Author: admin

ಬಜ್ಪೆ, ಅ. 10 : ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಕೊಳಂಬೆ ಗ್ರಾಮದ ಹೊಗೆಪದವಿನ ನಿವಾಸಿ ಶೋಭಾ (40) ಎಂದು ಗುರುತಿಸಲಾಗಿದೆ. ಶೋಭಾ ಅವಿವಾಹಿತೆಯಾಗಿದ್ದು, ಇವರು ಪಕ್ಕದ ಮನೆಯ ತೋಟದಲ್ಲಿದ್ದ ಅವರಣವಿಲ್ಲದ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಶೋಭಾ ಅವರು ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಸೋಮವಾರ ಬೆಳಗ್ಗೆ ಮನೆಯಲ್ಲಿ ಇಲ್ಲದ ಕಾರಣ ಹುಡುಕಾಗಿದಾಗ ರಾಮಕೃಷ್ಣ ಭಟ್ ಅವರ ತೋಟದಲ್ಲಿರುವ ಬಾವಿಯಲ್ಲಿ  ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉತ್ತರಾಖಂಡ,ಅ.09: ಬಸ್ಸೊಂದು ಕಂದಕಕ್ಕೆ ಉರುಳಿದ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿರುವ ಘಟನೆ ನೈನಿತಾಲ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಘಟನೆಯಲ್ಲಿ  ಐವರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದಂತೆ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ 28 ಜನರನ್ನು ರಕ್ಷಿಸಲಾಗಿದ್ದು, ಹೆಚ್ಚಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮೃತದೇಹಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.ಗಾಯಗೊಂಡ ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್)  ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Read More

ಮಂಗಳೂರು, ಅ 08 : ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಸಾವನ್ನಪ್ಪಿದ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚೂರು ಬಳಿ ಶುಕ್ರವಾರ ಸಂಭವಿಸಿದೆ ಎಂದು ವರದಿಯಾಗಿದೆ. ಮೃತರನ್ನು ಗುರುಪುರ ಹೊಸಮನೆ ನಿವಾಸಿ ಸಚಿನ್ ಕುಮಾರ್ ಆಚಾರ್ಯ (33) ಸಚಿನ್ ಎಂದು ಗುರುತಿಸಲಾಗಿದೆ. ಸಚಿನ್ ಕುಮಾರ್ ಅವರು ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು, ಅ. 06 : ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕರಾಗಿ ಪ್ರವೀಣ್ ಚಂದ್ರ ಆಳ್ವ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ವಿಪಕ್ಷ ನಾಯಕ ನವೀನ್ ಡಿಸೋಜಾ ಅವರಿಂದ ಅಧಿಕಾರವನ್ನು ವಹಿಸಿಕೊಂಡ ಪ್ರವೀಣ್ ಚಂದ್ರ ಆಳ್ವ ಅವರನ್ನು ಮಾಜಿ ಶಾಸಕ ಜೆಆರ್ ಲೋಬೊ ಹಾಗೂ ಕಾಂಗ್ರೆಸ್ ಪಕ್ಷದ ಪಾಲಿಕೆಯ ಸದಸ್ಯರು ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಜಿ ವಿಪಕ್ಷ ನಾಯಕ ವಿನಯ್ ರಾಜ್, ಕಾಂಗ್ರೆಸ್ ನಾಯಕ ಮಿಥುನ್ ರೈ, ರವೂಫ್, ಶಶಿಧರ ಹೆಗ್ಡೆ, ಕವಿತಾ ಸನಿಲ್, ಮನಪಾ ಸದಸ್ಯ ಅನಿಲ್ ಕುಮಾರ್,ಟಿ.ಕೆ ಸುಧೀರ್ ಪದ್ಮರಾಜ್, ವಿಶ್ವಾಸ ದಾಸ್, ಭಾಸ್ಕರ ಮೊಯಿಲಿ, ,ಶಾಲೆಟ್ ಪಿಂಟೋ,ಮಮತಾಗಟ್ಟಿ, ಮುತ್ತಿತರ ನಾಯಕರು ಉಪಸ್ಥಿತರಿದ್ದರು.

Read More

ಹೈದರಾಬಾದ್, ಅ. 04: ಹೋಮ್ ವರ್ಕ್ ಮಾಡಿಲ್ಲವೆಂದು ಶಿಕ್ಷಕರೊಬ್ಬರು ವಿದ್ಯಾರ್ಥಿಯ ತಲೆಗೆ ಹೊಡೆದ ಪರಿಣಾಮ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.ಖಾಸಗಿ ಶಾಲೆಯೊಂದರಲ್ಲಿ ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೇಮಂತ್ (5) ಮೃತಪಟ್ಟ ವಿದ್ಯಾರ್ಥಿ. ಹೋಮ್ವರ್ಕ್ ಮಾಡದ ಕಾರಣಕ್ಕೆ ಶಿಕ್ಷಕನೊಬ್ಬರು ತಲೆಗೆ ಹೊಡೆದ ಪರಿಣಾಮ ವಿದ್ಯಾರ್ಥಿ ತರಗತಿಯಲ್ಲೇ ಕುಸಿದು ಬಿದ್ದಿದ್ದು, ತಕ್ಷಣ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಚಿಕಿತ್ಸೆ ಫಲಿಸದೆ ಸೋಮವಾರ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಯ ಪೋಷಕರು ಮತ್ತು ಕುಟುಂಬ ಇತರ ಸದಸ್ಯರು ಶಾಲೆ ಮುಂದೆ ಶವದೊಂದಿಗೆ ಪ್ರತಿಭಟನೆ ನಡೆಸಿ, ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.

Read More

ಮಂಗಳೂರು, ಅ.03: ದಕ್ಷಿಣ ಕನ್ನಡ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಭಾರತ ಸೇವಾದಳದ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 154ನೇ ಜಯಂತಿ ಮಂಗಳೂರು ಪುರ ಭವನ ಬಳಿಯಿರುವ ರಾಜಾಜಿ ಪಾಕ್೯ ನಲ್ಲಿ ಸೋಮವಾರ ನಡೆಯಿತು. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಸರಳತೆ ಮತ್ತು ಸತ್ಯದ ದಾರಿಯಲ್ಲಿ ನಡೆಯಬೇಕೆಂಬ ಮಹಾತ್ಮಾ ಗಾಂಧಿಯವರ ಪರಿಕಲ್ಪನೆ ನಮಗೆ ಆದರ್ಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ,ಮೇಯರ್ ಸುಧೀರ್ ಶೆಟ್ಟಿ ಕಣ್ಣೂರ್, ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತ ಆನಂದ್, ದ.ಕ. ಜಿಲ್ಲಾ ಪಂಚಾಯತ್ ಸಿಇಒ ಆನಂದ್, ಪೊಲೀಸ್ ಆಯುಕ್ತ ಆನುಪಮ್ ಅಗರ್ವಾಲ್, ಜಿಲ್ಲಾ ಎಸ್ಪಿ ರಿಷ್ಯಂತ್…

Read More

ಪುತ್ತೂರು,ಅ.02: ಪ್ರವಾಸಕ್ಕೆ ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಯನಾಡ್ ನಲ್ಲಿ ಶನಿವಾರ ನಡೆದಿದೆ. ಮೃತರನ್ನು ಪುತ್ತೂರು ಸಮೀಪದ ಹಿರೇಬಂಡಾಡಿ ಅಡೆಕ್ಕಲ್ ನಿವಾಸಿ ಮಹಮ್ಮದ್ ಅಝೀಂ (21) ಎಂದು ಗುರುತಿಸಲಾಗಿದೆ. ಪುತ್ತೂರಿನಿಂದ ಸ್ನೇಹಿತರೆಲ್ಲಾ ಸೇರಿಕೊಂಡು ಕೇರಳ ವಯನಾಡ್ ಗೆ ಪ್ರವಾಸಕ್ಕೆ ತೆರಳಿದ್ದರು. ಪಯ್ಯನೂರು ಸಮೀಪ ಕೆರೆಯಲ್ಲಿ ಸ್ನಾನ ಮಾಡಲು ಇಳಿದಿದ್ದು, ಈ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

Read More

ಸುಳ್ಯ, ಸೆ. 30 : ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಕಲ್ಲಪಳ್ಳಿ ಸಮೀಪ ಲಾರಿಯೊಂದು ಪಲ್ಟಿಯಾಗಿರುವ ಘಟನೆ ಗುರುವಾರ ನಡೆದಿದೆ. ಮರ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಕಲ್ಲಪಳ್ಳಿ ಸಮೀಪ ಗಡಿಗುಡ್ಡೆ ಎಂಬಲ್ಲಿ ಮಗುಚಿ ಬಿದ್ದಿದೆ. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದ್ದು, ಬಳಿಕ ಲಾರಿಯನ್ನು ತೆರವುಗೊಳಿಸಲಾಯಿತು ಎಂದು ವರದಿಯಾಗಿದೆ.

Read More

ಕಾಸರಗೋಡು, ಸೆ.29 : ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದು ಪಿಕಪ್ ಚಾಲಕ ಸಾವನ್ನಪ್ಪಿದ ಘಟನೆ ಕೇರಳ ಕರ್ನಾಟಕ ಗಡಿ ಪ್ರದೇಶವಾದ ಅಡ್ಕಸ್ಥಳದ ಸಮೀಪ ಮಂಗಳವಾರ ನಡೆದಿದೆ. ಮೃತರನ್ನು ಪೆರ್ಲ ಮಣಿಯಂಪಾರೆ ಪಜ್ಜನದ ಮುಸ್ತಫಾ ( 43) ಎಂದು ಗುರುತಿಸಲಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಅಡಿಕೆ ಗಿಡ ಸಾಗಾಟದ ಪಿಕಪ್ ಗೆ ಬಸ್ಸು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡ ಮುಸ್ತಫಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

Read More

ಉಳ್ಳಾಲ, ಸೆ. 28 : ಸೋಮೇಶ್ವರ ಉಚ್ಚಿಲ ಮೀನುಗಾರರ ಬಲೆಗೆ ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಬಿದ್ದಿದೆ. ಸಮುದ್ರ ತಟದ ಸಮೀಪ ಬೀಸಿದ ಬಲೆಗೆ 75 ಕೆ.ಜಿ ಯ ಮೀನು ಬಲೆಗೆ ಬಿದ್ದಿದೆ. ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ಸಮುದ್ರ ತೀರದಲ್ಲಿ ಹಾಕಲಾಗಿದ್ದ ಬಲೆಗೆ ಮೀನು ಬಿದ್ದಿದೆ. ಈ ವರ್ಷದ ತಮ್ಮ ಮೀನುಗಾರಿಕೆಯಲ್ಲಿ ಸಿಕ್ಕ ಅತಿದೊಡ್ಡ ಮೀನು ಇದಾಗಿದೆ ಅನ್ನುವ ಅಭಿಪ್ರಾಯ ಅವರದ್ದಾಗಿದೆ. ಈ ಬಾರಿ ದೊಡ್ಡ ಗಾತ್ರದ ಪಿಲಿತೊರಕೆ ಬಂದಿರುವುದು ಮೀನುಗಾರರಲ್ಲಿ ಉತ್ಸಾಹ ಮೂಡಿಸಿದೆ. ಸಿಕ್ಕ ಮೀನನ್ನು ವ್ಯಾಪಾರ ಮಾಡದೇ ಈದ್ ಹಬ್ಬ ಇರುವುದರಿಂದ ತಮ್ಮೊಳಗೆ ಹಂಚಿಕೊಂಡಿದ್ದಾರೆ.

Read More