Author: admin

ಬೆಂಗಳೂರು, ಆ. 14 : ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ, ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಸಂಬಂಧ ಎಐಸಿಸಿ ಆದೇಶ ಹೊರಡಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಸೌಮ್ಯ ರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಜೊತೆಗೆ ಚಂಡೀಗಡ ಮತ್ತು ಅರುಣಾಚಲ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ನೇಮಕವನ್ನು ಮಾಡಲಾಗಿದೆ. ಪುಷ್ಪಾ ಅಮರನಾಥ್ ಹಾಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದರು. ಇದೀಗ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಸೌಮ್ಯ ರೆಡ್ಡಿ ಅವರು 2018 ರಲ್ಲಿ ಜಯನಗರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಆದಾಗ್ಯೂ, ಅವರು ಮೇ 2023 ರಲ್ಲಿ ಕರ್ನಾಟಕದಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೇವಲ 16 ಮತಗಳಿಂದ ಸೋತರು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ತೇಜಸ್ವಿ ಸೂರ್ಯ ವಿರುದ್ಧ…

Read More

ಮಂಗಳೂರು,ಆ.13 : ತುಳು ರಂಗಭೂಮಿ ನಟ ಅಶೋಕ್ ಶೆಟ್ಟಿ ಅಂಗ್ಲಮೊಗರು ಆ. 12, ಸೋಮವಾರ ನಿಧನರಾದರು. ಅವರಿಗೆ 53ವರ್ಷ ವಯಸ್ಸಾಗಿತ್ತು. ಅಂಬ್ಲಮೊಗರುವಿನ ಮನೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ. ವೃತ್ತಿಪರ ಕಲಾವಿದರಾದ ಅಶೋಕ್ ಇವರು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಸಾರಥ್ಯದ ಕಲಾಸಂಗಮ ನಾಟಕ ತಂಡದಲ್ಲಿ ಸುದೀರ್ಘ ಕಾಲ ಕಲಾ ಸೇವೆ ಸಲ್ಲಿಸಿದ್ದರು. ಇವರು ಒರಿಯರ್ದೊರಿ ಅಸಲ್ ತುಳು ಸಿನಿಮಾದಲ್ಲಿ ನಿರ್ವಹಿಸಿದ ತೆಂಗಿನ ಕಾಯಿ ಕೀಳುವ ನಾಥುವಿನ ಪಾತ್ರ ಜನಮನ್ನಣೆ ಗಳಿಸಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ.

Read More

ಉಡುಪಿ, ಆ.12 : ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ರಾಷ್ಟ್ರೀಯ ಸಹಕಾರಿ ನೀತಿ ಆಯೋಗದ ಅಧ್ಯಕ್ಷ ಸುರೇಶ್ ಪಿ. ಪ್ರಭು ಉಡುಪಿಯ ಶ್ಯಾಮಿಲಿ ಸಭಾಂಗಣದಲ್ಲಿ ಅವರು ಶನಿವಾರ ವಿದ್ಯುಕ್ತ ಚಾಲನೆ ನೀಡಿದರು. ನಂತರ ಮಾತನಾಡಿ ಸುರೇಶ್ ಪಿ. ಪ್ರಭು ಅವರು ಸಹಕಾರಿ ವ್ಯವಸ್ಥೆಯಿಂದ ಭಾರತದ ಆರ್ಥಿಕತೆಯ ಉತ್ತೇಜನ ಸಾಧ್ಯ. ಇಂದಿನ ದಿನಮಾನದಲ್ಲಿ ಡಿಜಿಟಲ್ ಆರ್ಥಿಕತೆ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕ. ಈ ನಿಟ್ಟಿನಲ್ಲಿ ಸಣ್ಣ ಸಹಕಾರಿ ಸಂಘಗಳೂ ಹೊರಗುತ್ತಿಗೆ ಆಧಾರದಲ್ಲಿ ಬಳಸಲು ಸಾಧ್ಯವಾಗುವಂಥ ಸಾಮಾನ್ಯ ತಂತ್ರಜ್ಞಾನವೊಂದನ್ನು ಕೇಂದ್ರ ಸರಕಾರ ಜಾರಿಗೊಳಿಸಬೇಕಾದ ಆವಶ್ಯಕತೆ ಇದೆ ಎಂದು ಹೇಳಿದರು. ನೂತನ ಮಹಾಲಕ್ಷ್ಮಿ ಪವರ್ ಲೋನ್ ಮಂಜೂರಾತಿ ಪತ್ರಗಳನ್ನು ವಿತರಿಸಿದ ಮೀನುಗಾರಿಕಾ ಸಚಿವ ಮಾಂಕಳ ಎಸ್ ವೈದ್ಯ ಮಾತನಾಡಿ, ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಜಿಲ್ಲೆಯ ಮೀನುಗಾರರು ಬದುಕು ಕಟ್ಟಿಕೊಳ್ಳಲು ಅರ್ಥಿಕ ಸಹಾಯ ಮಾಡುತ್ತಿರುವ ಕಾರ್ಯಕ್ಕೆ ಶ್ಲಾಘನೀಯ ಎಂದು ಹೇಳಿದರು. ಡಿಜಿಟಲ್ ಬ್ಯಾಂಕಿಂಗ್ ವಿಡಿಯೋ ಅನಾವರಣವನ್ನು ಸಂಸದ ಕೋಟ ಶ್ರೀನಿವಾಸ…

Read More

ಮಂಗಳೂರು, ಆ. 11 : ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ ಅವರ ಶಿಷ್ಯವೃಂದದಿಂದ ನಗರದ ಉರ್ವ ಸ್ಟೋರ್ ಡಾ|| ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ಶನಿವಾರ ಹಾಗೂ ರವಿವಾರ ಯಕ್ಷ ಸಿದ್ದಿ ದಶಯಾನ ಕಾರ್ಯಕ್ರಮ ನಡೆಯಿತು. ಯಕ್ಷ ಸಿದ್ದಿ ದಶಯಾನ ಕಾರ್ಯಕ್ರಮವನ್ನು ಯಕ್ಷಗಾನ ವಿದ್ವಾಂಸ ವಾಸುದೇವ ರಂಗಾ ಭಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು , ರಕ್ಷಿತ್ ಶೆಟ್ಟಿ ಪಡ್ರೆ ಅವರು ಬೇರೆ ಬೇರೆ ಕಡೆಯ ಶಿಷ್ಯವೃಂದವನ್ನು ಒಟ್ಟುಗೂಡಿಸಿ  ಸಿದ್ಧಿ ದಶಯಾನ ಕಾರ್ಯಕ್ರಮ ಆಯೋಜಿಸಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಸಿದ್ಧಿ ದಶಯಾನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂ ಅಧ್ಯಕತೆ ವಹಿಸಿ ಮಾತನಾಡಿದ ಅವರು, ಇಂದಿನ ಯುವಜನತೆಗೆ ಕರಾವಳಿಯ ಸಾಂಸ್ಕೃತಿಕ ಕಲೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಯಕ್ಷಗಾನ ತಂಡಗಳಿಂದ ಆಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯಕ್ಷ ಸಾಧಕರನ್ನು ಸನ್ಮಾನಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಗಣೇಶ್ ಕುಲಾಲ್, ಕದ್ರಿ…

Read More

ಮಂಗಳೂರು, ಅ. 11: ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಶನ್ ಮಂಗಳಾದೇವಿ ವಲಯ ವತಿಯಿಂದ ಸಿಎಸ್ಐ ಕಾಂತಿ ಚರ್ಚ್ ಜಪ್ಪುವಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಆ, 11 ರವಿವಾರ ಜರಗಿತು. ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿಅಧ್ಯಾಪಕರು ಮತ್ತು ನಿರೂಪಕರು ಮಂಜುಳಾ ಶೆಟ್ಟಿ ಅವರು ಆಟಿ ತಿಂಗಳ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಸಮಾರಂಭದಲ್ಲಿ ತಣ್ಣೀರುಬಾವಿ, ನಂದಿಗುಡ್ಡೆ ರುದ್ರಭೂಮಿ ಸೇವಕರು ಆನಂದ್ ಗಿರಿ ಅವರನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಟೈಲರ್ ಅಸೋಸಿಯೇಶನ್ ಮಂಗಳಾದೇವಿ ವಲಯ ಉಪಾಧ್ಯಕ್ತರು ಅನಂತರಾಮ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಿಎಸ್ಐ ಕಾಂತಿ ಚರ್ಚ್ನ ವಂ| ಗ್ಯಾಬ್ರಿಯಲ್ ರೋನಿತ್ ಸಾಮುವೇಲ್ ,ಅಸೋಸಿಯೇಶನ್ ರಾಜ್ಯಾಧ್ಯಕ್ಷ ನಾರಾಯಣ ಬಿ.ಎ., ಟೈಲರ್ ಅಸೋಸಿಯೇಶನ್ ಮಂಗಳೂರು ಇದರ ಕ್ಷೇತ್ರ ಸಮಿತಿ ಅಧ್ಯಕ್ಷ ಹರೀಶ್ ರೈ , ವಿದ್ಯಾ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

Read More

ಹೊಸದಿಲ್ಲಿ : ಕೇಂದ್ರ ಸರಕಾರವು ನೂತನ ಸಂಪುಟ ಕಾರ್ಯದರ್ಶಿಯನ್ನಾಗಿ ಹಿರಿಯ ಐಎಎಸ್ ಅಧಿಕಾರಿ ಟಿ.ವಿ.ಸೋಮನಾಥನ್ ಅವರನ್ನು ಶನಿವಾರ ನೇಮಕಗೊಳಿಸಿದೆ. ಅವರು ಪ್ರಸ್ತುತ ಹಣಕಾಸು ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಸಂಪುಟ ಕಚೇರಿಯಲ್ಲಿ ವಿಶೇಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸೋಮನಾಥನ್ ಅವರು ಆಗಸ್ಟ್ 30 ರಂದು ಸಂಪುಟ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸೋಮನಾಥನ್ ಅವರನ್ನು ಎರಡು ವರ್ಷಗಳ ಅವಧಿಗೆ ಸಂಪುಟ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

Read More

ವಿಟ್ಲ ಆ. 9 : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ  ಸಮಿತಿ ವತಿಯಿಂದ ಒಡಿಯೂರು ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವ ಕಾರ್ಯಕ್ರಮವು ಗುರುವಾರ ಜರಗಿತು. ಈ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗಳು ಆಶೀರ್ವಚನ ನೀಡಿ, ಆಧ್ಯಾತ್ಮದ ಜತೆ ಲೋಕಹಿತದ ಕಾರ್ಯ ಮಾಡಿದಾಗ ಆನಂದ ಲಭ್ಯವಾಗುತ್ತದೆ. ಗುರುಸೇವೆಯೆಂದರೆ ತತ್ವದ ಆರಾಧನೆ. ಜನ, ಧನ ಶಾಶ್ವತವಲ್ಲ. ಜನಸೇವೆ, ಸಮಾಜಸೇವೆ ಮೂಲಕ ಜೀವನ ಸಾರ್ಥಕಗೊಳಿಸಬೇಕು ಎಂದು ಸ್ವಾಮೀಜಿ ನುಡಿದರು. ಮಾಣಿಲ ಶ್ರೀಧಾಮ – ಶ್ರೀ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಒಡಿಯೂರು ಶ್ರೀಗಳ ಗ್ರಾಮವಿಕಾಸ ಆದರ್ಶವಾಗಿದೆ. ಸಮಾಜಕ್ಕೆ ಉಪಯುಕ್ತವಾಗಿದೆ. ಯೋಜನೆಯಿಂದ ಅನೇಕ ಬಡ ದೀನ ದಲಿತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಆಗುತ್ತಿದೆ ಎಂದು ಸ್ವಾಮೀಜಿ ಹೇಳಿದರು. ಶ್ರೀ ಗುರುದೇವದತ್ತ ಸಂಸ್ಥಾನಮ್ ಇಲ್ಲಿನ ಸಾಧ್ವೀ ಶ್ರೀ ಮಾತಾನಂದಮಯೀ ಅವರು ಆಶೀರ್ವಚನ ನೀಡಿ, ಒಡಿಯೂರು ಶ್ರೀಗಳವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಸಹಕಾರ ಕ್ಷೇತ್ರದಲ್ಲಿ…

Read More

ಮಂಗಳೂರು, ಆ. 8 : ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ ಅವರ ಶಿಷ್ಯವೃಂದದ ಯಕ್ಷ ಸಿದ್ಧಿ ಸಂಭ್ರಮ- ಸಿದ್ದಿ ದಶಯಾನ ಕಾರ್ಯಕ್ರಮವನ್ನು ಆ.10 ಮತ್ತು 11ರಂದು ನಗರದ ಉರ್ವಸ್ಟೋರ್ ಡಾ|ಬಿ.ಆರ್. ಅಂಬೇಡ್ಕ ರ್ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಿದ್ಧಿ ದಶಯಾನ ಸಮಿತಿಯ ರವಿಪ್ರಸಾದ್ ಶೆಟ್ಟಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ತರಗತಿ ನಡೆಸುತ್ತಿರುವ ರಕ್ಷಿತ್ ಪಡ್ರೆ ಅವರ ಯಕ್ಷ ಶಿಕ್ಷಣ ಕಾರ್ಯಕ್ಕೆ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಮಂದಿ ಶಿಷ್ಯರು ಭಾಗವಹಿಸಲಿದ್ದಾರೆ. ದಶಮಾನೋತ್ಸವ ಅಂಗವಾಗಿ ವಿವಿಧೆಡೆಯ ಶಿಷ್ಯವೃಂದ ಒಗ್ಗೂಡಿಸಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆ. 10ರಂದು ಬೆಳಗ್ಗೆ 9ಕ್ಕೆ ಚೌಕಿಪೂಜೆ, ಪೂರ್ವರಂಗ ನಡೆಯಲಿದೆ. ಬೆಳಗ್ಗೆ 10ಕ್ಕೆ ಯಕ್ಷಗಾನ ವಿದ್ವಾಂಸ ವಾಸುದೇವ ರಂಗಾ ಭಟ್ ಅವರು  ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸುಧೀರ್ ಶೆಟ್ಟಿ ಅಧ್ಯಕ್ಷತೆ ವಹಿಸುವರು.ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ ಅವರ ಶಿಷ್ಯವೃಂದದ ಯಕ್ಷ ಸಿದ್ಧಿ…

Read More

ಮಂಗಳೂರು ಆ. 7 : ನಗರದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಇಎನ್‌ಟಿ, ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ‘ಐಎಓಎಚ್‌ಎನ್‌ಎಸ್ 2024 ಮಂಗಳೂರು’ ಇಂಡಿಯನ್ ಅಕಾಡೆಮಿ ಆಫ್ ಓಟೋರಿಗೋಲಾರಿಂಗೋಲಜಿ ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆಯ 10 ನೇ ರಾಷ್ಟ್ರೀಯ ಸಮ್ಮೇಳನವನ್ನು ಮಂಗಳೂರಿನ ಡಾ| ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ನನ್ ಸೆಂಟರ್‌ನಲ್ಲಿ ಆ. 8 ರಿಂದ 11 ವರೆಗೆ ಆಯೋಜಿಸಲಾಗಿದೆ ಎಂದು ಕೆಎಂಸಿ ಮಂಗಳೂರು ಇದರ ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ದೇವಿಪ್ರಸಾದ್ ಹೇಳಿದರು. ಪತ್ರಿಕಾಭವನ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಓಟೊರಿನೊಲಾರಿಂಗೋಲಜಿ ಟುವರ್ಡ್ಸ್ ಅಕಾಡೆಮಿಕ್ ಮತ್ತು ರಿಸರ್ಚ್ ಎಕ್ಸಲೆನ್ಸ್ 2024′ ನಡೆಯುವ ಈ ವಿಷಯದಲ್ಲಿ ಸಮ್ಮೇಳನದಲ್ಲಿ ದೇಶವಿದೇಶಗಳ ಸುಮಾರು 400ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆ. 9ರಂದು ಸಂಜೆ 7ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ನ ಪ್ರೊ ಚಾನ್ಸಿಲ ಡಾ| ಎಚ್.ಎಸ್. ಬಳ್ಳಾಲ್, ಕೆಎಂಸಿ ಡೀನ್ ಡಾ| ಉನ್ನಿಕೃಷ್ಣನ್, ಮಾಹೆ…

Read More

ಢಾಕಾ, ಆ.06 : ಬಾಂಗ್ಲಾದೇಶದಲ್ಲಿ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರುವ ಬೆನ್ನಲ್ಲೇ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದೀಗ ಶೇಖ್ ಹಸೀನಾ ಅವರ ರಾಜೀನಾಮೆ ಬೆನ್ನಲ್ಲೇ ಮಿಲಿಟರಿ ಆಡಳಿತ ಪ್ರಾರಂಭವಾಗಿದೆ. ಪ್ರöತಿಭಟನಾಕಾರರು ಶೇಖ್ ಹಸೀನಾ ಅವರ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಕಾರರು ಮನೆಗೆ ನುಗ್ಗಿ ಪ್ರತಿಭಟನೆ ಮಾಡುವ ಮುನ್ನವೇ ಶೇಖ್ ಹಸೀನಾ ರಾಜೀನಾಮೆ ನೀಡಿ ವಿದೇಶಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೆಲ ಮಾಧ್ಯಮಗಳ ಪ್ರಕಾರ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ. ಬಾಂಗ್ಲಾದೇಶದ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ನ ಬೆಂಬಲಿಗರ ನಡುವೆ ಈ ಘರ್ಷಣೆ ನಡೆದಿದೆ. ಬಾಂಗ್ಲಾದೇಶದ ಢಾಕಾದಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ಹಿಂಸಾಚಾರದಲ್ಲಿ 14 ಪೊಲೀಸರು ಸೇರಿದಂತೆ ಸುಮಾರು 100 ಮಂದಿ ಸಾವನ್ನಪ್ಪಿರುತ್ತಾರೆ ಎಂದು ಹೇಳಲಾಗಿದೆ.

Read More