Subscribe to Updates
Get the latest creative news from FooBar about art, design and business.
Author: admin
ವಿಟ್ಲ, ಅ. 21 : ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಣಚದಲ್ಲಿ ನಡೆದಿದೆ. ಪುಣಚದ ಚೆಕ್ಕುತ್ತಿ ನಿವಾಸಿ ಶ್ರೀಕೃಷ್ಣ (26) ಮೃತ ಪಟ್ಟ ಯುವಕ. ಅವಿವಾಹಿತನಾಗಿದ್ದ ಯುವಕ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಂಟ್ವಾಳ,ಅ. 20 : ಪ್ರೇಮ ವೈಫಲ್ಯ ದಿಂದ ಮನನೊಂದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಕಾಮಾಜೆ ಎಂಬಲ್ಲಿ ನಡೆದಿದೆ. ಕಡೇಶಿವಾಲಯ ಗ್ರಾಮದ ನೆಲ್ಲಿ ಗುಡ್ಡೆ ನಿವಾಸಿ ಸಚಿನ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಸಚಿನ್ ಇಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಅ.18 ರಂದು ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬರದ ಹಿನ್ನೆಲೆಯಲ್ಲಿ ಈತನನ್ನು ಹುಡುಕಲು ಶುರು ಮಾಡಿದ್ದರು. ಪೋನ್ ಮಾಡಿದಾಗ ಪೋನ್ ರಿಂಗು ಕೇಳುತ್ತಿದ್ದ ಜಾಗಕ್ಕೆ ಹೋಗಿ ನೋಡಿದಾಗ ಆತ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆತ್ಮಹತ್ಯೆ ಮಾಡುವ ಮೊದಲು ಈತ ಚೀಟಿಯನ್ನು ಬರೆದು ಕಿಸೆಯಲ್ಲಿಟ್ಟಿದ್ದಾನೆ ಎನ್ನಲಾಗಿದೆ. ನಗರ ಠಾಣಾ ಇನ್ಸ್ ಪೆಕ್ಟರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತೂರು, ಅ. 19 : ಮಂಗಳೂರುನಿಂದ ಸುಳ್ಯದ ಕಡೆಗೆ ಪಾಮ್ ಆಯಿಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರೊಂದು ಪಲ್ಟಿಯಾಗಿ ಪಾಮ್ ಆಯಿಲ್ ಸೋರಿಕೆಯಾದ ಘಟನೆ ಪುತ್ತೂರಿನ ಬೈಪಾಸ್ ರಸ್ತೆ ಉರ್ಲಂಡಿ ಬಳಿ ಬುಧವಾರ ನಡೆದಿದೆ. ರಾತ್ರಿ 10.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು ಟ್ಯಾಂಕರ್ ಉರುಳಿಬಿದ್ದ ತಕ್ಷಣ ಸ್ಥಳೀಯರು ಆಗಮಿಸಿ, ಇತರರಿಗೆ ಎಚ್ಚರಿಸಿ ರಸ್ತೆಯಲ್ಲಿ ಆಯಿಲ್ ಚೆಲ್ಲಿರುವುದರಿಂದ ಮುಂದಾಗಬಹುದಾದ ಅನಾಹುತ ತಪ್ಪಿಸಿದರು. ಟ್ಯಾಂಕರ್ ವಿದ್ಯುತ್ ಕಂಬ, ತಂತಿಗಳಿಗೆ ತಾಗಿದ್ದರೂ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಕಾರೊಂದಕ್ಕೆ ಅಪಘಾತವಾಗುವುದನ್ನು ತಪ್ಪಿಸುವ ಯತ್ನದಲ್ಲಿ ಟ್ಯಾಂಕರ್ ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಗ್ನಿ ಶಾಮಕ ದಳದವರು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದಾರೆ.
ಉಳ್ಳಾಲ, ಅ. 18:ರಿಕ್ಷಾ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೇವಂತಿ ಗುಡ್ಡೆಯಲ್ಲಿ ನಡೆದಿದೆ. ಮೃತರನ್ನು ಕೆರೆಬೈಲು ಸೇವಂತಿಗುಡ್ಡೆ ನಿವಾಸಿ ಸಮೀರ್ (45) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟು ರಿಕ್ಷಾ ಪಾರ್ಕ್ ನಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದರು. ಮಂಗಳವಾರ ಬೆಳಿಗ್ಗೆ ಮನೆಯ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕಾರ್ಕಳ, ಅ. 17 : ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಕಲ್ಲೊಟ್ಟೆ ಎಂಬಲ್ಲಿ ಸೋಮವಾರ ನಡೆದಿದೆ. ಮೃತರನ್ನು ಸಂಪತ್ ಕುಮಾರ್ ಎಂಬವರ ಪುತ್ರಿ ಚಾರ್ವಿ (23) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಚಾರ್ವಿ ಮನೆಯಿಂದಲೇ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಸೋಮವಾರ ಮನೆಯಲ್ಲೇ ಇದ್ದ ಚಾರ್ವಿ ನೇಣಿಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸದಿಲ್ಲಿ,ಅ.16: ದೆಹಲಿಯಲ್ಲಿ ಭಾನುವಾರ ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಭಾನುವಾರ ಸಂಜೆ 4.09ಕ್ಕೆ ಭೂಮಿ ಕಂಪಿಸಿದೆ. ಈ ವೇಳೆ ಜನ ಗಾಬರಿಯಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ ಎಂದು ವರದಿಯಾಗಿದೆ. ಹರಿಯಾಣದ ಫರಿದಾಬಾದ್ನಲ್ಲಿ 9 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರಬಿಂದುವನ್ನು ಗುರುತಿಸಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಬೆಂಗಳೂರು, ಅ. 14 : ಬೆಂಗಳೂರಿನ ಪೈಪ್ ಲೈನ್ ರಸ್ತೆಯ ಚೋಳರಪಾಳ್ಯದಲ್ಲಿರುವ ಅಗರಬತ್ತಿ ಕಾರ್ಖಾನೆಯಲ್ಲಿ ಶನಿವಾರ ಬೆಂಕಿ ಅವಘಡ ಸಂಭವಿಸಿದೆ. ಕಳೆದ ಐದು ವರ್ಷಗಳಿಂದ ಗುಡಿಕೈಗಾರಿಕೆ ರೀತಿ ಮನೆಯಲ್ಲೇ ಅಗರಬತ್ತಿ ಕಾರ್ಖಾನೆ ನಡೆಲಾಗುತ್ತಿ ತ್ತು. ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿಯಿಂದಾಗಿ ರಾಸಾಯನಿಕಗಳಿದ್ದ ಬಾಕ್ಸ್ಗಳು ಬ್ಲಾಸ್ಟ್ ಆಗಿ ರಾಸಾಯನಿಗಳು ರಸ್ತೆಗೆ ಹರಿದ ಪರಿಣಾಮ ರಸ್ತೆಗೂ ಬೆಂಕಿ ಆವರಿಸಿದ್ದು, ಮನೆ ಮುಂದೆ ನಿಲ್ಲಿಸಿದ್ದ 8 ಬೈಕ್ಗಳು ಸುಟ್ಟು ಭಸ್ಮವಾಗಿವೆ. ವಿಜಯನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬಂಟ್ವಾಳ, ಅ.13 : ಕಾರು ಡಿಕ್ಕಿ ಹೊಡೆದು ಪಾದಚಾರಿ ಯುವತಿಯೋರ್ವಳು ಸಾವನ್ನಪ್ಪಿದ ಘಟನೆ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಗುರುವಾರ ನಡೆದಿದೆ. ಮೃತರನ್ನು ವೀರಕಂಭ ಗ್ರಾಮದ ಬಾಯಿಲ ನಿವಾಸಿ ಶೇಖರ ಪೂಜಾರಿ ಅವರ ಪುತ್ರಿ ಪಾವನ ( 23) ಎಂದು ಗುರುತಿಸಲಾಗಿದೆ. ಪಾವನ ಅವರು ದಾಸಕೋಡಿ ಎಂಬಲ್ಲಿ ಬಸ್ಸ್ ನಿಂದ ಇಳಿದು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ. ಮೆಲ್ಕಾರ್ ಟ್ರಾಫಿಕ್ ಪೋಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನವದೆಹಲಿ, ಅ. 12 :ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರು ತಾಯ್ನಾಡಿಗೆ ಮರುಳುವುದಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭಾರತವು ಆಪರೇಶನ್ ಅಜಯ್ ಕಾರ್ಯಾಚರಣೆಗೆ ಚಾಲನೆ ನೀಡಿದೆ ಎಂದು ವಿದೇಶಾಂಗ ಸಚಿವರಾದ ಎಸ್. ಜೈ ಶಂಕರ್ ಬುಧವಾರ ಘೋಷಿಸಿದ್ದಾರೆ. ಮೊದಲ ವಿಮಾನದಲ್ಲಿ ಸ್ವದೇಶಕ್ಕೆ ಮರಳಲು ಬಯಸುವವರ ವಿವರವನ್ನು ಇಸ್ರೇಲ್ ನಲ್ಲಿ ರುವ ರಾಯಭಾರ ಕಚೇರಿಯು ಸಂಗ್ರಹಿಸಿದ್ದು,ಅವರಿಗೆ ಈಗಾಗಲೇ ವಿಮಾನದ ವಿವರಗಳನ್ನು ನೀಡಲಾಗಿದೆ. ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಬಾರಿ ಕಚೇರಿಯಲ್ಲಿ ನೊಂದಾಯಿಸಿರುವ ಪ್ರಥಮ ಬ್ಯಾಚ್ ನ ನಾಗರಿಕರನ್ನು ಗುರುವಾರದಂದು ಸ್ವದೇಶಕ್ಕೆ ಕರೆತರಲಾಗುವುದು. ಇದೇ ರೀತಿಯ ಇತರೆ ನೋಂದಾಯಿತ ನಾಗರಿಕರನ್ನು ನಂತರದ ವಿಮಾನಗಳಲ್ಲಿ ಕರೆತರಲಾಗುವುದು ಎಂದು ಮಿಷನ್ ತಿಳಿಸಿದೆ.
ಉಳ್ಳಾಲ, ಅ. 11 : ಸಂಚರಿಸುತ್ತಿದ್ದ ಮೀನು ಸಾಗಾಟದ ವಾಹನವೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂದಿನಲ್ಲಿದ್ದ ದ್ವಿಚಕ್ರ ವಾಹನವು ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿ ಸವಾರ ಸಾವನ್ನಪ್ಪಿದ ಘಟನೆ ಬುಧವಾರ ಮುಂಜಾನೆ ನಡೆದಿದೆ. ಮೃತ ಸವಾರನನ್ನು ಕೋಟೆಕಾರ್ನ ನಿವಾಸಿ ಹನೀಫ್ ಎಂಬವರ ಮಗ ಅಝ್ವೀನ್ (21)ಎಂದು ಗುರುತಿಸಲಾಗಿದೆ. ಅಝ್ವೀನ್ ಮೀನುಗಾರಿಕೆಯ ಕೆಲಸಕ್ಕೆಂದು ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ, ಮುಂಭಾಗದಲ್ಲಿ ಸಂಚರಿಸುತ್ತಿದ್ದ ಮೀನು ಸಾಗಾಟ ವಾಹನದ ಚಾಲಕ ಬ್ರೇಕ್ ಹಾಕಿದ ಪರಿಣಾಮ ಬೈಕ್ ನಿಯಂತ್ರಣ ಕಳಕೊಂಡು ಢಿಕ್ಕಿ ಹೊಡೆದಿದ್ದು, ಈ ವೇಳೆ ಗಾಯಗೊಂಡಿದ್ದ ಅಝ್ವೀನ್ ಅವರನ್ನು ತಕ್ಷಣ ಆಸ್ಲತ್ರೆಗೆ ದಾಖಲಿಸಲಾಯಿತು. ಆದರೆ ಅದಾಗಲೇ ಸವಾರ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.