Author: admin

ಬೆಂಗಳೂರು,ಮೇ.22 : ಸ್ಯಾಮಿಸ್ ಡ್ರೀಮ್‌ಲ್ಯಾಂಡ್ ಸಂಸ್ಥೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರ ಹೃದಯಭಾಗದ ನಡುವೆ ನಿರ್ಮಾಣವಾಗುತ್ತಿರುವ ಉನ್ನತ ಮಟ್ಟದ ನಿವಾಸಗಳಿಗಾಗಿ ಎಂಬೆಸಿ ಬೊಲೆವಾರ್ಡ್, ಗೋದ್ರೇಜ್, ಅಸೆಟ್ಜ್, ಪೂರ್ವಂಕರ ಮುಂತಾದ ಪ್ರತಿಷ್ಠಿತ ಬೃಹತ್ ನಿರ್ಮಾಣ ಪಾಲುದಾರರೊಂದಿಗೆ ಸ್ಯಾಮಿಸ್ ಡ್ರೀಮ್‌ಲ್ಯಾಂಡ್ ಕೈಜೋಡಿಸಿದೆ. ಅಂತರಾಷ್ಟ್ರೀಯ ಹಾಗೂ ಅಮೇರಿಕಾದ ವಾಸ್ತುಶಿಲ್ಪ ಶೈಲಿಯಲ್ಲಿ ವಿನ್ಯಾಸಗೊಂಡಿರುವ ಈ ಯೋಜನೆಯು ಪ್ರಸ್ತುತ ಅತ್ಯಂತ ಬೇಡಿಕೆಯಲ್ಲಿದೆ. ನೋಂದಣಿಗಾಗಿ ಈಗ ಅವಕಾಶ ಕಲ್ಪಿಸಲಾಗಿದೆ. ಸ್ಯಾಮಿಸ್ ಡ್ರೀಮ್‌ಲ್ಯಾಂಡ್ ತನ್ನ ಎರಡು ಹೆಗ್ಗುರುತಿನ ವಸತಿ ಯೋಜನೆಗಳಾದ   ನೇಚರ್ಸ್ ಬೊಲೆವಾರ್ಡ್ ಮತ್ತು ಸನ್‌ರೈಸ್ ಬೊಲೆವಾರ್ಡ್   ಇವುಗಳನ್ನು ನಿನ್ನೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಚಾನೆಲ್ ಪಾಲುದಾರರ ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮಾವೇಶದಲ್ಲಿ ಹೆಮ್ಮೆಯಿಂದ ಲೋಕಾರ್ಪಣೆಗೊಳಿಸಿತು. ಈ ಯೋಜನೆಗಳ ಹಿಂದಿನ ದಾರ್ಶನಿಕರಾದ ಶ್ರೀ ಸ್ಯಾಮಿ ನನ್ವಾನಿ ಅವರು, ನಗರ ವಿಕಾಸದ ಕುರಿತಾದ ತಮ್ಮ ದೀರ್ಘಕಾಲೀನ ಮುನ್ನೋಟವನ್ನು ಸಭಿಕರೊಂದಿಗೆ ಹಂಚಿಕೊಂಡರು. ನೇಚರ್ಸ್ ಬೊಲೆವಾರ್ಡ್ ಮತ್ತು ಸನ್‌ರೈಸ್ ಬೊಲೆವಾರ್ಡ್ಗಳ ಮೂಲಕ  ನಾವು ಕೇವಲ ಗೃಹಗಳನ್ನು ನಿರ್ಮಿಸುತ್ತಿಲ್ಲ  ಬದಲಾಗಿ  ಪ್ರಕೃತಿ ಮತ್ತು ಆಧುನಿಕತೆಗಳು…

Read More

ಪುತ್ತೂರು, ಮೇ. 21 : ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದಕ್ಕೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಮೇ.18,ಭಾನುವಾರ ತಡರಾತ್ರಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪುತ್ತೂರು ನಗರದ ಉರ್ಲಾಂಡಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಮೃತರನ್ನು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರು ಎಂಬಲ್ಲಿನ ನಿವಾಸಿ ಸುದೀಪ್(36) ಎಂದು ಗುರುತಿಸಲಾಗಿದೆ. ಶಾಮಿಯಾನ ಸಾಗಿಸುತ್ತಿದ್ದ ಲಾರಿಯು ರಸ್ತೆ ಬದಿಯಲ್ಲಿ ಯಾವುದೇ ಮುನ್ನೆಚ್ಚರಿಕಾ ಫಲಕಗಳಿಲ್ಲದೆ ನಿಲ್ಲಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದ್ದು, ಜೊತೆಗೆ ತುಂತುರು ಮಳೆಯಿಂದಾಗಿ, ಲಾರಿ ನಿಲ್ಲಿಸಿದ್ದ ಬಗ್ಗೆ ಅರಿವಿಗೆ ಬಾರದೆ ಸುದೀಪ್ ಚಲಾಯಿಸುತ್ತಿದ್ದ ಬೈಕ್ ನೇರವಾಗಿ ಲಾರಿಗೆ ಹಿಂಬದಿಯಿಂದ ಢಿಕ್ಕಿಯಾಗಿ ಸವಾರ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

Read More

ಮಂಗಳೂರು, ಮೇ.21 : ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ದೇಶಕರಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಬೆಳಪು ಇವರು ಆಯ್ಕೆಗೊಂಡಿದ್ದಾರೆ. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕರಾಗಿರುವ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಇವರನ್ನು ಮಂಗಳವಾರ ನಡೆದ ಒಕ್ಕೂಟದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯ ಕೆಎಂಎಫ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು. ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರ ಶಿಫಾರಸ್ಸಿನ ಮೂಲಕ ಈ ಆಯ್ಕೆ ನಡೆದಿದೆ. ಇತ್ತೀಚೆಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಡಾ..ಎಂ. ಎನ್. ರಾಜೇಂದ್ರಕುಮಾರ್ ನೇತೃತ್ವದ ಹೈನುಗಾರರ ಬಳಗದ 13 ಮಂದಿ ನಿರ್ದೇಶಕರು ಆಯ್ಕೆ ಗೊಂಡಿದ್ದು, ಬಳಿಕ ಡಾ.ಎಂಎನ್ ಆರ್ ಬಳಗದ ರವಿರಾಜ ಹೆಗ್ಡೆ, ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಉದಯ ಎಸ್. ಕೋಟ್ಯಾನ್ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಇದೀಗ ದೇವಿಪ್ರಸಾದ್ ಶೆಟ್ಟಿಯವರು ಕೂಡ…

Read More

ಮಂಗಳೂರು, ಮೇ 20 : ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಇದರ ನೇತೃತ್ವದಲ್ಲಿ ಬೆಸೆಂಟ್ ಸಮೂಹ ಸಂಸ್ಥೆ ಹಾಗೂ ಟೀಮ್ ಈಶ್ವರ್ ಮಲ್ಪೆ ಸಹಭಾಗಿತ್ವದಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಮೇ 25ರಂದು ಬೆಳಗ್ಗೆ 9ಕ್ಕೆ ಕೊಡಿಯಾಲ್‌ಬೈಲ್ನ ಬೆಸೆಂಟ್ ಮಹಿಳಾ ಪಿಯು ಕಾಲೇಜಿನಲ್ಲಿ ನಡೆಯಲಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಮಾಜಿ ಗವರ್ನರ್ ಡಾ.ಬಿ.ದೇವದಾಸ ರೈ ಅವರು ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಟೀಮ್ ಈಶ್ವರ್ ಮಲ್ಪೆ ಅವರು ಶ್ರವಣದ ಯಂತ್ರಕ್ಕೆ ಆಗುವ ವೆಚ್ಚದ ಶೇ.40 ಮೊತ್ತವನ್ನು ಭರಿಸಲಾಗುತ್ತಿದ್ದು, ರೋಗಿಗಳು ಇವರ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದರು. ಜರ್ಮನ್ ತಯಾರಿಕೆ ಕಂಪನಿಯ ಕಿವಿ ಯಂತ್ರಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದ್ದು,ಈ ಕಿವಿ ಯಂತ್ರಗಳಿಗೆ 2 ವರ್ಷಗಳ ಅಂತರರಾಷ್ಟ್ರೀಯ ವಾರಂಟಿ ಸಹ…

Read More

ಬೆಂಗಳೂರು, ಮೇ. 19 : ನಗರದಲ್ಲಿ ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆಯಿಂದ ಗೋಡೆ ಕುಸಿದು 35 ವರ್ಷದ ಮಹಿಳೆಯೋರ್ವರು ಸಾವನ್ನಪ್ಪಿದ  ಘಟನೆ ನಡೆದಿದೆ. ಘಟನೆಯು ನಗರದ ವೈಟ್ ಫೀಲ್ಡ್ ನ  ಚನ್ನಸಂದ್ರದಲ್ಲಿ ದುರಂತ ಸಂಭವಿಸಿದೆ. ಮೃತ ಮಹಿಳೆ ಯನ್ನು ಖಾಸಗಿ ಕಂಪನಿಯ ಉದ್ಯೋಗಿ ಶಶಿಕಲಾ(35) ಎಂದು ಗುರುತಿಸಲಾಗಿದೆ. ವೈಟ್ ಫೀಲ್ಡ್ ಇಂಡರ್ಷಿಯಲ್ ಏರಿಯಾದ ಇಸ್ಮೋ ಮೈಕ್ರೋ ಸಿಸ್ಟ್ ಕಂಪನಿಯಲ್ಲಿ ಮೃತ ಶಶಿಕಲಾ ಫಸ್ಟ್ ಶಿಫ್ಟ್ ಕೆಲಸಕ್ಕೆ ಹಾಜರಾಗಿ ಕೆಲವೇ ಹೊತ್ತಿನಲ್ಲೆ ಗೋಡೆ ಕುಸಿದು ದುರಂತ ಸಂಭವಿಸಿದೆ. ಶಶಿಕಲಾ ಕೆಲಸ ಮಾಡಿಕೊಂಡಿದ್ದ ಕಂಪನಿಯಿಂದಲೇ ಪರಿಹಾರಕ್ಕೆ ಬಿಬಿಎಂಪಿ ಪಾಲಿಕೆ ಮುಖ್ಯ ಆಯುಕ್ತರಿಂದ ಸೂಚನೆ ಹಿನ್ನೆಲೆ ಮೃತ ಮಹಿಳೆಯ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರ ಧನ ಘೋಷಿಸಲಾಗಿದೆ ಎಂದು ವರದಿಯಾಗಿದೆ.

Read More

ಬೆಳ್ತಂಗಡಿ, ಮೇ 18: ಬೆಳ್ತಂಗಡಿ ರಕ್ಷಾ ಆರ್ಕೆಡ್ ನಲ್ಲಿ ಮುಳಿಯ ಗೋಲ್ಡ್ ಆಂಡ್ ಡೈಮಂಡ್ ವಿಸ್ತೃತ ಮುಳಿಗೆಯನ್ನು ಮುಳಿಯ ಸಂಸ್ಥೆಯ ಬ್ರಾಂ ಡ್ ಅಂಬಾಸಿಡರ್ ಹಾಗೂ ನಟ ರಮೇಶ್ ಅರವಿಂದ್ ಅವರು ಶನಿವಾರ ಉದ್ಘಾಟಿಸಿದರು. ಬೆಳಗ್ಗೆ ಮೂರು ಮಾರ್ಗದಿಂದ ನಟ ರಮೇಶ್ ಅರವಿಂದ್ ಅವರನ್ನು ತೆರೆದ ಕಾರಿನ ಮೂಲಕ ಮೆರವಣಿಗೆಯಲ್ಲಿ ಚೆಂಡೆ, ಹುಲಿವೇಷದೊಂದಿಗೆ ಶೋ ರೂಂವರೆಗೆ ಕರೆತರಲಾಯಿತು. ಮುಳಿಯ ಸಂಸ್ಥೆಯ ಚೇರ್ಮನ್ ಆಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ,ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಹಾಗೂ 7 ಕುಟುಂಬಸ್ಥರು ನಟ ರಮೇಶ್ ಅರವಿಂದ ಅವರನ್ನು ಬರಮಾಡಿಕೊಂಡರು. ಸಭಾ ಕಾರ್ಯಕ್ರಮದಲ್ಲಿ ಮುಳಿಯ ಸಂಸ್ಥೆಯ ರಾಯಭಾರಿ ಹಾಗೂ ನಟ ರಮೇಶ್ ಅರವಿಂದ್ ಅವರು ಮಾತಾಡಿ, ಮುಳಿಯ ಗೋಲ್ಡ್ ಆಂಡ್ ಡೈಮಂಡ್ ಆಭರಣಗಳ ಮಳಿಗೆ ಗ್ರಾಹಕರ ಗಮನ ಸೆಳೆಯಲು ಕಾರಣ ಇಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಚಿನ್ನಾಭರಣಗಳು. ಇವತ್ತು ಊರಿನ 81 ದೇವಸ್ಥಾನಗಳಿಂದ ದೀಪಗಳನ್ನು ಇಲ್ಲಿ ತಂದು ಬೆಳಗಿಸಿದ್ದಾರೆ. ದೇವಸ್ಥಾನಗಳಿಂದ ದೀಪಗಳನ್ನು…

Read More

ಹೈದರಾಬಾದ್, ಮೇ. 18 : ಚಾರ್‌ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿರುವ ಕಟ್ಟಡದಲ್ಲಿ ರವಿವಾರ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು 11 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಅವಘಡ ಘಟನೆಯ ಬಗ್ಗೆ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದು, ಕಟ್ಟಡದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಲವಾರು ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Read More

ಕುಂಬಕೋಣಂ, ಮೇ 17, 2025: ತಂಜಾವೂರು ಜಿಲ್ಲೆಯ ಕುಂಬಕೋಣಂನ ಮೇಲಕವೇರಿ ಗ್ರಾಮದ ಪೆರುಮಂಡಿ ಉತ್ತರ ಬೀದಿಯ ನಿವಾಸಿ ಗಿರಿ ಅವರು ಆರು ತಿಂಗಳು ನಾಪತ್ತೆಯಾಗಿದ್ದ ನಂತರ, ಮೇ 15, 2025 ರಂದು ತಮ್ಮ ಕುಟುಂಬದೊಂದಿಗೆ ಅತೀ ಸಂತೋಷದಿಂದ ಪುನರ್ಮಿಲನಗೊಂಡರು. ಕಾಸರಗೋಡಿನ ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಸಹಾಯದಿಂದ ನಡೆದ ಈ ಪುನರ್ಮಿಲನವು ಅವರ ತಂದೆ, ತಾಯಿ ಮತ್ತು ಇಬ್ಬರು ಸಹೋದರಿಯರಿಗೆ ಅಪಾರ ಆನಂದ ತಂದಿತು. ವಿವಾಹವಾಗದಿರುವ  ಗಿರಿ ಅವರು ಕಳೆದ ಎರಡು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದರೂ, ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳದ ಕಾರಣ ಅವರ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿಲ್ಲ. ಇದು ಅವರು ಕಾಣೆಯಾದ ಮೊದಲ ಘಟನೆಯಲ್ಲ; ಈ ಹಿಂದೆಯೂ ಒಮ್ಮೆ ಕಾಣೆಯಾಗಿದ್ದರು. ಮಾರ್ಚ್ 22, 2025 ರಂದು  ಗಿರಿ ಅವರನ್ನು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ಗೆ ದಾಖಲಿಸಲಾಯಿತು. ಈಶ್ವರ್ ಮಲ್ಪೆ ಅವರು  ಗಿರಿ ಅವರನ್ನು ಸ್ನೇಹಾಲಯಕ್ಕೆ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಮಗ್ರ ಚಿಕಿತ್ಸೆಯ ನಂತರ, ಏಪ್ರಿಲ್ 11,…

Read More

ಉಳ್ಳಾಲ, ಮೇ 18: ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಸನದುದಾನ ಮಹಾ ಸಮ್ಮೇಳನ, ಧಾರ್ಮಿಕ ಉಪನ್ಯಾಸ ಸಮಾರೋಪ ದರ್ಗಾ ವಠಾರದಲ್ಲಿ ನಡೆಯಿತು.ಉಳ್ಳಾಲ ಖಾಝಿ ಇಂಡಿಯನ್ ಉಳ್ಳಾಲ ಗ್ಯಾಂಡ್ ಮುಷ್ಟಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಅರೆಬಿಕ್ ಕಾಲೇಜು ಶಿಕ್ಷಣ ಪಡೆದು ತೇರ್ಗಡೆ ಹೊಂದಿದ 33 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಸಯ್ಯದ್ ಹಾಮಿದ್ ಇಂಬಿಚ್ಚಿ ತಂಙಳ್ ದುಆ ನೆರವೇರಿಸಿದರು. ಸಮಸ್ತ ಕೇರಳ ಸುನ್ನಿ ಜಂಇಯ್ಯತುಲ್ ಉಲಮಾ ಅಧ್ಯಕ್ಷ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪೊನ್ಮಲ ಅಬ್ದುಲ್ ಖಾದಿರ್ ಮುಸ್ಲಿಯಾರ್ ಸನದುದಾನ ಭಾಷಣ ಮಾಡಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಅತ್ತಾವುಲ್ಲ ತಂಙಳ್ ಆಶೀರ್ವಚನ ನೀಡಿದರು.ಯು.ಟಿ. ಖಾದರ್ ಮಾತನಾಡಿ, ಉಳ್ಳಾಲ ಶೈಕ್ಷಣಿಕ ಕೇಂದ್ರವಾಗಿ ಬೆಳೆಯಬೇಕು. ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ. ದರ್ಗಾ ಸೌಹಾರ್ದದ ಕೇಂದ್ರ ಆಗಬೇಕು ಎಂದರು. ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ಕರ್ನಾಟಕದ ಮುಖ್ಯಮಂತ್ರಿ ಆದರೆ ಎಷ್ಟು ಸಂತೋಷ ಆಗುತ್ತದೆಯೋ…

Read More

ಕಾರ್ಕಳ, ಮೇ.17 : ಬೃಹತ್ ಗಾತ್ರದ ಬಾವಿಯನ್ನು ಸ್ವಚ್ಛಗೊಳಿಸಲು ಇಳಿದು ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ಅಗ್ನಿ ಶಾಮಕ ದಳದವರು ರಕ್ಷಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳದ ಸಾಣೂರು ಕ್ಯಾಶ್ಯೂ ಬಳಿಯ ಹಿತ್ತಲಿನ 35 ಅಡಿ ಆಳದ ಬಾವಿಯನ್ನು ಸ್ವಚ್ಛಗೊಳಿಸಲು ಹರೀಶ್ ಆಚಾರ್ಯ (55) ಎಂಬವರು  ಶುಕ್ರವಾರ ಬೆಳಿಗ್ಗೆ 11.55 ವೇಳೆಗೆ ಇಳಿದಿದ್ದರು. ಬಳಿಕ ಮೇಲಕ್ಕೆ ಬರಲು ಸಾಧ್ಯವಾಗದೆ ಸಿಲುಕಿದ್ದು , ಅಪಾಯದಲ್ಲಿದ್ದ ಅವರನ್ನು ಕಾರ್ಕಳ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ತಕ್ಷಣ ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿ  ರಕ್ಷಣೆ ಮಾಡಿದ್ದಾರೆ.

Read More