Subscribe to Updates
Get the latest creative news from FooBar about art, design and business.
Author: admin
ಬಂಟ್ವಾಳ, ಫೆ.08 : ಫ್ಯಾನ್ ರಿಪೇರಿ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಘಟನೆ ನಡೆದಿದೆ. ಮೃತರನ್ನುಅರಳ ನಿವಾಸಿ ಭವಾನಿ ಶಂಕರ ಯಾನೆ ರಾಜೇಶ್ ಎಂದು ಗುರುತಿಸಲಾಗಿದೆ. ಮಾರ್ನಬೈಲು ರಾಜೇಶ್ ನ ತಂಗಿ ಮನೆಯಲ್ಲಿ ಫ್ಯಾನ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ರಾಜೇಶ್ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಟ ಫೆ. 7 : ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ಒಡಿಯೂರು ರಥೋತ್ಸವ, ತುಳುನಾಡ ಜಾತ್ರೆ ಹಾಗೂ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆ ಕಾರ್ಯಕ್ರಮ ಫೆ. 6ರಂದು ಸಂಸ್ಥಾನದ ಅವರಣದಲ್ಲಿ ಜರಗಿತು. ಈ ಪ್ರಯುಕ್ತ ನಡೆದ ತುಳು ಸಾಹಿತ್ಯ ಸಮ್ಮೇಳನವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಉದ್ಘಾಟಿಸಿದರು. ನಂತರ ಮಾತಾಡಿದ ಅವರು ತುಳು ಭಾಷೆಗೆ ಮಾನ್ಯತೆ ಸಿಗಲು ತುಳುವರು ಒಗ್ಗಟ್ಟಾಗಿ ಹೋರಾಡಬೇಕು. ಆಂಗ್ಲ ಸಹಿತ ಎಲ್ಲ ಭಾಷೆಗಳ ಮೇಲೆ ಗೌರವ ಇರಲಿ, ಆದರೆ ತುಳುವರು ತುಳು ಭಾಷೆಯನ್ನು ಮರೆಯಬಾರದು ಎಂದು ಹೇಳಿದರು. ಲೇಖಕ ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಿ, ಮಾತಾಡಿದ ಅವರು, ಯುವಜನರು ಕೃಷಿ ತ್ಯಜಿಸಿ ಪೇಟೆಗೆ ಅಥವಾ ವಿದೇಶಕ್ಕೆ ತೆರಳುತ್ತಿರುವುದು ಬೇಸರದ ಸಂಗತಿಯಾಗಿದೆ. ತುಳುವರು ತುಳು ಭಾಷೆಯಲ್ಲಿ ಮಾತಾಡಿ ತುಳು ಭಾಷೆಯನ್ನು ಪ್ರೋತ್ಸಾಹಿಸಿ ಎಂದರು. ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಡಾ| ವಸಂತ ಕುಮಾರ್ ಪರ್ಲ, ತುಳುನಾಡ ರಕ್ಷಣ…
ಕಾಪು,ಫೆ.06 : ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾನಿಧ್ಯಾಭಿವೃದ್ಧಿ, ಲೋಕಕಲ್ಯಾರ್ಥವಾಗಿ ಹಮ್ಮಿಕೊಂಡಿರುವ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ಮಂಗಳವಾರ ನವಚಂಡೀಯಾಗ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು. ದೇವಸ್ಥಾನದ ಪ್ರಧಾನ ತಂತ್ರಿ ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ನೇತೃತ್ವದಲ್ಲಿ, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ ಉಪಸ್ಥಿತಿಯಲ್ಲಿ ನವಚಂಡೀಯಾಗ ಆರಂಭಗೊಂಡು, ಕಲ್ಲೋಕ್ತ ಪೂಜೆ, ಮಹಾ ಮಂಗಳಾರತಿ, ಪೂರ್ಣಾಹುತಿ, ಮಹಾಪ್ರಸಾದ ವಿತರಣೆ ನಡೆಯಿತು. ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ಅಮ್ಮನ 9 ಹೆಸರುಗಳೊಂದಿಗೆ ನವದುರ್ಗಾ ಲೇಖನ ಬರೆದು ಶಿಲಾ ಸೇವೆ ಸಹಿತವಾಗಿ ದೇವಸ್ಥಾನಕ್ಕೆ ತಂದು ಸಮರ್ಪಿಸಿದ ಎಲ್ಲೆಡೆಯ ಹೆಚ್ಚಿನ ಸಂಖ್ಯೆಯ ಭಕ್ತರು ನವಚಂಡೀಯಾಗದ ಸಂಕಲ್ಪದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ. ದೀಪ ಪ್ರಜ್ವಲನೆಗೈದರು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ದಂಪತಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ದಂಪತಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ದಂಪತಿ ನವಚಂಡೀಯಾಗದ ಸಂಕಲ್ಪದಲ್ಲಿ…
ಮಂಗಳೂರು,ಜ.05 : ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್ನ್ಯಾಶನಲ್ ಕನ್ವೆನ್ಶನ್ ಸೆಂಟರ್ನಲ್ಲಿ ಸ್ವರ ಸಾನಿಧ್ಯ ರಾಷ್ಟ್ರೀಯ ಮಟ್ಟದ ಯುವ ಸಂಗೀತೋತ್ಸವ ಹಾಗೂ ದೇಶದ ಖ್ಯಾತ ಸಂಗೀತ ಕಲಾವಿದರ ಸಂಗೀತ ಕಾರ್ಯಕ್ರಮ ಫೆಬ್ರವರಿ 8ರಂದು ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಆರಂಭ ಗೊಳ್ಳಲಿದ್ದು ರಾತ್ರಿ 8:30ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಗೌರವ ಸಲಹೆಗಾರರಾದ ಶ್ರೀನಿವಾಸ್ ನಾಯಕ್ ಇಂದಾಜೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಬಳಿಕ ಮಾತಾಡಿದ ಕಲಾಸಾಧನ ಸಂಸ್ಥೆಯ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಅವರು,ಬೆಳಿಗ್ಗೆ 8.40ರಿಂದ 9.30 ರವರೆಗೆ ಶ್ರೀಮತಿ ವಿಭಾ ಎಸ್. ನಾಯಕ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ. ತಬಲಾದಲ್ಲಿ ವಿಕ್ಷೇಶ್ ಪ್ರಭು ಹಾಗೂ ಹಾರ್ಮೋನಿಯಂ ನಲ್ಲಿ ಹೇಮಂತ್ ಭಾಗವತ್ ಸಾಥ್ ನೀಡಲಿದ್ದಾರೆ.ಬೆಳಿಗ್ಗೆ 9.40 ರಿಂದ 10.30 ರವರೆಗೆ ಮೂಡುಬಿದಿರೆಯ ಸ್ವಯಂ ಪ್ರಕಾಶ್ ಪ್ರಭು (ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಶಿಷ್ಯ) ಅವರಿಂದ ಕೊಳಲು ವಾದನ,ಬೆಳಿಗ್ಗೆ 10.40 ರಿಂದ…
ಉಡುಪಿ, ಫೆ.02 : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆವರಣದ ನೂತನ ಕಟ್ಟಡದ ಉದ್ಘಾಟನೆಯು ಕುತ್ಪಾಡಿ ಉದ್ಯಾವರದಲ್ಲಿ ಜ.31ರಂದು ನಡೆಯಿತು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಆಯುರ್ವೇದದಲ್ಲಿ ಯಾವುದೇ ಕಾಯಿಲೆಗೆ ಔಷಧಿ ಇಲ್ಲ ಎಂದು ಹೇಳಿಲ್ಲ. ಆದರೆ, ಆಧುನಿಕ ವೈದ್ಯ ಪದ್ಧತಿಗಳ ಆಕರ್ಷಣೆಯಿಂದ ಆಯುರ್ವೇದವನ್ನು ಮರೆಯುತ್ತಿದ್ದೇವೆ.ಆಯುರ್ವೇದವು ಅತ್ಯಂತ ಪುರಾತನವಾದ ವೈದ್ಯಕೀಯ ವ್ಯವಸ್ಥೆಯಾಗಿದ್ದು, ಯಾವುದೇ ಅಡ್ಡಪರಿಣಾಮಗಳಿಲ್ಲ, ಮತ್ತು ಇದು ರೋಗಗಳನ್ನು ಅವುಗಳ ಮೂಲದಲ್ಲಿಯೇ ಚಿಕಿತ್ಸೆ ನೀಡುತ್ತದೆ. ಎಂದರು. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಾ.ಶ್ರೀನಿವಾಸ್ ಪ್ರಸಾದ್ ಬೂದೂರು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಉಪಸ್ಥಿತರಿದ್ದರು.
ಮಂಗಳೂರು,ಫೆ.01 : ಲಕುಮಿ ಸಿನಿ ಕ್ರಿಯೇಷನ್ ವತಿಯಿಂದ ಶ್ರೀ ಕದಳಿ ಸಿನಿ ಪ್ರೊಡಕ್ಷನ್ ಇವರ ಸೂರಜ್ ಶೆಟ್ಟಿ ಕಥೆ,ಚಿತ್ರಕಥೆ ,ನಿರ್ದೇಶನ ಮಾಡುತ್ತಿರುವ “ಕಥೆ ಕೈಲಾಸ” ತುಳು ಸಿನಿಮಾದ ಮುಹೂರ್ತ ಸಮಾರಂಭ ಕದ್ರಿ ದೇವಸ್ಥಾನದಲ್ಲಿ ಶುಕ್ರವಾರ ಜರುಗಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸಿನಿಮಾಕ್ಕೆ ಕ್ಲಾಫ್ ಮಾಡಿ ಮಾತಾಡಿದರು. ಸೂರಜ್ ಶೆಟ್ಟಿ ನೇತೃತ್ವದಲ್ಲಿ ಮೂಡಿಬರಲಿರುವ ಸಿನಿಮಾ ಆದಷ್ಟು ಬೇಗ ಚಿತ್ರೀಕರಣ ನಡೆದು ತೆರೆಯ ಮೇಲೆ ಬರಲಿ ಎಂದರು. ಸಮಾರಂಭದಲ್ಲಿ ಕದ್ರಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಶುಭಾಶಂಸನೆಗೈದರು. ಶ್ರೀರಂಗ ಐತಾಳ್ ದೀಪ ಪ್ರಜ್ವಲನೆಗೈದರು. ನಿರ್ಮಾಪಕರಾದ ಕಿಶೋರ್ ಡಿ ಶೆಟ್ಟಿ, ಪುರುಷೋತ್ತಮ್ ಭಂಡಾರಿ, ಮೋಹನ್ ಕೊಪ್ಪಲ, ಪ್ರದೀಪ್ ಆಳ್ವ, ದಿವಾಕರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪ್ರಕಾಶ್ ಪಾಂಡೇಶ್ವರ, ಕದ್ರಿ ನವನೀತ ಶೆಟ್ಟಿ, ಶಶಿಧರ ಶೆಟ್ಟಿ, ಮಹಾಗಣಪತಿ ಟ್ರಾನ್ಸ್ ಪೋರ್ಟ್ ,ಆರ್ ಕೆ ಮಾಧವ ನಾಯ್ಕ್, ಬಾಳ ಜಗನ್ನಾಥ ಶೆಟ್ಟಿ, ರವಿ ರೈ ಕಳಸ, ಲೀಲಾಕ್ಷ ಕರ್ಕೇರ,…
ಮಂಗಳೂರು,ಜ.31: ಅಳಕೆ ಶ್ರೀ ನಾಗಬ್ರಹ್ಮ ದೇವಸ್ಥಾನ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ ಮತ್ತು ಅಳಕೆ ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್ (ರಿ.) ಇದರ ಸಹಯೋಗದಲ್ಲಿ ಜ. 30 ರಿಂದ ಫೆ. 01 ತನಕ ಅಳಕೆ ಶ್ರೀ ನಾಗಬ್ರಹ್ಮದೇವರ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಗಳ ವಾರ್ಷಿಕ ಜಾತ್ರಾ ಮಹೋತ್ಸವವು ಜರಗಲಿದೆ. ಈ ಪ್ರಯುಕ್ತ ಜ. 30 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ,ಮಧ್ಯಾಹ್ನ ಮಹಾಪೂಜೆ, ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಕಲಶ ಪ್ರತಿಷ್ಠೆ, ಶ್ರೀ ನಾಗಬ್ರಹ್ಮ ದೇವಸ್ಥಾನದ ಪರಿಸರದ ಮಕ್ಕಳಿಂದ ಭಕ್ತಿ ಹಾಗೂ ಜಾನಪದ ನೃತ್ಯ, ರಾತ್ರಿ ಶ್ರೀ ಸತ್ಯನಾರಾಯಣ ಪೂಜೆಯ ಮಂಗಳಾರತಿ, ಮಹಾಪೂಜೆ ನಡೆಯಿತು. ಜ. 31 ರಂದು ಬೆಳಿಗ್ಗೆ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ರಾತ್ರಿ ಶ್ರೀ ನಾಗಬ್ರಹ್ಮ ದೇವರಿಗೆ ವಿಶೇಷ ಹೂವಿನ ಪೂಜೆ, ಮಹಾಪೂಜೆ ನಡೆಯಿತು. ಜ. 01 ಶನಿವಾರ ಬೆಳಿಗ್ಗೆ ಪೂಜೆ, ನಾಗಬನದಲ್ಲಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ, ಪಂಚಾಮೃತಾಭಿಷೇಕ, ಮಧ್ಯಾಹ್ನ ಮಹಾಪೂಜೆ ಮತ್ತು…
ಮಂಗಳೂರು,ಜ.31: ರೋಹನ್ ಕಾರ್ಪೊರೇಷನ್ ಅರ್ಪಿಸುವ, ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನೆಂಟ್ ಪ್ರೊಡಕ್ಷನ್, ಎಚ್.ಪಿ.ಆರ್ ಫಿಲಂಸ್ ಹರಿಪ್ರಸಾದ್ ರೈಯವರ ಸಹಯೋಗದಲ್ಲಿ ಆನಂದ್ ಎನ್. ಕುಂಪಲರವರ ನಿರ್ಮಾಣದಲ್ಲಿ ತಯಾರಾದ ‘ಮಿಡ್ಸ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಶುಕ್ರವಾರ ಭಾರತ್ ಮಾಲ್ ನಲ್ಲಿ ಬಿಡುಗಡೆಯಾಯಿತು. ಪ್ರಾಸ್ತಾವಿಕವಾಗಿ ಮಾತಾನಾಡಿದ ದ ನಟ ವಿನೀತ್ ಕುಮಾರ್ ಅವರು, ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾ ತಂಡ ಕುಟುಂಬ ಸಮೇತರಾಗಿ ಕೂತು ನೋಡುವಂತಹ ‘ಮಿಡಲ್ ಕ್ಲಾಸ್ ಫ್ಯಾಮಿಲಿ’ ಸಿನಿಮಾ ನಿರ್ಮಿಸಿದೆ. ನೀವು ಈ ಬಿಗ್ ಬಜೆಟ್ ಸಿನಿಮಾವನ್ನು ನೋಡಿ ಪ್ರೊತ್ಸಾಹಿಸಿ, ಈ ಚಿತ್ರವನ್ನು ಗೆಲ್ಲಿಸಿ ಎಂದರು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಮಾತಾಡಿ, ತುಳುಭಾಷೆ ಬೆಳವಣಿಗೆಗೆ ತುಳು ಸಿನಿಮಾಗಳು ಬಹಳಷ್ಟು ಸಹಕಾರ ನೀಡುತ್ತಿವೆ. ತುಳು ಸಿನಿಮಾಗಳನ್ನು ನೋಡಿ ಬೆಂಬಳಿಸಿ, ಮಿಡಲ್ ಕ್ಲಾಸ್ ಫ್ಯಾಮಿಲಿ ಸಿನಿಮಾವನ್ನು ನೋಡಿ ಪ್ರೊತ್ಸಾಹಿಸಿ ಎಂದು ಹೇಳಿದರು. ರೋಹನ್ ಮೊತೆರೊ ಮಾತನಾಡಿ ಮಿಡ್ಸ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾಗಳನ್ನು ನೋಡಿ ಪ್ರೊತ್ಸಾಹಿಸಿ,…
ಮಂಗಳೂರು, ಜ.30 : ತಪಸ್ಯಾ ಫೌಂಡೇಶನ್ ವತಿಯಿಂದ ದ.ಕ. ಜಿಲ್ಲಾಡಳಿತ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಜನವರಿ 31 ರಿಂದ ಫೆಬ್ರವರಿ 2ರ ತನಕ ತಣ್ಣೀರುಬಾವಿಯ ಮಂಗಳೂರು ಸರ್ಫ್ ಕ್ಲಬ್ ಬೀಚ್ನಲ್ಲಿ ಮಂಗಳೂರು ಬೀಚ್ ಫೆಸ್ಟಿವಲ್ ಹಾಗೂ ಮಂಗಳೂರು ಟ್ರಯಾಥಾನ್ ಆಯೋಜಿಸಲಾಗಿದೆ. ಜನವರಿ 31ರಂದು ಸಂಜೆ 5.30ಗಂಟೆಗೆ ಬೀಚ್ ಫೆಸ್ಟಿವಲ್ ಉದ್ಘಾಟನಾ ಸಮಾರಂಭ ನಡೆಯಲಿದ್ದು,ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸ್ಪೀಕರ್ ಯು.ಟಿ. ಖಾದರ್, ಸಚಿವರಾದ ಎಚ್.ಕೆ.ಪಾಟೀಲ್, ಎನ್.ಚಲುವರಾಯಸ್ವಾಮಿ, ಜಿಲ್ಲೆಯ ಸಂಸದರು, ಶಾಸಕರು, ಗಣ್ಯರು ಉಪಸ್ಥಿತರಿರುವರು. ಶಾಸಕ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಪಸ್ಯಾ ಫೌಂಡೇಶನ್ನ ಸ್ಯಾಪಕಿ ಸಬಿತಾ ಶೆಟ್ಟಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಫೆಬ್ರವರಿ 1ರಂದು ಸಂಜೆ 5ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಟಾಟಾ ಸ್ಮಾರಕ ಆಸ್ಪತ್ರೆಯ ಉಪ ನಿರ್ದೇಶಕ ಡಾ. ಶೈಲೇಶ್ ಶ್ರೀಖಂಡೆ ಮತ್ತು ಕಟೀಲು ಸಂಜೀವಿನ ಆಸ್ಪತ್ರೆಯ ಡಾ. ಸುರೇಶ್ ರಾವ್ ಅವರಿಗೆ ಜೀವಮಾನ…
ಮಂಗಳೂರು: ಜ.30 :”ಮೀರಾ“ ತುಳು ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮವು ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಜರುಗಿತು. ಕಾರ್ಯಕ್ರಮವನ್ನು ಸಿನಿಮಾ ನಿರ್ಮಾಪಕ ಲಂಚುಲಾಲ್ ಕೆ.ಎಸ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ”ಮೀರಾ“ತುಳು ಸಿನಿಮಾದಲ್ಲಿ ಹೆಣ್ಣಿನ ಬದುಕಿನ ಕುರಿತಾದ ಕಥೆಯಿದೆ.ಫೆ.21ಕ್ಕೆ ನಮ್ಮ ಸಿನಿಮಾ ಬಿಡುಗಡೆಯಾಗಲಿದೆ. ಎಲ್ಲರೂ ಸಿನಿಮಾ ನೋಡಿ ನಮ್ಮನ್ನು ಬೆಂಬಲಿಸಿ ಎಂದು ಹೇಳಿದರು. ಬಾಲನಟಿ ಲಕ್ಷ್ಯ ಮಾತಾಡಿ, ನನಗೆ ಸಿನಿಮಾದಲ್ಲಿ ನಟಿಸಲು ಆಸಕ್ತಿಯಿತ್ತು. ಈ ಸಿನಿಮಾ ನನಗೆ ಅವಕಾಶ ನೀಡಿತು. ನನಗೆ ತುಂಬಾ ಖುಷಿಯಾಗುತ್ತಿದೆ ಎಂದರು.ನಟಿ ಇಶಿತಾ ಶೆಟ್ಟಿ ಮಾತಾಡಿ, ನಾನು ಕಾಸರಗೋಡು ಮೂಲದವಳು. ನನಗೆ ಈ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ.ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದರು. ಸಮಾರಂಭದಲ್ಲಿ ನಟ ಮಂಜು ರೈ ಮೂಳೂರು ಅವರು ಮಾತಾಡಿ, ತುಳು ಚಿತ್ರವನ್ನು ನೋಡಲು ಸಿನಿಮಾ ಮಂದಿರಕ್ಕೆ ಜನರು ಬರುವುದಿಲ್ಲ. ಈ ವೇಳೆಯಲ್ಲಿ ಲಂಚುಲಾಲ್ ದೊಡ್ಡ ಮನಸ್ಸು ಮಾಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಚಿತ್ರತಂಡವನ್ನು…