ಬಂಟ್ವಾಳ, ಜ. 01 : ಬೈಕ್ ಅಪಘಾತದಲ್ಲಿ ರಂಗಭೂಮಿ ಕಲಾವಿದ ಸಾವನ್ನಪ್ಪಿದ ಘಟನೆ ಪುಂಜಾಲಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ಬಂಟ್ವಾಳ ತಾಲೂಕಿನ ದೇವಶ್ಯಪಡೂರು ಗ್ರಾಮದ ಮರದೊಟ್ಟು ನಿವಾಸಿ ಗೌತಮ್ (26) ಎಂದು ಗುರುತಿಸಲಾಗಿದೆ.
ಮೂಡುಬಿದಿರೆ ಪಿಂಗಾರ ಕಲಾವಿದರ ತಂಡದ ಕಲಾವಿದರಾಗಿದ್ದ ಗೌತಮ್ ಅವರು ಡಿ.30ರಂದು ಬೆಳಗ್ಗೆ3 ಗಂಟೆ ಸುಮಾರಿಗೆ ಬೆಳುವಾಯಿಯಲ್ಲಿ ನಾಟಕ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ಅವರ ಮನೆ ಸಮೀಪದ ಮರಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದು ತಲೆಗೆ ಗಾಯವಾಗಿದೆ. ಈ ಘಟನೆ ಬೆಳಗ್ಗೆಯಷ್ಟೆ ಬೆಳಕಿಗೆ ಬಂದಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿ ತಾರೂ, ಅವರು ಅದಾಗಲೇ ಸಾವನ್ನಪ್ಪಿದ್ದರು ಎನ್ನಲಾಗಿದೆ.