನ್ನು ಮುಂದೆ ಕೇವಲ ರಾಜಕೀಯ ಸಿದ್ಧಾಂತಗಳಾಗಿ ಉಳಿಯದೆ, ದೈನಂದಿನ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಬೌದ್ಧಿಕವಾಗಿ ತಮ್ಮನ್ನು ತಾವು ಸನ್ನದ್ಧರನ್ನಾಗಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಮುಂಬರುವ ಸವಾಲುಗಳನ್ನು ಎದುರಿಸಲು ಮತ್ತು ಸಾಮಾಜಿಕ-ರಾಜಕೀಯ ಸಂಕೀರ್ಣತೆಗಳನ್ನು ನಿಭಾಯಿಸಲು ಪ್ರತಿ ನಿಮಿಷವೂ ನಿಮ್ಮ ಕನಸುಗಳನ್ನು ಸಾಕಾರಗೊಳಿಸುವತ್ತ ಮತ್ತು ಮಿದುಳಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಅವರು ಯುವಜನತೆಗೆ…

Read More

ಉಡುಪಿ, ಜ. 26 : ಸ್ಕೂಟರ್ ಗೆ ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರೊಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಕಲ್ಸಂಕ ಜಂಕ್ಷನ್ ಬಳಿಯ ಪಾಕಶಾಲೆ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಮಣಿಪಾಲದ ಅವಿನಾಶ್ (29) ಎಂದು ಗುರುತಿಸಲಾಗಿದೆ.ಉಡುಪಿಯಿಂದ ಮಣಿಪಾಲ ಕಡೆ ಹೋಗುತ್ತಿದ್ದ ಕಂಟೈನರ್ ಲಾರಿಯು ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಉಡುಪಿ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Read More

ಮಂಗಳೂರು, ಜ. 25: ಹಂಪನಕಟ್ಟೆಯಲ್ಲಿರುವ ಅಕ್ಬರ್ ಕಾಂಪ್ಲೆಕ್ಸ್ನಲ್ಲಿ ಶನಿವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡದಲ್ಲಿದ್ದ ಹಲವು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿ ಅವಘಡದಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ ಎಂದು ವರದಿಯಾಗಿದೆ. ಬೆಂಕಿಯಿಂದಾಗಿ ಪರಿಸರದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಪಕ್ಕದ ಲಾಡ್ಜ್ನಲ್ಲಿದ್ದವರು ಇಂದರಿಂದ ತೊಂದರೆ ಅನುಭವಿಸಿದ್ದಾರೆಎಂದು ಹೇಳಲಾಗಿದೆ. ಹೇಗೆ ಹೊತ್ತಿಕೊಂಡಿತು ಇದರ ಬಗ್ಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್ ಈ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.

Read More

ಮಂಗಳೂರು, ಜ.24 : ಜಯ-ವಿಜಯ ಜೋಡುಕರೆ ಕಂಬಳ ಸಮಿತಿ (ರಿ) ಜಪ್ಪಿನಮೊಗರು ಇವರ ನೇತೃತ್ವದಲ್ಲಿ ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ಕೀರ್ತಿಶೀಷ ಜೆ. ಜಯಗಂಗಾಧರ ಶೆಟ್ಟಿಯವರ ಸ್ಮರಣಾರ್ಥ 16ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ಫೆ 14 ಮತ್ತು 15 ರಂದು ನಡೆಯಲಿದೆ ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಸಮಿತಿಯ ಗೌರವಾಧ್ಯಕ್ಷರಾದ ಡಿ. ವೇದವ್ಯಾಸ ಕಾಮತ್ ಅವರು ನಗರದಲ್ಲಿ ನರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತಾನಾಡಿ ಅವರು, ಫೆ 14 ರಂದು ಬೆಳಿಗ್ಗೆ 8.30ಕ್ಕೆ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳು ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾಗಿರುವ ಎಸ್. ಗಣೇಶ್ ರಾವ್ ಇವರ ಅಧ್ಯಕ್ಷತೆಯಲ್ಲಿ, ಅನಂತಪದ್ಮನಾಭ ಅಸ್ರಣ್ಣರ ಆಶೀರ್ವಚನದೊಂದಿಗೆ,ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿವರ್ಯರಿಂದ ಕಂಬಳವು ಉದ್ಘಾಟನೆಗೊಳ್ಳಲಿದೆ.ಸುಬ್ಬಯ್ಯ ಭಂಡಾರಿ ಪಟ್ಟದ ಯಜಮಾನರು ಜಪ್ಪುಗುಡ್ಡೆಗುತ್ತು ಹಾಗೂ ಇತರ ಅನೇಕ ಗಣ್ಯ ಅತಿಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.…

Read More

ಮಂಗಳೂರು, ಜ.23 : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವರ್ಷಾವಧಿ ಜಾತ್ರೆಯು ಜ.14 ಬುಧವಾರ ದಿಂದ ಜ.24 ಶನಿವಾರ ತನಕ ನಡೆಯುತ್ತಿದೆ. ಜ.21 ಬುಧವಾರದಂದು ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ವರ್ಷಾವಧಿ ಮನ್ಮಹಾರಥೋತ್ಸವವು ವೈಭವದಿಂದ ನೆರವೇರಿತು. ಕದ್ರಿ ಯೋಗೀಶ್ವರ ಮಠದ ಶ್ರೀ ರಾಜಾ ನಿರ್ಮಲ್‌ನಾಥಜೀ ದೇವಸ್ಥಾನಕ್ಕೆ ಆಗಮಿಸಿ ಮಂಜುನಾಥ ದೇವರ ದರ್ಶನ ಪಡೆದರು. ಬಳಿಕ ಅವರು ರಥಕ್ಕೆ ಒಂದು ಸುತ್ತು ಹಾಕಿ,ತೆಂಗಿನಕಾಯಿ ಒಡೆದು ಕುದುರೆ ಏರಿ ಮುಂದುವರಿಯುತ್ತಿದ್ದಂತೆ ಭಕ್ತರೆಲ್ಲರೂ ರಥ ಎಳೆದು ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಬಂದರು. ಮಧ್ಯಾಹ್ನ 12ಕ್ಕೆ ಮಹಾಪೂಜೆ, 1.30ಕ್ಕೆ ಮಂಜುನಾಥ ದೇವರ ರಥಾರೋಹಣ ನಡೆಯಿತು. ಸಂಜೆ ಮಹಾರಥೋತ್ಸವದ ನಂತರ ದೇವರ ದರ್ಶನ ಬಲಿ, ಬೆಳ್ಳಿರಥೋತ್ಸವ, ಚಂದ್ರಮಂಡಲ ಉತ್ಸವ ನಡೆಯಿತು. ಬಳಿಕ ಮಹಾಪೂಜೆ, ಭೂತಬಲಿ, ಕವಾಟ ಬಂಧನ ಧ್ವಜಾವರೋಹಣ, ನಿತ್ಯ ಬಲಿ ನೆರವೇರಿತು. ಜ. 24ರಂದು ಶ್ರೀ ದೇಗುಲದಿಂದ ಶ್ರೀ ಮಲರಾಯ ದೈವದ ಭಂಡಾರ ಹೊರಡುವುದು, ಮಧ್ಯಾಹ್ನ 12ಕ್ಕೆ ಸಂಪ್ರೋಕ್ಷಣೆ, ಶ್ರೀ ಅಣ್ಣಪ್ಪ ದೈವಕ್ಕೆ…

Read More

ಶ್ರೀನಗರ, ಜ. 22 : ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಸೇನಾ ವಾಹನವು ಸ್ಕಿಡ್ ಆಗಿ 200 ಅಡಿ ಆಳದ ಕಮರಿಗೆ ಉರುಳಿ ಬಿದ್ದ ಪರಿಣಾಮ ಹತ್ತು ಮಂದಿ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. 17 ಜನರಿದ್ದ ಸೇನಾ ವಾಹನವು ಎತ್ತರದ ಪೋಸ್ಟ್ ಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಭದೇರ್ವಾ-ಚಂಬಾ ರಸ್ತೆಯ ಖನ್ನಿ ಟಾಪ್‌ನಲ್ಲಿರುವ 200 ಅಡಿ ಆಳದ ಕಮರಿಗೆ ಉರುಳಿ ಬಿದ್ದಿದೆ. ಪರಿಣಾಮ ಹತ್ತು ಮಂದಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಸೇನೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ. ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Read More