Subscribe to Updates
Get the latest creative news from FooBar about art, design and business.
Author: admin
ಬೆಂಗಳೂರು, ಡಿ. 28: ನಿಗದಿತ ಕಿ.ಮೀ. ಗಳಷ್ಟು ಸಂಚರಿಸಿದ ಬಳಿಕ ಸಾಮರ್ಥ್ಯ ಕಳೆದುಕೊಂಡ ಕೆಎಸ್ ಆರ್ ಸಿ ಬಸ್ ಗಳನ್ನು ಗುಜರಿಗೆ ಹಾಕಬೇಕು. ಗುಜರಿಗೆ ಹಾಕಿದ ಬಸ್ಗಳನ್ನು ಮತ್ತೆ ಸಂಚಾರಕ್ಕೆ ಬಳಸಲು ಅನುಮತಿ ನೀಡುವಂತಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಸಾಮರ್ಥ್ಯ ಕಳೆದುಕೊಂಡು ಗುಜರಿಗೆ ಸೇರಬೇಕಾಗಿದ್ದ ಕೆಎಸ್ ಆರ್ ಟಿಸಿ ಬಸ್ ನಿಂದ ಅಪಘಾತ ಉಂಟಾಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಪ್ರಕರಣವೊಂದರಲ್ಲಿ ನ್ಯಾ. ರಾಮಚಂದ್ರ ಡಿ.ಹುದ್ದಾರ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಮಹತ್ವದ ಆದೇಶ ಹೊರಡಿಸಲಾಗಿದೆ. ಬಸ್ಗಳು ಸಂಚಾರಕ್ಕೆ ಅರ್ಹವಾಗಿರುವ ಬಗ್ಗೆ ಪ್ರತಿ ವರ್ಷವೂ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಸುಸ್ಥಿತಿ ದೃಢೀಕರಣ ಪತ್ರ ಪಡೆಯಬೇಕು. ಆರ್ಟಿಓ ವತಿಯಿಂದ ದೃಢೀಕರಣ ಪತ್ರ ಪಡೆದ ಬಸ್ಗಳಿಗೆ ಮಾತ್ರವೇ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.
ಚೆನ್ನೈ, ಡಿ. 27 : ರಸಗೊಬ್ಬರ ತಯಾರಿಕಾ ಘಟಕದ ಪೈಪ್ ನಲ್ಲಿ ಅಮೋನಿಯಾ ಸೋರಿಕೆಯಾದ ಪರಿಣಾಮ 6 ಜನರು ಅಸ್ವಸ್ಥಗೊಂಡ ಘಟನೆ ತಮಿಳುನಾಡು ಸಮೀಪದ ಎನ್ನೋ ರ್ ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ನ ಸಮುದ್ರ ಸಮೀಪ ಹಾದು ಹೋಗಿದ್ದ ಪೈಪ್ ನಿಂದ ಅಮೋನಿಯಾ ಗ್ಯಾಸ್ ಸೋರಿಕೆಯಾದ ಪರಿಣಾಮ 6 ಮಂದಿ ಅಸ್ವಸ್ಥಗೊಂ ಡಿದ್ದಾರೆ ಎಂದು ಹೇಳಲಾಗಿದೆ.ಅಸ್ವಸ್ಥಗೊಂಡ ಆರು ಮಂದಿ ಚಿಕಿತ್ಸೆ ಪಡೆದು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯರು ನೀಡಿದ ದೂರನ್ನು ಆಲಿಸಿದ ಬಳಿಕ ಅಮೋನಿಯಾ ಗ್ಯಾಸ್ ಪೈಪ್ ಲೈನ್ ನಲ್ಲಿ ಸೋರಿಕೆಯಾಗುತ್ತಿರುವುದನ್ನು ಪತ್ತೆ ಹಚ್ಚಿ, ಅದನ್ನು ಸರಿಪಡಿಸಲಾಗಿದೆ ಎಂದು ತಮಿಳುನಾಡು ಪರಿಸರ ನಿಯಂತ್ರಣ ಮಂಡಳಿ ಹೇಳಿದೆ. ತುರ್ತು ಸೇವೆಗಾಗಿ ಸ್ಥಳದಲ್ಲಿ ಮೆಡಿಕಲ್ ಮತ್ತು ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಆವಡಿ ಪೊಲೀಸ್ ಕಮಿಷನರ್ ವಿಜಯ್ ಕುಮಾರ್ ಅವರು ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.
ಹಿರಿಯಡ್ಕ, ಡಿ. 26 : ಈಜಲು ತೆರಳಿದ್ದ ಯುವಕನೊಬ್ಬ ಹೊಳೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೈರಂಪಳ್ಳಿ ಗ್ರಾಮದ ಕೆ.ಸಿ.ರೋಡ್ನ ಪಟ್ಟಿಬಾವು ಹೊಳೆಯಲ್ಲಿ ನಡೆದಿದೆ. ಮೃತರನ್ನು ಅಜಯ್ (21) ಎಂದು ಗುರುತಿಸಲಾಗಿದೆ. ರವಿವಾರದಂದು ವಾಲಿಬಾಲ್ ಆಟ ಆಡಿದ ಬಳಿಕ ಅಜಯ್ ತಾನು ಈಜಿಕೊಂಡು ನದಿಯ ಇನ್ನೊಂದು ದಡಕ್ಕೆ ಹೋಗುವುದಾಗಿ ಸ್ನೇಹಿತರತ್ತಿರ ಹೇಳಿ ಹೊಳೆಗೆ ಇಳಿದಿದ್ದು, ಮಧ್ಯದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಡಿ.22 : ಏಳನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಬುಧವಾರ ಕುಂದಾಪುರದ ಕಟ್ಕೆರೆ ಎಂಬಲ್ಲಿ ನಡೆದಿದೆ. ರಾಜಶೇಖರ ಎನ್ನುವರ ಪುತ್ರಿ ರಿಷಿತಾ (13) ಮೃತ ವಿದ್ಯಾರ್ಥಿನಿ. ರಿಷಿತಾ ಡಿ.20 ರಂದು ಸಂಜೆ ಶಾಲೆಯಿಂದ ಬಂದವಳು ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು, ಡಿ. 21 : ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚಗುತ್ತಿದೆ. ರಾಜ್ಯದಲ್ಲಿ 22 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬ ವೃದ್ಧ ರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಲ್ಲಿಯತನಕ ಒಟ್ಟುಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 92 ಸಕ್ರಿಯ ಪ್ರಕರಣಗಳಿವೆ. 20 ಸೋಂಕಿತರು ಆಸ್ಪತ್ರೆಯಲ್ಲಿದ್ದು, ಈ ಪೈಕಿ 7 ಜನರು ಐಸಿಯುನಲ್ಲಿದ್ದಾರೆ. ಉಳಿದ 72 ಜನರು ಹೋಂ ಐಸೋಲೇಷನ್ ನಲ್ಲಿದ್ದಾರೆ. ಈಗಾಗಲೇ 5 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಮಣಿಪಾಲ, ಡಿ. 20 : ಮಣಿಪಾಲ ಫಾರ್ಮಸ್ಯುಟಿಕಲ್ ಸೈನ್ಸ್ ಕಾಲೇಜಿನ ಪ್ರೊಫೆಸರ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕಾಲೇಜಿನಲ್ಲಿ ಮಂಗಳವಾರ ನಡೆದಿದೆ. ಮೃತರನ್ನು ಮಣಿಪಾಲ ಕಾಲೇಜಿನ ಪ್ರೊ. ಡಾ.ಅಲೆಕ್ಸ್ ಜೋಸೆಫ್(47) ಎಂದು ಗುರುತಿಸಲಾಗಿದೆ. ಕಾಲೇಜಿನಲ್ಲಿರುವ ವೇಳೆ ಡಾ.ಅಲೆಕ್ಸ್ ಜೋಸೆಫ್ ಅವರಿಗೆ ವಿಪರೀತ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರನ್ನು ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಬೀಜಿಂಗ್ , ಡಿ. 20 : ಚೀನಾದ ಗನ್ಸು- ಕಿಂಗ್ಹೈ ಗಡಿ ಪ್ರದೇಶದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 111 ಮಂದಿ ಮೃತಪಟ್ಟಿದ್ದು, 400ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದರಿಂದ ಕಟ್ಟಡಗಳು ನೆಲಸಮಗೊಂಡಿದ್ದು ಅವಶೇಷಗಳಡಿ ಹಲವು ಜನರು ಸಿಲುಕಿದ್ದು ಅವರನ್ನು ರಕ್ಷಣಾ ತಂಡದಿಂದ ಭರದ ಕಾರ್ಯಾ ಚರಣೆ ನಡೆಸುತ್ತಿದ್ದು, ಇದುವರೆಗೂ ಸುಮಾರು ನೂರಕ್ಕೂ ಅಧಿಕ ಜನರು ಸಾವನ್ನಪಿರುವ ಕುರಿತು ವರದಿಯಾಗಿದೆ.ಅಲ್ಲದೆ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಾಮನಗರ,ಡಿ. 18 : ಬೆಳಗಿನ ಜಾವ ತೋಟಕ್ಕೆ ನೀರು ಬಿಡುಲು ಹೋದ ರೈತನನ್ನು ಕಾಡಾನೆಯೊಂದು ತುಳಿದು ಬಲಿ ಪಡೆದುಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನಿ ಹಳ್ಳಿಕೆರೆದೊಡ್ಡಿಯಲ್ಲಿ ನಡೆದಿದೆ. ಮೃತರನ್ನು 64 ವರ್ಷದ ಉರ್ಫ್ ತಿಮ್ಮಪ್ಪ ಎಂದು ಗುರುತಿಸಲಾಗಿದೆ. ಐದು ಗಂಟೆಗೆ ನೀರು ಬಿಡಲು ತೆರಳಿದ್ದ ತಂದೆ, ಇನ್ನೂ ಯಾಕೆ ಮನೆಗೆ ಬಂದಿಲ್ಲ ಎಂದು ತಿಮ್ಮಪ್ಪ ಅವರ ಮಗ ತೋಟಕ್ಕೆ ನೋಡಲು ಹೋದಾಗ ತೋಟದಲ್ಲಿ ಕಾಡಾನೆಯ ತುಳಿತಕ್ಕೆ ಒಳಗಾಗಿ ಸಾವನಪ್ಪಿದ ತಂದೆ ಶವ ಬಿದ್ದಿದೆ ಎನ್ನಲಾಗಿದೆ.
ಹೊಸದಿಲ್ಲಿ, ಡಿ .17 : ಕೊರೊನಾ ಸೋಂಕು ಮತ್ತೆ ದೇಶದಲ್ಲಿ ಹೆಚ್ಚುತ್ತಿದ್ದು,ವಿಶ್ವದ ಹಲವೆಡೆ ವ್ಯಾಪಿಸಿರುವ ಕೋವಿಡನ ಹೊಸ ಮಾದರಿಯ ತಳಿ ಜೆಎನ್.1 ಇದೀಗ ಭಾರತಕ್ಕೂ ಕಾಲಿಟ್ಟಿದೆ. ಅತ್ಯಂತ ವೇಗವಾಗಿ ಹರಡಬಲ್ಲ ಕೊರೊನಾ ಸೋಂಕಿನ ಉಪತಳಿ ಜೆಎನ್.1 ದೇಶದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಪತ್ತೆಯಾಗಿದೆ. ಇದು ದೇಶದಲ್ಲಿ ಪತ್ತೆಯಾದ ಮೊದಲ ಪ್ರಕರಣವಾಗಿದೆ. ಭಾರತ ಸೇರಿ ಜಗತ್ತಿನೆಲ್ಲೆಡೆ ಮತ್ತೊಮ್ಮೆ ಕೊರೊನಾ ವಕ್ಕರಿಸುವಂತಿದೆ. ಮತ್ತೆ ಕೊರೊನಾ ಕೇಸ್ಗಳ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕಾ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ ಕೊರೊನಾದ ಉಪತಳಿ ಜೆಎನ್.1 ಭಾರತದಲ್ಲೂ ಇದೀಗ ಕಂಡುಬಂದಿದೆ. ಕೇರಳದಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಕರ್ನಾಟಕ ರಾಜ್ಯ ದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜೆಎನ್.1 ತಳಿ ವೇಗವಾಗಿ ವ್ಯಾಪಿಸುತ್ತದೆ. ಆದರೂ ಸೋಂಕಿನ ತೀವ್ರತೆಯ ಬಗ್ಗೆ ಇನ್ನೂ ಮಾಹಿತಿ ಲಭ್ಯಿಸಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿಡಿಸಿ) ಮಾಹಿತಿ ನೀಡಿದೆ.
ತಿರುವನಂತಪುರಂ, ಡಿ. 16 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕೆಎಸ್‌ಆರ್‌ಟಿಸಿ ಹೆಸರು (ಟ್ರೇಡ್ ಮಾರ್ಕ್ ) ಬಳಕೆಗೆ ಯಾವುದೇ ಅಭ್ಯಂತರವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಕೇರಳ ರಾಜ್ಯ ಆರ್ ಟಿಸಿ ಸಲ್ಲಿಸಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಎಸ್ ಆರ್ ಟಿಸಿ ಹೆಸರು ಬಳಸಬಾರದು, ಕೇರಳ ರಾಜ್ಯಕ್ಕೆ ಮಾತ್ರ ಕೆಎಸ್ ಆರ್ ಟಿಸಿ ಹೆಸರು ಬಳಸಲು ಅನುಮತಿ ನೀಡಬೇಕು ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಮದ್ರಾಸ್ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿತ್ತು. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆಎಸ್ ಆರ್ ಟಿಸಿ ಹೆಸರು ಬಳಸಬಹುದು. ಇದಕ್ಕೆ ಯಾವುದೇ ರೀತಿಯ ಅಭ್ಯಂತರವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟನೆ ನೀಡಿದೆ.