Subscribe to Updates
Get the latest creative news from FooBar about art, design and business.
Author: admin
ಮಂಗಳೂರು ,ಜುಲೈ, 24 : ಪಂಪ್ ವೆಲ್ ನಲ್ಲಿರುವ ಇಂಡಿಯಾ ಆಸ್ಪತ್ರೆ ಹಾಗೂ ಹೃದಯ ಸಂಸ್ಥೆಯು ಎರಡು ವಾಲ್ವ್-ಇನ್-ವಾಲ್ವ್ ಟಿ ಎವಿ ಆರ್ ಅಪರೂಪದ ಚಿಕಿತ್ಸಾ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಈ ಸ್ವರೂಪದ ಬಹು ಸವಾಲಿನ ಚಿಕಿತ್ಸೆ ಕರಾವಳಿಯ ಭಾಗದಲ್ಲಿ ನಡೆಯುವುದು ಇದೇ ಮೊದಲು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರವಾದ ಆಯೋರ್ಟಿಕ್ ವಾಲ್ವ್ ರೋಗ ಹೊಂದಿರುವ ರೋಗಳಿಗೆ ಸಾಮಾನ್ಯವಾಗಿ ಹೃದಯ ಶಸ್ತ್ರಚಿಕಿತ್ಸೆಯ ಮೂಲಕ ವಾಲ್ವ್ ಬದಲಾವಣೆ ಮಾಡಲಾಗುತ್ತದೆ. ಆದರೆ ಸುಮಾರು 10ರಿಂದ 15 ವರ್ಷಗಳಲ್ಲಿ ಆ ವಾಲುಗಳು ಕುಗ್ಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಪುನಃ ವಾಲ್ವ್ ಬದಲಿಸಲು ಮತ್ತೆ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಇದು ವಯಸ್ಕ ರೋಗಿಗಳಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ, ನೂತನ ತಂತ್ರಜ್ಞಾನದ ಮೂಲಕ ಹಳೆಯ ವಾಲ್ವ್ ಒಳಗೆ ಹೊಸ ವಾಲ್ವ್ ಅನ್ನು ಸ್ವಾಪಿಸಲಾಗುತ್ತದೆ.…
ಮಂಗಳೂರು ಜುಲೈ, 23 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 28ನೇ ಮಣ್ಣಗುಡ್ಡ ವಾರ್ಡಿನ ಗಾಂಧಿನಗರದ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ ಆವರಣದಲ್ಲಿ ಅಂಗನವಾಡಿ ಕೇಂದ್ರದ ಕೊಠಡಿಯ ಶಿಲನ್ಯಾಸವು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು. ಶಾಸಕರಾದ ವೇದವ್ಯಾಸ ಕಾಮತ್ ಅವರು ಮಾತಾಡಿ , ಸತತ ಪ್ರಯತ್ನದ ಫಲವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ 20 ಲಕ್ಷ ರೂ ವಿಶೇಷ ಅನುದಾನದಲ್ಲಿ ಮಂಗಳೂರು ನಗರ ದಕ್ಷಿಣಕ್ಕೆ ಗಾಂಧಿನಗರ ಹಾಗೂ ಕಸಬಾ ಬೆಂಗ್ರೆಯಲ್ಲಿ ಎರಡು ಅಂಗನವಾಡಿ ಕೊಠಡಿಗಳಿಗೆ ಮಂಜೂರಾತಿ ದೊರೆತಿದೆ. ಶೀಘ್ರದಲ್ಲಿಯೇ ಕಸಬಾ ಬೆಂಗ್ರೆಯಲ್ಲೂ ಶಿಲನ್ಯಾಸ ನೆರವೇರಿಸಿ ಕಾಮಗಾರಿ ಆರಂಭಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ನಿಕಟಪೂರ್ವ ಮ.ನ.ಪಾ ಸದಸ್ಯೆ ಸಂಧ್ಯಾ ಮೋಹನ್ ಆಚಾರ್ಯ, ಬಿಜೆಪಿ ಪ್ರಮುಖರಾದ ಮೋಹನ್ ಆಚಾರ್ಯ, ವಸಂತ್ ಶೇಟ್, ರಘುನಾಥ್ ಪ್ರಭು, ಗುರು ಚರಣ್, ಮುಖ್ಯ ಶಿಕ್ಷಕಿ ಶರ್ಮಿಳಾ ಡಿಸೋಜ, ಸಹ ಶಿಕ್ಷಕಿ ರಾಜೇಶ್ವರಿ ಪ್ರಭು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಕೆ.ಬಿ, ಶಾಲೆಯ ಶಿಕ್ಷಕರು ಹಾಗೂ…
ಮಂಗಳೂರು ಜುಲೈ, 22 : ಬಿಜೈ ಕಾಪಿಕಾಡ್ನಲ್ಲಿ ಶ್ರೀ ವಿನಾಯಕ ಫ್ರೆಂಡ್ಸ್ ಕ್ಲಬ್ (ರಿ) ವತಿಯಿಂದ 5ನೇ ವರ್ಷದ ಆಟಿಡೊಂಜಿ ಕೂಟ ಜುಲೈ,, 20 ರವಿವಾರ ಕುದ್ಮುಲ್ ರಂಗರಾವ್ ಸ್ಮಾರಕ ಸಭಾಂಗಣದಲ್ಲಿ ನಡೆಯಿತು. ಸಮಾರಂಭವನ್ನು ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್, ಸದಸ್ಯರು ಎಂ. ಶಶಿಧರ್ ಹೆಗ್ಡೆ ಅವರು ಉದ್ಘಾಟಿಸಿ. ಮಾತಾಡಿದರು. ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು ಅವರು ಮಾತಾಡಿ, ಹಿಂದಿನ ಕಾಲದಲ್ಲಿ ಆಟಿ ದಿನಗಳು ಕಷ್ಟಕರವಾಗಿದ್ದವು. ಅಂದಿನ ದಿನಗಳನ್ನು ನೆನಪಿಸುವ ಸಲುವಾಗಿ ಈ ಆಟಿಡೊಂಜಿ ಕೂಟ ಕಾರ್ಯಕ್ರಮ ಆಚರಿಸುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ವಿನಾಯಕ ಫ್ರೆಂಡ್ಸ್ ಕ್ಲಬ್ ಇದರ ಅಧ್ಯಕ್ಷರು ಎಚ್. ನವೀನ್ ಕುಮಾರ್ ಹೆಜಮಾಡಿ,ಮಂಗಳೂರು ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ರಜನೀಶ್ ಕಾಪಿಕಾಡ್ ಸಮಾರಂಭದಲ್ಲಿ ಮಾತಾಡಿದರು. ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ, 2025ರ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ಬೋಂದೆಲ್ ನ ಪ್ರಾಥಮಿಕ…
ಮಂಗಳೂರು ಜುಲೈ, 21: ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮಿಲಾಗ್ರಿಸ್ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ನೆರವೇರಿತು. ಮಿಲಾಗ್ರಿಸ್ ವಿದ್ಯಾ ಸಂಸ್ಥೆಯ ಸಂಚಾಲಕರು ವಂದನೀಯ ಗುರು ಬೊನವೆಂಚರ್ ನಜರೆತ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವೃಧ್ದಿಸಿಕೊಳ್ಳುವುದು. ನಾಯಕನಾದವನು ಶಿಸ್ತುಬದ್ಧತೆ, ಸಮಯದ ಪಾಲನೆ ಉತ್ತಮ ನಡೆ ನುಡಿ ಹೊಂದಿ ಇತರರಿಗೆ ಮಾದರಿಯಾಗಬೇಕೆಂದು ಹೇಳಿದರು. ಮುಖ್ಯ ಅತಿಥಿಯಾದ ಮಿಲಾಗ್ರಿಸ್ ಪದವಿ ಕಾಲೇಜಿನ ಪ್ರ್ರಾಂ್ಶುಪಾಲರಾದ ವಂದನೀಯ ಗುರು ಮೈಕಲ್ ಸಾಂತುಮಾಯರ್ ಹಾಗೂ ಶ್ರೀ ಸಿಲ್ವೆಸ್ಟರ್ ಮಸ್ಕರೇನಸ್, ಉಪಾಧ್ಯಕ್ಷರು, ಪ್ಯಾರಿಷ್ ಪಾಸ್ಟೋರಲ್ ಕೌನ್ಸಿಲ್ ಮಿಲಾಗ್ರಿಸ್ ಚರ್ಚ್ ಉಪಸ್ಥಿತರಿದ್ದರು. ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಮೇಲ್ವಿನ್ ವಾಸ್‌ವರು ನೂತನ ವಿದ್ಯಾರ್ಥಿ ಸಂಘದ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಜ್ಯೋತಿ ರತ್ನ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಪುಲ್ ಶೆಟ್ಟಿ ವಂದಿಸಿದರು. ಶೆರೆಲ್ ಡಿಸೋಜ ನಿರೂಪಿಸಿದರು.
ಮಂಗಳೂರು, ಜು.20 : ಧರ್ಮಸ್ಥಳ ಗ್ರಾಮದಲ್ಲಿ ಸರಣಿ ಹತ್ಯೆ ನಡೆದಿದೆ ಎನ್ನಲಾದ ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್.ಐ.ಟಿ)ಕ್ಕೆ ವರ್ಗಾಯಿಸಿ ರಾಜ್ಯ ಸರಕಾರ ಜು.19 ಶನಿವಾರ ಆದೇಶ ಹೊರಡಿಸಿದೆ. ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ 4 ಸದಸ್ಯರ ಐಪಿಎಸ್ ಅಧಿಕಾರಿಗಳ ಎಸ್‌ಐಟಿಯನ್ನು ರಚಿಸಿದೆ. ಎಸ್ ಐಟಿಯ ನೇತೃತ್ವವನ್ನು ಪ್ರಣವ್ ಮೊಹಂತಿ ವಹಿಸಿಕೊಂಡಿದ್ದಾರೆ. ಎಸ್.ಐ.ಟಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಅಗತ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒದಗಿಸಲಾಗುತ್ತದೆ ಎಂದು ಆದೇಶದಲ್ಲಿ ಸೇರಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ (BNS) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದಾಖಲಾಗಿರುವ ಅಪರಾಧ ಮತ್ತು ಕರ್ನಾಟಕದಾದ್ಯಂತ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ದಾಖಲಾಗಲಿರುವ ಎಲ್ಲಾ ಇತರ ಕ್ರಿಮಿನಲ್ ಪ್ರಕರಣಗಳನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು ರಚಿಸುವುದು ಸೂಕ್ತ ಎಂದು ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಧರ್ಮಸ್ಥಳ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಮಾಡಿಕೊಂಡಿದ್ದ ವ್ಯಕ್ತಿಯೋರ್ವ…
ಮಂಗಳೂರು,ಜು. 19: ಸ್ಕೂಲ್ ಲೀಡರ್ ಕನ್ನಡ ಚಲನಚಿತ್ರವು 50ನೇ ದಿನದ ಸಂಭ್ರಮಾಚರಣೆಯನ್ನು ಶುಕ್ರವಾರ ಸಿಟಿ ಸೆಂಟರ್ ಮಾಲ್ ನ ಭಾರತ್ ಸಿನೆಮಾಸ್ ನಲ್ಲಿ ನಡೆಸಿತು. ಸಿಟಿ ಸೆಂಟರ್ ಮಾಲ್ ನ ಭಾರತ್ ಸಿನೆಮಾಸ್ ನಲ್ಲಿ ನಡೆದ 50ನೇ ದಿನದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ನಿರ್ಮಾಪಕ ಸತ್ಯೇಂದ್ರ ಪೈ, ತುಳು ಚಲನಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್, ಚಿತ್ರದ ನಿರ್ದೇಶಕ ರಜಾಕ್ ಪುತ್ತೂರು ಮತ್ತಿತರರು ಮಾತಾನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕರಿಗೆ ಸಿನೆಮಾ ಪ್ರದರ್ಶನ ಏರ್ಪಡಿಸಿ, ಗೌರವಿಸ ಲಾಯಿತು. ಸನ್ ಮ್ಯಾಟ್ರಿಕ್ಸ್ ಬ್ಯಾನರಿನಲ್ಲಿ ತಯಾರಾಗಿರುವ ಕೆ.ಸತ್ಯೇಂದ್ರ ಪೈ ನಿರ್ಮಾಣದ ಸ್ಕೂಲ್ ಲೀಡರ್ ಕನ್ನಡ ಚಲನಚಿತ್ರದಲ್ಲಿ ರಝಾಕ್ ಪುತ್ತೂರು ಇವರು ಚಿತ್ರ ದ ಕಥೆ, ಚಿತ್ರ ಕಥೆ, ಸಂಭಾಷಣೆ ಜೊತೆಗೆ ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ.ಚಿತ್ರದಲ್ಲಿ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ದೀಪಕ್ ರೈ, ರಮೇಶ್ ಭಟ್ ನಟಿಸಿದ್ದಾರೆ. ಈ ಸಂದರ್ಭದಲ್ಲಿ ಸಹ ನಿರ್ಮಾಪಕ ಅಕ್ಷತ್ ವಿಟ್ಲ, ನಾಗೇಶ್ ಕಾಮತ್, ಯು. ವಿಶ್ವನಾಥ ಕುಯಿಲಾಡಿ ಸುರೇಶ್…
ಮಂಗಳೂರು, ಜು. 18 : ಉದ್ಯಮಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ ಕೋಟ್ಯಂತರ ರೂ. ವಂಚಿಸಿದ ಆರೋಪಿ ರೋಷನ್ ಸಲ್ಡಾನ ಎಂಬಾತನನ್ನು ಗುರುವಾರ ರಾತ್ರಿ ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಬಂಧಿಸಿರುವ ಆರೋಪಿ ರೋಶನ್ ಸಲ್ಡಾನ (43) ವಿರುದ್ಧ ಚಿತ್ರದುರ್ಗ ಹಾಗೂ ಮುಂಬೈನಲ್ಲೂ ವಂಚನೆ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಸುಧೀರ್ ರೆಡ್ಡಿ ಅವರು ತಿಳಿಸಿದ್ದಾರೆ. ಆರೋಪಿ ರೋಹನ್ ಸಲ್ಡಾನ ಉದ್ಯಮಿಯೆಂದು ಹೇಳಿಕೊಂಡು ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿ ದೇಶದ ವಿವಿಧ ಭಾಗಗಳ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ. ಕಳೆದ 3 ತಿಂಗಳಲ್ಲಿ ಆರೋಪಿಯ ವ್ಯವಹಾರ ಪರಿಶೀಲಿಸಿದಾಗ ಇತನು ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕಲ್ಕತ್ತಾ, ಸಾಂಗ್ಲಿ, ಲಕ್ನೋ ,ಬಾಗಲಕೋಟೆ ಇತ್ಯಾದಿ ಕಡೆಗಳಲ್ಲಿ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಸುಮಾರು 32 ಕೋಟಿ ರೂ. ಗಳನ್ನುಆರೋಪಿ ಮತ್ತು ಇತರರು ಪಡೆದುಕೊಂಡಿರುವುದು ಕಂಡುಬಂದಿರುತ್ತದೆ. ಉದ್ಯಮಿ ಹಾಗೂ ಶ್ರೀಮಂತ ವ್ಯಕ್ತಿಗಳನ್ನು ತನ್ನ…
ಬೆಳ್ತಂಗಡಿ,ಜು. 17 : ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಗುಂಡಿ ಅರಣ್ಯದಲ್ಲಿ ಕಾಡಾನೆಗಳ ಹಿಂಡಿನ ದಾಳಿಗೆ ವೃದ್ಧನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಸೌತಡ್ಕ ನಿವಾಸಿ ಬಾಲಕೃಷ್ಣ(60) ಎಂದು ಗುರುತಿಸಲಾಗಿದೆ. ಗ್ರಾಮಸ್ಥರ ಗುಂಪೊಂದು ಗುರುವಾರ ಬೆಳಿಗ್ಗೆ ಆನೆಗಳ ಹಿಂಡನ್ನು ಓಡಿಸಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆ, ಅರಣ್ಯ ಇಲಾಖೆ ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಬೆಂಗಳೂರು, ಜು. 16 : ನಗರದ ಹಲಸೂರು ಕೆರೆ ಬಳಿ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಎಂಬಾತನ ಹತ್ಯೆ ನಡೆದಿತ್ತು.ಈ ಕೊಲೆ ಸಂಬಂಧ ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ಅಲ್ಲದೆ ಜಗದೀಶ್, ಕಿರಣ್, ವಿಮಲ್ ಮತ್ತು ಅನಿಲ್ ಎಂಬವವರ ಮೇಲೂ ಎಫ್ಐಆರ್ ದಾಖಲಾಗಿದೆ. ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಅವರ ಮೇಲೆ ಹಲಸೂರು ಕೆರೆಯ ಬಳಿಯ ಅವರ ನಿವಾಸದ ಬಳಿ ಐದು ಜನರ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಹಲ್ಲೆಯ ನಂತರ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅವರ ತಾಯಿ ವಿಜಯಲಕ್ಷ್ಮಿ ಅವರು ಭಾರತಿನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ಭೈರತಿ ಬಸವರಾಜ್, ಅವರ ಸಹಾಯಕ ಜಗದೀಶ್ ಅಲಿಯಾಸ್ ಜಗ್ಗಾ ಮತ್ತು ಕಿರಣ್ ಎಂಬ ಸಂಬಂಧಿ ಸೇರಿದಂತೆ ಹಲವು ವ್ಯಕ್ತಿಗಳ ಹೆಸರುಗಳಿವೆ. ಶಾಸಕರು ಕೊಲೆಗೆ ಕುಮ್ಮಕ್ಕು ನೀಡಿದ್ದಾರೆ…
ಮಂಗಳೂರು, ಜು. 15 : ಇತ್ತೀಚೆಗೆ ರಾಜ್ಯದ ಯುವ ಜನರಲ್ಲಿ ಹೃದಯಾಘಾತದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಜಾಗೃತಿ,ಮುನ್ನೆಚ್ಚರಿಕೆ ಮತ್ತು ತಪಾಸಣೆ ಅಗತ್ಯ ಎಂದು ಹೃದಯ ತಜ್ಞ, ಮಂಗಳೂರು ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಅವರು ಸೋಮವಾರ ಪತ್ರಿಕಾಭನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬದಲಾದ ಜೀವನ ಪದ್ಧತಿಯಿಂದಾಗಿ ಯುವ ಸಮುದಾಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಫಾಸ್ಟ್ ಫುಡ್ ಸೇವನೆಯು ತೀವ್ರವಾಗಿ ಹೆಚ್ಚಾಗಿದ್ದು, ಇದರಲ್ಲಿ, ಕೃತಕ ಪದಾರ್ಥಗಳು ಇದ್ದು ಆರೋಗ್ಯಕ್ಕೆ ಹಾನಿಕಾರಕವಾಗುತ್ತವೆ. ಮನೆಯ ಅಡುಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಅತಿಯಾದ ಎಣ್ಣೆ ಪದಾರ್ಥ ಸೇವನೆಯೂ ಕೂಡ ಅಪಾಯಕಾರಿ. ಮೀನು ಸೇವನೆ ಹೃದಯದ ಆರೋಗ್ಯಕ್ಕೆ ಸೂಕ್ತವಾಗಿದೆ. ದೈಹಿಕ ಚಟುವಟಿಕೆಗಳು, ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.ಶಾಲೆ ಕಾಲೇಜುಗಳಲ್ಲ ದೈಹಿಕ ಚಟುವಟಿಕೆಗಳಿಗೆ ಆಧ್ಯತೆ ನೀಡಬೇಕು ಎಂದವರು ಹೇಳಿದರು. ಧೂಮಪಾನ, ಮದ್ಯಪಾನ, ಮಾದಕ ವಸ್ತು ಸೇವನೆ, ಕೆಲಸದ ಒತ್ತಡ, ವೈಯಕ್ತಿಕ ಜೀವನದ ಉದ್ವಿಗ್ನತೆ, ಶುಗರ್, ರಕ್ತದೊತ್ತಡ, ಕೊಬ್ಬು,…












