Author: admin

ಮಂಗಳೂರು, ನ. 22 : ಇಟಲಿಯ ಮೀರ್ ಗ್ರೂಪ್ ತನ್ನ ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (ಎಂಎಸ್ಇಝೆಡ್)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ನಗರದ ಓಶಿಯನ್ ಪರ್ಲ್ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಸಮಕ್ಷಮದಲ್ಲಿ ಇಟಲಿಯ ಮೀರ್ ಗ್ರೂಪ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್ಚ್ ರಫೆಲ್ ಮರ್ರಾರೆ ಮತ್ತು ಮಂಗಳೂರು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (ಎಂಎಸ್ಇಝೆಡ್) ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ಸೂರ್ಯನಾರಾಯಣ ಅವರು ಒಪ್ಪಂದಕ್ಕೆ ಸಹಿ ಮಾಡಿದರು. ಈ ಸಂದರ್ಭ ಮಾತನಾಡಿದ ಎಂಎಸ್‌ಇಝೆಡ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂರ್ಯನಾರಾಯಣ ವಿ ಅವರು ಇಟಲಿಯ ಮೀರ್ ಸಮೂಹ ಸಂಸ್ಥೆಯು ತನ್ನ ಕಟ್ಟಡ ಸಾಮಗ್ರಿಗಳು ಮತ್ತು ಇತರ ವಿನ್ಯಾಸ ಸಾಮಗ್ರಿಗಳ ಉತ್ಪಾದನೆಯ ಘಟಕವನ್ನು ಮಂಗಳೂರಿನಲ್ಲಿ ಆರಂಭಿಸಲು ಆಸಕ್ತಿ ವಹಿಸಿದೆ. ಘಟಕ ಸ್ಥಾಪನೆಯ ಉದ್ದೇಶಕ್ಕಾಗಿ 10 ಎಕ್ರೆ ಜಮೀನು ದೊರಕಿಸಿಕೊಡುವಂತೆ ಮನವಿ ಮಾಡಿದೆ ಎಂದು ಹೇಳಿದರು. ಮೀರ್ ಗ್ರೂಪ್ ಸಿಇಒ ರಫೇಲೆ ಅವರು ಮಾತನಾಡಿ, ಮಂಗಳೂರು…

Read More

ನವದೆಹಲಿ, ನ.21:ರಾಜಧಾನಿ ನವದೆಹಲಿಯಲ್ಲಿ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ ಹಾಗೂ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತದ ವತಿಯಿಂದ ನಂದಿನಿ ವಿವಿಧ ಶ್ರೇಣಿಯ ಹಾಲು ಬಿಡುಗಡೆ ಕಾರ್ಯಕ್ರಮ ಇಂದು ಗುರುವಾರ ನಡೆಯಿತು. ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕರ್ನಾಟಕ ರಾಜ್ಯದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಲೀ. ಗೆ 32 ರೂ.ಗಳಿಗೆ ಹಾಲು ಖರೀದಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂ.ಗಳ ಪ್ರೋತ್ಸಾಹಧನವನ್ನು ನೀಡುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ 2 ರೂ. ಇದ್ದ ಪ್ರೋತ್ಸಾಹಧನ, ನಂತರ 3 ರೂ. ಆಯಿತು. ನಾನು ಮುಖ್ಯಮಂತ್ರಿಯಾದ ನಂತರ ಇದನ್ನು 5 ರೂ.ಗಳಿಗೆ ಹೆಚ್ಚಿಸಲು ಘೋಷಣೆ ಮಾಡಲಾಯಿತು. ಪ್ರೋತ್ಸಾಹಧನಕ್ಕಾಗಿ ಪ್ರತಿ ದಿನ 5 ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ಅವರು ತಿಳಿಸಿದರು.…

Read More

ಮಂಗಳೂರು,ನ.20: ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ, ಜಗದ್ಗುರು ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಅಂಗವಾಗಿ ನ.26 ಹಾಗೂ ಜ. 1 ಮತ್ತು 2ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಪೀಠಾರೋಹಣ ಮಾಡಿದ ಸುಸಂದರ್ಭಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸುವ ಜತೆಗೆ ಈಗಿನ ಪೀಠಾಧಿಪತಿ ಶ್ರೀ ಡಾ। ನಿರ್ಮಲಾನಂದನಾಥ ಮಹಾಸ್ವಾಮೀಜಿಗೆ ಗುರುವಂದನೆ ಹಾಗೂ ರಜತ ತುಲಾಭಾರ ನಡೆಸಲಾಗುವುದು  ಎಂದು ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶಾಸಕ ಡಾ| ವೈ. ಭರತ್ ಶೆಟ್ಟಿ ಮಾತನಾಡಿ, ರಜತ ಮಹೋತ್ಸವ ಅಂಗವಾಗಿ ನ.26ರಂದು ನಡೆಯಲಿರುವ ಸಮಾರಂಭದಲ್ಲಿ ದ.ಕ. ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರಾದ ಡಾ| ಕೆ. ಚಿನ್ನಪ್ಪಗೌಡ, ಗುರುವಪ್ಪಎನ್.ಟಿ.ಬಾಳೇಪುಣಿ, ಪ್ರೊ. ಕೆ.ವಿ. ರಾವ್,  ಡಾ|ರಮೇಶ್ ಡಿ.ಪಿ., ಡಾ| ಸತೀಶ್ ಕಲ್ಲಿಮಾರ್, ಮಾಧವ ಸುವರ್ಣ,…

Read More

ನೆಲ್ಯಾಡಿ, ನ. 18 : ಮಣ್ಣಗುಂಡಿಯಲ್ಲಿ ಕಾರೊಂದು ಡಿವೈಡರ್‌ ಗೆ  ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಪ್ರಯಾಣಿಕರೋರ್ವರು ಮೃತಪಟ್ಟ ಘಟನೆ ನ.17ರಂದು ನಡೆದಿದೆ. ಮೃತರನ್ನು ಅರಿಯಡ್ಕ ನಿವಾಸಿ,ರಾಮಣ್ಣ ಪೂಜಾರಿ ಎಂಬವರ ಪುತ್ರ ಜಗದೀಶ್ (26) ಎಂದು ಗುರುತಿಸಲಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮಣ್ಣಗುಂಡಿಯಲ್ಲಿ ಕಾರೊಂದು ಡಿವೈಡರ್‌ ಗೆ  ಡಿಕ್ಕಿಯಾಗಿಕಾರಿನಲ್ಲಿದ್ದ ಪ್ರಯಾಣಿಕರೋರ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಡುಪಿ, ನ.17 : ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮುರುಡೇಶ್ವರ ಹೈವೇ ಹೊಟೇಲ್ ಎದುರುಗಡೆ ರೈಲ್ವೇ ಹಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಹೇರೂರಿನ ಕೆಪಿಟಿಸಿಎಲ್ ಸಬ್ ಸ್ಟೇಶನ್ ಎದುರುಗಡೆ ನಿವಾಸಿ ಸಂದೀಪ ಕೆ.ಆರ್. (44) ಎಂದು ಗುರುತಿಸಲಾಗಿದೆ. ಸಂದೀಪ ಅವರು ಯಾವುದೋ ಕಾರಣಕ್ಕಾಗಿ ಮುರುಡೇಶ್ವರ ಹೈವೇ ಹೊಟೇಲ್ ಎದುರಿರುವ ರೈಲ್ವೇ ಹಳಿಯ ಹತ್ತಿರ ಹೋಗುತ್ತಿದ್ದ ವೇಳೆ ಬೆಂಗಳೂರು-ಮೈಸೂರುನಿಂದ ಮುರುಡೇಶ್ವರಕ್ಕೆ ಸಾಗುತ್ತಿದ್ದ ರೈಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು,ಸೆ.16 : ಟಿವಿ9 ಕನ್ನಡ ಮತ್ತು ಸ್ವೀಟ್ ಹೋಂ ಜಂಟಿಯಾಗಿ ಆಯೋಜಿಸಿರುವ ರಿಯಲ್ ಎಸ್ಟೇಟ್ ಎಕ್ಸ್ಪೋ 2024 ಚಾಲನೆಗೊಂಡಿದೆ. ಈ ಪ್ರಾಪರ್ಟಿ ಎಕ್ಸ್ಪೋವನ್ನು ಸಚಿವ ಭೈರತಿ ಸುರೇಶ್ ಅವರು ಶುಕ್ರವಾರ ಉದ್ಘಾಟಿ ಸಿದ್ದಾರೆ. ಮನೆ ಅಥವಾ ಸೈಟ್ ಖರೀದಿಸಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಬೆಂಗಳೂರು ನಗರದಲ್ಲಿ ಭೂಮಿ ಬೆಲೆ ರಾಕೆಟ್ನಂತೆ ಮೇಲೇರುತ್ತಲೇ ಇದೆ. ಎಲ್ಲಾ ವರ್ಗದ ಜನರ ಆಸೆ, ಅಗತ್ಯಗಳಿಗೆ ತಕ್ಕಂತೆ ಮನೆ, ನಿವೇಶನಗಳು ಲಭ್ಯ ಇವೆ. ಆದರೆ, ಅವುಗಳನ್ನು ಹುಡುಕಲು ಸಂಯಮ ಬೇಕು. ಅಷ್ಟು ವ್ಯವಧಾನ, ಸಮಯ ಇರುವವರ ಸಂಖ್ಯೆ ಕಡಿಮೆ. ಹೀಗಾಗಿ, ದುರಾಸೆಯ ಬ್ರೋಕರ್ಗಳ ಜಾಲಕ್ಕೆ ಬೀಳುವುವರೇ ಹೆಚ್ಚು. ಇಂಥವರಿಗೆ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ ಉತ್ತಮ ಮಾರ್ಗೋಪಾಯ ನೀಡಿದೆ. ನಗರದ ಪ್ರಮುಖ ಲ್ಯಾಂಡ್ ಡೆವಲಪರ್ಗಳು ಈ ಎಕ್ಸ್ಪೋದಲ್ಲಿ ಒಂದೆಡೆ ಲಭ್ಯ ಇರುತ್ತಾರೆ. ಇವರ ವಿವಿಧ ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಪ್ರಾಪರ್ಟಿಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಮಾಹಿತಿ ಪಡೆಯಬಹುದು. ಲಕ್ಷುರಿ ವಿಲ್ಲಾ, ಪ್ಲಾಟ್,…

Read More

ಮಂಗಳೂರು, ನ. 15: ಅಖಿಲ ಭಾರತ 71ನೇ ಸಹಕಾರ ಸಪ್ತಾಹದ ಹಿನ್ನೆಲೆಯಲ್ಲಿ ನವೆಂಬರ್ 16ರಂದು ಬೆಳಗ್ಗೆ 10ಕ್ಕೆ ‘ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ವಿಷಯದೊಂದಿಗೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋ ಜಿಸಲಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯ ಮಟ್ಟದ ಸಹಕಾರ ಸಪ್ತಾಹದ ವಸ್ತುಪ್ರದರ್ಶನ ಮಳಿಗೆಗಳನ್ನು ವಿಧಾನ ಸಭಾಧ್ಯಕ್ಷರು ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಸಹಕಾರ ಸಪ್ತಾಹವನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಶಸ್ತಿ ಪ್ರದಾನ ಮಾಡುವರು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯ ಸಹ ಕಾರಮಹಾಮಂಡಲದಅಧ್ಯಕ್ಷ ಜಿ.ಟಿ. ದೇವೇಗೌಡ, ದಕ್ಷಿಣ ಕನ್ನಡ ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ್ ಡಿ.ಕಾಮತ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸಪ್ತಾಹದ ಅಂಗವಾಗಿ ಸಹಕಾರ ಜಾಥಾ ಆಯೋಜಿಸಲಾಗಿದ್ದು,…

Read More

ಧರ್ಮಸ್ಥಳ,ನ.15 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸದಸ್ಯರಿಗೆ 605 ಕೋಟಿ ರೂ ಲಾಭಾಂಶ ವಿತರಣಾ ಕಾರ್ಯಕ್ರಮ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಅವರು, ಹಿಂದೆ ಗ್ರಾಮೀಣಾಭಿವೃದ್ಧಿ ಎಂಬುದು ಕಲ್ಯಾಣ ಕಾರ್ಯಕ್ರಮಕ್ಕೆ ಸೀಮಿತ ಆಗಿತ್ತು. ಸರ್ಕಾರ ಸ್ವಸಹಾಯ ಗುಂಪುಗಳಿಗೆ ಹಣಕಾಸಿನ ನೆರವು ನೀಡುತ್ತಿತ್ತು. ಅವರು ಅದನ್ನು ಸಣ್ಣ ಪುಟ್ಟ ಉದ್ದೇಶಗಳಿಗೆ ಬಳಸುತ್ತಿದ್ದರು. ಆದರೆ, ಈಗ ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆ ಬದಲಾಗಿದೆ. ಈಗ ಕಲ್ಯಾಣ ಕಾರ್ಯಕ್ರಮದ ಮೂಲಕ ಮಹಿಳೆಯರೂ ಸ್ವಾವಲಂಬಿಗಳಾಗುತ್ತಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರ ಹಾಗೂ ಸ್ವಸಹಾಯ ಸಂಘಗಳೆರಡರ ಪಾತ್ರವೂ ಇದೆ. ದೇಶದ ಜನರ ಸಬಲೀಕರಣವೇ ಬಡತನ ನಿರ್ಮೂಲನೆಯ ಸಾಧನ. ಈ ಸಬಲೀಕರಣವು ಜನರಿಗೆ ಹಣ ಗಳಿಸುವುದಕ್ಕೆ, ಸ್ವಂತ ನಿರ್ಧಾರ ತಳೆಯುವುದಕ್ಕೆ, ಅವಕಾಶಗಳನ್ನು ಕಲ್ಪಿಸುತ್ತಿದೆ. ಅವರೂ ಡಿಜಿಟಲ್ ಮಾರುಕಟ್ಟೆಯನ್ನು ಬಳಸಿಕೊಳ್ಳಲು ಮತ್ತು ವಹಿವಾಟಿನ ಹಣವನ್ನು ಡಿಜಿಟಲ್ ರೂಪದಲ್ಲೇ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು. ದೇಶದಲ್ಲಿ…

Read More

ಬೆಂಗಳೂರು,ನ.14 : ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿ ಲಿಂಕ್ ಗ್ರೌಂಡ್ನಲ್ಲಿ ಟಿವಿ9 ಕನ್ನಡ ಸ್ವೀಟ್ ಹೋಮ್ ನಿಂದ ನ.15 ರಿಂದ 17ರವರೆಗೆ ರಿಯಲ್ ಎಸ್ಟೇಟ್ ಎಕ್ಸ್ಪೋ ಮೂರು ದಿನಗಳ ಕಾಲ ನಡೆಯಲಿದೆ. ಬೆಂಗಳೂರಿನ ಪ್ರಮುಖ ಲ್ಯಾಂಡ್ ಡೆವಲಪರ್ಗಳ ವಿವಿಧ ಪ್ರಾಜೆಕ್ಟ್ಗಳನ್ನು ಒಂದೇ ವೇದಿಕೆಯಲ್ಲಿ ಕಾಣಬಹುದು. ಮನೆ ಅಥವಾ ಸೈಟ್ ಖರೀದಿಸಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ ಚಿರಾಸ್ತಿ ಹೊಂದುವ ಆಸೆ ಕೆಲವರಲ್ಲಿ ಇದೆ. ವಿವಿಧ ಬಿಸಿನೆಸ್ಗಳಿಗೆ ಪೋಷಕವಾಗಿರುವ ಬೆಂಗಳೂರು ನಗರದಲ್ಲಿ ಭೂಮಿ ಬೆಲೆ ರಾಕೆಟ್ನಂತೆ ಮೇಲೇರುತ್ತಲೇ ಇದೆ. ಎಲ್ಲಾ ವರ್ಗದ ಜನರ ಆಸೆ, ಅಗತ್ಯಗಳಿಗೆ ತಕ್ಕಂತೆ ಮನೆ, ನಿವೇಶನಗಳು ಎಕ್ಸ್ಪೋನಲ್ಲಿ  ಲಭ್ಯ ಇವೆ. ಆದರೆ, ಅವುಗಳನ್ನು ಹುಡುಕಲು ಸಂಯಮ ಬೇಕು. ಅಷ್ಟು ವ್ಯವಧಾನ, ಸಮಯ ಇರುವವರ ಸಂಖ್ಯೆ ಕಡಿಮೆ. ಹೀಗಾಗಿ, ದುರಾಸೆಯ ಬ್ರೋಕರ್ ಗಳ  ಜಾಲಕ್ಕೆ ಬೀಳುವುವರೇ ಹೆಚ್ಚು. ಇಂಥವರಿಗೆ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ  ಉತ್ತಮ ಮಾರ್ಗೋಪಾಯ ನೀಡಿದೆ. ನಗರದ ಪ್ರಮುಖ ಲ್ಯಾಂಡ್…

Read More

ಶ್ರೀನಗರ,ನ.13 : ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಬುಧವಾರ  5.2 ತೀವ್ರತೆಯ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪ ದಾಖಲಾಗಿದ್ದು, ಸದ್ಯ ಯಾವುದೇ ಜೀವಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 10:43ಕ್ಕೆ ಅಫ್ಘಾನಿಸ್ತಾನ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಕಾಶ್ಮೀರದ ಕಣಿವೆಯಲ್ಲಿ ಕಂಪನದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಯಿಂದಾಚೆ ಓಡಿ ಬಂದಿದ್ದಾರೆ ಎಂದು ವರದಿಯಾಗಿದೆ.

Read More