Subscribe to Updates
Get the latest creative news from FooBar about art, design and business.
Author: admin
ಮಂಗಳೂರು, ಏ.9 : ಮಾರ್ಚ್ 28 ರಿಂದ 30 ರವರೆಗೆ ತಮಿಳುನಾಡಿನ ಕರ್ಷಗ ವಿನಾಯಕ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ನಡೆದ ಎಸ್.ಎ.ಇ.ಐ.ಎಸ್.ಎಸ್ ಡೋನ್ ಡೆವಲಪ್ಮೆಂಟ್ ಚಾಲೆಂಜ್ 2025 ಸ್ಪರ್ಧೆಯ ಮೈಕ್ರೋ ಏರ್ ಕ್ರಾಫ್ಟ್ ವಿಭಾಗದಲ್ಲಿ ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ.ರಿಯೋ ಡಿಸೋಜ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಏರೋ ಮಾಡೆಲಿಂಗ್ ಕ್ಲಬ್ – ಎಸ್ ಜೆಇಸಿ ಏರೋ ಮಾನವರಹಿತ ವೈಮಾನಿಕ ವ್ಯವಸ್ಥೆಗಳಲ್ಲಿ ನಾವೀನ್ಯತೆಗೆ ಒತ್ತು ನೀಡುತ್ತಿದೆ. ಶಾಲೆಗಳಿಗೆ ಭೇಟಿ ನೀಡಿ ಕಾರ್ಯಾಗಾರಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಏರೋ ಮಾಡಲಿಂಗ್ನಲ್ಲಿ ಆಸಕ್ತಿಯನ್ನು ಮೂಡಿಸುತ್ತಿದೆ ಎಂದರು. ತಂಡದ ನಾಯಕ-ಅಕ್ಷಯ್ ಬಂಗೇರ, ಪೈಲಟ್ – ಮನಿಶ್’ ಎಂ.ಕೆ., ಸೈದ್ಧಾಂತಿಕ ತಂಡ- ಜೀವಿತ್ ಜಿ., ಆದಿತ್ಯ ಆರ್., ಗುರುಮಾಧವ ಎಚ್., ರಾಹುಲ್ ಟಿ.ಪಿ., ವಿನ್ಯಾಸ ತಂಡ- ಜೀವಿತ್ ಜಿ., ಮನ್ನಿಶ್ ಎಂ.ಕೆ., ಅಕ್ಷಯ್ ಬಂಗೇರ, ಲೇಖ್ನಾ ಶೆಟ್ಟಿ,…
ಮಧೂರು, ಎ.8: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದ ಮೂಡಪ್ಪ ಸೇವೆ ತಂತ್ರಿವರ್ಯ ಬ್ರಹಶ್ರೀ ಉಳಿಯತ್ತಾಯ ವಿಷ್ಣು ಆಸೆ ಅವರ ನೇತೃತ್ವದಲ್ಲಿ ಆದಿತ್ಯವಾರ ಬೆಳಿಗ್ಗೆ ಸಂಪನ್ನಗೊಂಡಿತು. ಮೂಡಪ್ಪ ಸೇವೆ ಅಂಗವಾಗಿ ಶನಿವಾರ ರಾತ್ರಿ ಶಯ್ಯಾಕಲ್ಪನೆ, ಕವಾಟ ಬಂಧನದ ಬಳಿಕ ಮುಚ್ಚಲ್ಪಟ್ಟ ಶ್ರೀ ದೇವರ ಗರ್ಭಗೃಹದ ಕವಾಟೋದ್ಘಾಟನೆ ಬೆಳಗ್ಗೆ ನಡೆದು ಗರ್ಭಗೃಹ ಬಾಗಿಲು ತೆರೆಯಲಾಯಿತು. ಈ ವೇಳೆ ಅಪೂಪ ಪರ್ವತದ (ಅಪ್ಪಕಜ್ಜಾಯ) ಮಧ್ಯದಿಂದ ಮೂಡಿಬರುವ ಬೊಡ್ಡಜ್ಜ ಶ್ರೀ ಮಧೂರು ಸಿದ್ಧಿವಿನಾಯಕ ದೇವರ ದಿವ್ಯ ದರ್ಶನದೊಂದಿಗೆ ವಿಶೇಷಾಭಿಷೇಕ, ಪ್ರಸನ್ನ, ಪೂಜೆ, ಅಪೂಪ(ಅಪ್ಪ)ಪ್ರಸಾದ ಮುಸ್ಸಂಜೆಯ ವರೆಗೂ ವಿತರಣೆ ನಡೆಯಿತು. ಬಳಿಕ 128 ಕಾಯಿ, ಅಷ್ಟದ್ರವ್ಯ ಮಹಾಗಣಪತಿಯಾಗ, ಮಹಾಪೂಜೆ ನಡೆಯಿತು. ಸಂಜೆ ಜಳಕದ ಬಲಿ, ಕಟ್ಟೆಪೂಜೆ, ಶ್ರೀ ದೇವರ ಕೆರೆಯಲ್ಲಿ ಅವಭೃತ ಸ್ನಾನ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಿತು. ಮೂಡಪ್ಪ ಸೇವೆ ವೀಕ್ಷಿಸಲು ರವಿವಾರ ಮುಂಜಾನೆ 1 ರ ವೇಳೆಗೆ ಜನರು ಆಗಮಿಸತೊಡಗಿದ್ದರು.ನೀರ್ಚಾಲ್ ಮಧೂರು ರಸ್ತೆಯ ಏರಿಕ್ಕಳ, ಕೊಲ್ಯಗಳಿಂದ ಸುಮಾರು 3 ಕಿ.ಮೀ. ದೂರದಿಂದ ಕಾಸರಗೋಡು…
ವಿಟ್ಲ, ಏ.07 : ಶಾರದಾ ಆರ್ಟ್ಸ್ ಮಂಜೇಶ್ವರ ಇದರ ಕಲಾವಿದ ಸುರೇಶ್ ವಿಟ್ಲ ಇಂದು ನಿಧನ ಹೊಂದಿದರು. ಸುರೇಶ್ ವಿಟ್ಲ ಅವರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ತುಳು ನಾಟಕ ಕಲಾವಿದ ಸುರೇಶ್ ವಿಟ್ಲ ಅವರು ಖಳನಾಯಕ, ಸ್ತ್ರೀ ವೇಷ, ಹಾಸ್ಯ ನಾಟಕಗಳಲ್ಲಿ ವಿವಿಧ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಬೋಳೂರು, ಏ.06: ಬಾಲಾಂಜನೇಯ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವ, ಅಮೃತ ಮಹೋತ್ಸವ ಪ್ರಯುಕ್ತ ಶುಕ್ರವಾರ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ವೈದಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬೆಳಗ್ಗೆ ಗಣಪತಿ ಹೋಮ ಸಂಪನ್ನ ಗೊಂಡಿತು. ಬಳಿಕ ತೋರಣ ಮುಹೂರ್ತ, ಪ್ರಾಯಶ್ಚಿತ್ತ ಹೋಮಗಳು, ನವಗಹ ಶಾಂತಿ ಹೋಮ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ರಾಮಭದ್ರಕ ಮಂಡಲ ಪೂಜೆ ನಡೆಯಿತು. ಎ. 5ರಂದು ಬೆಳಗ್ಗೆ ಶಾಂತಿ ಹೋಮಗಳು, ಬಿಂಬ ಶುದ್ದಿ ಪ್ರಕ್ರಿಯೆಗಳು ವಾಯುಸ್ತುತಿ ಪುರಶ್ಚರಣ ಹೋಮ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಬಿಂಬಾಧಿವಾಸ ಪ್ರಕ್ರಿಯೆಗಳು, ಅಧಿವಾಸ ಹೋಮ , ತತ್ವಹೋಮ, ಅಷ್ಟೋತ್ತರ ಗಳ ಶತಕಲಶಪೂರಣ, ಕಲಶಾಧಿವಾಸ ಕಾರ್ಯಕ್ರಮ ನಡೆಯಿತು. ಸಂಜೆ ಸಾಮೂಹಿಕ ಹನುಮಾನ್ ಚಾಲೀಸ ಪಠನ, ಭಕ್ತಿ ಭಾವ ಸಂಗಮ – ವೀಡಿಯೋ ಗೀತೆ ಗಳ ಸಂಭ್ರಮ, ಸನಾತನ ನಾಟ್ಯಾಲಯದಿಂದ ನೃತ್ಯಾಂಜಲಿ ಕಾರ್ಯಕ್ರಮ ನಡೆಯಿತು.
ಮಂಗಳೂರು ಏ.06 : ಜಪ್ಪು ಬಪ್ಪಾ ಲ್ ಶೀ ಜನಾರ್ದನ ಭಜನಾ ಮಂದಿರದ ಅಮೃತ ಮಹೋತ್ಸವದ ಕಾರ್ಯಕ್ರಮಗಳ ಅಂಗವಾಗಿ ಅಖಂಡ ಭಜನ ಸಪ್ತಾಹಕ್ಕೆ ಏ.05, ಶನಿವಾರ ಸೂರ್ಯೋದಯ ವೇಳೆ ನಂದಾದೀಪವನ್ನು ಪ್ರಜ್ವಲಿಸುವ ಮೂಲಕ ಚಾಲನೆ ನೀಡಲಾಯಿತು. ಶೀ ಜನಾರ್ದನ ಭಜನಾ ಮಂದಿರದ ಮಂದಿರದ ಅಧ್ಯಕ್ಷ ಜೆ. ನವೀನ್ ಶೆಟ್ಟಿ ಮತ್ತು ವಿನಯಾ ಎನ್. ಶೆಟ್ಟಿ ದಂಪತಿ ಜ್ಯೋತಿ ಬೆಳಗಿಸಿದರು. ಈ ಸಂದರ್ಭದಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ಜೆ. ರಘುವೀರ್, ಅಮೃತ ಮಹೋತ್ಸವದ ಸಮಿತಿ ಸಂಚಾಲಕ ಜೆ.ಪುಂಡಲೀಕ ಸುವರ್ಣ, ಉಪಾಧ್ಯಕ್ಷ ಸತೀಶ್ ಆಚಾರ್, ಲಕ್ಷ್ಮಣ್ ಆಚಾರ್, ರಘುವೀರ್ ಆಚಾರ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್,ಕೋಶಾಧಿಕಾರಿ ಉಮೇಶ್ ಕೆ., ವಸಂತ ಶೆಟ್ಟಿ, ಅಶ್ವತ್ ಶೆಟ್ಟಿ, ಜೆ. ನವೀನ್ ಕುಮಾರ್, ಪುಷ್ಪರಾಜ್ ಶೆಟ್ಟಿ, ವಿ.ಕೆ.ರಾಜನ್, ಕಿಶೋರ್ ಕೋಟ್ಯಾನ್, ಅರವಿಂದ ರಾವ್, ಜಯಶ್ರೀ ಸುನಿಲ್, ಸರಿತಾ, ಅರ್ಚಕ ಬಿ. ಬಾಲಕೃಷ್ಣ ಉಪಸ್ಥಿತರಿದ್ದರು.
ಕಾಸರಗೋಡು, ಏ.05 : ಬೈಕ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಶುಕ್ರವಾರ ಕಾಸರಗೋಡಿನ ಚೆಮ್ನಾಡ್ ನಲ್ಲಿ ನಡೆದಿದೆ. ಮೃತರನ್ನು ಮೇಲ್ಪರಂಬ ಒರವಂಗರದ ಮುಹಮ್ಮದ್ ಹನೀಫ್ (26) ಎಂದು ಗುರುತಿಸಲಾಗಿದೆ. ರಸ್ತೆಯ ಹೊಂಡಕ್ಕೆ ಬಿದ್ದ ಬೈಕ್ ಮೇಲೆ ಹಿಂದಿನಿಂದ ಬಂದ ಲಾರಿ ಹಾದು ಹೋಗಿದ್ದು, ಗಂಭೀರ ಗಾಯಗೊಂಡ ಹನೀಫ್ ರನ್ನು ಆಸ್ಪತ್ರೆಗೆ ತಲುಪಿಸಿದರೂ ಅದಾಗಲೇ ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಮಂಗಳೂರು, ಏ.4 : ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ಈ ಸಾಲಿನ ನಡಾವಳಿ ಉತ್ಸವವು ದಿನಾಂಕ ಎಪ್ರಿಲ್ 9ರಿಂದ 11ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಲಿದೆ ಎಂದು ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಉತ್ಸವದ ಸಂದರ್ಭದಲ್ಲಿ ಶ್ರೀ ಮಾತೆಯರ ಭವ್ಯ ಶೋಭಾಯಾತ್ರೆ ಹಾಗೂ ಪಾರಂಪರಿಕ ಪವಿತ್ರ ಕೆಂಡ ಸೇವೆ ನಡೆಯಲಿದೆ. ಪ್ರತೀ ದಿನ ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣಾ ಸೇವೆ ಜರಗಲಿದೆ ಎಂದರು. ವೇದಿಕೆಯಲ್ಲಿ ವಿಶ್ವನಾಥ್ ಕುಡುಪು, ಸುಧೀರ್ ಬಿ.ಜೆಪ್ಪು, ಲೋಕೇಶ್ ಬೋಳಾರ್,ಸ್ರಜನ್ ದಾಸ್, ಮೋಹನ್, ಪುರುಷ ಸಾಲಿಯಾನ್, ರವೀಂದ್ರ ಕೊಡಿಯಾಲ್ ಬೈಲ್, ಉಷಾ ಪ್ರಭಾಕರ್, ಆಶಾ ಚಂದ್ರಮೋಹನ್, ಪುರುಷ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ, ಏ.4 : ಸಜೀಪ ಮಾಗಣೆಯ ಮಿತ್ತಮಜಲು ಶ್ರೀ ನಡಿಯೇಲು ದೈಯ್ಯಂಗುಲು, ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರದ ನವೀಕೃತ ಗೋಪುರಗಳ ಲೋಕಾರ್ಪಣೆ ಹಾಗೂ ಸಾನಿಧ್ಯ ಕಲಶಾದಿ ಕಾರ್ಯಕ್ರಮಳು ಏ.2 ರಿಂದ ಏ.3ರ ತನಕ ನಡೆಯಿತು. ಏ.2, ಬುಧವಾರ ಸಂಜೆ ಕ್ಷೇತ್ರದ ಮಹಾದ್ವಾರದ ಬಳಿಯಿಂದ ಹಸಿರುವಾಣಿ ಹೊರಕಾಣಿಕೆ ಶೋಭಾಯಾತ್ರೆಯು ನಡೆಯಿತು.ನಗ್ರಿ, ಪಣೋಲಿಬೈಲು, ಕಾರಾಜೆ, ನಾಗನವಳಚ್ಚಿಲು, ನಂದಾವರ, ಮುಗುಳಿಯ, ಮಿತ್ತಮಜಲು ದ್ವಾರ, ಕೋಟೆಕಣಿ, ಸಜೀಪನಡು, ಈಶ್ವರಮಂಗಲ, ಅನ್ನಪ್ಪಾಡಿ, ಮಂಜಲ್ಪಾದೆ, ಶಾರದಾನಗರ, ವಿದ್ಯಾನಗರ, ಸುಭಾಷ್ನಗರ ಮೊದಲಾದ ವಲಯಗಳ ಕೇಂದ್ರಗಳಲ್ಲಿ ಸಂಗ್ರಹಿಸಿದ ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿ ಸಾಗಿಸಲಾಯಿತು. ಸಜೀಪ ಮಾಗಣೆಯ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ – ಪ್ರಾರ್ಥನೆ ನೆರವೇರಿಸಿದ ಬಳಿಕ ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪ್ಪಾಡಿಗುತ್ತು ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿವೇಕ್ ಶೆಟ್ಟಿ, ನಗ್ರಿಗುತ್ತು, ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ, ಗಡಿಪ್ರಧಾನರಾದ ಕಾಂತಾಡಿಗುತ್ತು ಬರಂಗರೆ ಉಗ್ಗ ಶೆಟ್ಟಿ ಯಾನೆ ಗಣೇಶ್ ನ್ಯಾಕ್, ಪಾಲಮಂಟಮೆ…
ಬಂಟ್ವಾಳ, ಏ.03: ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿಸಿರೋಡು ಇದರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬ್ರಹ್ಮ ಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಏ.4 ರಿಂದ ಏ.9ರ ವರೆಗೆ ವೈಭವಯುತವಾಗಿ ನಡೆಯಲಿದೆ ಎಂದು ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಪೂರಕವಾಗಿ ಏ.3 ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಬಿಸಿರೋಡಿನ ಕೈಕಂಬ ದ್ವಾರದಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಏ. 4 ರಿಂದ ಏ.9 ರವರೆಗೆ ವಿವಿಧ ವೈದಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ದೇವಸ್ಥಾನದ ಬಲಭಾಗದ ವೇದಿಕೆಯಲ್ಲಿ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ, ಎಡಭಾಗದಲ್ಲಿರುವ ವಿಶಾಲ ಸ್ಥಳದಲ್ಲಿ ಪ್ರತಿ ನಿತ್ಯ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಮಾತನಾಡಿ, ಪ್ರತಿನಿತ್ಯ ಎಂಟರಿಂದ ಹತ್ತು ಸಾವಿರ ಮಂದಿ ಭಾಗವಹಿಸುವ…
ಮಂಗಳೂರು, ಏ.02 : ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭ ಎ. 3 ರಿಂದ 5 ರವರೆಗೆ ನಗರದ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್ನಲ್ಲಿ ನಡೆಯಲಿದೆ.ಏ.3ರಂದು ಬೆಳಗ್ಗೆ 10ಕ್ಕೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಪದವಿ ಪ್ರದಾನ ಸಮಾರಂಭ ನಡೆಯಲಿದೆ. ಸಂತ ಅಲೋಶಿಯಸ್ ವಿವಿ ಕುಲಪತಿ ಡಾ.ಪ್ರವೀಣ್ ಮಾರ್ಟಿಸ್ ಮತ್ತು ಕೋಲ್ಕತದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೋಮಿಯೋಪಥಿ ಮಾಜಿ ನಿರ್ದೇಶಕ ಡಾ.ಸುಭಾಷ್ ಸಿಂಗ್ ಭಾಗವಹಿಸಲಿದ್ದಾರೆ. ಮಂಗಳೂರು ಬಿಷಪ್, ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ಅಧ್ಯಕ್ಷ ಡಾ.ಪೀಟರ್ ಪಾವ್ ಸಲ್ದಾನಾ ಅಧ್ಯಕ್ಷತೆ ವಹಿಸುವರು ಎಂದು ಸಂಸ್ಥೆ ನಿರ್ದೇಶಕ ಫಾ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಹೇಳಿದರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಫಾದರ್ ಮುಲ್ಲರ್ ಫಿಸಿಯೋಥೆರಪಿ ಕಾಲೇಜಿನ ಪದವಿ ಪ್ರದಾನ ಸಮಾರಂಭ ಏ.4ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಪತಿ ಡಾ.ಭಗವಾನ್…












