Author: admin

ಮಂಗಳೂರು, ಏ. 24 : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ 11 ನೇ ವರ್ಷದ ಪಟ್ಲ ಸಂಭ್ರಮ 2026 ಕಾರ್ಯಕ್ರಮ ಮೇ 30 ಶನಿವಾರ ಅಡ್ಯಾರ್ ಬಳಿಯ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಯಕ್ಷಧ್ರುವ ಪಟ್ಲ ಸಂಭ್ರಮ 2026 ಕಾರ್ಯಕ್ರಮವನ್ನು ಪಾವಂಜೆ ನಾಗವೃಜ ಕ್ಷೇತ್ರದ ಧರ್ಮಧರ್ಶಿಗಳಾದ ಡಾ ಯಾಜಿ ನಿರಂಜನ ಭಟ್ ಉದ್ಘಾಟಿಸಲಿದ್ದಾರೆ. ಅಂದು ಬೆಳಿಗ್ಗೆ 8.30 ರಿಂದ 9 ರ ತನಕ ಚೌಕಿ ಪೂಜೆ ಮತ್ತು ಅಬ್ಬರ ತಾಳ, 9 ರಿಂದ 11 ರ ವರೆಗೆ ಭರತ ನಾಟ್ಯ ಪ್ರದರ್ಶನ, 11 ರಿಂದ 1.30 ರ ವರೆಗೆ ಸಭಾ ಕಾರ್ಯಕ್ರಮ, ಮಧ್ಯಾಹ್ನ 1.30 ರಿಂದ 2 ರ ವರೆಗೆ ನಾಗವೃಜ ಕ್ಷೇತ್ರ ಪಾವಂಜೆಯ ಶ್ರೀ ವಾಣಿ ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ಮಧ್ಯಾಹ್ನ…

Read More

ಮಂಗಳೂರು, ಏ. 24 : ಪ್ರಾರ್ಥನಾ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ| ಆರ್. ಧನರಾಜ್ ನಿರ್ಮಾಣದೊಂದಿಗೆ ನಿರ್ದೇಶಿಸುತ್ತಿರುವ ‘ ಕೊರಗ್ಲಾ ತನಿಯಾ’ ಮತ್ತು ‘ಕನ’ ತುಳು ಚಿತ್ರಗಳ ಮುಹೂರ್ತ  ಕಾರ್ಯಕ್ರಮ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆಯಿತು. ಕೊರಗ್ಲಾ ತನಿಯ ಚಿತ್ರಕ್ಕೆ ಶಾಸಕರಾದ ಸಿ ಬಿ ಸುರೇಶ್ ಅವರು ಕ್ಯಾಮರಾ ಚಾಲನೆಗೈದರು. ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆಡಳಿತ ನಿರ್ದೇಶಕ ಎ ಜೆ ಶೆಟ್ಟಿ ಅವರು ಕ್ಯಾಪ್ ಮಾಡಿದರು. ಕನ ಸಿನಿಮಾಕ್ಕೆ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಕ್ಯಾಮರಾ ಚಾಲನೆ ನೀಡಿದರು. ಸುಮನ್ ತಲ್ವಾರ್ ಅವರು ಆರಂಭಫಲಕ ತೋರಿಸಿದರು. ಬಳಿಕ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಟ ಸುಮನ್ ತಲ್ವಾರ್ ಅವರು ಮಾತನಾಡಿ, ಕಾಂತಾರ ಸಿನಿಮಾ ಬಂದ ಮೇಲೆ ಅನೇಕರು ಇಂತಹ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆ. ನಿರ್ಮಾಪಕರಾದ ಧನರಾಜ್ ಅವರು ಕೊರಗ್ಲಾ ತನಿಯಾ’, ‘ಕನ’ ಚಿತ್ರ ದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ನಾನೂ ಕೂಡ ಇದರಲ್ಲಿ…

Read More

ಮಂಗಳೂರು, ಏ. 23 : ಜಯಂತಿ ಪ್ರೊಡಕ್ಷನ್ ಲಾಂಛನದಲ್ಲಿ ಡಿ.ಎಸ್ ಎಂಟರ್ಟೈನ್ಮೆಂಟ್ಸ್ ಅಪ್ಸರಾ ಎಂಟರ್ಟೈನ್ಮೆಂಟ್ಸ್ ಸಹಭಾಗಿತ್ವದಲ್ಲಿ ತೇಜೇಶ್ ಪೂಜಾರಿ, ದೀಪಕ್ ಸಿಂಗ್, ಅಪ್ಸರಾ ಎಂಟರ್ಟೈನ್ಮೆಂಟ್ಸ್ ನಿರ್ಮಾಣದ ತೇಜೇಶ್ ಪೂಜಾರಿ ನಿರ್ದೇಶನ ತುಳು ಚಲನಚಿತ್ರ ದೇವ್ ದಾಸ್ ನ ಲೀಲಾ ಏ. 24 ರಂದು ಕರಾವಳಿಯಾದ್ಯಂತ ತೆರೆಗೆ ಬರಲಿದೆ ಎಂದು ನಿರ್ದೇಶಕ ತೇಜೇಶ್ ಪೂಜಾರಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚಿತ್ರದ ಟೀಸರ್ , ಹಾಡುಗಳು, ಟ್ರೇಲರ್ ಬಿಡುಗಡೆಗೊಂಡಿದೆ. ಚಿತ್ರದಲ್ಲಿ ನಾಯಕನಾಗಿ ಎಲ್ಟನ್ ಜೆಫ್ ಹಾಗೂ ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ, ವಿಭಿನ್ನವಾದ ಕಥೆಯನ್ನು ಹೊಂದಿದೆ ಎಂದರು. ಚಿತ್ರದ ಚಿತ್ರೀಕರಣವು ಮಂಗಳೂರು, ಮುಡಿಪು, ಬಜ್ಜೆ, ಬೆಂಗಳೂರು ಮುಂತಾದ ಕಡೆ ನಡೆಸಲಾಗಿದೆ, ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು ಬಾಲಿವುಡ್ ನ ಗಾಯಕ ಶಾನ್ ಹಾಡನ್ನು ಹಾಡಿದ್ದಾರೆ, ದಿವ್ಯ ಕುಮಾರ್, ಶೆಹಜಾದ್ ಅಲಿ, ಅನಿರುದ್ಧ ಶಾಸ್ತ್ರಿ, ಪ್ರಕಾಶ್ ಮಹಾದೇವನ್ ಗಾಯನವು ಈ ಚಿತ್ರದಲ್ಲಿದೆ ಎಂದು ತಿಳಿಸಿದರು. ಛಾಯಾಗ್ರಾಹಕರಾಗಿ ಸಂತೋಷ್…

Read More

ಮಂಗಳೂರು,ಏ.22 : ಪ್ರಾರ್ಥನಾ ಕ್ರಿಯೇಷನ್ಸ್ ಮಂಗಳೂರು ಲಾಂಛನದಲ್ಲಿ ಆರ್.ಧನರಾಜ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬಹುಭಾಷಾ ಚಿತ್ರ “ಕೊರಗ್ಲಾ ತನಿಯಾ” ಮತ್ತು “ಕನ” ತುಳು ಚಲನಚಿತ್ರದ ಮುಹೂರ್ತ ಸಮಾರಂಭವು ಏಪ್ರಿಲ್ 23 ಗುರುವಾರ ಬೆಳಿಗ್ಗೆ 9 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಆರ್.ಧನರಾಜ್ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. “ಕೊರಗ್ಲಾ ತನಿಯಾ” ಸಿನಿಮಾಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರಂಭ ಫಲಕ ತೋರಿಸಲಿದ್ದಾರೆ. ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕ್ಯಾಮರಾ ಚಾಲನೆಗೈಯಲಿದ್ದಾರೆ.ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. “ಕನ” ತುಳು ಸಿನಿಮಾಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಆರಂಭ ಫಲಕ ತೋರಿಸಲಿದ್ದಾರೆ. ವಿಧಾನ ಸಭಾಧ್ಯಕ್ಷರಾದ ಯು.ಟಿ ಖಾದರ್ ಮತ್ತು ಬಹುಭಾಷಾ…

Read More

ಉರ್ವ, ಏ.22 : ಉರ್ವ ಬೋಳೂರು ಶ್ರೀ ಕೊರಗಜ್ಜನ ಕ್ಷೇತ್ರ ದಲ್ಲಿ 20ನೇ ವಾರ್ಷಿಕ ನೇಮೋತ್ಸವವು ತಾ. 16 -04-2026 ನೇ ಗುರುವಾರದಿಂದ 19-04-2026 ರವಿವಾರದ ತನಕ ವಿಜ್ರಂಭಣೆಯಿಂದ ಜರಗಿತು. ಏ. 16,ಗುರುವಾರ ಸಂಜೆ 6.00ಕ್ಕೆಉರ್ವ ಬೋಳೂರು ಕೊರಗಜ್ಜ ಕ್ಷೇತ್ರದ ಪ್ರಧಾನ ದೈವ ಸಾರಲ ಪಟ್ಟದ ಕೊರಗಜ್ಜನಿಗೆ ನೂತನ ಬಂಗಾರದ ಮುಟ್ಟಾಲೆ ಸಮರ್ಪ ಣಾ ಕಾರ್ಯಕ್ರಮ ನಡೆಯಿತು. ನೂತನ ಬಂಗಾರದ ಮುಟ್ಟಾಲೆಯನ್ನು ಸಾವಿರ ಸೀಮೆಯ ಒಡೆಯ ಕದ್ರಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆಯನ್ನು ನೆರವೇರಿಸಿ ವಿಜೃಂಭಣೆಯ ಮೆರವಣಿಗೆಯು ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣಗುರು ವೃತದಿಂದ ಪ್ರಾರಂಭವಾಗಿ ಉರ್ವ ಶ್ರೀ ಮಾಲಯಮ್ಮ ವೃತದಿಂದ ಶ್ರೀ ಮಾರಿಯಮ್ಮ ದೇವಸ್ಥಾನದ ಬಳಿಯಿಂದ ಎಡಕ್ಕೆ ತಿರುಗಿ ಉರ್ವ ಕ್ಯಾಶು ಫ್ಯಾಕ್ಟಾರಿಯಿಂದಾಗಿ ಕ್ಷೇತ್ರಕ್ಕೆ ಒಪ್ಪಿಸಲಾಯಿತು. ಏ. 17ರಂದು ಶುಕ್ರವಾರ ಪ್ರಾರ್ಥನೆ, ಪುಣ್ಯಹ, ಗಣಹೋಮ, ನವಕ ಕಲಶ, ಪರ್ವ ಪೂಜೆ, ತೋರಣ ಮುಹೂರ್ತ ವೇ। ಮೂ। ಶ್ರೀ. ಕೆ. ಪುರುಷೋತ್ತಮ ಭಟ್ (ಶ್ರೀ ವೆಂಕಟರಮಣ ದೇವಸ್ಥಾನ, ಬೊಕ್ಕಪಟ್ಟ ಮಂಗಳೂರು) ಇವರ…

Read More

ಮೈಸೂರು, ಏ. 21 : ಮೈಸೂರಿನ ಬೋಗಾದಿಯ ಧ್ಯಾನ ಸಾಧನದಲ್ಲಿ ಎಪ್ರಿಲ್ 17, ಶುಕ್ರವಾರ ನಡೆದ 16ನೇ ಪ್ರೊವಿನ್ಶಿಯಲ್ ಚಾಪ್ಟರ್ (ಮಹಾಧಿವೇಶನ) ನಲ್ಲಿ ಡಿಸ್ಕಾಲ್ಸ್ಡ್ ಕಾರ್ಮೆಲೈಟ್ಸ್ ಸಭೆಯ ಕರ್ನಾಟಕ-ಗೋವಾ ಪ್ರಾಂತ್ಯದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ವಂದನೀಯ ರೆ| ಡಾ. ಜಾನ್ ಫ್ರಾನ್ಸಿಸ್ ಸಿಕ್ವೇರಾ, ಒಸಿಡಿ ಅವರು ಆಯ್ಕೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಂದನೀಯ ರೆ| ಸಿಲ್ವೆಸ್ಟರ್ ಡಿ’ಸೋಜಾ, ಒಸಿಡಿ ಅವರ ಉತ್ತರಾಧಿಕಾರಿಯಾಗಿ ಇವರು ಅಧಿಕಾರ ವಹಿಸಿಕೊಂಡಿದ್ದಾರೆ. ರೆ| ಜಾನ್ ಫ್ರಾನ್ಸಿಸ್ ಸಿಕ್ವೇರಾ ಅವರು ಮಂಗಳೂರು ಧರ್ಮಪ್ರಾಂತ್ಯದ ಅಗ್ರಾರ್ ಧರ್ಮ ಪ್ರಾಂತ್ಯದವರು. ಪ್ರಖ್ಯಾತ ಶಿಕ್ಷಣತಜ್ಞ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಕರಾಗಿರುವ ಇವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ) ಪಡೆದಿದ್ದಾರೆ. ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎರಡನೇ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಅಲ್ಲಿಯೇ ಜರ್ಮನ್ ಭಾಷಾಶಾಸ್ತ್ರದಲ್ಲೂ (German Linguistics) ಅಧ್ಯಯನ ನಡೆಸಿದ್ದಾರೆ. ರೋಮ್ನ ಪಾಂಟಿಫಿಕಲ್ ಯೂನಿವರ್ಸಿಟಿ ಆಫ್ ಸೇಂಟ್ ಥಾಮಸ್ ಅಕ್ವಿನಾಸ್ (ಆಂಜೆಲಿಕಮ್)…

Read More

ಟೋಕಿಯೊ, ಏ. 20 : ಉತ್ತರ ಜಪಾನ್‌ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸೋಮವಾರ ಸಂಭವಿಸಿದೆ ಎಂದು ಜಪಾನ್ ನ  ಹವಾಮಾನ ಸಂಸ್ಥೆ (ಜೆಎಂಎ) ಮಾಹಿತಿ ನೀಡಿದೆ. 3 ಮೀಟರ್ ಎತ್ತರದ ಅಲೆಗಳ ಸುನಾಮಿ ಮುನ್ನೆಚ್ಚರಿಕೆ ನೀಡಿದೆ. ಉತ್ತರ ಇವಾಟೆ ಪ್ರಾಂತ್ಯದ ಪೆಸಿಫಿಕ್ ಸಮುದ್ರದಲ್ಲಿ ಸಂಜೆ 4:53 ಕ್ಕೆ ಭೂಕಂಪ ಸಂಭವಿಸಿದೆ. ನೂರಾರು ಕಿಲೋಮೀಟರ್ ದೂರದಲ್ಲಿರುವ ಟೋಕಿಯೊದವರೆಗಿನ ದೊಡ್ಡ ಕಟ್ಟಡಗಳು ಕಂಪಿಸುವಷ್ಟು ಭೂಕಂಪ ಪ್ರಬಲವಾಗಿತ್ತು ಎನ್ನಲಾಗಿದೆ. ಆರಂಭಿಕ ಸುನಾಮಿ ಅಲೆಗಳು ಉತ್ತರ ಕರಾವಳಿಯನ್ನು ತಕ್ಷಣವೇ ತಲುಪಬಹುದು. ಈ ಸುನಾಮಿ ಅಲೆಗಳಿಂದ ಹಾನಿಯಾಗುವ ಸಾಧ್ಯತೆಯಿದೆ. ಜನರು ಈ ಕೂಡಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಹವಾಮಾನ ಸಂಸ್ಥೆ ತಿಳಿಸಿದೆ.

Read More

ಪುತ್ತೂರು, ಏ. 19 : ಡಿವೈಡರ್‌ಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪುತ್ತೂರು ಹೊರವಲಯದ ಪಡೀಲ್‌ನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ಬೆಳ್ಳಿಪ್ಪಾಡಿ ಗ್ರಾಮದ  ಕೊಡಿನೀರು ಬಳಿ ನಿವಾಸಿ ಧನರಾಜ್ ಎಂದು ಗುರುತಿಸಲಾಗಿದೆ ಪುತ್ತೂರು ಕಡೆಯಿಂದ ಬೆಳ್ಳಿಪ್ಪಾಡಿಯ ತನ್ನ ಮನೆಯ ಕಡೆಗೆ ಧನರಾಜ್ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಪಡೀಲು ಎಂಬಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಡಿವೈಡರ್‌ಗೆ ಅಪ್ಪಳಿಸಿ ಅಲ್ಲೇ ಇದ್ದ ಲೈಟ್ ಕಂಬಕ್ಕೆ ಬಡಿದು ಇನ್ನೊಂದು ಬದಿಯಲ್ಲಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಂದು ಬೈಕಿನ ಸವಾರ ಮತ್ತು ಸಹಸವಾರನಿಗೆ ಗಾಯಗಳಾಗಿದ್ದು ಇಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು,ಏ. 18 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 52 ನೇ ಕಣ್ಣೂರು ವಾರ್ಡಿನ ಪೇರ್ಲ ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ರಸ್ತೆ ಕಾಮಗಾರಿಯು ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆಯು ನಡೆಯಿತು. ನಂತರ ಮಾತನಾಡಿದ ಶಾಸಕರು, ಇಲ್ಲಿಯತನಕ ಇಲ್ಲಿರುವ ದೇವಸ್ಥಾನದವರೆಗೆ ನಾಲ್ಕು ಚಕ್ರದ ವಾಹನಗಳು ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿಯಿದ್ದ ಕಾರಣ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ನಂತರದ ದಿನಗಳಲ್ಲಿ ಇಲ್ಲಿಗೊಂದು ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲೇಬೇಕೆಂಬ ನಮ್ಮೆಲ್ಲರ ಆಶಯಕ್ಕೆ ಆಸರೆಯಾಗಿ ನಿಂತವರು ಇಲ್ಲಿನ ಜಾಗದ ಮಾಲೀಕರಾದ ಅಶೋಕ್ ರವರು. ಸ್ಥಳೀಯರ ಸಹಿತ ನಾವೆಲ್ಲರೂ ಮನವಿ ಮಾಡಿದ್ದರಿಂದಾಗಿ ಅವರು ಉಚಿತವಾಗಿ ಜಾಗ ಬಿಟ್ಟು ಕೊಟ್ಟ ಕಾರಣ ಇಂದು ಇಲ್ಲಿ ರಸ್ತೆ ನಿರ್ಮಾಣ ಸಾಧ್ಯವಾಗುತ್ತಿದೆ. ಅವರಿಗೆ ಸರ್ವರ ಪರವಾಗಿ ವಿಶೇಷ ಧನ್ಯವಾದಗಳು ಎಂದರು. ಈ ಸಂದರ್ಭದಲ್ಲಿ ನಿಕಟಪೂರ್ವ ಮನಪಾ ಸದಸ್ಯರಾದ ಚಂದ್ರಾವತಿ ವಿಶ್ವನಾಥ್, ಬಿಜೆಪಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ವಿಶ್ವನಾಥ್, ಕೇಶವ, ಗಣೇಶ್ ಶೆಟ್ಟಿ, ವಸಂತ ಶೆಟ್ಟಿ,…

Read More

ಯಾದಗಿರಿ, ಏ. 17 : ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಸಮೀಪ ಕಾರು ಮತ್ತು ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿದೆ.ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಜೀವ ದಹನಗೊಂಡಿದ್ದಾರೆ . ವರದಿಯ ಪ್ರಕಾರ, ಕಾರು ಯಾದಗಿರಿಯಿಂದ ರಾಯಚೂರು ಕಡೆಗೆ ತೆರಳುತ್ತಿದ್ದು, ಬಸ್ ಬೆಂಗಳೂರು ಕಡೆಯಿಂದ ಕಲಬುರಗಿ ಕಡೆಗೆ ಬರುತ್ತಿದ್ದಸಂದರ್ಭ ದೇವಾಪುರ ಎಂಬಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಯಿಂದ ಕಾರು ಹಾಗೂ ಬಸ್ಸಿಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಎಂದು ವರದಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಘಟನೆಯ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಸುರಪುರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More