Author: admin

ಕೋಟ, ಆ.27: ಸಾಲಿಗ್ರಾಮ ಪಟ್ಟಣ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷರಾಗಿ ಮಾರಿಗುಡಿ ವಾರ್ಡ್ ಬಿಜೆಪಿಯ ಸದಸ್ಯೆ ಸುಕನ್ಯಾ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಕಡ ತೆಂಕುಹೋಳಿ ವಾರ್ಡ್ನ ಬಿಜೆಪಿಯ ಗಿರಿಜಾ ಪೂಜಾರಿ ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ನ 10 ನೇ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ -ಅ (ಮಹಿಳೆ)ಗೆ ಮೀಸಲಿರಿಸಿ ಆಗಸ್ಟ್ 27ರಂದು ಚುನಾವಣೆ ನಿಗದಿಪಡಿಸಲಾಗಿತ್ತು. ಅದರಂತೆ ಮಂಗಳವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಚುನಾವಣೆ ನಡೆಯಿತು. ಒಟ್ಟು ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ 16 ಸದಸ್ಯರಿದ್ದು, ಆ ಪೈಕಿ ಬಿಜೆಪಿ 10, ಕಾಂಗ್ರೆಸ್ 5 ಸದಸ್ಯರು ಮತ್ತು 1 ಪಕ್ಷೇತರ ಸದಸ್ಯರನ್ನು ಹೊಂದಿದೆ. ಚುನಾವಣೆಯಲ್ಲಿ ಶಾಸಕರಿಗೆ ಮತದಾನದ ಅವಕಾಶವಿರುವುದರಿಂದ ಇಂದು ನಡೆದ ಚುನಾವಣೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರೂ ಮತ ಚಲಾಯಿಸಿದರು. ಆದರೆ ಪಕ್ಷೇತರ ಸದಸ್ಯೆ ರತ್ನಾ ನಾಗರಾಜ್ ಗಾಣಿಗ ಮತದಾನ ನಿರಾಕರಿಸಿದರು. ಚುನಾವಣೆಯ ಬಳಿಕ…

Read More

ಕುಂದಾಪುರ, ಆ.26 : ಭಾರೀ ಗಾಳಿ ಮಳೆಗೆ ಮರ ಬಿದ್ದ ಪರಿಣಾಮ ರಸ್ತೆ ಬದಿಯಲ್ಲಿ ಕಟ್ಟಿದ್ದ ದನ ಹಾಗೂ ಅದನ್ನು ಬಿಡಿಸಲು ಹೋಗಿದ್ದ ಮಹಿಳೆ ಮೃತಪಟ್ಟಿದ್ದ ಘಟನೆ ಕುಂದಾಪುರ ತಾಲೂಕಿನ ಕೆಂಚನೂರು ನೀರಿನ ಟ್ಯಾಂಕಿ ಬಳಿ ರವಿವಾರ ನಡೆದಿದೆ. ಕೆಂಚನೂರು ಗ್ರಾಮದ ಮೈಲಾರಿ ನಿವಾಸಿ ಅಣ್ಣಪ್ಪಯ್ಯ ಆಚಾರಿ ಎಂಬುವರ ಪತ್ನಿ ಸುಜಾತ ಆಚಾರ್ತಿ (53) ಮೃತರು. ರವಿವಾರ  ಸುಜಾತಾ ಆಚಾರ್ತಿ ತಮ್ಮ ಮನೆಯ ಹಾಲು ಕರೆಯುವ ಹಸುವನ್ನು ಮನೆ ಸಮೀಪದ ರಸ್ತೆ ಬದಿಯಲ್ಲಿ ಮೇಯಲೆಂದು ಕಟ್ಟಿದ್ದು, ವಿಪರೀತ ಗಾಳಿ ಮಳೆ ಬೀಸುತ್ತಿರುವ ಹಿನ್ನೆಲೆಯಲ್ಲಿ ಅಂದು ಸಂಜೆ ದನವನ್ನು ಬಿಡಿಸಿ ಕೊಟ್ಟಿಗೆಗೆ ತರಲೆಂದು ಹೋಗಿದ್ದರು. ಈ ವೇಳೆ ಸುಜಾತಾ ಆಚಾರ್ತಿ ಅವರ ಮೇಲೆ ಮರ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಕುಂದಾಪುರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಅಲ್ಲಿ ಸುಜಾತ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು, ಆ. 25: ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿ ಸುತ್ತಿದ್ದೇನೆ. ತುಳು ಭಾಷೆಗೆ ಅಧಿಕೃತ ಸ್ಥಾನಮಾ ನ  ನೀಡುವ ಬಗ್ಗೆ  ಶ್ರಮಿಸುವುದಾಗಿ ಸ್ಪೀಕರ್ ಯು.ಟಿ. ಖಾದರ್ ತುಳುನಾಡ ಜಾನಪದ ಉಚ್ಚಯ 2024 ಕಾರ್ಯಕ್ರಮದಲ್ಲಿ ಹೇಳಿದರು. ಕುದ್ದುಲ ರಂಗರಾವ್ ಪುರಭವನದಲ್ಲಿ ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ವತಿಯಿಂದ ಶನಿವಾರ ಜರಗಿದ ತುಳುನಾಡ ‘ಜಾನಪದ ಉಚ್ಚಯ 2024’ರ ಸಮಾರೋಪದಲ್ಲಿ ಹಿರಿಯ ನಟ ನಿರ್ಮಾಪಕ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಮಾತನಾಡಿ, ವಿಧಾನಸಭೆಯಲ್ಲಿ ತುಳು ಭಾಷೆಯ ಬಗ್ಗೆ ಚರ್ಚೆ ನಡೆದಿದೆ. ಲೋಕ ಸಭೆಯಲ್ಲೂ ತುಳು ಭಾಷೆಯ ಬಗ್ಗೆ ಚರ್ಚೆ ನಡೆಯಬೇಕು. ರಾಜಕೀಯ ಮರೆತು ಎಲ್ಲರೂ ಒಂದಾಗಿ ಭಾಷೆಯ ಸ್ಥಾನಮಾನಕ್ಕೆ ಶ್ರಮಿಸಬೇಕು ಎಂದರು. ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ…

Read More

ಮಂಗಳೂರು, ಆ. 24 : ಲಕುಮಿ ಸಿನಿ ಕ್ರಿಯೇಷನ್ ಮತ್ತು ಲೋ ಬಜೆಟ್ ಪ್ರೊಡಕ್ಷನ್ ನಿರ್ಮಾಣದ ಹರ್ಷಿತ್ ಸೋಮೇಶ್ವರ ನಿರ್ದೆಶನದ ಅನರ್ಕಲಿ ತುಳು ಸಿನೆಮಾ ಶುಕ್ರವಾರ ಬಿಡುಗಡೆಗೊಂಡಿದೆ. ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ ಮಾತಾನಾಡಿ ಒಳ್ಳೆಯ ಸಿನೆಮಾ ಹಾಗೂ ಒಳ್ಳೆಯ  ಪ್ರಯತ್ನವನ್ನು ತುಳುನಾಡಿನ ಪ್ರೇಕ್ಷಕರು ಖಂಡಿತ ಬೆಂಬಲಿಸುತ್ತಾರೆ. ಅನರ್ಕಲಿ ಸಿನೆಮಾ ನೋಡಿ ಪ್ರೋತ್ಸಾಹಿಸಿ ಎಂದರು. ಚಿತ್ರದ ನಟ ಅರವಿಂದ್ ಬೋಳಾರ್ ಮಾತನಾಡಿ , ಪ್ರೇಕ್ಷಕರು ಥಿಯೇಟರ್ಗೆ ಬಂದು ಸಿನೆಮಾಗಳನ್ನು ನೋಡಿದಲ್ಲಿ ನಿರ್ಮಾಪಕ ಹಾಕಿದ ಬಂಡವಾಳ ಬಂದುಬಿಡುತ್ತದೆ. ಇದರಿಂದ ನಿರ್ಮಾಪಕ ಲಾಸ್ ಆಗಲ್ಲ ಎಂದರು. ಕಾರ್ಯಕ್ರಮದಲ್ಲಿ ಕಿಶೋರ್ ಡಿ.ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ನವನೀತ್ ಶೆಟ್ಟಿ ಆರ್. ಧನರಾಜ್, ಭೋಜರಾಜ ವಾಮಂಜೂರು, ಚಂದ್ರಶೇಖರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಲಂಚುಲಾಲ್, ವಿಜಯ್ ಶೋಭರಾಜ್ ಪಾವೂರು, ಮಧುರಾ ಆರ್.ಜೆ., ಪುರುಷೋತ್ತಮ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಭಂಡಾರಿ…

Read More

ಉಡುಪಿ, ಆ.23 : ನಗರಸಭೆ ಅಧ್ಯಕ್ಷರಾಗಿ ಬಿಜೆಪಿಯ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷೆಯಾಗಿ ಬಿಜೆಪಿಯ ರಜನಿ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಭವನದಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ ಚಂದ್ರ ಈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಈ ಎರಡು ಸ್ಥಾನಗಳಿಗೆ ಕ್ರಮವಾಗಿ ಗುಂಡಿಬೈಲು ವಾರ್ಡ್ ನ ಪ್ರಭಾಕರ ಪೂಜಾರಿ ಹಾಗೂ ಒಳಕಾಡು ವಾರ್ಡ್ ನ ರಜನಿ ಹೆಬ್ಬಾರ್ ನಾಮಪತ್ರ ಸಲ್ಲಿಸಿದ್ದರು. ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಚುನಾವಣಾಧಿಕಾರಿ ಘೋಷಿಸಿದರು. ಈ ಸಂದರ್ಭದಲ್ಲಿ ಡಾ. ರಾಯಪ್ಪ ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಪಡಿಸಲಾಗಿತ್ತು.

Read More

ಕಾಸರಗೋಡು, ಆ.22  : ಬೈಕ್ ಮತ್ತು ಕಾರು ನಡುವೆ ಅಪಘಾತ  ಸಂಭವಿಸಿ  ಯುವಕನೋರ್ವ ಮೃತಪಟ್ಟ ಘಟನೆ ಗುರುವಾರ ಸಂಜೆ ಚೆರ್ಕಳ ಕೆ .ಕೆ ಪುರದಲ್ಲಿ ನಡೆದಿದೆ. ಕುಂಬಳೆ ಮೊಗ್ರಾಲ್ ಖುತುಬಿ ನಗರದ ಅಹಮ್ಮದ್ ಕಬೀರ್ ( 30) ಮೃತರು. ಸಂಬಂಧಿಕರೊಬ್ಬರ ವಿವಾಹ ಆಮಂತ್ರಣಕ್ಕೆ ತೆರಳಿ ಮರಳುತ್ತಿದ್ದಾಗ ಅಪಘಾತ ನಡೆದಿದ್ದು,ಗಂಭೀರ ಗಾಯಗೊಂಡ ಕಬೀರ್ ರನ್ನು ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ  ಮೃತಪಟ್ಟಿದ್ದಾರೆ ಎನ್ನಲಾಗಿದೆ . ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬಂಟ್ವಾಳ , ಆ.21 : ಯಕ್ಷಗಾನ ಸಂಘಟಕ ಕಲಾಪೋಷಕ ಕುರಿಯ ಗೋಪಾಲಕೃಷ್ಣ ಶಾಸ್ತ್ರೀ ( 65)  ಅವರು ಅ. 21ರಂದು ಹೃದಯಾಘಾತದಿಂದ ನಿಧನರಾದರು. ಕುರಿಯ ಹವ್ಯಕ ಘಟಕದ ಗುರಿಕ್ಕಾರರಾಗಿ, ಸ್ವರ್ಣ ಭಿಕ್ಷಾ ಉತ್ಸವದ ಗೌರವಾಧ್ಯಕ್ಷರಾಗಿ,ಕೋಳ್ಯೂರ ಹವ್ಯಕ ವಲಯ ಅಧ್ಯಕ್ಷರಾಗಿ ಹತ್ತು ಹಲವು ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ನಿರ್ವಹಿಸಿದ್ದರು.

Read More

ಕಾಸರಗೋಡು, ಆ.20 : ವಿದ್ಯುತ್ ಶಾಕ್ ತಗುಲಿ ಯಶವಂತ ಎಂಬವರು ಸಾವನ್ನಪ್ಪಿದ ಘಟನೆ ಮಂಜೇಶ್ವರ ಹೊಸಬೆಟ್ಟುವಿನಲ್ಲಿ ಸೋಮವಾರ ನಡೆದಿದೆ. ಮಂಜೇಶ್ವರ ಹೊಸಬೆಟ್ಟುವಿನ ನಿವಾಸಿ ಯಶವಂತ (21) ಮೃತರು. ಸಂಜೆ ಮನೆಯ ಟೆರೇಸ್ ನಲ್ಲಿ ಬಿದ್ದಿದ್ದ ಮಡಲನ್ನು ತೆಗೆಯಲು ತೆರಳಿದ್ದ ಯಶವಂತ ಅವರು, ಮರದ ಹತ್ತಿರದಲ್ಲೇ ಹಾದು ಹೋಗಿದ್ದ ಹೈಟೆನ್ಷನ್ ತಂತಿಯಿಂದ ಶಾಕ್ ತಗುಲಿ ಅಲ್ಲೇ ಕುಸಿದು ಬಿದ್ದಿದ್ದಾನೆ. ಯಶವಂತ ಸುಮಾರು ಹೊತ್ತು ಕಳೆದರೂ ಮರಳಿ ಬಾರದ ದಿದ್ದುದರಿಂದ ಸಹೋದರಿ ಟೆರೇಸ್ ಗೆ ಹತ್ತಿ ನೋಡಿದಾಗ ಯಶವಂತ ಬಿದ್ದಿರುವುದು ಕಂಡುಬಂದಿದೆ.ಬಳಿಕ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಯಶವಂತ ಅವರು ಮೃತ ಪಟ್ಟಿದ್ದರು ಎನ್ನಲಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Read More

ಮೂಡುಬಿದಿರೆ, ಆ. 19 : ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ‘ರೈತ ಸಿರಿ’ ನೂತನ ಕಟ್ಟಡವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಉದ್ಘಾಟಿಸಿದರು. ಹವಾನಿಯಂತ್ರಿತ ಬ್ಯಾಂಕಿಂಗ್ ಕಚೇರಿಯನ್ನು ಶಾಸಕರಾದ ಉಮಾನಾಥ ಎ.ಕೋಟ್ಯಾನ್, ‘ವಜ್ರಸಿರಿ’ ಸಭಾಭವನವನ್ನು ಸಂಸದರಾದ ಕ್ಯಾ| ಬ್ರಿಜೇಶ್ ಚೌಟ, ಹಾಗೂ ಗೋದಾಮು ಮಾರಾಟ ಮಳಿಗೆಯನ್ನು ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು. ನಂತರ ಮಾತನಾಡಿದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು, ಅವಿಭಜಿತ ದ.ಕ. ಜಿಲ್ಲೆಯ ರೈತರು, ಕೃಷಿಕರು ಪಡೆದ ಸಾಲವನ್ನುಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಕ್ಶೇತ್ರವನ್ನು ಬಲಗೊಳಿಸುತ್ತಿದ್ದಾರೆ. ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ತಮ್ಮ ಕುಟುಂಬದ ಆರ್ಥಿಕ ಸಶಕ್ತತೆಗೆ ವಿಶೇಷ ಕೊಡುಗೆ ನೀಡುತ್ತಲಿದ್ದಾರೆ. ಸಹಕಾರಿ ಸಂಘಗಳು ತಮ್ಮ ಆರ್ಥಿಕ ಶಕ್ತಿಯನ್ನು ವರ್ಧಿಸಿಕೊಳ್ಳುತ್ತಿದ್ದು ಇದಕ್ಕೆ ಕೇಂದ್ರ ಸರಕಾರವೂ ವಿಶೇಷ ಪ್ರೋತ್ಸಾಹ ನೀಡುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ…

Read More

ಮಂಗಳೂರು,ಆ.18 : ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನಗಳ ಯುವರ್ ಪ್ರೆಸ್ಟೀಜ್ ಶೋ ರೂಮ್ ಜಪ್ಪಿನಮೊಗರುವಿನಲ್ಲಿ ಆಗಸ್ಟ್ 16, ಶುಕ್ರವಾರ ಉದ್ಘಾಟನೆಗೊಂಡಿತು. ಯುವರ್ ಪ್ರೆಸ್ಟೀಜ್ ಶೋ ರೂಮ್ ನಲ್ಲಿ ನೂತನ ಸ್ಯಾನಿಟರಿಗಳು ಲಭ್ಯವಿದೆ. ಯುವರ್ ಪ್ರೆಸ್ಟೀಜ್ ಶೋ ರೂಮ್ ಇದರ ಉದ್ಘಾಟನೆಯನ್ನು ವಿಧಾನಸಭೆಯ ಸಭಾಧ್ಯಕ್ಷರು ಯು ಟಿ ಖಾದರ್ ಅವರು ರಿಬ್ಬನ್ ತುಂಡರಿಸುವ ಮೂಲಕ ನೆರವೇರಿಸಿದರು. ನಂತರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ನಂತರ ಯುವರ್ ಪ್ರೆಸ್ಟೀಜ್ ಶೋ ರೂಮ್ ನ ಸಂಸ್ಥಾಪಕರು ಶಂಶುದ್ದೀನ್ ಕಾರ್ಯಕ್ರಮದಲ್ಲಿ ಮಾತಾಡಿದರು. ಕಾರ್ಯಕ್ರಮದಲ್ಲಿ ಸ್ಪೀಕರ್ ಯುಟಿ ಖಾದರ್, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಕಣಚೂರು ಯು. ಕೆ.ಮೋನು , ಮಾಜಿ ಮೇಯರ್ ಕೆ. ಅಶ್ರಫ್ , ಮ.ನಪಾ. ಸದಸ್ಯರು ವೀಣಾ ಮಂಗಳಾ, ದ.ಕ. ಕಾಂಗ್ರಸ್ ಸಮಿತಿ ಸದಸ್ಯರು ಪದ್ಮರಾಜ್ ರಾಮಯ್ಯ, ಮಾಜಿ ಸಚಿವರು ಕೃಷ್ಣ ಜೆ. ಪ್ಯಾಲೆಮಾರ್, ಯುವರ್ ಪ್ರೆಸ್ಟೀಜ್ ಶೋ ರೂಮ್ ನ ಸಂಸ್ಥಾಪಕರು ಶಂಶುದ್ದೀನ್, ಸಹ-ಸಂಸ್ಥಾಪಕರಾಗಿ ಬಶೀರ್. ಇತರ ಪಾಲುದಾರರು ಮೊದಲಾದವರು ಉಪಸ್ಥಿತರಿದ್ದರು. ಯುವರ್ ಪ್ರೆಸ್ಟೀಜ್…

Read More