Subscribe to Updates
Get the latest creative news from FooBar about art, design and business.
Author: admin
ಮಂಗಳೂರು, ಡಿ.23 : ನಂದಿನಿ ನದಿಯ ಹಿನ್ನೀರಿನ ತಟದಲ್ಲಿ ರೋಹನ್ ಎಸ್ಟೇಟ್ ಮುಕ್ಕ ಬಡಾವಣೆ ರ್ಮಾಣವಾಗುತ್ತಿದೆ ಪರಿಸರದ ಶ್ರೀಮಂತಿಕೆಯ ಜತೆಗೆ ಆಕರ್ಷಕವಾಗಿ ಬಡಾವಣೆಯು ಮೂಡಿ ಬರುತ್ತಿದೆ. ಪ್ರಕೃತಿ ಜತೆಗೆ ಮಿಳಿತವಾದ ಬದುಕಿಗಾಗಿ ಈ ಬಡಾವಣೆಯನ್ನು ವಿನ್ಯಾಸಗೊಳಿಸಲಾಗಿದೆ. ಇದೊಂದು ಪರಿಪೂರ್ಣವಾದ ರೆಸಾರ್ಟ್ ಮಾದರಿಯ ಬಡಾವಣೆಯಾಗಿ ರೂಪುಗೊಂಡಿದೆ. ನದಿ, ಸಮುದ್ರ ಹಾಗೂ ರಾಷ್ಟ್ರೀಯ ಹೆದ್ದಾರಿಯ ನಡುವೆ ವಸತಿ ಬಡಾವಣೆ ನಿರ್ಮಾಣವಾಗುತ್ತಿದೆ. ರೋಹನ್ ಎಸ್ಟೇಟ್ ಮುಕ್ಕ. ಇದು ರೆಸಾರ್ಟ್ ಅಲ್ಲ. ರೆಸಾರ್ಟ್ ಶೈಲಿಯ ವಸತಿ ಬಡಾವಣೆ. ಶ್ರೀಮಂತಿಕೆ, ಐಶಾರಾಮಿ ಮಾದರಿ ಎಂಬಂತೆ ಪ್ರಕೃತಿಯ ಮಡಿಲಿನಲ್ಲಿ ತಲೆ ಎತ್ತಿ ನಿಂತಿರುವ ವಸತಿ ಬಡಾವಣೆಯಾಗಿದೆ. ಇಲ್ಲಿ ವಾಸಿಸುವವರಿಗೆ ರೆಸಾರ್ಟ್ ಶೈಲಿಯ ಜೀವನದ ಅನುಭವ ಸಿಗಲಿದೆ. ನದಿ ಕಿನಾರೆಯಲ್ಲಿ ಸೂಕ್ತ ರೀತಿಯ ತಡೆ ಗೋಡೆಯನ್ನು ಪ್ರವಾಸೋದ್ಯಮದ ನೆಲೆಯಲ್ಲಿ ಆಕರ್ಷಕವಾಗಿ ನಿರ್ಮಾಣ ಮಾಡಲಾಗಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ವಿಚಾರವನ್ನು ತಂದು ಆ ಮೂಲಕ ಕ್ರಾಂತಿ ಮಾಡಿದ ಸಂಸ್ಥೆ ಎಂದರೆ ಕರಾವಳಿಯ ರೋಹನ್ ಕಾರ್ಪೋರೇಷನ್. ಈ ರೀತಿಯ ವಸತಿ ಬಡಾವಣೆ ನದಿ…
ಬೋಳೂರು, ಡಿ. 22 : ಉರ್ವ ಬೋಳೂರಿನ ಶ್ರೀ ರಾಮ ಭಜನ ಮಂದಿರದಲ್ಲಿ 28ನೇ ವರ್ಷದ ಏಕಾಹ ಭಜನೋತ್ಸವ ಕಾರ್ಯಕ್ರಮ ಡಿ. 13ರಂದು ಪ್ರಾರಂಭಗೊಂಡು 21ರತನಕ ನಡೆಯಿತು. ಡಿ. 20ರಂದು ಚಂಡಿಕಾಯಾಗವು ಬೆಳಗ್ಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಾರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಡಿ. 13ರಂದು ಶ್ರೀ ರಾಮ ಭಜನ ಮಂದಿರದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಡಿ. 14ರಂದು ಏಕಾಹ ಭಜನೆ ಪ್ರಾರಂಭಗೊಂಡು ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಡಿ. 15ರಂದು ಸಂಜೆ 6ರಿಂದ ನೃತ್ಯ ಬಲಿ ಸೇವೆ, ಕಟ್ಟೆ ಪೂಜೆ, ಡಿ. 16ರಂದು ಸಂಜೆ 6ಕ್ಕೆ ಪಲ್ಲಕ್ಕಿ ಉತ್ಸವ, ಅವಭ್ರಥೋತ್ಸವ, ಡಿ. 20ರಂದು ಚಂಡಿಕಾಯಾಗ, ಡಿ. 21ರಂದು ಸಂಜೆ ಉರ್ವ ಮಾರುಕಟ್ಟೆ ಮೈದಾನದಲ್ಲಿ ಶ್ರೀ ದೇವಿ ಮಹಾತ್ಮ ಯಕ್ಷಗಾನ ನಡೆಯಿತು.
ಬೆಂಗಳೂರು,ಡಿ.22 : ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಂಡಿರುವ ಹೃದಯಸ್ಪರ್ಶಿ ಧಾರಾವಾಹಿಯವರ ಮತ್ತೊಂದು ಹೊಸ ದೈನಿಕ ಧಾರಾವಾಹಿ ನೂರು ಜನ್ಮಕೂ ಇದೇ 23 ರಿಂದ ಪ್ರತಿ ರಾತ್ರಿ 8. 30 ಕ್ಕೆ ಪ್ರಸಾರಗೊಳ್ಳಲಿದೆ. ಹೊಸ ಧಾರಾವಾಹಿಯು ವಿಭಿನ್ನ ಕಥೆಯನ್ನು ಒಳಗೊಂಡಿದೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕಥೆ ಇದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರ ಸ್ವಾಮಿಯ ಪರಮಭಕ್ತೆ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳಲು ಒದ್ದಾಡುವುದನ್ನು ತೋರಿಸಲಾಗಿದೆ. ‘ನೂರು ಜನ್ಮಕೂ ಧಾರಾವಾಹಿಯನ್ನುಚಿಕ್ಕಮಗಳೂರಿನ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಬಿಂಬಿಸುವ ಧಾರಾವಾಹಿ. ಉನ್ನತ ಮಟ್ಟದ ಗ್ರಾಫಿಕ್ಸ್ ಬಳಸಲಾಗಿದೆ ಎಂದು ನಿರ್ದೇಶಕರ ಮಾತು. ಶ್ರವಂತ್ ರಾಧಿಕಾ ನಿರ್ದೇಶನದ ಈ ಧಾರಾವಾಹಿಯಲ್ಲಿ ಹೆಸರಾಂತ ನಟನಟಿಯರ ದಂಡೇ ಇದೆ. ಕಲರ್ಸ್ ಕನ್ನಡ…
ಸುರತ್ಕಲ್ ,ಡಿ.21 : ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರೊಬ್ಬರನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬೆನ್ನು ಹತ್ತಿದ ವೇಳೆ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ಸುರತ್ಕಲ್ ನ ಕಾನ ಕುಳಾಯಿ ಗುಡ್ಡೆ ಜಂಕ್ಷನ್ನಲ್ಲಿ ಶುಕ್ರವಾರ ನಡೆದಿದೆ. ಕಾನ ನಿವಾಸಿ ರೆಮ್ಮಿ (38) ಮೃತರು. ರೆಮ್ಮಿ ತನ್ನ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ವೇಳೆ ಕುಳಾಯಿಗುಡ್ಡೆ ಜಂಕ್ಷನ್ ಬಳಿ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸರು ರೆಮ್ಮಿಯನ್ನು ಬೆನ್ನಟ್ಟಿ ಹಿಡಿಯಲು ಮುಂದಾಗಿದ್ದು, ಈ ವೇಳೆ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ದ್ವಿಚಕ್ರ ವಾಹನ ಬೆನ್ನಟ್ಟಿದ್ದ ಪೊಲೀಸ್ ಸಿಬ್ಬಂದಿ ಬಸ್ ಹತ್ತಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಮಂಗಳೂರು, ಡಿ. 20 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಳ್ಯ, ಪುತ್ತೂರು, ವಿಟ್ಲ ಈಶ್ವರಮಂಗಲ ಮತ್ತು ಮಂಗಳೂರು ತಾಲೂಕುಗಳಲ್ಲಿ ವಾಸಿಸುತ್ತಿರುವ ವಾಣಿಯ ಗಾಣಿಗ ಸಮಾಜದ 5 ತಾಲೂಕು ಸಂಘಗಳ ಪ್ರಮುಖರನ್ನು ಸೇರಿಸಿ ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘವನ್ನು ಸ್ಥಾಪಿಸಲಾಗಿದೆ. ಈ ಸಂಘದ ಉದ್ಘಾಟನ ಕಾರ್ಯಕ್ರಮ ಡಿ. 29ರಂದು ನಗರದ ಕುದ್ದುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ. ರಾಮ ಮುಗೋಡಿ ಅವರು ತಿಳಿಸಿದ್ದಾರೆ. ಗಾಣಿಗ ಸಮುದಾಯದಲ್ಲಿರುವ ಕಡು ಬಡವರಿಗೆ ಸಹಾಯ ಮಾಡುವುದು, ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಹಕರಿಸುವುದು, ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು, ಸಮಾಜದಲ್ಲಿ ವಿಶೇಷ ಸಾಧನೆಗೈದವರನ್ನು ಗುರುತಿಸಿ ಗೌರವಿಸುವುದು, ವಿದ್ಯಾನಿಧಿ- ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವುದು, ಸಹಕಾರಿ ಸಂಘಗಳನ್ನು ಸ್ಥಾಪಿಸಿ ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸಲು ಪ್ರಯತ್ನಿಸುವುದು ಸೇರಿದಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸಂಘದ ಅಧಿಕೃತೆ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು…
ಬೆಳ್ತಂಗಡಿ, ಡಿ.19 : ವಿದ್ಯಾರ್ಥಿಯೊಬ್ಬ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕ ಕಾರಂದೂರು ಪೆರೊಡಿತ್ತಾಯನ ಕಟ್ಟೆ ಬಳಿ ಗುರುವಾರ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಸ್ಟೀಫನ್(14) ಎಂದು ಗುರುತಿಸಲಾಗಿದೆ. ಕ್ರಿಸ್ ಮಸ್ ಪ್ರಯುಕ್ತ ಗುರುವಾರ ಸಂಜೆ ಮನೆಗೆ ಸಾಂತಾಕ್ಲಾಸ್ ಬರುವ ಹಿನ್ನೆಲೆಯಲ್ಲಿ ಮನೆಗೆ ಆಲಂಕಾರ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದಿದ್ದು, ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೊದರೂ ಅಷ್ಟೊತ್ತಿಗಾಗಲೇ ವಿದ್ಯಾರ್ಥಿ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು, ಡಿ.17: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ನ ನ್ಯಾ. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ 7 ಆರೋಪಿಗಳಿಗೂ ಜಾಮೀನು ನೀಡಿ ಆದೇಶ ಹೊರಡಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂ.11 ರಂದು ನಟ ದರ್ಶನ್ ಸೇರಿ ಹಲವರನ್ನು ಬಂಧಿಸಲಾಗಿತ್ತು. ಈ ನಡುವೆ ಬೆನ್ನು ನೋವಿನ ಕಾರಣ ಶಸ್ತ್ರಚಿಕಿತ್ಸೆ ಅಗತ್ಯತೆಯ ಹಿನ್ನೆಲೆ ನಟ ದರ್ಶನ್ಗೆ ಮಧ್ಯಂತರ ಜಾಮೀನು ಪಡೆದು ಬಿಡುಗಡೆ ಹೊಂದಿದ್ದರು. ಸದ್ಯ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರಿನ್ನೂ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಜಾಮೀನಿಗಾಗಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ವಿಚಾರಣೆ ನಡೆಸಿದ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಉಡುಪಿ, ಡಿ.16 :ಭಾರತದ ಪ್ರಮುಖ ಶಿಪ್ ಯಾರ್ಡ್ – ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಇಂದು ನಾರ್ವೆಯ ಮೆಸಸ್ ವಿಲ್ಸನ್ ಎಎಸ್ಎಗೆ ನಿರ್ಮಿಲಾಗುತ್ತಿರುವ 3800 ಟಿಡಿಡಬ್ಲ್ಯು ಜನರಲ್ ಕಾರ್ಗೋ ಹಡಗುಗಳ ಸರಣಿಯ ಮೊದಲ ಹಡಗನ್ನು ಇಂದು ಬಿಡುಗಡೆ ಮಾಡಿದೆ. ರಾಯಲ್ ನಾರ್ವೇಯನ್ ರಾಯಭಾರ ಕಚೇರಿಯ ಮಿನಿಸ್ಟರ್ ಕೌನ್ಸಿಲರ್ ಮತ್ತು ಡೆಪ್ಯುಟಿ ಹೆಡ್ ಆಫ್ ಮಿಷನ್ ಶ್ರೀಮತಿ ಮಾರ್ಟಿನ್ ಆಮ್ಮಾಲ್ ಬೋಥೀಮ್ ಅವರು ವಿಲ್ಸನ್ ಎಎಸ್ಎಯ ಮುಖ್ಯ ಹಣಕಾಸು ಅಧಿಕಾರಿ ಐನಾ ಟೋರ್ನೆಸ್ ಅವರೊಂದಿಗೆ ಹಡಗನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಧು ಎಸ್. ನಾಯರ್, ಕೊಚ್ಚಿನ್ ಶಿಪ್ ಯಾರ್ಡ್ ತಾಂತ್ರಿಕ ನಿರ್ದೇಶಕ ಶ್ರೀ ಬಿಜೋಯ್ ಭಾಸ್ಕರ್, ಉಡುಪಿ-ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿಕುಮಾರ್ ಎ. ಮತ್ತು ಶಿಪ್ ಯಾರ್ಡ್ ನ ಇತರ ಹಿರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿಲ್ಸನ್…
ಬೋಳೂರು, ಡಿ. 15 : ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರ ಹಿರಿಯ ಶಿಷ್ಯ ಸ್ವಾಮಿ ಪೂರ್ಣಾಮೃತಾನಂದ ಪುರಿ ಅವರು ಶನಿವಾರ ಮಂಗಳೂರಿನ ಬೋಳೂರಿನಲ್ಲಿರುವ ಮಾತಾ ಅಮೃತಾ ನಂದಮಯಿ ಮಠಕ್ಕೆ ಆಗಮಿಸಿ, ಪ್ರತಿ ತಿಂಗಳ ಎರಡನೇ ಶನಿವಾರ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಜರಗಲಿರುವ ಸಾಮೂಹಿಕ ಶನಿ ದೋಷ ನಿವಾರಣಾ ಪೂಜೆಗೆ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ, ಬೋಳೂರು ಮಾತಾ ಅಮೃತಾ ನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿ ಸಲಹೆಗಾರ ಡಾ| ವಸಂತ ಕುಮಾ ಪೆರ್ಲ, ಕಾರ್ಯದರ್ಶಿ ಡಾ| ದೇವದಾಸ ಪುತ್ರನ್, ವೈದ್ಯಕೀಯ ಉಪ ಸಮಿತಿ ಸಂಚಾಲಕ ಡಾ| ದೇವಿಪ್ರಸಾದ್ ಎಸ್. ಹೆಜಮಾಡಿ, ಪ್ರಮುಖರಾದ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು. ನಂತರ ಅವರು ವಿದ್ಯಾಲಯಂನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಂಜೆ ನಡೆದ ‘ಅಮೃತ ವೈಭವ’ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಸ್ವಾಮಿ ಪೂರ್ಣಾಮೃತಾನಂದ ಪುರಿ ಅವರು ದೀಪ ಬೆಳಗಿಸುವ ಮೂಲಕ…
ವಿಟ್ಲ ,ಡಿ. 14: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಡಿ.8 ರಿಂದ 14ರ ವರೆಗೆ ನಡೆಯಲಿರುವ ದತ್ತಜಯಂತಿ ಮಹೋತ್ಸವ, ಶ್ರೀ ದತ್ತಮಹಾಯಾಗ, ಹರಿಕಥಾ ಸತ್ಸಂಗ ಮತ್ತು ಯಕ್ಷಗಾನ ಸಪ್ತಾಹ ಸಮಾರೋಪ ಸಮಾರಂಭ ಶನಿವಾರ ನಡೆಯಿತು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಆತ್ಮಾರ್ಥವಾಗಿ ಗುರುಸೇವೆ ಮಾಡುವವನೇ ನೈಜ ಗುರುಸೇವಕ. ನಾನು ಎಂಬ ಅಹಂಕಾರ ಇರುವಲ್ಲಿ ಭಗವಂತನಿರುವುದಿಲ್ಲ. ನಮ್ಮ ಸತ್ಕರ್ಮಗಳು ನಮ್ಮನ್ನು ಕಾಪಾಡು ತ್ತವೆ. ಅಹಂಕಾರ, ಮಮಕಾರವಿದ್ದಾಗ ಭಗವಂತನ ಅನುಗ್ರಹ ಸಿಗದು. ಆತ್ಮಾರ್ಥದ ಅರ್ಪಣಾ ಭಾವದ ಸೇವೆಗೆ ಮಹತ್ವವಿದೆ. ಸುಖ -ದುಃಖವನ್ನು ಸಮಾನ ವಾಗಿ ಸ್ವೀಕರಿಸಿ, ಶ್ರೇಷ್ಠವಾದ ಆಧ್ಯಾತ್ಮ ವಿದ್ಯೆಯನ್ನು ಪಡೆದು ಸುಸಂಸ್ಕೃತರಾಗಬೇಕು ಮೊಬೈಲ್ ಕೊಡುವ ಮಕ್ಕಳ ಕೈಗಳಲ್ಲಿ ಭಗವದ್ಗೀತೆಯನ್ನೂ ನೀಡಿ ಎಂದು ಒಡಿಯೂರು ಶ್ರೀ ಸಂದೇಶ ನೀಡಿದರು. ಸಾಫ್ಟ್ ಶ್ರೀ ಮಾತಾನಂದಮಯಿ ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಹರಿದಾಸಚಂದ್ರ ಕಾಂತ ಭಟ್ ಅಶ್ವತ್ಥಪುರ, ಮುಂಬಯಿ ಶ್ರೀ ಗುರುದೇವ ಸೇವಾ ಬಳಗದ ದಾಮೋದರ ಶೆಟ್ಟಿ,…