Author: admin

ಮಂಗಳೂರು, ಎ. 23 : ಕಾಟಿಪಳ್ಳ ಗಣೇಶಪುರ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ, ಪರಿವಾರ ದೇವರಿಗೆ ಸಹಸ್ರಕುಂಭ ಬ್ರಹ್ಮಕಲಶಾಭಿಷೇಕ ಎ. 21,ಸೋಮವಾರ ನಡೆಯಿತು.ದೇವಳದ ತಂತ್ರಿ ಬ್ರಹ್ಮಶ್ರೀ ದೇರೆಬೈಲ್ ಡಾ.ಶಿವಪ್ರಸಾದ್ ತಂತ್ರಿ ನೇತೃತ್ವ ವಹಿಸಿದ್ದರು. ಬೆಳಗ್ಗೆ ತುಲಾಭಾರ, ಮಹಾಪೂಜೆ, ಬಲಿ ಹೊರಟು ಉತ್ಸವ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಯಾದವ ಕೋಟ್ಯಾನ್, ಕಾರ್ಯಾಧ್ಯಕ್ಷ ಪ್ರಶಾಂತ್ ಮೂಡಾಯಿಕೋಡಿ, ಪ್ರಧಾನ ಕಾರ್ಯದರ್ಶಿ ಪಿ. ಸದಾಶಿವ ಐತಾಳ್, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಕುಮಾರ್ ಭಂಡಾರಿ, ಎ.ವಾದಿರಾಜ, ಜಿ.ಕೆ.ಸುಂದರ್, ಪ್ರಧಾನ ಅರ್ಚಕ ಸುನಿಲ್ ಭಟ್, ದಯಾನಂದ ಹೊನ್ನಯ್ಯ ಕೋಟ್ಯಾನ್, ಅನುರಾಧ, ಹೇಮಾವತಿ, ಗೌರವಾಧ್ಯಕ್ಷರು, ಗೌರವ ಸಲಹೆಗಾರರು, ಮಹಾ ಪೋಷಕರು, ಪದಾಧಿ ಕಾರಿಗಳು, ಉಪ ಸಮಿತಿ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಸಂಜೆ ಧಾರ್ಮಿಕ ಸಭೆ ನಡೆಯಿತು. ಏ.22ರಂದು ಬೆಳಗ್ಗೆ ನೂತನ ಬ್ರಹ್ಮರಥ ಸಮರ್ಪಣೆ, ಬ್ರಹ್ಮರಥಾರೋಹಣ, ಹಗಲು…

Read More

ಮಂಗಳೂರು, ಎ. 23 : ಉಳ್ಳಾಲ ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಇದರ 22 ನೇ ಪಂಚವಾರ್ಷಿಕ 432 ನೇ ವಾರ್ಷಿಕ ಉರೂಸ್ ಸಮಾರಂಭವು ಖಾಝಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಎಪ್ರಿಲ್ 24 ರಿಂದ ಮೇ 18 ವರೆಗೆ ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪ್ರಿಲ್ 24 ರಂದು ಅಸರ್ ನಮಾಝ್ ಬಳಿಕ ವಾರ್ಷಿಕ ದ್ವಿಕ್ಸ್ ಮಜಿಸ್ ಹಾಗೂ ಉರೂಸ್ ಉದ್ಘಾಟನೆ ನಡೆಯಲಿದೆ. ಉಳ್ಳಾಲ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮವನ್ನು ಸಯ್ಯದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಬಳ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಯ್ಯದ್ ಅಲಿ ಬಾಫಕಿ ತಂಬಳ್, ಇಬ್ರಾಹಿಂ ಖಲೀಲ್ ತಂಜಳ್ ಕಡಲುಂಡಿ, ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಶರೀಅತ್ ಕಾಲೇಜು ಪ್ರಾಂಶುಪಾಲ ಪ್ರೊ.ಅಹ್ಮದ್…

Read More

ಮಂಗಳೂರು, ಎ.22 : ಪಾವನಿ ಸಿಲ್ಕ್ಸ್ ಮತ್ತು ಟೆಕ್ಸ್‌ಟೈಲ್ಸ್ ಸಂಸ್ಥೆಯ 2ನೇ ಮಳಿಗೆ ನಗರದ ಭವಂತಿ ಸ್ಟ್ರೀಟ್ನ ಮಹಾಲಕ್ಷ್ಮೀ ಕಮರ್ಷಿಯಲ್  ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಶುಭಾರಂಭಗೊಂಡಿತು. ಕಟ್ಟಡದ ಮಾಲಕ ರವೀಂದ್ರ ನಿಕಮ್ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಮಕ್ಕಳಿಂದ ದೀಪ ಪ್ರಜ್ವಲನೆ ನಡೆಸಲಾಯಿತು. ಮುಖ್ಯ ಅತಿಥಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮ ಬಹಳ ಸವಾಲು ಎದುರಿಸುತ್ತಿದೆ.ಬಟ್ಟೆ ವಿನ್ಯಾಸದಲ್ಲಿ ನಿರಂತರ ಬದಲಾವಣೆ ವ್ಯಾಪಾರಿಗಳಿಗೆ ಸವಾಲಾಗಿದೆ. ಗ್ರಾಹಕರಿಗೆ ಸಂತೃಪ್ತಿಯ ಸೇವೆ, ಸಿಬ್ಬಂದಿಗಳ ಉತ್ತಮ ನಗುಮೊಗದ ಸೇವೆಯಿಂದ ವಾಪಾರದಲ್ಲಿ ಯಶಸ್ಸು ಸಾಧ್ಯ ಎಂದರು. ದೈವಜ್ಞ ಕೆ.ಸಿ.ನಾಗೇಂದ್ರ ಭಾರದ್ವಾಜ್ ಅವರು ಮಾತನಾಡಿ,ಸಂಸ್ಥೆಯ 10ನೇ ವರ್ಷದ ಸಂಭ್ರಮದಲ್ಲಿದ್ದೇವೆ. ಸಂಸ್ಥೆಯು ಈಗ ಮತ್ತೊಂದು ಶಾಖೆ ಆರಂಭಿಸಿದ್ದು, ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಐಸಿವೈಎಂ ನಿರ್ದೇಶಕ ರೆ. ಫಾ.ಅಶ್ವಿನ್ ಕಾರ್ಡೋಝ ,ಬೋಳಾರ ಮುಹಿಯುದ್ದೀನ್ ಜುಮಾ ಮಸೀದಿಯ ಬಿ.ಕೆ.ಇಲ್ಯಾಸ್ ಬಾಖವಿ ಖತೀಬ್, ವಕೀಲರಾದ ದಯಾನಂದ ರೈ , ವಕೀಲರಾದ ಅಬ್ದುಲ್ ಖಾದರ್ ಇಡ್ಯಾ…

Read More

ಪುತ್ತೂರು, ಎ. 22 ;ಇಲ್ಲಿನ  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದಲ್ಲಿ ಏ.17ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವವು ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು. ಬ್ರಹ್ಮ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮರಥೋತ್ಸವದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತಿಯಲ್ಲಿ ಉತ್ಸವಾದಿಗಳು ನಡೆಯಿತು. ಏ.17ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಉತ್ಸವ, ವಸಂತ ಕಟ್ಟೆಪೂಜೆ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.ಸಂಜೆ ದೇವರು ಒಳಾಂಗಣದಿಂದ ಹೊರಾಂಗಣಕ್ಕೆ ಪ್ರವೇಶ ಮಾಡಿದರು.ಬಳಿಕ ಶ್ರೀ ದೇವರ ಉತ್ಸವದ ಬಳಿಕ ಕಂಡನಾಯಕ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆಯಿತು.ಬಳಿಕ ಶ್ರೀ ದೇವರಿಗೆ ವಾದ್ಯ, ಬ್ಯಾಂಡ್ ಸೇವೆ ನಡೆಯಿತು.ಆದಾದ ಬಳಿಕ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ಹೊರಾಂಗಣ ಪ್ರವೇಶವಾಯಿತು.ಈ ಸಂದರ್ಭ ಶ್ರೀ ದೇವರ ಮತ್ತು ಉಳ್ಳಾಲ್ತಿ ಅಮ್ಮನವರ ಉತ್ಸವ ನಡೆಯಿತು.ಅಲ್ಲಿಂದ ರಾಜಾಂಗಣದಿಂದ ಶ್ರೀ ದೇವರು ಉಳ್ಳಾಲ್ತಿ ದೈವಗಳ ಭಂಡಾರದ ಜೊತೆ ಅಲಂಕೃತಗೊಂಡ ಭವ್ಯ ಬ್ರಹ್ಮರಥದ ಬಳಿ ತೆರಳಿದರು. ಅಲ್ಲಿ…

Read More

ಗಣೇಶಪುರ, ಎ, 21 : ಶ್ರೀ ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಕಲಶ, ರಥ ಸಮರ್ಪಣೆ, ನಾಗಮಂಡಲ ಸೇವೆ ಪ್ರಯುಕ್ತ ಹೊರೆಕಾಣಿಕೆ ಶೋಭಾಯಾತ್ರೆಗೆ ಎ, 18, ಶುಕ್ರವಾರ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತಿಸರ ಐ. ರಮಾನಂದ ಭಟ್ ಪ್ರಾರ್ಥಿಸಿ ಚಾಲನೆ ನೀಡಿದರು. ಶೋಭಾಯಾತ್ರೆಯನ್ನು ಒಡಿಯೂರು ಶ್ರೀ ಗುರುದೇವಾ ನಂದ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಶಾಸಕ ಡಾ। ಭರತ್ ಶೆಟ್ಟಿ ವೈ. ಅವರು ಮಾತನಾಡಿ, ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಬ್ರಹ್ಮಕಲಶ ಆಗುತ್ತಿದ್ದು, ಈ ಬ್ರಹ್ಮಕಲಶ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಬಾಂಧವರು ಪಾಲ್ಗೊಳ್ಳುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಮಾತ್ರ ನಾಡಿ, ಹೊರೆಕಾಣಿಕೆಯನ್ನು ಭಕ್ತಿಯಿಂದ ಕಾಲ್ನಡಿಗೆ ಮೂಲಕ ಕೊಂಡೊಯ್ದು ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದೇವೆ.ಪ್ರವೀಣ್ ಶೆಟ್ಟಿ ಸುಧಾಮ ಶೆಟ್ಟಿ ನೇತೃತ್ವದಲ್ಲಿ ಸಮಿತಿ ಸದಸ್ಯರು ಹೊರೆಕಾಣಿಕೆ ಹೊಣೆ ನಿರ್ವಹಿಸಿದ್ದಾರೆ ಎಂದರು. ಹಿರಿಯರಾದ ಮಂಜುಕಾವ ಕಾವರ ಮನೆ ಪಣಂಬೂರು, ನವೀನ್ ಕುಮಾ ರೈ,…

Read More

ಬೆಳ್ತಂಗಡಿ, ಎ. 21 : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೂತನ ಕಲ್ಯಾಣಮಂಟಪ ಗಳಾದ ಶ್ರೀ ಉಮಾಮಹೇಶ್ವರ, ಶ್ರೀ ಶಿವ ಪಾರ್ವತಿ, ಶ್ರೀ ಗೌರೀಶಂಕರ ಸಮುಚ್ಚಯವನ್ನು ಎ.20, ಭಾನುವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಧರ್ಮಾಧಿಕಾರಿಯಾದ ಡಾ| ಡಿ.ವೀರೇಂದ್ರ ಹೆಗ್ಗಡೆ ಯವರ ಧಾರ್ಮಿಕ, ಶಿಕ್ಷಣ, ಆರೋಗ್ಯ ಸಹಿತ ಬಹುಮುಖಿ ಸೇವೆ ದೇಶಕ್ಕೆ ಮಾದರಿ. ಧರ್ಮಸ್ಥಳ ಕ್ಷೇತ್ರದಲ್ಲಿ ಮೂರು ಕಲ್ಯಾಣ ಮಂಟಪ ಉದ್ಘಾಟಿಸುವ ಭಾಗ್ಯ ನನಗೆ ದೊರೆತಿರುವುದು ಧನ್ಯತೆಯ ಭಾವ ಮೂಡಿಸಿದೆ ಎಂದರು. ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಯವರು ಮಾತನಾಡಿ, ದೇಗುಲದ ಹಿಂದಿನ ಹಳೆಯ ಕಲ್ಯಾಣ ಮಂಟತೆರವುಗೊಳಿಸಿ, ಈಗ ಹೊಸ ಕಲ್ಯಾಣ ಮಂಟಪಗಳ ಸಮುಚ್ಚಯವನ್ನು ನಿರ್ಮಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ನೂತನ ಕಲ್ಯಾಣಮಂಟಪಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ, , ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಾಜಿ ವಿಧಾನಪರಿಷತ್ ಸದಸ್ಯ…

Read More

ಉರ್ವ, ಏ.21 : ಉರ್ವ ಬೋಳೂರು ಶ್ರೀ ಕೊರಗಜ್ಜನ ಕ್ಷೇತ್ರ ದಲ್ಲಿ 19ನೇ ವಾರ್ಷಿಕ ನೇಮೋತ್ಸವವು ತಾ. 18-04-2025 ನೇ ಶುಕ್ರವಾರದಿಂದ 20-04-2025 ರವಿವಾರದ ತನಕ ವಿಜ್ರಂಭಣೆಯಿಂದ ಜರಗಿತು. ಎ. 18ರಂದು ಶುಕ್ರವಾರ ಪ್ರಾರ್ಥನೆ, ಪುಣ್ಯಹ, ಗಣಹೋಮ, ನವಕ ಕಲಶ, ಪರ್ವ ಪೂಜೆ, ತೋರಣ ಮುಹೂರ್ತ ವೇ। ಮೂ। ಶ್ರೀ. ಕೆ. ಪುರುಷೋತ್ತಮ ಭಟ್ (ಶ್ರೀ ವೆಂಕಟರಮಣ ದೇವಸ್ಥಾನ, ಬೊಕ್ಕಪಟ್ಟ ಮಂಗಳೂರು) ಇವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 10ಕ್ಕೆ ಕ್ಷೇತ್ರದ ಪ್ರಧಾನ ದೈವ ಸಾರಲ ಪಟ್ಟದ ಕೊರಗಜ್ಜನಿಗೆ ಸೀಯಾಳಾಭಿಷೇಕ ನಂತರ ಪರ್ವ ಸೇವೆ, ಪ್ರಸಾದ ವಿತರಣೆ ನಡೆಯಿತು. ಎ. 19ರಂದು ಶನಿವಾರ ಸಂಜೆ ಶ್ರೀ ಚಾಮುಂಡೇಶ್ವರಿ-ಕತ್ತಲೆಕಾನ ಗುಳಿಗ ದೈವಗಳ ಸಿರಿ ಸಿಂಗಾರದ ನೇಮೋತ್ಸವ,ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಗಂಧ ಪ್ರಸಾದ ವಿತರಣೆ ನಡೆಯಿತು. ಈ ಪ್ರಯುಕ್ತ ತಾ. 20-04-2025 ಆದಿತ್ಯವಾರ ರಾತ್ರಿ 7.00 ಗಂಟೆಗೆ ಕ್ಷೇತ್ರದ ಪ್ರಧಾನ ದೈವ ಸಾರಲ ಪಟ್ಟದ ಕೊರಗಜ್ಜನಿಗೆ ದೊಂದಿ ಬೆಳಕಿನ (ತುಡರ ಕೋಲ) ಸೇವೆ ನಂತರ ಅಗೇಲು ಸೇವೆ,…

Read More

ಮಂಗಳೂರು, ಎ.20 : ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ನ  ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ ಪರೀಕ್ಷೆ 2025 (ಸೆಷನ್- 2) ನಲ್ಲಿ ತಮ್ಮ ವಿದ್ಯಾರ್ಥಿಗಳ  ಸಾಧನೆಯನ್ನು ಹೆಮ್ಮೆಯಿಂದ ಘೋಷಿಸಿದೆ. ಮಂಗಳೂರಿನ ಅನಿಕೇತ್ ಡಿ ಶೆಟ್ಟಿ (99.90) ವಿಟ್ಟಲ್ ದಾಸ್ ಎ (99.90), ರೈಮೆಂಡ್ ಎಲಿಜಾ ಪಿಂಟೋ (99.62,) ಆಯುಷಾ ಯು ನಾಯಕ್ (99.34)  ಪರೀಕ್ಷೆಯ ಎರಡನೇ ಅವಧಿಯಲ್ಲಿ 99.90 ಶೇಕಡಾ ಅಂಕಗಳನ್ನು ಗಳಿಸಿದ್ದಾರೆ. ಈ ಫಲಿತಾಂಶಗಳು ಸವಾಲಿನ ಪರೀಕ್ಷೆಯಲ್ಲಿ ದೊರೆತ ಯಶಸ್ಸು  ಆಗಿರುತ್ತದೆ. ಜೆಇಇ ಮೇನ್ 2025 ರಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಅವರ ಕಠಿಣ ಪರಿಶ್ರಮ ಈ ಅತ್ಯುತ್ತಮ ಫಲಿತಾಂಶಗಳಿಗೆ ಕಾರಣವಾಗಿದೆ. ನಮ್ಮ ಎಲ್ಲಾ ಯಶಸ್ವಿ ವಿದ್ಯಾರ್ಥಿಗಳಿಗೆ ಪ್ರಯಾಣದ ಮುಂದಿನ ಹಂತಗಳಿಗೆ ಶುಭ ಹಾರೈಸುತ್ತೇವೆ  ಎಂದು ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ನ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ ಅವರು ತಿಳಿಸಿದರು. ಈ ವರ್ಷ ನಿಗದಿಯಾಗಿದ್ದ ಎರಡನೇ…

Read More

ಸುರತ್ಕಲ್,ಏ.19 : ಕಾಟಿಪಳ್ಳ ಗಣೇಶಪುರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸುರತ್ಕಲ್ ಜಂಕ್ಷನನಿಂದ ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣಾ ಭವ್ಯ ಶೋಭಾಯಾತ್ರೆ ಏ.12  ಶನಿವಾರ ನಡೆಯಿತು. ಈ ಸಂದರ್ಭದಲ್ಲಿ,ಶ್ರೀ ಕ್ಷೇತ್ರ ಗಣೇಶಪುರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಕಾರ್ಯನಿರ್ವಹಣಾಧಿಕಾರಿ , ಗ್ರಾಮಸ್ಥರು ಭಕ್ತರು ಮತ್ತಿತರರು ಉಪಸ್ಥಿತರಿದ್ದರು.

Read More

ಮಂಗಳೂರು, ಎ.೧೯ : ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆಯು ಶನಿವಾರ ನಗರದ ಫಾ.ಮುಲ್ಲರ್ ಆಸ್ಪತ್ರೆ ಬಳಿ ನೆರವೇರಿತು.ಫಾ.ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ನಿರ್ದೇಶಕ ವಂ|ಫಾ|ರಿಚಾರ್ಡ್ ಕುವೆಲ್ಲೊ ಅವರು ಆಶೀರ್ವದಿಸಿ, ಯೋಜನೆಯು ಯಶಸ್ವಿಯಾಗಿ ಪೂರ್ಣಗೊಂಡು ಜನರ ಬಳಕೆಗೆ ಶೀಘ್ರ ಸಿಗುವಂತಾಗಲಿ ಎಂದರು. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಕಳೆದೊಂದು ತಿಂಗಳಲ್ಲೇ ರೋಹನ್ ಸಂಸ್ಥೆಯ ನಾಲ್ಕು ಪ್ರಮುಖ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ, ಬಹುತೇಕ ಎಲ್ಲ ಫ್ಲಾಟ್‌ಗಳೂ ಮಾರಾಟಗೊಂಡಿವೆ, ಕಂಕನಾಡಿಯ ಪ್ರಮುಖ ಆಯಕಟ್ಟಿನ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಇಥೋಸ್ನ ಉಳಿದ ಫ್ಲಾಟ್‌ಗಳೂ ಕೂಡಾ ಶೀಘ್ರ ಮಾರಾಟಗೊಳ್ಳಲಿವೆ, ಜನರ ಅಭಿರುಚಿಗೆ ತಕ್ಕಂತೆಯೇ ಕಟ್ಟಡಗಳನ್ನು ನಿರ್ಮಿಸುವ ಕಾರಣ ಇದು ಸಾಧ್ಯವಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಅವರು ಮಾತನಾಡಿ, ಕಂಕನಾಡಿ ಪ್ರದೇಶದಲ್ಲಿ ಈಗ ನಿರ್ಮಾಣಗೊಳ್ಳಲಿರುವ ರೋಹನ್ ಇಥೋಸ್   ಆಕರ್ಷಕ  ಫ್ಲಾಟ್‌ ಆಗಿ ಮೂಡಿಬರಲಿದೆ. ರೋಹನ್ ಮೊಂತೇರೊ ಅವರ  ಪ್ರಾಮಾಣಿಕತೆ  ಅವರು  ಇಷ್ಟು ಎತ್ತರಕ್ಕೇರಲು  ಕಾರಣ ಎಂದರು. ಮಾಜಿ…

Read More