ಬೆಂಗಳೂರು, ಸೆ.8 : ಎಲ್ಲುಮುತ್ತಾ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಹೈ5 ಸ್ಟುಡಿಯೋಸ್ ನ ನಿರ್ಮಾಪಕ ಸತ್ಯ ಶ್ರೀನಿವಾಸನ್ ಇದೀಗ ಅಲೆಯ ವೈಖರಿ ಎಂಬ ಪಾಪ್ ಸಾಂಗ್ ಅನ್ನು ತಯಾರಿಸಿದ್ದಾರೆ. ಈ ಪಾಪ್ ಸಾಂಗ್ ಗೆ ಅಜಿತ್ ಕೇಶವ್ ಸಾಹಿತ್ಯ ಬರೆದಿದ್ದು, ಚಿನ್ಮಯಿ ಆತ್ರೇಯಾ ಧ್ವನಿಯಾಗಿದ್ದಾರೆ. ಈ ಹಾಡಿಗೆ ಸಾಗರ್ ಗುರುರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹೈಫೈ ಸ್ಟುಡಿಯೋದಿಂದ ಹಾಡನ್ನ ರಿಲೀಸ್ ಮಾಡಲಾಗಿದೆ.
ಮಣಿಕಾಂತ್ ಕದ್ರಿ ಅಲೆಯ ವೈಖರಿ ಕೇಳಿ ಖುಷಿಯಾಗಿದ್ದಾರೆ. ಅಜಿತ್ ಕೇಶವ ಒಂದೊಳ್ಳೆ ಕಾನ್ಸೆಪ್ಟ್ ಮಾಡಿದ್ದಾರೆ.ರವಿಶಂಕರ್ ಹಾಗೂ ಸಂಗೀತಾ ಗುರುರಾಜ್ ಶುಭ ಹಾರೈಸಿದ್ದಾರೆ. ಹಾಗೇ ಈ ಹಾಡನ್ನ ತುಂಬಾನೇ ಇಷ್ಟಪಟ್ಟು ನಿರ್ಮಿಸಿದ್ದೇನೆ ಎಂದು ನಿರ್ಮಾಪಕ ಸತ್ಯ ಶ್ರೀನಿವಾಸನ್ ಅವರು ತಿಳಿಸಿದ್ದಾರೆ.