Subscribe to Updates
Get the latest creative news from FooBar about art, design and business.
Author: admin
ಟೆಹ್ರಾನ್, ಮೇ 20 : ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಪರ್ವತ ಶ್ರೇಣಿಗಳ ನಡುವೆ ಭಾನುವಾರ ಪತನಗೊಂಡಿದ್ದು, ಈ ಅಪಘಾತದಲ್ಲಿ ಅವರು ಸಾವನ್ನಪ್ಪಿರುವುದಾಗಿ ಇರಾನ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೆಲಿಕಾಪ್ಟರ್ ಅಪಘಾತದಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್ನ ಇಮಾಮ್ ಮೊಹಮ್ಮದ್ ಅಲಿ ಅಲೆಹಶೆಮ್, ಪೈಲಟ್, ಕೋ ಪೈಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥ ಹಾಗೂ ಗನ್ಮ್ಯಾನ್ಗಳು ಕೂಡ ಪ್ರಯಾಣಿಸುತ್ತಿದ್ದರು. ಈ ಅವಘಡದಲ್ಲಿ ಅವರೆಲ್ಲರೂ ಕೂಡ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಸಿಂಗಾಪುರ, ಮೇ. 19: ದಿನದಿಂದ ದಿನಕ್ಕೆ ಸಿಂಗಾಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಒಂದು ವಾರಕ್ಕೆ ಸುಮಾರು 26 ಸಾವಿರ ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆ ಸಿಂಗಾಪುರ ಸರ್ಕಾರ ಜನರಿಗೆ ಮಾಸ್ಕ್ ಧರಿಸುವಂತೆ ಆದೇಶ ಹೊರಡಿಸಿದೆ. ಒಂದೇ ವಾರದಲ್ಲಿ 26 ಸಾವಿರ ಜನರಿಗೆ ಕೋವಿಡ್ ಸೋಂಕು ತಗುಲಿದೆ. ಕೊರೊನಾ ಸೋಂಕಿತರ ಸಂಖ್ಯೆ ವಾರದಿಂದ ವಾರಕ್ಕೆ ದುಪ್ಪಟ್ಟಾಗುತ್ತಿದೆ. ಒಂದೇ ವಾರದಲ್ಲಿ ಶೇಕಡಾ 90ರಷ್ಟು ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಕಂಡಿದೆ. ಕೊರೊನಾ ಸೋಂಕು ಏರಿಕೆ ಕಂಡ ಹಿನ್ನೆಲೆ ಸಿಂಗಾಪುರದ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗುತ್ತಿದೆ. ತುರ್ತು ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವಂತೆ ಹಾಗೂ ಸೂಕ್ತ ರೋಗಿಗಳನ್ನು ಮನೆಗೆ ವಾಪಾಸ್ಸು ಕಳುಹಿಸಿ ಸಂಚಾರಿ ಚಿಕಿತ್ಸಾಲಯದ ಸೇವೆ ಮುಂದುವರಿಸುವಂತೆ ಆರೋಗ್ಯ ಸಚಿವಾಲಯ ತಿಳಿಸಿದೆ. ನಾವು ಮತ್ತೊಂದು ಕೋವಿಡ್ ಅಲೆಯ ಆರಂಭದಲ್ಲಿದ್ದೆವೆ. ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಮುಂದಿನ 2 ರಿಂದ 4 ವಾರಗಳಲ್ಲಿ, ಅಂದರೆ ಜೂನ್ ಅಂತ್ಯದ ವೇಳೆಗೆ ಅಲೆ ಗರಿಷ್ಟ ಮಟ್ಟ ತಲುಪಲಿದೆ ಆರೋಗ್ಯ…
ಕಾಸರಗೋಡು, ಮೇ.19 : ಕಾರು ಮತ್ತು ಸ್ಕೂಟರ್ ಅಪಘಾತ ಸಂಭವಿಸಿ ದಂಪತಿ ಸಾವನ್ನಪ್ಪಿದಘಟನೆ ಬೇತೂರುಪಾರ ದಲ್ಲಿ ನಡೆದಿದೆ. ಮೃತರನ್ನು ಬೇಡಡ್ಕದ ವಸ್ತ್ರ ಮಳಿಗೆ ಮಾಲಕ ಕೆ.ಕೆ ಕೃಷ್ಣನ್ ( 71) ಮತ್ತು ಪತ್ನಿ ಚಿತ್ರಕಲಾ ( 57) ಎಂದು ಗುರುತಿಸಲಾಗಿದೆ. ಬೋವಿಕ್ಕಾನ – ಕುತ್ತಿ ಕೋಲ್ ರಸ್ತೆಯ ಬೇತೂರು ಪಾರ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ನಡೆದಿದೆ. ಅಪಘಾತ ದಲ್ಲಿ ದಂಪತಿ ಕೆ.ಕೆ ಕೃಷ್ಣನ್ ಪತ್ನಿ ಚಿತ್ರಕಲಾ ಸಾವನ್ನಪ್ಪಿದ್ದಾರೆ. ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .
ಮುಂಬೈ, ಮೇ. 14: ಅನಧಿಕೃತ ಜಾಹೀರಾತು ಫಲಕವೊಂದು ಪೆಟ್ರೋಲ್ ಪಂಪ್ ಮೇಲೆ ಬಿದ್ದ ಪರಿಣಾಮ 14 ಮಂದಿ ಮೃತಪಟ್ಟ ಘಟನೆ ಮುಂಬೈನ ಘಾಟ್ಕೋಪರ್ನಲ್ಲಿ ಸೋಮವಾರ ನಡೆದಿದೆ. ಗಾಳಿ ಸಹಿತ ಮಳೆಯಿಂದಾಗಿ ಪೆಟ್ರೋಲ್ ಪಂಪ್ ಎದುರಲ್ಲಿದ್ದ ಬೃಹತ್ ಜಾಹೀರಾತು ಫಲಕ ಕುಸಿದು ಪೆಟ್ರೋಲ್ ಪಂಪ್ ಸಮೀಪ ನಿಂತಿದ್ದ ಕಾರುಗಳ ಮೇಲೆ ಬಿದ್ದಿದೆ. ಈ ಪರಿಣಾಮ 14 ಮಂದಿ ಮೃತಪಟ್ಟು, 74 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳಲ್ಲಿ 35 ಮಂದಿ ಬಿಡುಗಡೆಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಕಡಬ, ಮೇ.13: ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಕಡಬ ಎಡಮಂಗಲ ರೈಲು ನಿಲ್ದಾಣ ಸಮೀಪ ಶನಿವಾರ ನಡೆದಿದೆ. ಮೃತರನ್ನು ಎಡಮಂಗಲ ಗ್ರಾಮದ ಡೆಕ್ಕಳ ನಿವಾಸಿ ಮಹಾಲಿಂಗ ನಾಯ್ಕ್(60) ಎಂದು ಗುರುತಿಸಲಾಗಿದೆ. ಮಹಾಲಿಂಗ ನಾಯ್ಕ ಅವರು ರೈಲ್ವೇ ಹಳಿಯಲ್ಲಿ ಶನಿವಾರ ಸಂಜೆ ವೇಳೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ರೈಲು ಢಿಕ್ಕಿಯಾಗಿರಬಹುದು ಎಂದು ಶಂಕಿಸಲಾಗಿದೆ.
ದುಬೈ, ಮೇ 13: 2025ರ ಅಂತ್ಯದ ವೇಳೆಗೆ ದುಬೈನಲ್ಲಿ ಆರ್ಟಿಎ ಏರ್ ಟ್ಯಾಕ್ಸಿ ಸೇವೆಯು ಪ್ರಾರಂಭವಾಗಲಿದೆ. ಈ ಏರ್ ಟ್ಯಾಕ್ಸಿ ಮೂಲಕ ದುಬೈ ನಿವಾಸಿಗಳು ಎಮಿರೇಟ್ನ ಪ್ರಮುಖ ನಗರಗಳ ನಡುವೆ ಏರ್ ಟ್ಯಾಕ್ಸಿ ಮೂಲಕ ಚಲಿಸಬಹುದಾಗಿದೆ. ಯುಎಸ್-ಆಧಾರಿತ ವಿಮಾನಯಾನ ಕಂಪನಿಯು ಈ ಸೇವೆಯನ್ನು ನಿರ್ವಹಿಸುತ್ತದೆ. ಏರ್ ಟ್ಯಾಕ್ಸಿ ಸೇವೆಯಿಂದಾಗಿ ದುಬೈನಲ್ಲಿ ಪ್ರಯಾಣದ ಅವಧಿಯನ್ನು 70ಶೇ. ರಷ್ಟು ಕಡಿತಗೊಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಮ್ ಜುಮೇರಾಗೆ ಸಾಮಾನ್ಯವಾಗಿ 45 ನಿಮಿಷಗಳು ಬೇಕು. ಹಾಗೂ ರಸ್ತೆ ಮೂಲಕ ಸಾಗುವುದಾದರೆ ಒಂದು ಗಂಟೆ ಬೇಕಾಗುತ್ತದೆ. ಆದರೆ ಏರ್ ಟ್ಯಾಕ್ಸಿ ಮೂಲಕ ಕೇವಲ 10 ರಿಂದ 12 ನಿಮಿಷಗಳಲ್ಲಿ ತಲುಪಬಹುದಾಗಿದೆ.
ಕಾರ್ಗಿಲ್, ಮೇ.10 : ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ನಲ್ಲಿ ಶುಕ್ರವಾರ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವಾಗುತ್ತಿದ್ದಂತೆ ತಕ್ಷಣವೇ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನಲ್ಲಿ ಮೇ 1 ರಂದು 3.4 ರ ತೀವ್ರತೆಯ ಭೂಕಂಪ, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನಲ್ಲಿ ಏಪ್ರಿಲ್ 18 ರಂದು 4.0 ತೀವ್ರತೆಯ ಭೂಕಂಪ ಹಾಗೂ ಏಪ್ರಿಲ್ 19ರಂದು ಕಾರ್ಗಿಲ್ ಮತ್ತು ಲಡಾಖ್ನಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ.
ಬೆಳ್ತಂಗಡಿ, ಮೇ.9 :ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ, ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಕೆ. ಬಂಗೇರ (79) ಮೇ 8, ಬುಧವಾರ ನಿಧನರಾಗಿದ್ದಾರೆ. ದೀರ್ಘ ಕಾಲದ ಆನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ನಾಯಕ ವಸಂತ ಬಂಗೇರ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1972 ರಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ನ ಚುನಾವಣೆಯಲ್ಲಿ ಅವಿರೋಧವಾಗಿ ಸದಸ್ಯರಾಗಿ ಆಯ್ಕೆಯಾಗಿ ನಂತರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ವಿಧಾನಸಭೆಗೆ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1983 ಮತ್ತು 1985ರಲ್ಲಿ ವಸಂತ ಬಂಗೇರ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ವಸಂತ ಬಂಗೇರ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಅವರು ಬಿಜೆಪಿ, ಜನತಾದಳ ಹಾಗೂ ಕಾಂಗ್ರೆಸ್ ಸೇರಿದಂತೆ ಮೂರು ಪಕ್ಷದಲ್ಲಿಗುರುತಿಸಿಕೊಂಡಿದ್ದರು.
ಸಿದ್ದಾಪುರ, ಮೇ. 8.: ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿ 2 ಅಂಗಡಿಗಳು ಸುಟ್ಟು ಕರಕಲಾದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಕುಂದಾಪುರದ ಸಿದ್ದಾಪುರದಲ್ಲಿ ಸೋಮವಾರ ನಡೆದಿದೆ. ಅಗ್ನಿ ಅವಘಡದಿಂದ ಸ್ಪೇರ್ ಪಾರ್ಟ್ಸ್ ಅಂಗಡಿ ಮತ್ತು ಮಿಲ್ಕ್ ಪಾರ್ಲರ್ ಸುಟ್ಟು ಕರಕಲಾಗಿದೆ. ಸ್ಪೇರ್ ಪಾರ್ಟ್ಸ್ ಅಂಗಡಿಯಲ್ಲಿದ್ದ ಬಿಡಿಭಾಗಗಳು, ಆಯಿಲ್ ಡಬ್ಬಗಳು ಸೇರಿ ಹಲವು ವಸ್ತುಗಳ ಸುಟ್ಟುಹೋಗಿವೆ. ಮಿಲ್ಕ್ ಪಾರ್ಲರ್ ನಲ್ಲಿದ್ದ ಉತ್ಪನ್ನಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲಾಗಿದೆ.
ಕಾಸರಗೋಡು, ಮೇ.7: ಅಂಬ್ಯುಲೆನ್ಸ್ ಮತ್ತು ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪದ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ತೃಶ್ಯೂರು ಗುರುವಾಯೂರು ನಿವಾಸಿಗಳಾದ ಶ್ರೀನಾಥ್, ಶರತ್ ಮೆನೋನ್ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಕಾಸರಗೋಡಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಅಂಬ್ಯುಲೆನ್ಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ . ಅಂಬ್ಯುಲೆನ್ಸ್ ನಲ್ಲಿದ್ದ ರೋಗಿಯೂ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.












