Author: admin

ಬೆಳ್ತಂಗಡಿ, ನ. 30 : ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಪ್ರಯುಕ್ತ ಅಮೃತವರ್ಷಣಿ ಸಭಾಂಗಣದಲ್ಲಿ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ನ.29ರಂದು ಜರಗಿತು. ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನವನ್ನು ಉದ್ಘಾಟಿಸಿ ಮಾತಾನಾಡಿದ ಗೃಹಸಚಿವ ಡಾ| ಜಿ.ಪರಮೇಶ್ವರ ಅವರು,ಪ್ರತಿಯೊಬ್ಬ ಭಾರತದ ಸಂವಿಧಾನದ 4ನೇ ಅಧ್ಯಾಯದಲ್ಲಿ ಸರ್ವಧರ್ಮ ಸಮಾನತೆಯನ್ನೇ ಉಲ್ಲೇಖಿಸಿದೆ. ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಶಾಂತಿಯಿಂದ ಬಾಳುವಂತಾಗಬೇಕಿದೆ. ಪ್ರಪಂಚದ ಇತಿಹಾಸದಲ್ಲೇ ಇಷ್ಟೊಂದು ಧರ್ಮಗಳನ್ನು ಹೊಂದಿದ ಬೇರೆ ದೇಶವಿಲ್ಲ. ಭಾರತ ಸರ್ವಧರ್ಮ ಶಾಂತಿಯ ತೋಟವಾ ಗುವಲ್ಲಿ ಇಂಥ ಸಮ್ಮೇಳನಗಳು ಮಹತ್ವದ್ದು. ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸರ್ವ ಧರ್ಮ ಸಮ್ಮೇಳನ ಕಾರ್ಯಕ್ರಮ ಆಯೋಜಿಸುವ ಮೂಲಕ ನಾಡಿಗೆ ಉತ್ತಮ ಸಂದೇಶ ನೀಡಿದ್ದಾರೆ  ಎಂದು ಅವರು ಹೇಳಿದರು. ಸರ್ವಧರ್ಮ ಸಮ್ಮೇಳನದಲ್ಲಿ  ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಶ್ರೀ ಕೈಲಾಸ ಆಶ್ರಮ ಮಹಾಸಂಸ್ಟಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.ಗೃಹ ಸಚಿವರು ಹಾಗೂ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿಯನ್ನು ಸಮ್ಮಾನಿಸಿ ಗೌರವಿಸಲಾಯಿತು. ಸ್ವಾಮೀಜಿಗಳು ಡಾ| ಹೆಗ್ಗಡೆ, ಗೃಹಸಚಿವರನ್ನು…

Read More

ಮಂಗಳೂರು,ನ.29 :  ಭಾರತೀಯ ಏರ್ಟೆಲ್ ನ  ಹೊಸ ಎಐ ಚಾಲಿತ ಸ್ಕ್ಯಾಮ್ ಪತ್ತೆ ಮಾಡುವ ವ್ಯವಸ್ಥೆಯು ಕರ್ನಾಟಕದ ಗ್ರಾಹಕರಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸಿದೆ. ಏರ್ಟೆಲ್ ಗ್ರಾಹಕರಿಗೆ ಯಾವುದೇ ಆ್ಯಪ್ ಡೌನ್ಲೋಡ್ ಮಾಡದೆ ಉಚಿತವಾಗಿ ಲಭ್ಯವಾಗಲಿದೆ. ಏರ್ಟೆಲ್ ಗ್ರಾಹಕರು ತಮ್ಮ ಎಲ್ಲ ಸಾಧನಗಳಲ್ಲಿ ಸ್ವಯಂಚಾಲಿತ ಸಕ್ರಿಯಗೊಳಿಸುವಿಕೆಯೊಂದಿಗೆ ಉಚಿತವಾಗಿ ಪರಿಹರಿಸಬಹುದು ಎಂದು ಭಾರ್ತಿ ಏರ್ಟೆಲ್ ನ   ಕರ್ನಾಟಕದ ಸಿಇಒ  ರಜನೀಶ್ ವರ್ಮಾ ಅವರು  ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು. ಗ್ರಾಹಕರು ಸ್ಯಾಮ್ ಕರೆಗಳಿಂದ ವಂಚನೆಗೊಳಗಾಗುತ್ತಿರುವುದನ್ನು ತಪ್ಪಿಸಲು ಏರ್ಟೆಲ್  ಈ  ವ್ಯವಸ್ಥೆಯನ್ನು  ಜಾರಿಗೊಳಿಸಲಾಗಿದೆ. ಈ ಸೇವೆ ಆರಂಭವಾದ 63 ದಿನಗಳಲ್ಲಿ ಈ ಟೆಲಿಕಾಂ ಪರಿಹಾರ ಕರ್ನಾಟಕದಲ್ಲಿ 682 ಮಿಲಿಯನ್ ಸಂಭಾವ್ಯ ಸ್ಯಾಮ್ ಕರೆಗಳು, 46 ಮಿಲಿಯನ್ ಸ್ಯಾಮ್ ಸಂದೇಶಗಳನ್ನು ಪತ್ತೆಹಚ್ಚಲಾಗಿದೆ ಎಂದರು. ಏರ್ಟೆಲ್ ನ ಆಂತರಿಕ ಡೇಟಾ ವಿಜ್ಞಾನಿಗಳಿಂದ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಎಐ ಚಾಲಿತ ಪರಿಹಾರವು ಕರೆಗಳು, ಸಂದೇಶಗಳನ್ನು ‘ಶಂಕಿತ ಸ್ಯಾಮ್’ ಎಂದು ಗುರುತಿಸಲು, ವರ್ಗೀಕರಿಸಲು…

Read More

ಬೆಂಗಳೂರು, ನ. 28 : ಕಳೆದ ತಿಂಗಳು ಕೇರಳದಲ್ಲಿ ಬಿಡುಗಡೆಯಾದ ಜೋಜು ಜಾರ್ಜ್ ಅಭಿನಯದ ಮತ್ತು ನಿರ್ದೇಶನದ ‘ಪಣಿ’ ಚಿತ್ರವು ಕನ್ನಡಕ್ಕೆ ಡಬ್ ಆಗಿ ನ. 29ರಂದು ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್ ಅವರು ಕರ್ನಾಟಕದಲ್ಲಿ ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಜೋಜು ಜಾರ್ಜ್ ನಿರ್ದೇಶನದ ಈ ಚಿತ್ರವು ಕಳೆದ ತಿಂಗಳು ಮಲಯಾಳಂನಲ್ಲಿ ಬಿಡುಗಡೆಯಾಗಿದೆ.ಇದೀಗ ಕನ್ನಡಕ್ಕೆ ಡಬ್ ಆಗಿ ನ. 29 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ. ಇದೊಂದು ಮಾಸ್ ಮತ್ತು ಕಮರ್ಷಿಯಲ್ ಚಿತ್ರವಾಗಿದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದು ಎರಡು ವರ್ಷಗಳ ಕಾಲ ಚರ್ಚೆ ನಡೆಸಿ ಚಿತ್ರಕಥೆ ಮಾಡಿದ್ದೇವೆ. ಈ ಚಿತ್ರದಲ್ಲಿ ಹೊಸಬರಿದ್ದಾರೆ. ಇದೊಂದು ಸರಳ ಕಥೆಯಾಗಿದ್ದು, ಅದನ್ನು ನೈಜವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮಲಯಾಳಂನಲ್ಲಿ “ಪಣಿ” ಎಂದರೆ ಕೆಲಸ ಎಂದರ್ಥ. ಈ ಹಿಂದೆ ನನ್ನ ಹಲವು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಕೇರಳದಲ್ಲಿ ಬಿಡುಗಡೆಯಾಗಿ ಈ ಚಿತ್ರ ಯಶಸ್ವಿಯಗಿದೆ. ಕನ್ನಡದಲ್ಲೂ ಕೂಡ ಯಶಸ್ವಿಯಾಗಲಿದೆ ಎಂಬ ನಂಬಿಕೆ ಇದೆ ಎಂದು ನಿರ್ದೇಶಕ…

Read More

ಉಳ್ಳಾಲ, ನ. 27: ಕೋಟೆಕಾರು ಮಾಡೂರಿನ ಮೆಡ್ ಪ್ಲಸ್  ಮೆಡಿಕಲ್ ಎದುರುಗಡೆಯ ಕಟ್ಟಡದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ. ಪುತ್ತೂರು ಇದರ 16ನೇ ಮಾಡೂರು ಶಾಖೆ ಉದ್ಘಾಟನೆಗೊಂಡಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ಆಧುನಿಕ ಕಾಲದಲ್ಲಿ ಬಳಕೆಯಲ್ಲಿರುವ ಪ್ಲಾಸ್ಟಿಕ್, ಸ್ಟೀಲ್ ಪ್ಲೇಟಿನ ಪಾತ್ರೆಗಳ ಸಂಸ್ಕೃತಿಯ ನಡುವೆಯು ಮಣ್ಣಿನ ಮಡಕೆಯನ್ನು ತಯಾರಿಸಿ ಜನರಿಗೆ ಒದಗಿಸುವಂತಹ ದೊಡ್ಡ ಮಟ್ಟಿನ ಕಾರ್ಯ  ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ವತಿಯಿಂದ ಸಮಾಜದಲ್ಲಿ ಆಗುತ್ತಿದೆ. ಸಂಘದ ಮಣ್ಣಿನ ಪಾತ್ರೆಗಳ ನಿರ್ಮಾಣದ ಘಟಕಕ್ಕೆ ಸೋಲಾರ್ ಪೂರೈಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಹೇಳಿದರು. ಮುಡಿಪು ಕುಲಾಲ ಸಮಾಜ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಯು. ಅವರು  ನೂತನ ಶಾಖೆಗೆ ಚಾಲನೆ ನೀಡಿ ಶಾಖೆಯ ಪ್ರಥಮ ಠೇವಣಿ ಪತ್ರವನ್ನು ಪಡೆದು ಮಾತನಾಡಿ ಕುಂಬಾರಿಕೆ ವೃತ್ತಿಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಆರಂಭಗೊಂಡ ಈ ಸಹಕಾರ ಸಂಘ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದರು. ಮರೋಳಿ ಶ್ರೀ…

Read More

ಮಂಗಳೂರು,ನ. 26 :ಬ್ರೇಕ್ ಫೇಲ್ ನಿಂದ ನಡೆದ ರಿಕ್ಷಾ ಅಪಘಾತದಲ್ಲಿ ಚಾಲಕ ಮೃತಪಟ್ಟಿರುವ ಘಟನೆ ಕೊಣಾಜೆ ಕಲ್ಕಾರ್ ಎಂಬಲ್ಲಿ ಆದಿತ್ಯವಾರ ನಡೆದಿದೆ. ಮೃತರನ್ನು ಕುಂಬಳೆ ಮಂಜಂತ್ತಡ್ಕ ನಿವಾಸಿ ನಾರಾಯಣ ಗಟ್ಟಿ (50) ಎಂದು ಗುರುತಿಸಲಾಗಿದೆ. ರಿಕ್ಷಾ ಕಲ್ಕಾರ್ ಇಳಿಜಾರು ಪ್ರದೇಶದಲ್ಲಿ ಇಳಿಯುತ್ತಿದ್ದಂತೆ ರಿಕ್ಷಾದ ಬ್ರೇಕ್ ವೈಫಲ್ಯಕ್ಕೀಡಾಗಿ ಮರವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ರಿಕ್ಷಾದೊಳಗಿದ್ದ ಮಹಿಳೆ, ಅವರ ಪುತ್ರ ಹಾಗೂ ಇನ್ನೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು, ನ.25 : ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿ. ಶಿರಸಿ ಇದರ ಮಂಗಳೂರಿನ ಶಾಖೆ ಕದ್ರಿ ಕಂಬಳದ ವ್ಯಾಸರಾವ್ ರಸ್ತೆಯ ವರ್ಟೆಕ್ಸ್ ಟಿಆರ್ ನ ನೆಲ ಮಹಡಿಯಲ್ಲಿಭಾನುವಾರ ಶುಭಾರಂಭಗೊಂಡಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಸಿಸಿಐ ಅಧ್ಯಕ್ಷ ಭಾರತ್ ಬೀಡಿ ವಕ್ಸ್ ೯ ಪೈ.ಲಿ. ವ್ಯವಸ್ಥಾಪಕ ನಿರ್ದೇಶಕ ಆನಂದ್ ಜಿ. ಪೈ ಅವರು ಮಾತನಾಡಿ, ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಮಂಗಳೂರು ನಗರದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿ, ವಿವಿಧ ಕಡೆಗಳಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆದು ಉನ್ನತಿ ಸಾಧಿಸಲಿ ಎಂದು ಶುಭಹಾರೈಸಿದರು. ಹ್ಯಾಂಗ್ಯೂ ಐಸ್ ಕ್ರೀಮ್ ಪೈ ಲಿ. ಮಂಗಳೂರು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಜಿ. ಪೈ ಅವರು ಮಾತನಾಡಿ, ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ತನ್ನ ಬ್ಯಾಂಕಿಂಗ್ ಕ್ಷೇತ್ರವನ್ನು ಮಂಗಳೂರಿಗೂ ವಿಸ್ತರಿಸಿದ್ದು, ಇಲ್ಲಿನ ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿ. ಶಿರಸಿ ಅಧ್ಯಕ್ಷ ಜೈದೇವ್ ಯು,…

Read More

ಮಂಗಳೂರು, ನ. 25 : ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದಿಂದ ನಿರ್ಮಾಣಗೊಂಡಿರುವ ದಿ | ಲೋಕನಾಥ್ ಬೋಳಾರ್ ಸ್ಮಾರಕ ನೂತನ ಕಟ್ಟಡ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಂಗಳೂರು ಬಂದರಿನಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ಜಿ. ಶಂಕರ್  ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ| ಜಿ. ಶಂಕರ್ ಅವರು ಮಾತಾನಾಡಿ ಮೀನುಗಾರ ಸಮುದಾಯದವರು ರಾಜಕೀಯ ರಹಿತವಾಗಿ ಒಂದಾಗಬೇಕು. ನಮ್ಮಲ್ಲಿ ಒಗ್ಗಟ್ಟಿದ್ದರೆ ಮಾತ್ರ ನಮಗೆ ಬೇಕಾದ ಸಲವತ್ತು ಗಳನ್ನು ಸರಕಾರದಿಂದ ಪಡೆಯಲು ಸಾಧ್ಯ ಎಂದು ಹೇಳಿದರು. ಬೋಳೂರು ಅಮೃತಾನಂದಮಯಿ ಶಾಖಾ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಮಾತನಾಡಿ, ಮೀನುಗಾರ ಸಮುದಾಯದವರ ಸಂಘದ ಸಮಾಜಮುಖಿ ಕಾರ್ಯ ಶ್ಲಾಘನೀಯ, ಇಂತಹ ಸೇವಾ ಕಾರ್ಯ ಗಳು ಸಂಘದಿಂದ ನಿರಂತರ ನಡೆಯಲಿ ಎಂದರು. ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಏಕರೂಪದ ಮೀನು ಗಾರಿಕೆ ನೀತಿ ಜಾರಿಗೊಳಿಸುವ ಮೂಲಕ ಮೀನುಗಾರಿಕೆಯಲ್ಲಿ ಶಿಸ್ತು ತರಲು ಸಾಧ್ಯ. ಈ…

Read More

ಕಾರ್ಕಳ, ನ.24 : ಖಾಸಗಿ ಶಾಲಾ ವಾಹನ ಮತ್ತು ಬೈಕ್ ಢಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಿಯಾರು-ಜೋಡುಕಟ್ಟೆ ಎಂಬಲ್ಲಿ ನ.23ರಂದು ನಡೆದಿದೆ. ಮೃತರನ್ನು ಕರಲಗುಡ್ಡೆ ಸುರೇಖಾ ನಗರದ ನಿವಾಸಿ ಅಜಿತ್ ಕುಮಾರ್(21ಎಂದು ಗುರುತಿಸಲಾಗಿದೆ. ಬಸ್ ಮದ್ಯ ಭಾಗಕ್ಕೆ ಬೈಕ್ ಢಿಕ್ಕಿಯಾಗಿದ್ದು, ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತ ಸಂದರ್ಭ ಶಾಲೆಯ ಬಸ್ ನಲ್ಲಿ ವಿದ್ಯಾರ್ಥಿಗಳು ಇರಲಿಲ್ಲಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು, ನ.23 :ಮಿಜ್ ಕ್ಲಾಸಿಕ್  ಕರಾವಳಿ ಬಾಡಿಬಿಲ್ಡಿಂಗ್ ಮತ್ತು  ಫಿಟ್ನೆಸ್ ಎಕ್ಸ್ಪೋ ನ.24ರಂದು ಅಪರಾಹ್ನ 3ರಿಂದ ರಾತ್ರಿ 10ರವರೆಗೆ ನಗರದ ಫಿಜಾ ಬೈ ನೆಕ್ಸಸ್ ಮಾಲ್ನ ಹೊರಾಂಗಣದಲ್ಲಿ ನಡೆಯಲಿದೆ ಎಂದು  ರಾಮೀಝ್ ಮಿಝ್ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ.ಅಬ್ದುಲ್ ಶಕೀಲ್ ಅವರ ಸಹಭಾಗಿತ್ವದಲ್ಲಿ , ಕನ್ನಡ ಹೆಲ್ತ್ ಆ್ಯಂಡ್ ಫಿಟ್ನೆಸ್, ತುಳು ಫ್ಯಾಶನ್ ಆ್ಯಂಡ್ ಫಿಟ್ನೆಸ್, ಅಬೂಬಕ್ಕರ್ ಅಶ್ರಫ್ ಅವರ ನೆರವಿನಿಂದ ಚಾಂಪಿಯನ್ ಶಿಪ್ ನಡೆಯಲಿದೆ. ಉಡುಪಿ, ದ.ಕ., ಕೊಡಗು, ಕಾಸರಗೋಡು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಆಯೋಜಿಸಲಾಗಿದೆ  ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಿಸ್ಟರ್ ಏಷ್ಯಾ ವಿಜೇತ ರಾಮೀಝ್ ಮಿಝ್, ಒಲಿಂಪಿಕ್ ಸ್ಪೋರ್ಟ್ನ ನಿರ್ವಹಣಾ ನಿರ್ದೇಶಕ ಮುಹಮ್ಮದ್ ಶರೀಫ್, ಸಂಘಟಕ ತುಫೈಲ್, ಗೌಜಿ ಇವೆಂಟ್ಸ್ ಮಾಲಕ ಅಭಿಷೇಕ್ ಉಪಸ್ಥಿತರಿದ್ದರು.

Read More

ಮಂಗಳೂರು, ನ. 23 : ಯಂಗ್ ಬ್ರದರ್ ಸ್ಪೋರ್ಟ್ಸ್ ಕ್ಲಬ್ ಇದರ ದಿವಾಕರ್ ಪಾಂಡೇಶ್ವರ ನೇತೃತ್ವದಲ್ಲಿ ಕಳೆದ 19 ವರ್ಷಗಳಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ದೇವರ ದೀಪೋತ್ಸವ ಪ್ರಯುಕ್ತ ನಡೆಯುವ ಪಾಂಡೇಶ್ಚರ ನೈಟ್ 2024 ಕಾರ್ಯಕ್ರಮ ಪಾಂಡೇಶ್ವರ ಅಶ್ವಥಕಟ್ಟೆ ಬಳಿ ಶುಕ್ರವಾರ ನಡೆಯಿತು. ಪಾಂಡೇಶ್ವರ ಅಶ್ವತ್ಥಕಟ್ಟೆಯ ಬಳಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ದಿವಾಕರ್ ಪಾಂಡೇಶ್ವರ, ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದರು. ಸಭಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ, ವಿದ್ಯಾರ್ಥಿ ವೇತನ ಪ್ರದಾನಿಸಲಾಯಿತು. ಅಶಕ್ತ ಕುಟುಂಬಗಳಿಗೆ ಆರ್ಥಿಕ ಸಹಾಯ ಹಸ್ತಾಂತರಿಸಲಾಯಿತು. ಸಮಾಜ ಸೇವಕ ಈಶ್ವರ ಮಲ್ಪೆ ಹಾಗೂ ಪಿಡಬ್ಲೂಡಿ ಅಧಿಕಾರಿ ಮಿಥುನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮೇಯರ್ ಮನೋಜ್ ಕುಮಾರ್, ಉಪಮೇಯರ್ ಭಾನುಮತಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ಸುಧೀರ್…

Read More