Author: admin

ಮಂಗಳೂರು, ಮಾ .02 : ನಗರದ ನೀರೇಶ್ವಾಲ್ಯ, ಗೂಡ್’ಶೆಡ್ ರಸ್ತೆ ಯಲ್ಲಿರುವ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶಾಸಕರ ನಿಧಿಯಿಂದ ಅಭಿವೃದ್ಧಿಗೊಂಡ ಮೇಲ್ಛಾವಣಿ ಹಾಗೂ ಸರ್ವರ ಸಹಕಾರದಿಂದ ನಿರ್ಮಾಣಗೊಂಡ ಅನ್ನಪೂರ್ಣೇಶ್ವರಿ ಭೋಜನಾಲಯವನ್ನು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟನೆಗೊಳಿಸಿದರು. ನಂತರ ಮಾತನಾಡಿದ ಶಾಸಕರು, ದೇವರ ಉತ್ಸವದ ಸಂದರ್ಭದಲ್ಲಿ ನಡೆಯುವ ಅನ್ನಸಂತರ್ಪಣಾ ಸೇವೆಯು ಭಕ್ತರಿಗೆ ಸಾಂಗವಾಗಿ ನಡೆಯುವ ಉದ್ದೇಶದೊಂದಿಗೆ ಇಲ್ಲಿ ಸುಸಜ್ಜಿತವಾದ ಭೋಜನಾಲಯ ಹಾಗೂ ಭಕ್ತರ ಹಿತದೃಷ್ಟಿಯಿಂದ ಮೇಲ್ಛಾವಣಿಯನ್ನು ನಿರ್ಮಿಸಲಾಗಿದ್ದು ಪವಿತ್ರ ಶಿವರಾತ್ರಿಯ ಸಂದರ್ಭದಲ್ಲೇ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹೆಚ್. ಅಶೋಕ್ ನಾಯಕ್, ಸಹ ಮೊಕ್ತೇಸರರಾದ ಶ್ರೀ ಎನ್. ಶಿವಪ್ರಸಾದ್ ನಾಯಕ್, ಶ್ರೀಮತಿ ಲಲಿತಾ ಮತ್ತು ಶ್ರೀ ಎಚ್. ಪ್ರಭಾಕರ ನಾಯಕ್ ಹೊನ್ನಕಟ್ಟೆ,  ಸುಷ್ಮಾ ಮತ್ತು ಸುರೇಶ ಮಾಧವ ನಾಯಕ್ ಕೋಡಿಕಲ್, ಮತಿ ಸುಪ್ರಿಯ ಮತ್ತು  ಪ್ರವೀಣಚಂದ್ರ ಸುಂದರ ನಾಯಕ್ ಮಣ್ಣಗುಡ್ಡೆ, ಚಾರೋಡಿ ಅಭ್ಯುದಯ ಸಂಘದ ಅಧ್ಯಕ್ಷರಾದಬಿ. ಮಧುಕರ ನಾಯಕ್ ಅಲ್ಲದೇ ಅನೇಕರು ಉಪಸ್ಥಿತರಿದ್ದರು.

Read More

ಕಠ್ಮಂಡು, ಫೆ. 01 : ನೇಪಾಳದಲ್ಲಿ ಫೆ.28 ರಂದು ಮುಂಜಾನೆ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಾಗೆನೇ ಭಾರತ, ಟಿಬೆಟ್ ಮತ್ತು ಚೀನಾದ ಗಡಿ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ. ಹಿಮಾಲಯನ್ನ ಮಧ್ಯಭಾಗದ ಸಿಂಧುಪಾಲ್‌ಚೌಕ್ ಜಿಲ್ಲೆಯ ಭೈರವಕುಂಡದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಸ್ಥಳೀಯ ಕಾಲಮಾನ ಬೆಳಗಿನ ಜಾವ 2.51ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ನಿರ್ವಹಣಾ ಮತ್ತು ಸಂಶೋಧನಾ ಕೇಂದ್ರ ತಿಳಿಸಿದೆ. ನೇಪಾಳದ ಸಂಭವಿಸಿದ ಭೂಕಂಪನದಿಂದ ಯಾವುದೇ ಜೀವಹಾನಿಯಾಗಲಿ, ಗಾಯಗೊಂಡಿರುವುದಾಗಲಿ ವರದಿಯಾಗಿಲ್ಲ. ಆದರೆ ಭೂಕಂಪನ ಸಂಭವಿಸಿದ ಪ್ರದೇಶಗಳಲ್ಲಿ ಜನ ಆತಂಕಗೊಂಡಿದ್ದಾರೆ ಎಂದು ವರದಿಯಾಗಿದೆ

Read More

ಮಂಗಳೂರು, ಫೆ.28 : ನಗರದ ಸಿಟಿಲೈಟ್ ಕಾಂಪ್ಲೆಕ್ಸ್ ನಲ್ಲಿ ಸಾಂಪ್ರದಾಯಿಕ ಸಿಹಿತಿನಸು ಬ್ರ್ಯಾಂಡ್ ಗಳಲ್ಲಿ ಒಂದಾಗಿರುವ ಇಂಡಿಯಾ ಸ್ವೀಟ್ ಹೌಸ್ ಇದರ 40ನೇ ಮಳಿಗೆ ಉದ್ಘಾಟನೆಗೊಂಡಿತು. ಇಂಡಿಯಾ ಸ್ವೀಟ್ ಹೌಸ್ ಮಳಿಗೆಯನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಉದ್ಘಾಟಿಸಿ ಶುಭ ಹಾರೈಸಿದರು. ನಂತರ ಎ.ಜೆ. ಗ್ರೂಪ್ ಇದರ ಚೇಯರ್ ಮ್ಯಾನ್ ಡಾ.ಎ.ಜೆ.ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಂಪನಕಟ್ಟೆಯ ಸಿಟಿ ಲೈಟ್ ಬಿಲ್ಡಿಂಗ್ ನಲ್ಲಿ ಆರಂಭವಾಗಿರುವ ಈ ಹೊಸ ಮಳಿಗೆ ಈಗ ಮಂಗಳೂರಿನ ಗ್ರಾಹಕರಿಗೆ ಅತ್ಯುತ್ತಮ ಸಿಹಿ ತಿನಿಸುಗಳು ಮತ್ತು ತಿಂಡಿಗಳನ್ನು ಒದಗಿಸಲಿದೆ. ಎಂದು ಸಂಸ್ಥೆಯ ಸಹ ಸಂಸ್ಥಾಪಕರಾದ ವಿಶ್ವನಾಥ ಮೂರ್ತಿ ಹೇಳಿದರು. ನಮ್ಮ 40ನೇ ಮಳಿಗೆಯನ್ನು ಆರಂಭಿಸಲು ಇದು ಉತ್ತಮ ಸ್ಥಳ ಎನ್ನುವುದು ನಮ್ಮ ಭಾವನೆ. ಹಾಗಾಗಿ ನಮ್ಮ ಮಳಿಗೆಯನ್ನು ಇಲ್ಲಿ ಪ್ರಾರಂಭಿಸಿದ್ದೇವೆ .ನಾವು ಐದು ವರ್ಷಗಳಲ್ಲಿ ಎಷ್ಟು ದೂರ ಬಂದಿದ್ದೇವೆ ಎಂಬುದಕ್ಕೆ  ಈ ಮಳಿಗೆ ಅತ್ಯುತ್ತಮ ಪುರಾವೆಯಾಗಿದೆ ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ  ಅತಿದೊಡ್ಡ ಹಾಗೂ ವಿಶಿಷ್ಟ…

Read More

ವಿಟ್ಲ,ಫೆ.28 : ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ಶಿವರಾತ್ರಿ ಪ್ರಯುಕ್ತ ಶಿವರಾತ್ರಿ ಜಾಗರಣೆ ಮತ್ತು ಸಾಮೂಹಿಕ ಶಿವ ಯೋಗ ನಮಸ್ಕಾರವು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನೆಡೆಯಿತು. ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಅನುವಂಶಿಕ ಮೊಕ್ತೇಸರ ಜಯರಾಮ ಬಲ್ಲಾಳ್ ಮತ್ತು ಅರಮನೆಯ ಕೃಷ್ಣಯ್ಯ ಬಲ್ಲಾಳ್ ಉದ್ಘಾಟಿಸಿ ಶುಭ ಹಾರೈಸಿದರು. ಜಾಗರಣೆಯು ರಾತ್ರಿ 9.30ರಿಂದ ಭಜನೆಯೋಂದಿಗೆ ಅರಂಭವಾದ 108ಬಾರಿ ಮೃತ್ಯುಂಜಯ ಜಪ,1008ಬಾರಿ ಶಿವ ಪಂಚಾಕ್ಷರಿ ಪಠಣೆ, ಶಿವಷ್ಟೋತ್ತರ ಶತನಾಮಾನಿ ಪಠಣೆ, ಹಾಗೂ ಬಿಲ್ವ ಪತ್ರ ಅರ್ಚನೆಯೋಂದಿಗೆ ಒಟ್ಟು 4ಅವೃತ್ತಿಗಳಲ್ಲಿ 11ಯೋಗ ಶಿವ ನಮಸ್ಕಾರವು ಶಿವ ಸ್ತೋತ್ರ ಪಠಣದೊಂದಿಗೆ 6.00ಕ್ಕೆ ಕಾರ್ಯಕ್ರಮ ಸಮಾಪನಗೊಂಡಿತು. ಸುಮಾರು 200ಕ್ಕೂ ಮಿಕ್ಕಿ ಸಂಖ್ಯೆಯಲ್ಲಿ ವಿಟ್ಲ,ಪುಣಚ,ಕಾಪುಮಜಲು, ಕೆಲಿಂಜ, ಮಾಮೇಶ್ವರ, ಭಾಗದ ಯೋಗ ಬಂಧುಗಳು ಭಾಗವಹಿಸಿದ್ದರು. ಶ್ರೀ ಕ್ಷೇತ್ರದಲ್ಲಿ ಶಿಸ್ತಿಬದ್ದವಾಗಿ ಯೋಗ ಶಿವ ನಮಸ್ಕಾರ ಮಾಡಲಾಯಿತು. ಜಿಲ್ಲಾ ಸಹ ಸಂಚಾಲಕರಾದ ಶ್ರೀಮತಿ ಮಾಧುರಿ , ವಿಟ್ಲ ನಗರದ ಪ್ರಮುಖರಾದ ಶ್ರೀಮತಿ ಮೀರಾ, ಪ್ರಕಾಶ ಅಣ್ಣಡ್ಕ ಇವರು ಶಿಕ್ಷಣ ವಿಧಿಯ ಮಾರ್ಗದರ್ಶನ…

Read More

ಮಂಗಳೂರು, ಫೆ.27 : ಇತಿಹಾಸ ಪ್ರಸಿದ್ಧ ಕಾವೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಮಾರ್ಚ್ 6ರಂದು ಬೆಳಗ್ಗೆ 11 ಗಂಟೆ ಯಿಂದ 12ರವರೆಗೆ ನವೀಕೃತ ಗರ್ಭಗೃಹದಲ್ಲಿ ಮಹಾಲಿಂಗೇಶ್ವರ ದೇವರ ಪುನಃ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಮಾರ್ಚ್ 9ರಂದು ಬೆಳಗ್ಗೆ 8:10ರಿಂದ 8:40ರ ಮೀನಲಗ್ನ ಸುಮುಹೂರ್ತದಲ್ಲಿ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕವು ಜರುಗಲಿರುವುದು ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಮಾರ್ಚ್ 1ರ ಶನಿವಾರದಿಂದ ಮೊದಲ್ಗೊಂಡು ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ ಹಾಗೂ ಮಾರ್ಚ್ 9ರ ವರೆಗೆ ನಡೆಯುವ ಶ್ರೀ ಮಹಾಲಿಂಗೇಶ್ವರ ದೇವರ ಪುನಃ ಪ್ರತಿಷ್ಠಾಪನಾ ಕಾರ್ಯಕ್ರಮ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಹಾಕಲಾಶಾಭಿಶೇಕಕ್ಕೆ ಭಕ್ತಭಿಮಾನಿಗಳು ತ್ರಿಕರಣಪೂರ್ವಕವಾಗಿ ಸಹಕರಿಸಬೇಕು ಎಂದು ಹೇಳಿದರು. ಹೊರೆಕಾಣಿಕೆ ಸಮಿತಿ ಸಂಚಾಲಕ ರಮಾನಂದ ಭಂಡಾರಿ ಮಾತಾಡಿ, ಮಾರ್ಚ್ 1ರಂದು ಕೂಳೂರು, ಪಡುಕೋಡಿ, ಶಾಂತಿನಗರ, ಗಾಂಧಿನಗರ, ಅತ್ರಬೈಲು, ಕುಂಜತ್ತಬೈಲು, ಮರಕಡ, ಕಾವೂರು, ಪಡುಶೆಡ್ಡೆಜಾರ, ಬೋಂದೇಲ್, ಪಚ್ಚನಾಡಿ, ಪದವಿನಂಗಡಿ, ಮೇರಿಹಿಲ್,…

Read More

ಉಡುಪಿ, ಫೆ.26 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು, ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಂಗಳವಾರ ಪ್ರಾರಂಭವಾದವು. ವೇದಮೂರ್ತಿ ಕೆ.ಜಿ. ರಾಘವೇಂದ್ರ ತಂತ್ರಿಯವರ ಮಾರ್ಗದರ್ಶನದಲ್ಲಿ ಮತ್ತು ದೇವಾಲಯದ ಪ್ರಧಾನ ಅರ್ಚಕರಾದ ವೇದಮೂರ್ತಿ ಕೆ.ಪಿ. ಕುಮಾರಗುರು ತಂತ್ರಿ ಅವರ ನೇತೃತ್ವದಲ್ಲಿ, ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ, ದೇವಾಲಯದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಧಾರ್ಮಿಕ ವಿಧಿಗಳಿಗೆ ಚಾಲನೆ ನೀಡಿದರು. ನಂತರ, ಋತ್ವಿಲಾರ್ವಣ, ವಿಶ್ವಕರ್ಮ ಪೂಜೆ ಮತ್ತು ಇತರ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ಅರಣಿ ಮಥನ ಪ್ರಕ್ರಿಯೆಯ ಮೂಲಕ ಬೆಂಕಿ ಬೆಳಗಿಸಲಾಯಿತು. ೨೪ ಕಾಯಿ ಗಣಯಾಗ ಸೇರಿದಂತೆ ಹವನ ಸಮಾರಂಭಗಳ ಸರಣಿಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹಾಗೆಎಂಆರ್‌ಜೆ ಗ್ರೂಪ್ಸ್ನ ಸಿಎಂಡಿ ಡಾ. ಕೆ. ಪ್ರಕಾಶ್ ಶೆಟ್ಟಿ, ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ,…

Read More

ಬೀಜಿಂಗ್, ಫೆ.25: ಚೀನಾದ ವಿಜ್ಞಾನಿಗಳ ತಂಡವು ಬಾವಲಿಗಳಲ್ಲಿ ಕಂಡುಬರುವ ಹೊಸ ವೈರಾಣುವನ್ನು ಪತ್ತೆಹಚ್ಚಿದೆ. ಕೋವಿಡ್ 19 ಸಾಂಕ್ರಾಮಿಕಕ್ಕೆ ಕಾರಣವಾಗಿದ್ದ ವೈರಾಣುವಿನಂತೆಯೇ ಇರುವ ಈ ಕೊರೊನಾ ವೈರಸ್, ಪ್ರಾಣಿಯಿಂದ ಮನುಷ್ಯರಿಗೆ ಹರಡುವ ಅಪಾಯವಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ಪ್ರಯೋಗಾಲಯದ ಷಿ ಝಂಗ್‌ಲಿ ನೇತೃತ್ವದ ತಂಡವು ನಡೆಸಿದ ಅಧ್ಯಯನದಲ್ಲಿ ಈ ವೈರಾಣು ಪತ್ತೆಯಾಗಿದೆ. ಇದೀಗ ಪತ್ತೆಯಾಗಿರುವ ಎಚ್‌ಕೆಯು5-ಕೊರೊನಾ ವೈರಸ್-2′, ಕೊರೊನಾ ವೈರಸ್ನ ಹೊಸ ತಳಿಯಾಗಿದ್ದು ಹಾಂಕಾಂಗ್‌ನಲ್ಲಿರುವ ‘ಜಪಾನೀಸ್ ಪಿಪಿಸ್ಟೈಲ್’ ಬಾವಲಿಯಲ್ಲಿ ಮೊದಲು ಗುರುತಿಸಲಾಗಿದೆ.

Read More

ಮಂಗಳೂರು,ಫೆ.23 : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ “ಸುವರ್ಣ ಸಂಭ್ರಮ“ ಲೋಗೋ ಅನಾವರಣ ಕಾರ್ಯಕ್ರಮ ಬುಧವಾರ ಬೆಳಗ್ಗೆ ಖಾಸಗಿ ಹೋಟೆಲ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತಾಡಿ, ಜಿಲ್ಲೆಯ ಪತ್ರಕರ್ತರ ಸಂಘದ ವತಿಯಿಂದ ನಡೆಯುವ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸಮಾಜಕ್ಕೆ ಮಾದರಿಯಾಗುವ ಕಾರ್ಯಕ್ರಮಗಳನ್ನು ಆಯೋಜಿಸಿ. ನಿಮ್ಮ ಎಲ್ಲ ಕಾರ್ಯಕ್ರಮಗಳ ಜೊತೆಗೆ ನಾನಿರುತ್ತೇನೆ ಎಂದರು. ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಮಾತಾಡಿ,ಸುವರ್ಣ ಸಂಭ್ರಮದಲ್ಲಿರುವ ಜಿಲ್ಲೆಯ ಪತ್ರಕರ್ತರ ಸಂಘಕ್ಕೆ ಒಳ್ಳೇದಾಗಲಿ ಎಂದರು. ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಸಿ.ಎ.ಶಾಂತಾರಾಮ್ ಶೆಟ್ಟಿ ಮಾತಾಡಿ, ಜಿಲ್ಲೆಯ ಪತ್ರಕರ್ತರ ಬಗ್ಗೆ ಕಾಳಜಿ ಮತ್ತು ಹೆಮ್ಮೆಯಿದೆ. ಪತ್ರಕರ್ತರು ಮಾಡುವ ಕೆಲಸದಿಂದ ಅವರನ್ನು ಗುರುತಿಸಬಹುದು. ಬಹುಷಃ ಜಾಸ್ತಿ ಸಂಬಳವಿಲ್ಲದ ಪತ್ರಕರ್ತರು ಪ್ರೀತಿ ಮತ್ತು ವಿಶ್ವಾಸದಿಂದ ಆಪ್ತರಾಗುತ್ತಾರೆ ಎಂದರು. ವೇದಿಕೆಯಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಬಾಳ ಜಗನ್ನಾಥ ಶೆಟ್ಟಿ, ಅನ್ನು…

Read More

ಮಂಗಳೂರು, ಫೆ. 22 : ನೀರುಮಾರ್ಗದ ಪೆದಮಲೆಯಲ್ಲಿ ಪುನನಿರ್ಮಾಣಗೊಂಡಿರುವ ಶ್ರೀವಾಜಿಲ್ಲಾಯ ಮಹಿಷಂತಾಯ -ಧೂಮಾವತಿ ಬಂಟ ದೈವಸ್ಥಾನದಲ್ಲಿ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಫೆ. 18ರಿಂದ 22ರ ವರೆಗೆ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಫೆ. 18ರಂದು ಅಪರಾಹ್ನ 3 ಗಂಟೆಗೆ ನೀರುಮಾರ್ಗ  ಶ್ರೀ ಸುಬ್ರಹ್ಮಣ್ಯ ಭಜನ ಮಂದಿರದಿಂದ ದೈವಸ್ಥಾನಕ್ಕೆ ಬಂಡಿ ಕೊಡಿಮರ ಮತ್ತು ದೈವಗಳ ಆಭರಣಗಳ ಶೋಭಾಯಾತ್ರೆ, ನಡೆಯಿತು. ಸಂಜೆ 5ಗಂಟೆಗೆ ಪೆದಮಲೆಗುತ್ತು ಭಂಡಾರ ಚಾವಡಿಯಲ್ಲಿ ದೇವತಾ ಪ್ರಾರ್ಥನೆ, ಶಿಲ್ಪ ಸನ್ಮಾನ, ಆಲಯ ಪ್ರತಿಗ್ರಹ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲ, ಮತ್ತು ನೂತನ ಮೊಗಮೂರ್ತಿ ಉಯ್ಯಾಲೆಗಳ ಶುದ್ಧಿ ಪ್ರಕ್ರಿಯೆ ಹಾಗೂ ಬಿಂಬಾಧಿವಾಸ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವಲ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ನಡೆಯಿತು. ಫೆ. 19ರಂದು ಬೆಳಗ್ಗೆ ಪೆದಮಲೆಗುತ್ತು ಭಂಡಾರ ಚಾವಡಿಯಲ್ಲಿ ಗಣಪತಿ ಹೋಮ,ತುಳಸಿ ಪ್ರತಿಷ್ಠೆ ಮತ್ತು ದ್ವಾರಪೂಜೆ ಶ್ರೀ ದೈವಗಳ ಪ್ರತಿಷ್ಠೆ ಕಲಶಾಭಿಷೇಕ ಪೆದಮಲೆ ದೈವಸ್ಥಾನದಲ್ಲಿ ಗಣಪತಿ ಹೋಮ ಮತ್ತು ತೋರಣ…

Read More

ಬೆಂಗಳೂರು,ಫೆ.21 : ಟಿವಿ9 ಸುದ್ದಿವಾಹಿನಿಯು ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರಿಗೆ ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮ ಫೆಬ್ರವರಿ 7, 2025 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಭವ್ಯ ಸಂದರ್ಭವು ಕರ್ನಾಟಕದ ಮಹಿಳೆಯರ ಗಮನಾರ್ಹ ಸಾಧನೆಗಳನ್ನು ಗೌರವಿಸಲು ಮತ್ತು ಆಚರಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಿದೆ, ಸಮಾಜಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಗುರುತಿಸುತ್ತದೆ . ಟಿವಿ 9 ನವ ನಕ್ಷತ್ರ ಸಮ್ಮಾನ್ ಮೂಲಕ ಅಪ್ರತಿಮ ವೀರರ ಮೇಲೆ ಬೆಳಕು ಚೆಲ್ಲುವುದರಿಂದ ಹಿಡಿದು ಟಿವಿ 9 ಸೆಲ್ಯೂಟ್ ಮೂಲಕ ಕರ್ನಾಟಕ ಪೊಲೀಸ್ ಸೇವೆಯನ್ನು ಸನ್ಮಾನಿಸುವ ಕಾರ್ಯ ಮಾಡುತ್ತಿದೆ.ಟಿವಿ 9, ಮಾಧ್ಯಮದ ಹೊಸ ಕಾರ್ಯಕ್ರಮ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ವೈವಿಧ್ಯಮಯ ಕೊಡುಗೆಗಳನ್ನು ಗುರುತಿಸುವುದು ಮತ್ತು ಪ್ರಶಂಸಿಸುವುದು “ಹೆಮ್ಮೆಯ ಕನ್ನಡತಿ”ಯ ಮುಖ್ಯ ಉದ್ದೇಶವಾಗಿದೆ. ಇದರಲ್ಲಿ ಸಮಾಜ ಸೇವೆ, ಕಲೆ, ವ್ಯವಹಾರ, ವೈದ್ಯಕೀಯ, ಕ್ರೀಡಾ ಮನರಂಜನೆ ಮತ್ತು ಇತರ ಮಹತ್ವದ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರು ಸೇರಿದ್ದಾರೆ ಎಂದು ಅಯೋಜಕರ…

Read More