Author: admin

ಮಂಗಳೂರು, ಮೇ. 07 : ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಸಿದ್ದ ಸಂಸ್ಥೆ ರೋಹನ್ ಕಾರ್ಪೊರೇಷನ್ ಸಂಸ್ಥೆಯು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ಸ್ಟಾರ್ ಶಾರುಖಾನ್ ಅವರನ್ನು ಘೋಷಿಸಿದೆ. ರೋಹನ್ ಕಾರ್ಪೊರೇಷನ್ ಸಂಸ್ಥೆಯ ರಾಯಭಾರಿಯಾಗಿ ಶಾರುಖಾನ್ ಅವರು ಸಹಿ ಮಾಡಿದ್ದಾರೆ. ಕರ್ನಾಟಕದ ಮಂಗಳೂರಿನಲ್ಲಿ ಸ್ಥಾಪನೆಯಾದ ಮತ್ತು ಕೇಂದ್ರಕಚೇರಿ ಹೊಂದಿರುವ, ರೋಹನ್ ಕಾರ್ಪೊರೇಷನ್ ಕಳೆದ ಮೂರು ದಶಕಗಳಿಂದ ಹಿಲ್ ಕ್ರೆಸ್ಟ್, ಹೈ ಕ್ರೆಸ್ಟ್, ರೋಹನ್ ಸಿಟಿ ಮತ್ತು ರೋಹನ್ ಸ್ಕ್ವೇರ್ ಇತ್ಯಾದಿ ಪ್ರಮುಖ ಡೆವಲಪ್‌ಮೆಂಟ್ಗಳೊಂದಿಗೆ ಮಂಗಳೂರಿನ ಆಕಾಶದೆತ್ತರದ ಕಟ್ಟಡಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಯೋಜನೆಗಳು ಆಧುನಿಕತೆ, ನಾವೀನ್ಯತೆಯಿಂದ ಕೂಡಿವೆ. ರೋಹನ್ ಕಾರ್ಪೊರೇಷನ್ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಡಾ. ರೋಹನ್ ಮೊಂತೇರೊ ಶಾರುಖ್ ಖಾನ್ ಅವರನ್ನು ಕುರಿತು,ಶಾರುಖ್ ಖಾನ್‌ರನ್ನು ಹೊಂದಿರುವುದು ರೋಹನ್ ಕಾರ್ಪೊರೇಷನ್ ಪಾಲುದಾರಿಕೆಗಿಂತ ಹೆಚ್ಚಿನದ್ದೆಂದು ಪ್ರತಿನಿಧಿಸುತ್ತದೆ- ಇದು ಕನಸು ಹಾಗೂ ಬದ್ಧತೆಯ ಸಮ್ಮಿಲನವಾಗಿದೆ. ಶಾರುಖ್ ಖಾನ್ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿರುವಂತೆ, ರೋಹನ್ ಕಾರ್ಪೊರೇಷನ್ ಜೀವನವನ್ನು ಮಾರ್ಪಡಿಸುವ ಮೂಲಕ ಸ್ಫೂರ್ತಿ…

Read More

ನವದೆಹಲಿ,ಮೇ.07 : ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ 9 ಭಯೋತ್ಪಾದಕರ ನೆಲೆಗಳ ಮೇಲೆ ಮಧ್ಯರಾತ್ರಿ ನಡೆಸಿದ ವೈಮಾನಿಕ ದಾಳಿ ನಡೆಸಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಗಳು ಬುಧವಾರ ಮಾಧ್ಯಮಗಳಿಗೆ ಮಾಹಿತಿ ಬಹಿರಂಗಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಲ್ ಸೋಫಿಯಾ ಖುರೇಶಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳು ಮತ್ತು ಅವರ ಕುಟುಂಬಗಳಿಗೆ ನ್ಯಾಯ ಒದಗಿಸಲು ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರವನ್ನು ಇಂದು ನಸುಕಿನ ಜಾವ 1.05ರಿಂದ 1.30ರ ನಡುವೆ ಪ್ರಾರಂಭಿಸಿದವು. 9 ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಅದನ್ನು ಯಶಸ್ವಿಯಾಗಿ ನಾಶಪಡಿಸಲಾಯಿತು. ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗದಂತೆ ಮತ್ತು ಯಾವುದೇ ನಾಗರಿಕರ ಜೀವಹಾನಿಯಾಗದಂತೆ ಸ್ಥಳಗಳನ್ನು ಆಯ್ಕೆ ಮಾಡಲಾಯಿತು. ಪಾಕಿಸ್ತಾನದಲ್ಲಿ ನಾಗರಿಕರ ಸಾವುನೋವುಗಳ ವರದಿಗಳಿಲ್ಲ ಎಂದರು. ಭಾರತೀಯ ಸೇನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ 9 ಭಯೋತ್ಪಾದಕರ ನೆಲೆಗಳ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 70 ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ.

Read More

ಮಂಗಳೂರು, ಮೇ. 07 : ಕುದ್ರೋಳಿ ದೇವಸ್ಥಾನದ ಪ್ರವೇಶದ್ವಾರದ ಬಳಿ ಇರುವ ಫ್ಲಾಟ್‌ನಲ್ಲಿ ಮಂಗಳವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದೆ. ಐದು ಅಂತಸ್ತಿನ ವಸತಿ ಕಟ್ಟಡದ ಮೂರನೇ ಮಹಡಿಯಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್, ಘಟನೆ ನಡೆದ ಸಮಯದಲ್ಲಿ ಫ್ಲಾಟ್ ಒಳಗೆ ಯಾರೂ ಇರಲಿಲ್ಲ ಎನ್ನಲಾಗಿದೆ. ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Read More

ಮಂಗಳೂರು, ಮೇ. 06 : ನಮ್ಮ ಕನಸು ಬ್ಯಾನರಿನಲ್ಲಿ ಕೆ.ಸುರೇಶ್ ನಿರ್ಮಿಸಿ, ರಮೇಶ್ ಶೆಟ್ಟಿಗಾರ್ ಬರೆದು, ನಿರ್ದೇಶಕ ಸಂತೋಷ್ ಮಾಡ ನಿರ್ದೇಶಿಸಿದ ‘ಪಿದಾಯಿ ತುಳು ಚಲನ ಚಿತ್ರ ಮೇ 9ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಸಂತೋಷ್ ಮಾಡ ಅವರು ಎ.26,ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಮುಖ್ಯ ಭೂಮಿಕೆಯಲ್ಲಿ ಮಹಾಮಾಯಿ ಪಾತ್ರಿಯಾಗಿ ಕನ್ನಡದ ಖ್ಯಾತ ನಟ ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಪುಷ್ಪರಾಜ್ ಬೋಳಾರ್, ಇಳಾ ವಿಟ್ಲ, ದೇವಿ ನಾಯರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಹಾಗೂ ಬಾಲ ಪ್ರತಿಭೆಗಳಾದ ಮೋನಿಶ್, ತಿಷ, ನಿಹಾ, ಧ್ರುವ, ಖುಷಿ, ಡಿಬಿಸಿ ಶೇಖರ್, ಅನಿತಾ ಚಂದ್ರಶೇಖರ್ ಮತ್ತಿತ್ತರರು ಅಭಿನಯಿಸಿದ್ದಾರೆ. ಚಿತ್ರಕ್ಕೆ ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ ಶೇಖರ್ ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಾಹಣವನ್ನು ಉಣ್ಣೆ ಮಾಡವೂರ್, ಸುರೇಶ್ ಅರಸ್ ಸಂಕಲನ, ಅಜಯ್ ನಂಬೂದಿರಿ ಸಂಗೀತ ನೀಡಿದ್ದು, ಡಾ.ವಿದ್ಯಾಭೂಷಣ್ ಪ್ರಥಮವಾಗಿ ಚಲನಚಿತ್ರದಲ್ಲಿ ಹಾಡಿದ್ದಾರೆ. ಹಿನ್ನಲೆ…

Read More

ನವದೆಹಲಿ, ಮೇ. 06 : ಅನಂತಪುರ ಜಿಲ್ಲೆಯ ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧ ಇಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ವಿಚಾರಣೆಯ ಬಳಿಕ ಅನಂತಪುರ ಜಿಲ್ಲೆಯ ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಅಪರಾಧಿ ಎಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಹೈದರಾಬಾದ್ನ ಸಿಬಿಐ ವಿಶೇಷ ನ್ಯಾಯಾಲಯ ಜನಾರ್ದನ ರೆಡ್ಡಿ ದೋಷಿ ಎಂದು ತೀರ್ಪು ನೀಡಿದೆ. ಜೊತೆಗೆ ಅಕ್ರಮ ಗಣಿಗಾರಿಕೆಯ ಅಪರಾಧಿಗೆ ಜೈಲು ಶಿಕ್ಷೆ ಪ್ರಕಟವಾಗಿದೆ. ಗಾಲಿ ಜನಾರ್ದನ ರೆಡ್ಡಿ, ಶ್ರೀನಿವಾಸ್ ರೆಡ್ಡಿ ಮತ್ತು ಮೆಫಾಜ್ ಅಲಿ ಖಾನ್ ಸೇರಿದಂತೆ ಐದು ಆರೋಪಿಗಳಿಗೆ ತಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

Read More

ಮಂಗಳೂರು, ಮೇ. 05 : ಭಾರ್ಗವಿ ಬಿಲ್ಡರ್ ವತಿಯಿಂದ ಕೊಟ್ಟಾರದ ಮಾಲೆಮಾರ್ ಬಳಿ ನಿರ್ಮಾಣಗೊಂಡಿರುವ ವಸತಿ ಸಮುಚ್ಚಯ ‘ಕೈಲಾಶ್’ ಎ.30, ಬುಧವಾರ ಉದ್ಘಾಟನೆಗೊಂಡಿತು. ಮಾರೂರು ಅಲ್ಯುಮಿನಿಯಂ ಸಂಸ್ಥೆಯ ಶಶಿಧರ ಪೈ ಮಾರೂರು ಅವರು ವಸತಿ ಸಮುಚ್ಚಯದ ಲಾಬಿ ಉದ್ಘಾಟಿಸಿದರು. ಸಿಎ ಸುಂದರ ಹೆಗ್ಡೆ ಅವರು ಜಿಮ್ಮೇಶಿಯಂಗೆ ಚಾಲನೆ ನೀಡಿದರು. ನಾಯಕ್ ಆ್ಯಂಡ್ ಪೈ ಅಸೋಸಿಯೇಟ್ನ ಆರ್ಕಿಟೆಕ್ಟ್ ಸುರೇಶ್ ಪೈ ಅವರು ಒಳಾಂಗಣಕ್ರೀಡಾ ಕೇಂದ್ರವನ್ನು ಹಾಗೂ ಕೈಲಾಶ್ ವಸತಿ ಸಮುಚ್ಚಯದ ರಾಯಭಾರಿ ಅರವಿಂದ ಬೋಳಾರ್ ಅವರು ಕೈಲಾಶ್ ಮಕ್ಕಳ ಆಟದ ಪ್ರದೇಶವನ್ನು ಉದ್ಘಾಟಿಸಿದರು. ಕೈಲಾಶ್’ನ ಫ್ಲ್ಯಾಟ್ ಮಾಲಕರಾದ ಗುರುರಾಜ್ ಉಡುಪ ಹಾಗೂ ವನಿತಾ ಉಡುಪ ದೀಪಪ್ರಜ್ವಲನೆ ಮಾಡಿದರು. ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ ಶುಭಹಾರೈಸಿದರು. ಪ್ರಕಾಶ್ ಬೀಡಿ ಮಾಲಕರಾದ ಆನಂದ್ ಪ್ರಭು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೆಜರ್ ಸಚ್ಚಿದಾನಂದ ಸ್ವರೂಪ್, ರಮಾ ಕಾಮತ್ ಆ್ಯಂಡ್ ಕೋ. ದ ಮಾಲಕ ಶೋಮಿತ್ ಕಾಮತ್, ದೇವಿದಯಾಲ್ ಕನ್‌ಸ್ಟ್ರಕ್ಷನ್ ಮಾಲಕ ಜಗದೀಶ್ ಶೆಟ್ಟಿ, ಸಿಎ ಎ.ಆರ್.ಹೆಗ್ಡೆ…

Read More

ಮಂಗಳೂರು, ಮೇ. 05 : ನಾಗರಾಜ್ ಶಂಕರ್ ನಿರ್ದೇಶನದ, ಮುದೇ ಗೌಡ್ರು ನವೀನ್ ಕುಮಾರ್ ಆರ್.ಒ. ಹಾಗೂ ತೆಲಗಿ ಮಲ್ಲಿಕಾರ್ಜುನಪ್ಪ ನಿರ್ಮಾಣದ ‘ಮರಳಿ ಮನಸಾಗಿದೆ’ ಕನ್ನಡ ಚಿತ್ರ ಜುಲೈಯಲ್ಲಿ ಬಿಡುಗಡೆ ಗೊಳ್ಳಲಿದೆ ಎಂದು ನಿರ್ದೇಶಕ ನಾಗರಾಜ್, ಶಂಕರ್ ಶನಿವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಚಿತ್ರದಲ್ಲಿ ಐದು ಹಾಡುಗಳಿದ್ದು, ಬಿಡುಗಡೆಗೊಂಡಿರುವ ಎರಡು, ಹಾಡುಗಳಿಗೆ ಉತ್ತಮ ಸ್ಪಂದನೆ ದೊರೆತ್ತಿದೆ. ಮೂರನೇ ಹಾಡು ಏನಿದು ರೋಮಾಂಚನ ಉಡುಪಿ ಯಲ್ಲಿ ಮೇ,3ರಂದು ಬಿಡುಗಡೆಗೊಂಡಿದೆ. ಚಿತ್ರದ ನಾಯಕ ನಾಗಿ ಅರ್ಜುನ್ ವೇದಾಂತ್ ನಾಯಕಿಯಾಗಿ ಸ್ಮೃತಿ ವೆಂಕಟೇಶ್ಅಭಿನಯಿಸಿದ್ದಾರೆ ಅವರು, ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ನಿರ್ಮಾಪಕ ನವೀನ್ ಕುಮಾರ್ ಮಾತಾನಾಡಿ ಜುಲೈ- ಆಗಸ್ಟ್ ನಡುವೆ ಚಿತ್ರ ಬಿಡುಗಡೆ ಗೊಳ್ಳಲಿದ್ದು, ಪೂರ್ವಭಾವಿಯಾಗಿ ರಾಜ್ಯಾದ್ಯಂತ ಪ್ರಚಾರ ಕಾರ್ಯ ನಡೆದಿದೆ. ಚಿತ್ರದಲ್ಲಿ ನಟ ಭೋಜರಾಜ ವಾಮಂಜೂರು, ಟಿ.ಎಸ್.ನಾಗಾಭರಣ, ನಿರೀಕ್ಷಾ ಶೆಟ್ಟಿ, ಮಾನಸಿ ಸುಧೀರ್, ಸೀರುಂಡೆ ರಘು, ಸ್ವಾತಿ, ರೋಹನ್ ಅಭಿನಯಿಸಿದ್ದಾರೆ  ಎಂದರು. ಆಶಿತ್ ಸುಬ್ರಹ್ಮಣ್ಯ ಸಹ ನಿರ್ದೇಶನವಿದೆ. ವಿನು ಮನಸು…

Read More

ಬೆಳ್ತಂಗಡಿ, ಮೇ. 04 : ಭಟ್ರಬೈಲು ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಗ್ರಾಮದ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮತ್ತು ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ಮುಸ್ಲಿಂ ಮುಖಂಡ ಎಸ್ ಎಂ ಎಸ್ ಇಬ್ರಾಹಿಂ ಮುಸ್ಲಿಯಾರ್ ದೂರು ನೀಡಿದ್ದಾರೆ.ಪೊಲೀಸರು ಶಾಸಕರ ಭಾಷಣದ ವೀಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Read More

ಮಂಗಳೂರು, ಮೇ 05 : ನಿಧಿಲ್ಯಾಂಡ್ ಇನ್ ಫ್ರಾಸ್ಟಕ್ಟರ್ ಡೆವಲಪರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನವರ ವಸತಿ ಸಮುಚ್ಚಯ ‘ಪೂರ್ವಜ್’ ಗೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಮಲ್ಲಿಕಟ್ಟೆ ಶಿವಬಾಗ್ ಬಳಿ ಬುಧವಾರ ನೆರವೇರಿತು. ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಮಹಾನಗರಪಾಲಿಕೆ ಪ್ರಕಾಶ್ ಸಾಲಿಯಾನ್, ನವೀನ್ ಡಿ’ಸೋಜ, ಮಾಜಿ ಸದಸ್ಯರಾದ ಸಿಎಶಾಂತಾರಾಮ ಶೆಟ್ಟಿ, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಮುಖ್ಯಸ್ಥ ಬಿ.ಕೆ.ವಿಶ್ವೇಶ್ವರಿ, ಲೋಟಸ್ ಪ್ರಾಪರ್ಟೀಸ್ನ ಜಿತೇಂದ್ರ ಕೊಟ್ಟಾರಿ, ನಿಶಾಂತ್ ಶೇಟ್, ಮುಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಭೂಮಿ ಪೂಜೆ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಉಪ್ಪುಂದ ಗಣೇಶ್ ಭಟ್ ಹಾಗೂ ಸಂತ ಆ್ಯಗ್ನೆಸ್ ಕಾನ್ವೆಂಟ್ನ ಸುಪೀರಿಯ ಸಿlಮರಿಯಾ ರೂಪ ಅವರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನಡೆಯಿತು. ನಿಧಿಲ್ಯಾಂಡ್ ಬಿಲ್ಲರ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಸನಿಲ್, ಅವರ ತಂದೆ ಯು.ಮಾಧವ ಸುವರ್ಣ, ನಿಧಿಲ್ಯಾಂಡ್ ನಿರ್ದೇಶಕರೂ ಆದ ಪ್ರಶಾಂತ್ ಅವರ ಸೋದರಿ ರೇವತಿ ಸನಿಲ್…

Read More

ಛತ್ತೀಸ್ಗಢ, ಮೇ. 04 : ವ್ಯಕ್ತಿವೊಬ್ಬ ಸ್ಕೂಟರ್ ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು   ಮೃತಪಟ್ಟ   ಘಟನೆ ಅಂಬಿಕಾಪುರದಲ್ಲಿ ನಡೆದಿದೆ. ಶುಕ್ರವಾರ ಸಂಜೆ ಸಂಗಮ್ ಚೌಕ್‌ನಲ್ಲಿ ಈ ಘಟನೆ ನಡೆದಿದ್ದು, ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂದ್ರಜಿತ್ ಸಿಂಗ್ ಬಾಬ್ರಾ (35 ) ಎಂಬವರು ಮೃತಪಟ್ಟ  ವ್ಯಕ್ತಿ. .ಇಂದ್ರಜಿತ್ ಸಿಂಗ್  ಅವರು ತನ್ನ ವಾಹನವನ್ನು ಪ್ರಾರಂಭಿಸಲು ಪ್ರಯತ್ನಿಸುವಾಗ ಇದ್ದಕ್ಕಿದ್ದಂತೆ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾನೆ.

Read More