Subscribe to Updates
Get the latest creative news from FooBar about art, design and business.
Author: admin
ಜೈಪುರ, ಸೆ 02 : ಹಿಟ್ಟಿನ ಗಿರಣಿಯಲ್ಲಿ ವಿದ್ಯುತ್ ಸ್ಪರ್ಶಗೊಂಡು ಒಂದೇ ಕುಟುಂಬದ 4 ಮಂದಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಹಿಟ್ಟಿನ ಗಿರಣಿ ಅರ್ಜುನ ಸಿಂಗ್ ಎಂಬವರಿಗೆ ಸೇರಿದ್ದು, ಘಟನೆ ನಡೆದ ಸಮಯದಲ್ಲಿ ಅರ್ಜುನ ಸಿಂಗ್ ಅವರು ಕೆಲಸದ ನಿಮಿತ್ತ ದೆಹಲಿಯಲ್ಲಿದ್ದರು. ಅವರ ಪತ್ನಿ ಹಿಟ್ಟಿನ ಗಿರಣಿ ಯಂತ್ರವನ್ನು ನಿರ್ವಹಿಸುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದಿದೆ. ತಾಯಿಯನ್ನು ರಕ್ಷಿಸಲು ಇಬ್ಬರು ಪುತ್ರರು ಧಾವಿಸಿದ್ದು, ಅವರಿಗೂ ವಿದ್ಯುತ್ ತಗುಲಿದೆ. ಅರ್ಜುನವರ ಮಾವ ಮೂವರನ್ನು ವಿದ್ಯುತ್ ಶಾಕ್ ನಲ್ಲಿ ನೋಡಿದಾಗ ಅವರನ್ನು ರಕ್ಷಣೆ ಮಾಡಲು ಹೋಗಿದ್ದು, ಅವರು ಕೂಡ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಗುಜರಾತ್, ಸೆ. 01 : ಕಕ್ರಾಪರ್ ನ 3ನೇ ಹಂತದ ಪರಮಾಣು ವಿದ್ಯುತ್ ಸ್ಥಾವರ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ ನಲ್ಲಿರುವ ಕಕ್ರಾಪರ್ ನಲ್ಲಿ ಈಗಾಗಲೇ ಎರಡು ಸ್ಥಾವರಗಳು 220 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಸಾಮರ್ಥ್ಯ ಹೊಂದಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ‘ಭಾರತ ಮತ್ತೊಂದು ಸಾಧನೆ ಮಾಡಿದೆ. 700 MW ಸಾಮರ್ಥ್ಯದ ಗುಜರಾತ್ನ ಮೊದಲ ಅತಿದೊಡ್ಡ ಸ್ವದೇಶಿ ನಿರ್ಮಿತ ಕಕ್ರಾಪರ್ ಪರಮಾಣು ವಿದ್ಯುತ್ ಸ್ಥಾವರದ ಘಟಕ-3 ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದೆ. ಅದಕ್ಕಾಗಿ ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳಿಗೆ ಅಭಿನಂದನೆಗಳು ಎಂದು ಮೆಚ್ಚಿಗೆ ಸೂಚಿಸಿದ್ದಾರೆ.
ಕುಂದಾಪುರ, ಸೆ. 01 : ಹತ್ತನೇ ತರಗತಿ ಓದುತ್ತಿದ್ದ, ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಕೋಣೆ ಎಂಬಲ್ಲಿ ನಡೆದಿದೆ. ಮೃತರನ್ನು ಕುಂದಾಪುರದ ಪುರಸಭೆಯಲ್ಲಿ ಪೌರಕಾರ್ಮಿಕರಾಗಿರುವ ಪಡುಕೋಣೆ ನಿವಾಸಿಗಳಾದ ಪ್ರಶಾಂತ್, ಸುನಂದಾ ದಂಪತಿ ಪುತ್ರಿ ಸಿಂಧು(16) ಎಂದು ಗುರುತಿಸಲಾಗಿದೆ. ಸಿಂಧು ಕುಂದಾಪುರದ ವಡೇರಹೋಬಳಿ ಎಂಬಲ್ಲಿರುವ ಬಾಲಕಿಯರ ವಸತಿ ನಿಲಯದಲ್ಲಿದ್ದು ಸಮೀಪದ ಸರ್ಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದಳು. ಈಕೆ ಗುರುವಾರ ಅನಾರೋಗ್ಯದ ಕಾರಣ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ, ಆ. 31 : ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರೊಂದು ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ ಘಟನೆ ಅಡ್ಕಾರಿನಲ್ಲಿ ನಡೆದಿದೆ. ಮೃತರನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಕಾರ್ಮಿಕರಾದ ಚಂದ್ರಪ್ಪ ರೇಗಪ್ಪ, ಮಾಂತೇಶ್ ಎಂದು ಗುರುತಿಸಲಾಗಿದೆ. ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಚಂದ್ರಪ್ಪ, ರೇಗಪ್ಪ, ವೆಂಕಪ್ಪ, ಮಾಂತೇಶ್ ಎಂಬವರಿಗೆ ಢಿಕ್ಕಿಯಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ ವೆಂಕಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ಆ. 30 : ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಗಂಧಕ ಇರುವುದನ್ನು ಚಂದ್ರನ ಅಂಗಳದಲ್ಲಿ ಸಂಚರಿಸುತ್ತಿರುವ ಚಂದ್ರಯಾನ-3 ರೋವರ್(ಪ್ರಜ್ಞಾನ್) ನಲ್ಲಿರುವ ಲೇಸರ್ ಇಂಡ್ಯೂಸ್ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್ ಉಪಕರಣವು ಪತ್ತೆ ಮಾಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಂಗಳವಾರ ತಿಳಿಸಿದೆ. ನಿರೀಕ್ಷಿಸಿದಂತೆ, ಪ್ರಗ್ಯಾನ್ ರೋವರ್, ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ಪತ್ತೆ ಮಾಡಿದೆ ಎಂದು ಇಸ್ರೋ ಹೇಳಿದೆ. ಲಿಬ್ (ಲೇಸರ್ ಇಂಡ್ಯೂಸ್ ಬ್ರೇಕ್‌ಡೌನ್ ಸ್ಪೆಕ್ರೋಸ್ಕೋಪ್) ಉಪಕರಣವನ್ನು ಬೆಂಗಳೂರಿನ ಎಲೆಕ್ಟ್- ಆಪ್ಟಿಕ್ಸ್ ಸಿಸ್ಟಮ್ ಪ್ರಯೋಗಾಲಯ ಅಭಿವೃದ್ಧಿಪಡಿಸಿತ್ತು.
ಉಳ್ಳಾಲ, ಆ. 29: ಸ್ನೇಹಿತರ ಜತೆ ಸ್ನಾನಕ್ಕೆಂದು ಕೊಳಕ್ಕೆ ಇಳಿದ ಯುವಕನೋರ್ವ ನೀರುಪಾಲಾಗಿರುವ ಘಟನೆ ತಲಪಾಡಿಯಲ್ಲಿ ನಡೆದಿದೆ. ಮೃತರನ್ನು ಕೇರಳದ ಹೊಸಂಗಡಿ ದುರ್ಗಿಪಳ್ಳ ನಿವಾಸಿ ದಿ. ಸುಬ್ರಾಯ ಆಚಾರ್ಯ-ಉಮಾವತಿ ದಂಪತಿ ಪುತ್ರ ಹರಿಪ್ರಸಾದ್ ಆಚಾರ್ಯ(36) ಎಂದು ಗುರುತಿಸಲಾಗಿದೆ. ತಲಪಾಡಿಯಲ್ಲಿರುವ ಖಾಸಗಿ ಜಾಗದಲ್ಲಿರುವ ಕೊಳಕ್ಕೆ ಸ್ನಾನಕ್ಕೆಂದು ಬಂದಿದ್ದ ನಾಲ್ವರ ಪೈಕಿ ಹರಿಪ್ರಸಾದ್ ನೀರಿನಡಿಯ ಕೆಸರಿನಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬೈಂದೂರು, ಆ. 28 : ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಇಬ್ಬರು ಮೀನುಗಾರರು ನೀರು ಪಾಲಾದ ಘಟನೆ ರವಿವಾರ ಅಳ್ವೆಗದ್ದೆಯಲ್ಲಿ ನಡೆದಿದೆ. ಮೃತರನ್ನು ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಬ್(22) ಹಾಗೂ ನಝಾನ್(24) ಎಂದು ಗುರುತಿಸಲಾಗಿದೆ. ಕೆಲ ದಿನಗಳಿಂದ ಕೈರಂಪಣಿ ಮೀನುಗಾರಿಕೆ ನಡೆಸುತ್ತಿರುವ ಇವರು ಭಾನುವಾರ ಕೈರಂಪಣಿ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿದ್ದರು. ಸಮುದ್ರ ಪ್ರಕ್ಷುಬ್ದ ಇರುವ ಕಾರಣ ಇಬ್ಬರು ಮೀನುಗಾರರು ಆಯತಪ್ಪಿ ಕಡಲ ಸಮುದ್ರ ಪಾಲಾಗಿದ್ದಾರೆ ಎನ್ನಲಾಗಿದೆ.
ಮಂಗಳೂರು, ಆ. 27 : ಟಿಪ್ಪರ್ ಮತ್ತು ಸ್ಕೂಟರ್ ಮಧ್ಯೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ಅಡ್ಯಾರ್ನಲ್ಲಿ ನಡೆದಿದೆ. ಮೃತರನ್ನು ಅಡ್ಯಾರ್ ಪದವು ನಿವಾಸಿ ಶರಫುದ್ದೀನ್ (16) ಎಂದು ಗುರುತಿಸಲಾಗಿದೆ. ಶರಫುದ್ದೀನ್ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದು, ಗೆಳೆಯನೊಂದಿಗೆ ಆಕ್ಟಿವಾದಲ್ಲಿ ಸಂಚರಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಮತ್ತೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ಸ್ಯಾನ್ ಡಿಯಾಗೋ, ಆ. 26 ; ಅಮೆರಿಕದ ನೌಕಾಪಡೆಯ ಮೆರೈನ್ ಕಾರ್ಪ್ಸ್ ಎಫ್/ಎ-18 ಹಾರ್ನೆಟ್ ಫೈಟರ್ ಜೆಟ್ ಪತನಗೊಂಡು ಒಬ್ಬ ಪೈಲೆಟ್ ಸಾವನ್ನಪ್ಪಿದ ಘಟನೆ ಸ್ಯಾನ್ ಡಿಯಾಗೋ ದಲ್ಲಿ ನಡೆದಿದೆ. ಅಪಘಾತದ ಸ್ಥಳವು ಮೆರೆನ್ ಕಾರ್ಪ್ ಏರ್ ಸ್ಟೇಷನ್ ಮಿರಾಮರ್ ಬಳಿ ಇದೆ. ಗುರುವಾರ ಮಧ್ಯರಾತ್ರಿ ಫೈಟರ್ ಜೆಟ್ ಪತನಗೊಂಡಿದೆ.ಅಪಘಾತದ ನಂತರ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ತಂಡ ಖಚಿತಪಡಿಸಿದೆ. ಫೈಟರ್ ಜೆಟ್ ಪತನದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಕಾರ್ಕಳ, ಆ.24: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಿರ್ಲಾಲು ಗ್ರಾಮದ ಹಾಡಿಯಂಗಡಿ ನಿವಾಸಿ ರಜನೀಶ್ (18) ಎಂದು ಗುರುತಿಸಲಾಗಿದೆ. ರಜನೀಶ ಅವರು ಕಳೆದ ಹಲವು ಸಮಯದಿಂದ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, ಉಡುಪಿಯ ಆಸ್ವತ್ರೆಯೊಂದಕ್ಕೆ ದಾಖಲಾಗಿ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಆ.. 20 ಭಾನುವರ ಏಕಾಎಕಿ ವಾಂತಿ ಜ್ವರ ಉಲ್ಬಣಗೊಂಡಿದ್ದು ಉಡುಪಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.












