Subscribe to Updates
Get the latest creative news from FooBar about art, design and business.
Author: admin
ಬಂಟ್ವಾಳ, ಮೇ.31: ಗ್ಯಾಸ್ ಟ್ಯಾಂಕರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ .ಹೆ.75ರ ತುಂಬೆ ಸಮೀಪದ ಕಡೆಗೋಳಿಯಲ್ಲಿ ಶುಕ್ರವಾರ ಸಂಭವಿಸಿದೆ. ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ. ಗ್ಯಾಸ್ ಟ್ಯಾಂಕರ್ ನಲ್ಲಿ ಯಾವುದೇ ಅನಿಲ ಸೋರಿಕೆ ಆಗಿಲ್ಲ ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ .ಇದೀಗ ಅದರ ತೆರವು ಕಾರ್ಯಕ್ಕೆ ಕ್ರಮ ವಹಿಸಲಾಗಿದೆ ಎಂದು ಹೇಳಲಾಗಿದೆ. ಬಂಟ್ವಾಳ ಅಗ್ನಿಶಾಮಕ ದಳದವರು, ಸಂಚಾರ ಪೊಲೀಸರು, ಸ್ಥಳೀಯ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಉಡುಪಿ, ಮೇ 30 : ಕಾಪು ತಾಲೂಕಿನ ಪಾದೂರಿನಲ್ಲಿ ಮರದ ಹುಡಿಯನ್ನು ಸಂಗ್ರಹಿಸಿಟ್ಟಿದ್ದ ಗೋಡೌನ್‌ಗೆ ಬೆಂಕಿ ತಗುಲಿದೆ. ಬೆಂಕಿ ಮತ್ತು ಹೊಗೆ ಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಯಿತು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಅಗ್ನಿಶಾಮಕ ದಳದವರು ತಕ್ಷಣ ಬಂದು ಅಗ್ನಿ ನಂದಿಸಿದರು.
ಕಾಸರಗೋಡು, ಮೇ 29: ಸಹಪಾಠಿಗಳ ಜೊತೆ ಸ್ನಾನಕ್ಕೆಂದು ನದಿಗೆ ಇಳಿದ ವಿದ್ಯಾರ್ಥಿ ಮುಳುಗಿ ಸಾವನ್ನಪ್ಪಿದ ಘಟನೆ ಕಾಸರಗೋಡು ಕಾಞ೦ಗಾಡ್ನ ಆರಾಯಿ ಎಂಬಲ್ಲಿ ಮಂಗಳವಾರ ನಡೆದಿದೆ. ರಾಯಿ ಬಾಕೋಟ್ನ ಬಿ.ಕೆ ಮುಹಮ್ಮದ್ ಸಿನಾನ್ (16) ಮೃತ ವಿದ್ಯಾರ್ಥಿ. ಮುಹಮ್ಮದ್ ಸಿನಾನ್ ಆರಾಯಿ ಮಂಗಳವಾರ ಇಬ್ಬರು ಸ್ನೇಹಿತರೊಂದಿಗೆ ನದಿಗೆ ಸ್ನಾನಕ್ಕಿಳಿದಿದ್ದಾನೆ. ಈ ವೇಳೆ ಸುಳಿಗೆ ಸಿಲುಕಿದ ಆತ ನೀರುಪಾಲಾಗಿದ್ದಾನೆ. ಜೊತೆಗಿದ್ದ ಇಬ್ಬರು ವಿದ್ಯಾರ್ಥಿಗಳು ಈಜಿ ದಡ ಸೇರಿದ್ದಾರೆ.
ದಮಾಮ್, ಮೇ 27: ಸೌದಿ ಅರೇಬಿಯಾದ ದಮಾಮ್ ನಲ್ಲಿ ನೆಲೆಸಿರುವ ಕರಾವಳಿ ಮೂಲದ ಅನಿವಾಸಿ ಭಾರತೀಯ ಕುಟುಂಬವೊಂದು ವಾಸಿಸುತ್ತಿದ್ದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ, ಮೂರು ವರ್ಷದ ಮಗುವೊಂದು ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಅದಮಾದ ಅದಮಾ ಎಂಬಲ್ಲಿಯ ಲುಲು ಮಾಲ್ ಹಿಂಭಾಗದಲ್ಲಿರುವ ಅಲ್ ಹುಸೇನಿ ಕಾಂಪೌಂಡ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮೂಡಬಿದಿರೆಯ ಕೋಟೆಬಾಗಿಲು ಮೂಲದ ಶೇಖ್ ಫಹದ್ ಎಂಬವರ ಮಗು ಸಾಯಿಕ್ ಶೇಖ್ (2) ಸಾವನ್ನಪ್ಪಿದೆ. ಶೇಖ್ ಫಹದ್ ಮತ್ತು ಅವರ ಪತ್ನಿ ಸಲ್ಮಾ ಕಾಝಿ ಮತ್ತು ಇನ್ನೋರ್ವ ಪುತ್ರ ಶಾಹಿದ್ ಶೇಖ್(6) ಹೊಗೆಯಿಂದ ತೀವ್ರವಾಗಿ ಅಸ್ವಸ್ಥರಾಗಿದ್ದು ಅವರನ್ನು ಸಮೀಪದ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಬೆಳ್ತಂಗಡಿ, ಮೇ 26 : ಮನೆಯ ಕೆರೆಗೆ ಜಾರಿ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ಬೆಳ್ತಂಗಡಿ ಗರ್ಡಾಡಿಯ ನಂದಿಬೆಟ್ಟದಲ್ಲಿ ನಡೆದಿದೆ. ಮೃತರನ್ನು ಶೈಲೇಶ್ ಶೆಟ್ಟಿ(38) ಎಂದು ಗುರುತಿಸಲಾಗಿದೆ. ಶೈಲೇಶ್ ಅವರು ಮನೆಯ ಕೆರೆಗೆ ಜಾರಿ ಬಿದ್ದು ಕೆಸರಿನಲ್ಲಿ ಮುಳುಗಿದ ಪರಿಣಾಮ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.
ಬಂಟ್ವಾಳ, ಮೇ. 24 :: ವ್ಯಕ್ತಿಯೋರ್ವನಿಗೆ ಸಿಡಿಲು ಬಡಿದು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಇರಾದಲ್ಲಿ ಗುರುವಾರ ನಡೆದಿದೆ. ಇರಾ ಗ್ರಾಮದ ಮುರ್ಕಾಜೆ ನಿವಾಸಿ ಸತೀಶ್ ಚೌಟ (43) ಮೃತಪಟ್ಟ ವ್ಯಕ್ತಿ. ಸತೀಶ್ ಅವರು ಬಾಕ್ರಬೈಲಿನಲ್ಲಿ ಮರದ ಮಿಲ್ ನಲ್ಲಿ ಕೆಲಸಗಾರನಾಗಿದ್ದು, ಗುರುವಾರ ರಸ್ತೆಯ ಬದಿಯಲ್ಲಿ ಟ್ರಾನ್ಸ್ ಫಾರ್ಮರ್ ಪಕ್ಕದಲ್ಲಿ ನಿಂತುಕೊಂಡಿರುವ ಸಮಯದಲ್ಲಿ ಆಕಸ್ಮಿಕವಾಗಿ ಸಿಡಿಲು ಬಡಿದು, ಒಮ್ಮೆಲೇ ವಿದ್ಯುತ್ ಪ್ರವೇಶಿಸಿ ಮೃತಪಟ್ಟ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಸರಗೋಡು, ಮೇ. 23 : ಚಲಿಸುತ್ತಿದ್ದ ಟ್ಯಾಂಕರ್ ನಿಂದ ಅನಿಲ ಸೋರಿಕೆ ಉಂಟಾದ ಘಟನೆ ಕಾಞ೦ಗಾಡ್ ಸಮೀಪದ ಚಿತ್ತಾರಿಯಲ್ಲಿ ಗುರುವಾರ ನಡೆದಿದೆ. ಟ್ಯಾಂಕರ್ ಮಂಗಳೂರಿನಿಂದ ಕೋಜಿಕ್ಕೋಡ್ಗೆ ತೆರಳುತ್ತಿತ್ತು. ಈ ವೇಳೆ ಟ್ಯಾಂಕರ್ ನಿಂದ ಅನಿಲ ಸೋರಿಕೆ ಉಂಟಾಗಿದೆ. ಕೂಡಲೇ ಚಾಲಕ ಟ್ಯಾಂಕರ್ ನಿಲುಗಡೆ ಗೊಳಿಸಿ ಕಂಪೆನಿ ಅಧಿಕಾರಿಗಳಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಗಂಟೆಗಳ ಬಳಿಕ ಸೋರಿಕೆ ತಡೆಗಟ್ಟಲಾಗಿದೆ.. ಕಾಞ೦ಗಾಡ್ , ಕಾಸರಗೋಡು ಮೊದಲಾದೆಗಳಿಂದ ಮೂರು ಘಟಕ ಅಗ್ನಿಶಾಮಕ ದಳದ ಸಿಬಂದಿಗಳು ಸೋರಿಕೆ ತಡೆಗಟ್ಟಲು ಹಸರಸಾಹಸಪಟ್ಟಿದ್ದು. ಮಂಗಳೂರಿನಿಂದ ಅಧಿಕಾರಿಗಳ ತಂಡವು ಸ್ಥಳಕ್ಕೆ ಆಗಮಿಸಿದ್ದು , ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ .
ಮಂಗಳೂರು,ಮೇ23 : ಎಂಡೋ ಸಂತ್ರಸ್ತರ ಹಾಗೂ ತುಳುನಾಡಿನ ದೈವ ದೇವರ ಕಥೆಯನ್ನೊಳಗೊಂಡ ಬಲಿಪೆ ತುಳು ಚಲನಚಿತ್ರವು ಮೇ 24ರಂದು ಕರಾವಳಿಯದ್ಯಂತ ಬಿಡುಗಡೆಗೊಳ್ಳಲಿದೆ. ತುಳುನಾಡಿನ ಶ್ರೀ ಕ್ಷೇತ್ರ ಪೆರಾರ,ಕಾರಂಜಿ ಕ್ಷೇತ್ರ,ಬಜ್ಪೆ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ ಎಂದು ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿರುವ ದಯಾನಂದ ಕತ್ತಲ್ ಸಾರ್ ಅವರು ಪತ್ರಿಕಾ ಭವನದಲ್ಲಿ ನಡೆದಿರುವ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ಈ ಚಿತ್ರದಲ್ಲಿ , ನಿರ್ಮಾಪಕರಾಗಿ ಹೇಮಂತ್ ಸುವರ್ಣ,ನಾಯಕ ನಟನಾಗಿ ಹರ್ಷಿತ್ ಬಂಗೇರ ,ನಾಯಕಿಯಾಗಿ ಅಂಕಿತಾ ಪಟ್ಲ ಮುಖ್ಯ ಪಾತ್ರದಲ್ಲಿ ಅರವಿಂದ್ ಬೋಳಾರ್,ರಚನೆ – ನಿರ್ದೇಶನ ಪ್ರಸಾದ್ ಪೂಜಾರಿ, ಆಕಾಶ್ ರೆಡ್ಡಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ನಿರ್ಮಾಪಕರಾದ ಹೇಮಂತ್ ಸುವರ್ಣ,,ನಾಯಕ ನಟ ಹರ್ಷಿತ್ ಬಂಗೇರ,ನಾಯಕಿ ಅಂಕಿತಾ ಪಟ್ಲ ರಚನೆ- ನಿರ್ದೇಶಕ ಪ್ರಸಾದ್ ಪೂಜಾರಿ, ಆಕಾಶ್ ರೆಡ್ಡಿಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು,ಮೇ.22 : ಬಜ್ಪೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ 14 ವರ್ಷ ಕಳೆದಿವೆ. ಈ ಘಟನೆಯಲ್ಲಿ ಮಡಿದವರಿಗೆ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. 2010ರ ಮೇ 22ರಂದು ದುಬೈನಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಹಂತದಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 166 ಜನರ ಪೈಕಿ 158 ಜನರು ಸಾವನಪ್ಪಿದ್ದರು. 8 ಜನರು ಬದುಕುಳಿದಿದ್ದರು. ವಿಮಾನ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಗುರುತು ಹಿಡಿಯಲಾಗದ 12 ಮಂದಿಯ ಮೃತದೇಹಗಳನ್ನು ಕುಳೂರಿನ ನದಿ ಕಿನಾರೆಯಲ್ಲಿ ಸಮಾಧಿ ಮಾಡಲಾಗಿತ್ತು. ಅದೇ ಜಾಗದಲ್ಲಿ ದುರಂತದಲ್ಲಿ ಮಡಿದವರ ನೆನಪಿಗಾಗಿ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪೊಲೀಸ್ ಅಧಿಕಾರಿಗಳು, ವಿಮಾನ ನಿಲ್ದಾಣದ ಅಧಿಕಾರಿಗಳು ಸೇರಿದಂತೆ ಮಡಿದವರ ಕುಟುಂಬಸ್ಥರು ಭಾಗವಹಿಸಿದರು.
ಬಂಟ್ವಾಳ, ಮೇ. 22 : : ಕಾರೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮಾಜಿ ಸೈನಿಕ ಮೃತಪಟ್ಟ ಘಟನೆ ಮಂಚಿ ಸಮೀಪದ ಮೋಂತಿಮರದ ಕಾರ್ಯಪಡ್ಪು ಎಂಬಲ್ಲಿ ಸೋಮವಾರ ನಡೆದಿದೆ. ಮೃತರನ್ನು ಪುತ್ತೂರು ನೆಹರು ನಗರದ ಶ್ರೀ ರಕ್ತೇಶ್ವರಿ ಗುಡಿ ಬಳಿಯ ನಿವಾಸಿ ಚಿದಾನಂದ ಕಾಮತ್ ಎಂದು ಗುರುತಿಸಲಾಗಿದೆ. ಚಿದಾನಂದ ಕಾಮತ್ ಅವರು ಸ್ಕೂಟರ್ ನಲ್ಲಿ ಸಾಲೆತ್ತೂರಿನಿಂದ ಮುಡಿಪುವಿಗೆ ತೆರಳುತ್ತಿದ್ದ ವೇಳೆ ಅತಿವೇಗದಿಂದ ಚಲಿಸಿ ಬಂದ ಕಾರು ಸ್ಕೂಟರ್ಗೆ ಢಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಚಿದಾನಂದ ಕಾಮತ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಕೂಟರ್ಗೆ ಢಿಕ್ಕಿ ಹೊಡೆದ ಕಾರು ಸ್ಥಳದಿಂದ ಪರಾರಿಯಾಗಿದೆ. ಬಂಟ್ವಾಳ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












